< କାମା 18 >

1 ଏମ୍ବାଟିଏ ପା଼ୱୁଲ ଆତିନି ଗା଼ଡ଼ା ପିସାନା କରନ୍ତିତା ହାଚେସି ।
ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.
2 ଇଞ୍ଜାଁ ଏ଼ୱାସି ଆକ୍‌ୱିଲା ଦ଼ରୁଗାଟି ର଼ ଜୀହୁଦି ଲ଼କୁଇଁ ବେଟାଆ଼ତେସି, ପନ୍ତ ଏ଼ୱାଣି ଜାର୍ନା ଟା଼ୟୁ; ଏଚରଦିନା ନ଼କେଏ ଏ଼ୱାସି ତାନି ଡକ୍ରି ପ୍ରିସ୍କିଲା ତଲେ ଇଟାଲିଟି ୱା଼ହାମାଚେସି, ଇଚିହିଁ କ୍ଲାୱୁଦିୟା ବାରେ ଜୀହୁଦି ଲ଼କୁଇଁ ର଼ମ୍‌ ପିସା ହାଜାଲି ହୁକୁମି ହୀହାମାଚେସି, ପା଼ୱୁଲ ଏ଼ୱାସିକାଣି ବେ଼ଚି ହାଚେସି,
ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿನಗಳ ಮೊದಲೇ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.
3 ଅ଼ଡ଼େ ଏ଼ୱାରି ଏ଼ୱାଣିଲେହେଁ ତୂମୁ ବେ଼ବାରା କିନାରି ମାଚାକି ଏ଼ୱାରିତଲେ ଡ଼ୟିତେସି, ଅ଼ଡ଼େ ଏ଼ୱାରି କାମା କିହାଲି ମା଼ଟ୍‌ହେରି, ଏ଼ନାଆଁତାକି ଇଚିହିଁ ବେ଼ବାରାତା ଏ଼ୱାରି ତୂମୁ କିନାରି ମାଚେରି ।
ಪೌಲನು ಅವರ ಮನೆಗೆ ಹೋಗಿ ತಾನೂ, ಅವರೂ ಒಂದೇ ಕಸುಬಿನವರಾಗಿದ್ದುದರಿಂದ ಅವರ ಸಂಗಡವಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರಮಾಡುವುದು ಅವರ ಕಸುಬಾಗಿತ್ತು.
4 ଅ଼ଡ଼େ ବାରେ ଜ଼ମିନି ଦିନାତା ଏ଼ୱାସି ଜୀହୁଦି ଲ଼କୁତି କୁଟମି ଇଲୁତା ଜ଼ଲ୍‌କି ଆ଼ହିଁ ଜା଼ପ୍‌ହେସି, ଜୀହୁଦି ଅ଼ଡ଼େ ଗ୍ରିକ୍‌ ଲ଼କୁଣି ନାମି କିୱିକିହାଲି ଅଣ୍‌ପିମାଚେସି ।
ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.
5 ଏଚିବେ଼ଲା ସିଲା ଅ଼ଡ଼େ ତିମତି ମାକିଦନିୟାଟି ୱା଼ତେରି, ଏଚିବେ଼ଲା ପା଼ୱୁଲ ନେହିଁ ବ଼ଲୁ ୱେ଼କ୍‌ନି କାମା ଜ଼ମାଆନା କିହିମାଚେସି, ଅ଼ଡ଼େ ଜୀସୁଇଁ ମସିହା ଇଞ୍ଜିଁ ଜୀହୁଦି ଲ଼କୁତା଼ଣା ସା଼କି ହୀହିମାଚେସି ।
ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.
6 ସାମା ଏ଼ୱାରି ଅ଼ପାଆନା ନିନ୍ଦା କିହାଲିଏ ଏ଼ୱାସି ତାନି ହିମ୍ବରି ହାଣ୍‌ହାଁନା ଏଲେଇଚେସି, “ମୀରୁ ନା଼ସା ଆତିହିଁ ଏ଼ଦାଆଁତାକି ମୀରୁ ଦା଼ୟି ଆ଼ଦେରି । ଏ଼ଦାଆଁତାକି ନା଼ନୁ ଦା଼ୟି ଆ଼ଏ, ନୀଏଁ ନା଼ନୁ ଜୀହୁଦିଆ଼ଆତି ଲ଼କୁତା଼ଣା ହାଜିମାଇଁ ।”
ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,
7 ଏମ୍ବାଟିଏ ଏ଼ୱାସି ଏ଼ ଟା଼ୟୁଟି ହ଼ଚା ହାଜାନା ତିତସ ଜୁସ୍ତ ଇନି ଜୀହୁଦିଆ଼ଆତି ମାହାପୂରୁ ସେ଼ବା କିନାସି ଏ଼ୱାଣି ଇଜ ହାଚେସି, ଏ଼ୱାଣି ଇଲୁ ଜୀହୁଦି ଲ଼କୁତି କୁଟମି ଇଲୁ ଡାଗେ ମାଚେ ।
ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು.
8 ସାମା ଜୀହୁଦି ଲ଼କୁତି କୁଟମି ଇଲୁତି କାଜାସି କ୍ରିସ୍‌ପ ବାରେ ଇଲୁ କୁଟମି ତଲେ ପ୍ରବୁ ତା଼ଣା ନାମିତେରି, ଅ଼ଡ଼େ କରନ୍ତି ଗା଼ଡ଼ାତି ଲ଼କୁ ବିତ୍ରାଟି ହା଼ରେକା ପା଼ୱୁଲତି କାତା ୱେଞ୍ଜାନା ନାମିତେରି ଅ଼ଡ଼େ ବାପ୍ତିସ୍ମ ଅ଼ତେରି ।
ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು.
9 ଅ଼ଡ଼େ ପ୍ରବୁ ଲା଼ଆଁୟାଁ ବେ଼ଲାତା ସେୟାଁଣା ହାପାନାତା ପା଼ୱୁଲଇଁ ଏଲେଇଚେସି, “ଆଜାଆନି, ସାପି ଡ଼ୟାଆନା ଜ଼ଲାମୁ,
ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,
10 ୧୦ ଇଚିହିଁ ନା଼ନୁ ନୀ ତଲେ ମାଇଁ, ଆମିନି ଲ଼କୁ ଜିକେଏ ନୀ କ଼ପାଟି ନିଙ୍ଗାନା ନିଙ୍ଗେ ନା଼ସା କିହାଲି ଆ଼ଡଅସି, ଇଚିହିଁ ଈ ଗା଼ଡ଼ାତା ହା଼ରେକା ନା଼ ଲ଼କୁ ମାନେରି ।”
೧೦ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.
11 ୧୧ ଇଞ୍ଜାଁ ପା଼ୱୁଲ ଏ଼ୱାରିତା଼ଣା ମାହାପୂରୁତି କାତା ଜା଼ପ୍‌ହିହିଁ ର଼ ବାର୍ସା ସ଼ ଲେ଼ଞ୍ଜୁ ଡ଼ୟିତେସି ।
೧೧ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.
12 ୧୨ ସାମା ଗାଲିୟ ଆକାୟାତି ରମିୟ ସା଼ଲୱି କିନାସି ମାଚିବେ଼ଲାତା, ଜୀହୁଦି ଲ଼କୁ ପା଼ୱୁଲ କ଼ପାଟି ନିଙ୍ଗାନା ଏ଼ୱାଣାଇଁ ନୀହାଁୟି କିନାରି ତା଼ଣା ଦସା ଅ଼ହାନା ଏଲେଇଚେରି,
೧೨ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು;
13 ୧୩ “ଈୱାସି ମ଼ସାତି ମେ଼ରା କ଼ପାଟି ଅ଼ର ର଼ଲେକିଁ ମାହାପୂରୁତି ସେ଼ବା କିହାଲି ଲ଼କୁଣି ଜା଼ପ୍‌ହିମାନେସି ।”
೧೩“ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.
14 ୧୪ ସାମା ପା଼ୱୁଲ ଗୂତି ଏ଼କ୍‌ହାନା ଜ଼ଲାଲି ମା଼ଟ୍‌ହି ମାଚାଟି, ଗାଲିୟନ ଜୀହୁଦି ଲ଼କୁଣି ଏଲେଇଚେସି, “ଆଡ଼େ ଜୀହୁଦି ଲ଼କୁତେରି ଏ଼ନିଲେହେଁତି ଦ଼ହ କି ଲାଗେଏତି କାମା ଆ଼ତିହିଁମା ସୂସ୍ତି ତଲେ ମୀ କାତା ୱେନାୟି ନାଙ୍ଗେତାକି ନେହେଁ ଆ଼ତେମା,
೧೪ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ.
15 ୧୫ ସାମା ଈଦି ୱାର୍‌ଇ ବ଼ଲୁ ଅ଼ଡ଼େ ଦ଼ରୁ ଅ଼ଡ଼େ ମୀ ମେ଼ରାତି କାତା ମୀରୁଏ ଈଦାଆଁ ସୂସ୍ତି କିଦୁ । ଇଲେତି କାତାତି ନା଼ନୁ ନୀହାଁୟି କିଅଁ!”
೧೫ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,
16 ୧୬ ଏଲେଇଞ୍ଜାନା ଏ଼ୱାସି ଏ଼ୱାରାଇଁ ନୀହାଁୟି କିନି ତା଼ଣାଟି ପେ଼ର୍‌ହା ତୁସ୍ତେସି ।
೧೬ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು.
17 ୧୭ ଏଚେଟିଏ ବାରେଜା଼ଣା ସସ୍ତାନ ଇନି ଜୀହୁଦି ଲ଼କୁତି କୁଟମି ଇଲୁତି କାଜାଣାଇଁ ଆସାନା ନୀହାଁୟି ପାଙ୍ଗାତା ୱେ଼ତେରି; ସାମା ଗାଲିୟନ ଏ଼ ବାରେ କାତାତା ମ଼ନ ହୀଆତେସି ।
೧೭ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
18 ୧୮ ପା଼ୱୁଲ କରନ୍ତିତା ନାମିତି ତାୟି ତାଙ୍ଗିସ୍କା ତଲେ ହା଼ରେକା ଦିନା ଡ଼ୟାନା ତାୟିୟାଁ ତା଼ଣାଟି ହେଲ ବେଟାଆ଼ହାନା ଏ଼ୟୁ ଜା଼ଜାଟି ସିରିୟାତା ହାଚେସି, ପ୍ରିସ୍କିଲା ଅ଼ଡ଼େ ଆକ୍‌ୱିଲା ତାନିତଲେ ହାଚେରି, ତାନି ଆ଼ଞ୍ଜିତାୟି ମାଚାକି ଏ଼ୱାସି କେଙ୍କ୍ରେୟାତା ତାନି ତା଼ର୍ୟୁଁ ହିଣ୍‌ହେସି ।
೧೮ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು.
19 ୧୯ ଡା଼ୟୁ ଏ଼ୱାରି ଏପିସିୟତା ୱା଼ତେରି, ଅ଼ଡ଼େ ଏ଼ୱାସି ଏ଼ ଟା଼ୟୁତା ଆକ୍‌ୱିଲା ଅ଼ଡ଼େ ପ୍ରିସ୍କିଲାଇଁ ହେଲ ହୀହାନା ପା଼ୱୁଲ ରଅସିଏ ଜୀହୁଦି ଲ଼କୁତି କୁଟମି ଇଲୁତା ହ଼ଡାନା ଜୀହୁଦିୟାଁ ତଲେ ହା଼ଡାକାତା ଆ଼ତେରି ।
೧೯ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.
20 ୨୦ ଇଞ୍ଜାଁ ଏ଼ୱାରି ଏ଼ୱାଣାଇଁ ହା଼ରେକା ଦିନା ଡ଼ୟାଲି ବାତିମା଼ଲିତିହିଁୱା ଏ଼ୱାସି ଡ଼ୟାଲି କୂତେସି ।
೨೦ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ,
21 ୨୧ ସାମା ଏ଼ୱାରି ତା଼ଣାଟି ହେଲ ଅ଼ହାନା ଏଲେଇଚେସି, “ମାହାପୂରୁତି ମ଼ନ ଆତିହିଁ ଅ଼ଡ଼େ ର଼ ଦେବା ମୀ ତା଼ଣା ୱେଣ୍ତା ୱା଼ଇଁ,” ଇଞ୍ଜାଁ ଏ଼ୱାସି ଏପିସିୟଟି ହାଚେସି ।
೨೧“ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,
22 ୨୨ କାୟିସରିୟାତା ଏଗାହାଜାନା ଏମ୍ବାଟି ଜିରୁସାଲମତା ହାଚେସି, ଅ଼ଡ଼େ କୁଲମିତି ଜହରା କିହାନା ଏମ୍ବାଟିଏ ଆନ୍ତିୟକିୟାତା ହାଚେସି ।
೨೨ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.
23 ୨୩ ଏମ୍ବାଆଁ ଏଚରଦିନା ଡ଼ୟିତି ଡା଼ୟୁ, ଏ଼ୱାସି ଅ଼ଡ଼େ ୱେଣ୍ତେ ହାଜାନା ଗାଲାତିୟ ଇଞ୍ଜାଁ ପୁର୍ଗିୟା ନା଼ସ୍‌କା ହୀହାନା ହାଚେସି, ଅ଼ଡ଼େ ଜିରୁତା ସୀସୁୟାଁଣି ତାମି ନାମୁତା ଆ଼ଟ୍‌ୱା ତଲେ ଡ଼ୟାଲି ରା଼ହାଁ ହୀତେସି ।
೨೩ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.
24 ୨୪ ଏମ୍ବାଟିଏ ଆପଲ ଦ଼ରୁଗାଟି ର଼ ଜୀହୁଦି ଏପିସିୟତା ୱା଼ତେସି, ଏ଼ୱାସି ଆଲେକ୍‌ଜାଣ୍ତ୍ରିୟାତା ଜାର୍ନା ଆ଼ହାମାଚେସି, ଏ଼ୱାସି ନେହିଁକିଁ ୱେସାଲି ଆ଼ଡିନାସି ଅ଼ଡ଼େ ଦାର୍ମୁ ପତିତି କାତା ଗାଡି ପୁନାସି ମାଚେସି ।
೨೪ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.
25 ୨୫ ଈୱାସି ପ୍ରବୁ ଜିରୁତି କାତା ନେହିଁକିଁ ଜା଼ପାମାଚେସି, ଇଞ୍ଜାଁ ଜୀୱୁତଲେ ବା଼ଡ଼୍‌ୟୁ ବେଟାଆ଼ହାନା ଜୀସୁତି କାତା ନେହିଁକିଁ ଜା଼ପ୍‌ହି ମାଚେସି, ଏ଼ୱାସି ୱାର୍‌ଇ ଜହନତି ବାପ୍ତିସ୍ମ କାତା ପୁଞ୍ଜାମାଚେସି ।
೨೫ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.
26 ୨୬ ଏ଼ୱାସି ସା଼ସାତଲେ ଜୀହୁଦି ଲ଼କୁତି କୁଟମି ଇଲୁତା ଜ଼ଲାଲି ମା଼ଟ୍‌ହେସି, ସାମା ଆକ୍‌ୱିଲା ଅ଼ଡ଼େ ପ୍ରିସ୍କିଲା ଏ଼ୱାଣି କାତା ୱେଞ୍ଜାନା ଏ଼ୱାଣାଇଁ ତାମି ଇଜ ଅ଼ହାନା ଏମ୍ବାଆଁ ହା଼ରେକା ନେହେଁ ମାହାପୂରୁ ଜିରୁତି କାତା ପୁଣ୍‌ମ୍ବିକିତୁ ।
೨೬ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
27 ୨୭ ଡା଼ୟୁ ଆପଲ ଆକାୟା ଦେ଼ସାତା ହାଜାଲି ମ଼ନ କିହାଲିଏ ଏପିସିୟତି ନାମିତି ତାୟିୟାଁ ଏ଼ୱାଣାଇଁ ସା଼ୟେମି କିତେରି, ଇଞ୍ଜାଁ ଏ଼ୱାଣାଇଁ ରା଼ହାଁତଲେ ଆବାଲି ଆକାୟାତା ମାନି ସୀସୁୟାଁକି ର଼ ଆ଼କୁ ରା଼ଚିତେରି, ଏ଼ୱାସି ଏମ୍ବାଆଁ ଏଗାହାଜାନା ମାହାପୂରୁ କାର୍ମାଟି ନାମା ମାନାରାକି ହା଼ରେକା ସା଼ୟେମି କିତେସି ।
೨೭ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.
28 ୨୮ ଇଚିହିଁ ଜୀସୁଏ ମସିହା ଇଞ୍ଜିଁ ଦାର୍ମୁ ପତିଟି ନେହିଁକିଁ ତ଼ସାହାଁ ଏ଼ୱାସି ବାରେଜା଼ଣା ନ଼କିତା ତାନିତଲେ ଆସ୍‌ପି ଆ଼ହିମାନି ଜୀହୁଦି ଲ଼କୁଣି ହା଼ରୱି କିତେସି ।
೨೮ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು.

< କାମା 18 >