< କାମା 25 >
1 ୧ ଏମ୍ବାଟିଏ ପେସ୍ତସ୍ ଈ ରା଼ଜିତା ୱା଼ହାନା ତୀନିଦିନା ଆୟାଲିଏ କାୟିସରିୟାଟି ଜିରୁସାଲମତା ହାଚେସି,
೧ಫೆಸ್ತನು ಅಧಿಕಾರ ವಹಿಸಿಕೊಂಡು, ಮೂರು ದಿನಗಳಾದ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
2 ୨ ଅ଼ଡ଼େ ଏମ୍ବାଆଁ କାଜା ପୂଜେରାଙ୍ଗା ଇଞ୍ଜାଁ ଜୀହୁଦି ଲ଼କୁତି କାଜାରି ପା଼ୱୁଲ କ଼ପାଟି ପେସ୍ତସ୍ ତା଼ଣା ୱେଣ୍ତେ ଦାୱା କିତେରି,
೨ಅಲ್ಲಿ ಮುಖ್ಯಯಾಜಕನೂ, ಯೆಹೂದ್ಯರಲ್ಲಿ ಪ್ರಮುಖರೂ, ಅವನಿಗೆ ಪೌಲನ ಮೇಲೆ ದೂರು ಹೇಳಿ,
3 ୩ ଅ଼ଡ଼େ ଏ଼ୱାସି ଏ଼ନିକିଁ ପା଼ୱୁଲଇଁ ଜିରୁସାଲମତା ହା଼ଟା ପାଣ୍ତାନେସି, ଏ଼ଦାଆଁତାକି ଗ଼ହାରା କିହାନା ଏ଼ୱାଣି କ଼ପାଟି କାର୍ମାଆ଼ନି ଲେହେଁ ପେସ୍ତସ୍ଇଁ ବାତିମା଼ଲିତେରି; ଇଞ୍ଜାଁ ଏ଼ୱାରି ଜିରୁତା ଡ଼ୁଗାହାଁ ପା଼ୟାଲି ଅଣ୍ପିମାଚେରି ।
೩ನೀನು ದಯಮಾಡಿ ಅವನನ್ನು ಯೆರೂಸಲೇಮಿಗೆ ಕಳುಹಿಸಬೇಕೆಂದು ಪೌಲನ ಕೇಡಿಗಾಗಿ ಬಲವಾದ ಬಿನ್ನಹವನ್ನು ಮಾಡಿದರು. ಏಕೆಂದರೆ, ದಾರಿಯಲ್ಲಿ ಅವನನ್ನು ಕೊಲ್ಲುವುದಕ್ಕಾಗಿ ಹೊಂಚುಹಾಕಿಕೊಂಡಿದ್ದರು.
4 ୪ ପେସ୍ତସ୍ ଏଲେଇଚେସି, “ପା଼ୱୁଲ କାୟିସରିୟାତା କାୟିଦିତା ମାନେସି, ଇଞ୍ଜାଁ ନା଼ନୁ ଜିକେଏ ତବେ ଏମ୍ବାଆଁ ୱେଣ୍ତା ହାଜିମାଇଁ,
೪ಫೆಸ್ತನು ಅವರಿಗೆ; ಪೌಲನು ಕೈಸರೈಯದಲ್ಲಿ ಸೆರೆಮನೆಯೊಳಗಿದ್ದಾನೆ, ನಾನೇ ಬೇಗ ಅಲ್ಲಿಗೆ ಹೊರಟು ಹೋಗಬೇಕೆಂದಿದ್ದೇನೆ.
5 ୫ ଏ଼ୱାସି ଏ଼ନି ଦ଼ହ କିହାମାନେସି, ଆତିହିଁ ମୀ କାଜାରି ନା଼ ତଲେ କାୟିସରତା ହାଲାପେରି ଅ଼ଡ଼େ ଏ଼ୱାଣି କ଼ପାଟି ତାମି ଦାୱା କିପାରି ।”
೫ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.
6 ୬ ପେସ୍ତସ୍ ଏମ୍ବାଆଁ ଆ଼ଟା କି ଦସ ଦିନା ଏ଼ୱାରିତଲେ ଡ଼ୟାହାଁ କାୟିସରିୟାତା ୱେଣ୍ତେ ହାଚେସି, ଏ଼ ଅ଼ର ନେ଼ଚୁ ନୀହାଁୟି କିନି ଟା଼ୟୁତା କୁଗାନା ପା଼ୱୁଲଇଁ ତାଚାଲି ହୁକୁମି ହୀତେସି ।
೬ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.
7 ୭ ପା଼ୱୁଲ ୱା଼ହାଲିଏ ଜିରୁସାଲମଟି ୱା଼ହାମାନି ଜୀହୁଦିୟାଁ ତାନି ସା଼ରିସୁଟୁ ନିଚାନା ଏ଼ୱାଣି କ଼ପାଟି ହା଼ରେକା ଦ଼ହ ଦସାଲି ମା଼ଟ୍ହେରି, ସାମା ଏ଼ୱାରି ଏ଼ ବାରେତି ପାର୍ମାଣା କିହାଲି ଆ଼ଡାଆତେରି ।
೭ಅವನು ಬಂದ ಮೇಲೆ ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು, ಅವನ ಸುತ್ತಲು ನಿಂತುಕೊಂಡು ತಾವು ಸಾಬೀತುಪಡಿಸಲಾರದ ಅನೇಕ ದೊಡ್ಡ ದೊಡ್ಡ ತಪ್ಪುಗಳನ್ನು ಹೊರಿಸುತ್ತಿರಲು,
8 ୮ ଏଚେଟିଏ ପା଼ୱୁଲ ତାନି ୱାକିଟି ୱେସାକଡାନା ଏଲେଇଚେସି, “ଜୀହୁଦିୟାଁ ମେ଼ରା କ଼ପାଟି ଆ଼ଆତିଁ ମାହାପୂରୁ ଇଲୁ କ଼ପାଟି କି କାୟିସର କ଼ପାଟି ଜିକେଏ ନା଼ନୁ ଏ଼ନି ଦ଼ହ କିହାହିଲଅଁ ।”
೮ಪೌಲನು; “ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ, ದೇವಾಲಯದ ವಿಷಯದಲ್ಲಾಗಲಿ, ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು” ಪ್ರತ್ಯುತ್ತರ ಹೇಳಿದನು.
9 ୯ ସାମା ପେସ୍ତସ୍, ଜୀହୁଦି ଲ଼କୁ ନ଼କିତା ନେହାଁସି ଆୟାଲି ପା଼ୱୁଲଇଁ ୱେଚେସି, “ନୀନୁ ଜିରୁସାଲମତା ହାଜାନା ଏମ୍ବାଆଁ ନା଼ ନ଼କିତା ଈ ବାରେତାକି ନୀହାଁୟି ଆୟାଲି ମ଼ନ କିହିମାଞ୍ଜି କି?”
೯ಆದರೆ ಫೆಸ್ತನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಅಪೇಕ್ಷಿಸಿ ಪೌಲನನ್ನು; “ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಈ ಕಾರ್ಯಗಳ ವಿಷಯವಾಗಿ ನನ್ನ ಮುಂದೆ ವಿಚಾರಿಸಲ್ಪಡುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು, ಪೌಲನು;
10 ୧୦ ସାମା ପା଼ୱୁଲ ଏଲେଇଚେସି, “ନା଼ନୁ କାୟିସର ନ଼କିତା ନୀହାଁୟି କିନି ଟା଼ୟୁତା ନିଚାମାଇଁ, ଏମ୍ବାଆଁ ନା଼ ନୀହାଁୟି ଆ଼ନାୟି ମାନେ, ନା଼ନୁ ଜୀହୁଦିୟାଁ କ଼ପାଟି ଏ଼ନି ଲାଗେଏ କାମା କିହାହିଲଅଁ, ଏ଼଼ଦାଆଁ ନୀନୁ ଜିକେଏ ନେହିଁକିଁ ପୁଞ୍ଜାମାଞ୍ଜି ।
೧೦“ನಾನು ಕೈಸರನ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ.
11 ୧୧ ମେ଼ରା ମା଼ନି କିଆନା ଲାଗେଏତି କାମା କିହାମାଚିହିଁ, ନା଼ନୁ ହା଼ହାଲି ଆଜିହିଲଅଁ; ସାମା ଈୱାରି ନା଼ କ଼ପାଟି ଆମିନି ବାରେ ଦାୱା କିହିମାନେରି, ଏ଼ ବାରେ ବିତ୍ରାଟି ଆମିନି ର଼ ପଦୁ ଜିକେଏ ସାତା ଆ଼ଆତିହିଁ, ଆମ୍ବାଆସି ଏ଼ୱାରି କେୟୁତା ନାଙ୍ଗେ ହେର୍ପାଲି ଆ଼ଡଅସି, ନା଼ନୁ କାୟିସର ନ଼କିତା ନୀହାଁୟି କିୱିଆୟାଲି ଗ଼ହାରା କିହିମାଇଁ ।”
೧೧ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಏನನ್ನಾದರೂ ಮಾಡಿದ್ದೇಯಾದರೆ ಮರಣ ದಂಡನೆಯನ್ನು ನಿರಾಕರಿಸುವುದಿಲ್ಲ. ಆದರೆ ಇವರು ನನ್ನ ಮೇಲೆ ಹೊರಿಸುವ ಅಪವಾದಗಳು ಪೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದನು.
12 ୧୨ ଏମ୍ବାଟିଏ ପେସ୍ତସ୍ ତାନି ନୀହାଁୟିତି କାଜାରି ତଲେ ଜ଼ଲ୍କି ଆ଼ହାନା ଏଲେଇଚେସି, “ନୀନୁ କାୟିସର ନ଼କିତା ନୀହାଁୟି କିୱିଆୟାଲି ରୀସିମାଞ୍ଜି, ଆତିହିଁ ନୀନୁ କାୟିସର ତା଼ଣେଏ ହାଜି ।”
೧೨ಆಗ, ಫೆಸ್ತನು ತನ್ನ ಸಭೆಯವರ ಸಂಗಡ ಸಮಾಲೋಚನೆಮಾಡಿದ ಮೇಲೆ ಪೌಲನಿಗೆ; “ನೀನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎಂದೆಯಲ್ಲಾ, ಆದುದರಿಂದ ಕೈಸರನ ಬಳಿಗೇ ಹೋಗಬೇಕು” ಎಂದು ಹೇಳಿದನು.
13 ୧୩ ଏଚରଦିନା ଡା଼ୟୁ ରାଜା ଆଗ୍ରିପା ଅ଼ଡ଼େ ବର୍ନିକି କାୟିସରିୟାତା ୱା଼ହାନା ପେସ୍ତସ୍ଇଁ ଆଣ୍ତାଲି ହାଚେରି ।
೧೩ಕೆಲವು ದಿನಗಳು ಕಳೆದನಂತರ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ, ಫೆಸ್ತನನ್ನು ಭೇಟಿಯಾಗುವುದಕ್ಕೆ ಕೈಸರೈಯಕ್ಕೆ ಬಂದರು.
14 ୧୪ ଏ଼ୱାରି ଏମ୍ବାଆଁ ଏଚରଦିନା ଡ଼ୟିତି ଡା଼ୟୁ, ପେସ୍ତସ୍ ରାଜା ନ଼କିତା ପା଼ୱୁଲ କାତା ୱେସ୍ତେସି, “ପେଲିକସ୍ କାୟିଦିତା ଇଟାମାନାସି ରଅସି ଇମ୍ବାଆଁ ମାନେସି;
೧೪ಅವರು ಅನೇಕ ದಿನಗಳು ಅಲ್ಲಿ ತಂಗಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ; “ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.
15 ୧୫ ନା଼ନୁ ଏଚିବେ଼ଲା ଜିରୁସାଲମତା ହାଜାମାଚେଏଁ ଏଚିବେ଼ଲାତା ଜୀହୁଦି ଲ଼କୁତି କାଜା ପୂଜେରାଙ୍ଗା ଅ଼ଡ଼େ ପ୍ରାଚିନାଙ୍ଗା ଏ଼ୱାଣି କ଼ପାଟି ୱେସାନା ଏ଼ୱାଣାଇଁ ଡଣ୍ତ ହୀହାଲି ନାଙ୍ଗେ ବାତିମା଼ଲି ମାଞ୍ଜାତେରି ।
೧೫ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.
16 ୧୬ ସାମା ନା଼ନୁ ଏ଼ୱାରାଇଁ ଏଲେଇଚେଏଁ, ଦ଼ହଗାଟାସି ତାନି ଦ଼ହ ଦସାମାନାରା ନ଼କିତା ନିଆ ପାତେକା ଇଞ୍ଜାଁ ତାଙ୍ଗେ ତାନି ୱାକିଟି ଜ଼ଲାଲି ହୀଆ ପାତେକା ଏ଼ୱାଣାଇଁ ଡଣ୍ତ ହୀହାଲି ମା଼ ର଼ମ୍ ଲ଼କୁତି ମେ଼ରା ହିଲେଏ ।
೧೬“ನಾನು ಅವರಿಗೆ; ಪ್ರತಿವಾದಿಯು ವಾದಿಗಳಿಗೆ, ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷದ ವಿಷಯದಲ್ಲಿ ಪ್ರತಿವಾದಮಾಡುವುದಕ್ಕೆ ಎಡೆಕೊಡದೆ, ಅವನನ್ನು ಒಪ್ಪಿಸಿಬಿಡುವುದು ರೋಮಾಯರ ಪದ್ಧತಿಯಲ್ಲವೆಂದು” ಹೇಳಿದೆನು.
17 ୧୭ ଏ଼ୱାରି ନା଼ ତଲେ ଇମ୍ବାଆଁ ୱାୟାଲିଏ, ନା଼ନୁ ୱେ଼ଡ଼ାକିଆନା ତାନି ଅ଼ର ନେ଼ଚୁ ନୀହାଁୟି କିନି ତା଼ଣା କୁଗାନା, ଏ଼ୱାଣାଇଁ ତାଚାଲି ହୁକୁମି ହୀତେଏଁ ।
೧೭ಅವರು ಇಲ್ಲಿಗೆ ಕೂಡಿಬಂದಾಗ ನಾನು ಸ್ವಲ್ಪವೂ ತಡಮಾಡದೆ ಮರುದಿನವೇ ನ್ಯಾಯಸ್ಥಾನದ ಮೇಲೆ ಕುಳಿತುಕೊಂಡು ಆ ಮನುಷ್ಯನನ್ನು ಕರತರಬೇಕೆಂದು ಅಪ್ಪಣೆಕೊಟ್ಟೆನು.
18 ୧୮ ଏ଼ୱାଣାଇଁ ଦ଼ହ ଦସାମାନାରି ୱା଼ହାନା ନିତେରି, ସାମା ଏ଼ୱାରି ଏ଼ନିଲେହେଁତି ଦାୱା କିନେରି ଇଞ୍ଜିଁ ନା଼ନୁ ଅଣ୍ପିମାଚେଏଁ, ଏ଼ୱାରି ଏ଼ନି ଦ଼ହ ଏ଼ୱାଣି କ଼ପାଟି ୱେସ୍ତାଆତେରି ।
೧೮ತಪ್ಪು ಹೊರಿಸುವವರು ನಿಂತುಕೊಂಡು ನಾನು ಭಾವಿಸಿದ್ದ ಅಪರಾಧಗಳಲ್ಲಿ ಒಂದನ್ನಾದರೂ ಅವನ ಮೇಲೆ ಹೊರಿಸದೆ,
19 ୧୯ ଏ଼ୱାରି ୱାର୍ଇ ତାମି ଦାର୍ମୁତି କାତା ଇଞ୍ଜାଁ ଜୀସୁ ଦ଼ରୁଗାଟି ଏମିନି ହା଼ତାଣାଇଁ ପା଼ୱୁଲ ନୀଡାମାନେସି ଇଞ୍ଜିଁ ୱେସିମାନେସି, ତାନି କାତାତାକି ଆସ୍ପି ଆ଼ତେରି ।
೧೯ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.
20 ୨୦ ଈ ବାରେ କାତା ନେହିଁକିଁ ପୁଞ୍ଜାଲିତାକି ଏ଼ନାଆଁ କିହାଲି ଆ଼ନେ, ଏ଼ନାଆଁ ତୀରି କିହାଲି ଆ଼ଡାଆନା ଈ ଦାୱା ତାକି ନୀହାଁୟି ଆ଼ହାଲିତାକି ପା଼ୱୁଲ ଜିରୁସାଲମତା ହାନେସି କି ଆ଼ଏ ଏ଼ଦାଆଁ ନା଼ନୁ ୱେଚେଏଁ ।
೨೦ಇಂಥ ಕಾರ್ಯಗಳನ್ನು ಹೇಗೆ ವಿಚಾರಣೆಮಾಡಬೇಕೆಂಬುದು ನನಗೆ ತೋಚದೆ; ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯವಾಗಿ ವಿಚಾರಣೆಹೊಂದುವುದಕ್ಕೆ ನಿನಗೆ ಮನಸ್ಸುಂಟೋ? ಎಂದು ನಾನು ಕೇಳಿದೆ.
21 ୨୧ ସାମା ପା଼ୱୁଲ ସା଼ଲୱି କିନି କାୟିସର ନ଼କିତା ନୀହାଁୟି କିୱିଆୟାଲି ନା଼ନୁ ହାଇଁ ଇଞ୍ଜିଁ ୱେସିମାଚାକି, ନା଼ନୁ ଏ଼ୱାଣାଇଁ କାୟିସର ତା଼ଣା ପାଣ୍ତିନି ପାତେକା କାୟିଦିତା ଇଟାଲି ହୁକୁମି ହୀତେଏଁ ।”
೨೧ಅದಕ್ಕೆ ಪೌಲನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುವ ತನಕ, ತನ್ನನ್ನು ಕಾಯಬೇಕೆಂದು ಕೇಳಿಕೊಂಡಾಗ ನಾನು ಕೈಸರನ ಬಳಿಗೆ ಕಳುಹಿಸುವ ತನಕ, ಅವನನ್ನು ಕಾಯುವುದಕ್ಕೆ ಅಪ್ಪಣೆಕೊಟ್ಟೆನು ಎಂದು ಹೇಳಿದನು.
22 ୨୨ ଆଗ୍ରିପା ପେସ୍ତସ୍ଇଁ ଏଲେଇଚେସି, “ନା଼ନୁ ଜିକେଏ ଈୱାଣି କାତା ୱେଞ୍ଜାଲି ମ଼ନ କିହିମାଇଁ । ହାଅ ୱିଏ ନୀନୁ ଏ଼ୱାଣି କାତା ୱେଞ୍ଜି” ଇଞ୍ଜିଁ ପେସ୍ତସ୍ ଏଲେଇଚେସି ।
೨೨ಅದಕ್ಕೆ ಅಗ್ರಿಪ್ಪನು; “ಆ ಮನುಷ್ಯನು ಹೇಳಿಕೊಳ್ಳುವುದನ್ನು ಕೇಳುವುದಕ್ಕೆ ನನಗೂ ಮನಸ್ಸಿದೆ” ಎಂದು ಹೇಳಲು, ಫೆಸ್ತನು; “ನಾಳೆ ಕೇಳಬಹುದು” ಎಂದನು.
23 ୨୩ ତାନି ଅ଼ର ଦିନା ଆଗ୍ରିପା ଇଞ୍ଜାଁ ବର୍ନିକି କାଜାପା଼ଣା ଅ଼ଡ଼େ ଗାୱୁରମିଗାଟି କ଼ସ୍କା ଇଞ୍ଜାଁ ଗା଼ଡ଼ାତି କାଜାରି ତଲେ ହାଜାନା ନୀହାଁୟି କିନି ଟା଼ୟୁତା ୱା଼ତେସି, ଏମ୍ବାଟିଏ ପେସ୍ତସ୍ ହୁକୁମି ତଲେ ପା଼ୱୁଲ ଏମ୍ବାଆଁ ତାପିଆ଼ତେସି ।
೨೩ಮರುದಿನ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಂಗಣದೊಳಗೆ ಸೇರಿಬಂದಾಗ ಫೆಸ್ತನು ಅಪ್ಪಣೆ ಕೊಡಲು, ಪೌಲನನ್ನು ಕರತಂದರು.
24 ୨୪ ଏମ୍ବାଟିଏ ପେସ୍ତସ୍ ଏଲେଇଚେସି, “ଏ଼ ରାଜା ଆଗ୍ରିପା ଅ଼ଡ଼େ ଇମ୍ବାଆଁ ମାନି ମା଼ନିଗାଟି କାଜାତେରି, ମୀରୁ ବାରେ ଈୱାଣାଇଁ ମେସିମାଞ୍ଜେରି; ଈୱାଣି କ଼ପାଟି ଜିରୁସାଲମ ଇଞ୍ଜାଁ ଇମ୍ବାଆଁ ମାନି ଜୀହୁଦି ଲ଼କୁ ନା଼ ତା଼ଣା ଦାୱା କିହାମାନେରି, ଈୱାସି ନୀଡାମାନାୟି ଲ଼ଡ଼ା ହିଲେଏ ଇଞ୍ଜିଁ ବାରେଜା଼ଣା କା଼ଲୱି ଆ଼ତେରି ।
೨೪ಆಗ ಫೆಸ್ತನು; “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ, ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ, ಇಲ್ಲಿಯೂ ನನ್ನನ್ನು ಬೇಡಿಕೊಂಡರು.
25 ୨୫ ସାମା ଈୱାସି ହା଼ନିଲେହେଁତି ଏ଼ନି ଦ଼ହ କିହାମାନାଣି ନା଼ନୁ ମେସାହିଲଅଁ ଇଞ୍ଜାଁ ଏ଼ୱାସି ତା଼ନୁଏ କାୟିସର ତା଼ଣା ନୀହାଁୟି କିୱିଆୟାଲି ବାତିମା଼ଲାତାକି ନା଼ନୁ ଏ଼ୱାଣାଇଁ ଏମ୍ବାଆଁ ପାଣ୍ତାଲି ତାକି ତୀରି କିତେଏଁ ।
೨೫ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂದಿತು. ಅವನೇ ಕೈಸರನಿಗೆ ವಿಜ್ಞಾಪನೆಮಾಡಿಕೊಂಡದ್ದರಿಂದ, ಇವನನ್ನು ಕೈಸರನ ಬಳಿಗೆ ಕಳುಹಿಸುವುದಕ್ಕೆ ತೀರ್ಮಾನಿಸಿದೆನು.
26 ୨୬ ସାମା ରାଜା କାୟିସର ତା଼ଣା ଏ଼ୱାଣି ତାକି ରା଼ଚାଲି ନାଙ୍ଗେ ଏ଼ନି କାତା ହିଲେଏ, ଏ଼ଦାଆଁତାକି ନା଼ନୁ ଏ଼ୱାଣାଇଁ, ବାରେକିହାଁ ରାଜା ଆଗ୍ରିପା ନୀ ତା଼ଣା ଏ଼ୱାଣାଇଁ ତାଚାମାଇଁ, ଏ଼ନିକିଁ ଏ଼ୱାଣି କାତା ୱେଞ୍ଜାନା, ପୁଚିଡା଼ୟୁ ନା଼ନୁ ଏ଼ୱାଣାକି ଇଚାଣି ରା଼ଚାଲି ଆ଼ଡିଇଁ ।
೨೬ಆದರೆ ಇವನ ಕುರಿತಾಗಿ ಕೈಸರನಿಗೆ ಬರೆಯುವುದಕ್ಕೆ ನಿರ್ದಿಷ್ಟವಾದ ಕಾರಣವೇನೂ ಕಂಡು ಬರಲಿಲ್ಲ. ಸೆರೆಯಲ್ಲಿರುವವನ ವಿರುದ್ಧ ಆರೋಪಿಸಿರುವ ದೋಷಗಳನ್ನು ಸೂಚಿಸದೆ, ಅವನನ್ನು ಕಳುಹಿಸುವುದು ಯುಕ್ತವಲ್ಲವೆಂದು ನನಗೆ ತೋರುತ್ತದೆ.
27 ୨୭ ଇଚିହିଁ ର଼ କାୟିଦି ଗାଟାଣାଇଁ ପାଣ୍ତିନି ବେ଼ଲାତା ତାନି କ଼ପାଟି କିହାମାନି ଦାୱା ନେହିଁକିଁ ତ଼ହ୍ଆନା ପାଣ୍ତାଲି ନେହେଁ ଆ଼ଏ ଇଞ୍ଜିଁ ନା଼ନୁ ଅଣ୍ପିମାଇଁ ।”
೨೭ಆದುದರಿಂದ ವಿಚಾರಣೆಯಾದ ಮೇಲೆ ಬರೆಯುವುದಕ್ಕೆ ಏನಾದರೂ ಸಿಕ್ಕೀತೆಂದು, ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ” ಅಂದನು.