< Joshua 19 >
1 Kitakat se akluo som nu sin sou in sruf lal Simeon. Acn lalos uhc oasr pana luin acn lun sruf lal Judah.
೧ಚೀಟು ಎರಡನೆಯ ಸಾರಿ ಸಿಮೆಯೋನನ ಕುಲದವರಿಗೆ ಬಿದ್ದಿತು. ಸಿಮೆಯೋನನ ಕುಲದ ಗೋತ್ರಗಳ ಸ್ವತ್ತು ಯೆಹೂದ ಕುಲದವರ ಸ್ವತ್ತಿನ ಮಧ್ಯದಲ್ಲಿತ್ತು.
2 Acn inge pa Beersheba, Sheba, Moladah,
೨ಅವರ ಊರುಗಳು ಯಾವುವೆಂದರೆ: ಬೇರ್ಷೆಬ, ಶೆಬ, ಮೋಲಾದಾ,
3 Hazar Shual, Balah, Ezem,
೩ಹಚರ್ ಷೂವಾಲ್, ಬಾಲಾ, ಎಚೆಮ್,
4 Eltolad, Bethul, Hormah,
೪ಎಲ್ತೋಲದ್, ಬೆತೂಲ್, ಹೊರ್ಮಾ,
5 Ziklag, Beth Marcaboth, Hazar Susah,
೫ಚಿಕ್ಲಗ್, ಬೇತ್‌ಮರ್ಕಾಬೋತ್, ಹಚರ್‌ಸೂಸಾ,
6 Beth Lebaoth, ac Sharuhen — siti singoul tolu nufon, wi inkul nukewa ma raunela.
೬ಬೇತ್ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
7 Oayapa Ain, Rimmon, Ether, ac Ashan — siti akosr, wi inkul nukewa ma raunela,
೭ಅಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
8 weang pacna acn nukewa raunela siti inge nwe Baalath Beer (ku Ramah), su oan nu eir. Pa inge acn ma itukyang nu sin sou in sruf lal Simeon tuh in ma lalos.
೮ಅವುಗಳ ಸುತ್ತಣ ಪ್ರದೇಶದಲ್ಲಿ ರಾಮ ಎಂಬ ಬಾಲತ್ ಬೇರ್ ಎಂಬ ಊರಿನವರೆಗೂ ಇದ್ದ ಎಲ್ಲಾ ಗ್ರಾಮಗಳೂ ಆಗಿವೆ. ಬಾಲತ್ ಬೇರ್ ಎಂಬುದು ದಕ್ಷಿಣ ರಾಮ ಎನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವೇ.
9 Ke sripen acn lal Judah yohk liki ma elos enenu, oru itukyang sie ip lalos inge nu sin sruf lal Simeon.
೯ಸಿಮೆಯೋನ್ಯರ ಈ ಸ್ವತ್ತು ಯೆಹೂದ್ಯರ ಸ್ವತ್ತಿನ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ದೊರಕಿದ ಪ್ರದೇಶವು ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೂ ಅದರಲ್ಲೇ ಪಾಲು ಸಿಕ್ಕಿತು.
10 Kitakat se aktolu som nu sin sou in sruf lal Zebulun. An se elos eis inge fahla na nwe sun acn Sarid.
೧೦ಚೀಟು ಮೂರನೆಯ ಸಾರಿ ಜೆಬುಲೂನ್ಯರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು
11 Liki acn sacn, masrol an fahla roto lac nu Mareal, ac pusralla acn Dabbesheth ac infacl srisrik soko kutulap in acn Jokneam.
೧೧ಸಾರೀದಿನಿಂದ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.
12 Ke layen kutulap in acn Sarid, masrol an fahla nu kutulap nu ke masrol nu Chisloth Tabor, na sifilpa fahla nu Daberath ac utyak nu Japhia.
೧೨ಅದೇ ಸಾರೀದಿನಿಂದ ಅದು ಪೂರ್ವ ದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಮೇರೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13 Sifilpa fahla liki acn sacn nu kutulap nwe sun Gath Hepher ac Ethkazin, ac kuhfla nu Neah ke inkanek nu Rimmon.
೧೩ಅಲ್ಲಿಂದ ಮತ್ತು ಪೂರ್ವಕ್ಕೆ ಮುಂದುವರೆದು ಗತ್‌ಹೇಫೆರನ್ನು ಎತ್‌ಕಾಚೀನ ಇವುಗಳ ಮೇಲೆ ಹಾದು ನೇಯದ ಪಕ್ಕದಲ್ಲಿ ಇರುವ ರಿಮ್ಮೋನಿಗೆ ಹೋಗುತ್ತದೆ.
14 Ke masrol epang an, el kuhfla nu Hannathon, fahla safla Infahlfal Iphtahel.
೧೪ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
15 Acn inge pa Kattath, Nahalal, Shimron, Idalah, ac Bethlehem— siti singoul luo nufon, wi inkul nukewa ma raunela.
೧೫ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳಿಗೆ ಸೇರಿದ ಗ್ರಾಮಗಳು.
16 Siti inge wi acn ma raunela, oan in acn ma itukyang nu sin sou in sruf lal Zebulun tuh in ma lalos.
೧೬ಜೆಬುಲೂನಿನ ಕುಲದ ಗೋತ್ರಗಳಿಗೆ ಸ್ವತ್ತಾಗಿ ದೊರಕಿದವು.
17 Kitakat se akakosr som nu sin sou in sruf lal Issachar.
೧೭ಚೀಟು ನಾಲ್ಕನೆಯ ಸಾರಿ ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಪಟ್ಟಣಗಳು ಯಾವುವೆಂದರೆ:
18 Acn inge pa Jezreel, Chesulloth, Shunem,
೧೮ಇಜ್ರೇಲ್, ಕೆಸುಲ್ಲೋತ್, ಶೂನೇಮ್,
19 Hapharaim, Shion, Anaharath,
೧೯ಹಫಾರಯಿಮ್, ಶೀಯೋನ್, ಅನಾಹರತ್,
20 Rabbith, Kishion, Ebez,
೨೦ರಬ್ಬೀತ್, ಕಿಷ್ಯೋನ್, ಎಬೆಜ್,
21 Remeth, Engannim, Enhaddah, ac Bethpazzez.
೨೧ರೆಮೆತ್, ಏಂಗನ್ನೀಮ್, ಏನ್‌ಹದ್ದಾ, ಬೇತ್ ಪಚ್ಚೇಚ್ ಇವುಗಳೇ.
22 Masrol in acn Issachar fahla pusralla Tabor, Shahazumah, Beth Shemesh, ac safla Infacl Jordan — siti singoul onkosr nufon, wi inkul nukewa ma raunela.
೨೨ತಾಬೋರ್, ಶಹಚೀಮಾ, ಬೇತ್‌ಷೆಮೆಷ್ ಎಂಬ ಊರುಗಳು ಅದರ ಮೇರೆಯೊಳಗಿದ್ದವು. ಮೇರೆಯು ಯೊರ್ದನ್ ನದಿಯ ತೀರದಲ್ಲಿ ಕೊನೆಗೊಳ್ಳುತ್ತದೆ. ಒಟ್ಟಾರೆ ಹದಿನಾರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,
23 Siti inge wi acn ma raunela, oan in acn ma itukyang nu sin sou in sruf lal Issachar tuh in ma lalos.
೨೩ಇಸ್ಸಾಕಾರನ ಕುಲದ ಗೋತ್ರಗಳಿಗೆ ಸಿಕ್ಕಿದವು.
24 Kitakat se aklimekosr som nu sin sou in sruf lal Asher.
೨೪ಚೀಟು ಐದನೆಯ ಸಾರಿ ಆಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಯಾವುವೆಂದರೆ: -
25 Acn inge pa Helkath, Hali, Beten, Achshaph,
೨೫ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26 Allam Melech, Amad, ac Mishal. Masrol nu roto an pusralla Carmel ac Shihor Libnath.
೨೬ಅಲಮ್ಮೆಲೆಕ್, ಅಮಾದ್, ಮಿಷಾಲ್ ಇವುಗಳೇ. ಇವರ ದೇಶದ ಮೇರೆಯು ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ, ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ ಅಲ್ಲಿಂದ ಪೂರ್ವಕ್ಕೆ ತಿರುಗಿ,
27 Ac nu kutulap, masrol an fahla sun acn Bethdagon, pusralla acn Zebulun ac Infahlfal Iphtahel nu epang nu Bethemek ac Neiel, na fahla na nwe epang nu Cabul,
೨೭ಬೇತ್‌ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಮೇರೆಗೂ ಇಪ್ತಹೇಲಿನ ಕಣಿವೆಯ ಉತ್ತರ ದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತೇಮೇಕ ನೆಗೀಯೇಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು
28 Ebron, Rehob, Hammon, ac Kanah nwe ke sun acn Sidon.
೨೮ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಚೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
29 Na masrol an kuhfla nu Ramah, ac sun Tyre (sie siti rauniyukla ke pot fulat) na sifil kuhfla nu Hosah, ac fahla safla ke Meoa Mediterranean. Siti inge oasr pac we: Mahalab, Achzib,
೨೯ಅಲ್ಲಿಂದ ಅದು ತಿರುಗಿಕೊಂಡು ರಾಮ, ತೂರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರ ತೀರದಲ್ಲಿ ಕೊನೆಗೊಳ್ಳುತ್ತದೆ.
30 Ummah, Aphek, ac Rehob — siti longoul luo nufon, wi inkul nukewa ma raunela.
೩೦ಉಮ್ಮಾ, ಅಫೇಕ್, ರೆಹೋಬ್ ಇವೇ ಮೊದಲಾದ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
31 Siti inge wi acn ma raunela, oan in acn ma itukyang nu sin sou in sruf lal Asher tuh in ma lalos.
೩೧ಅಶೇರನ ಕುಲದ ಗೋತ್ರಗಳ ಸ್ವತ್ತಾಗಿವೆ.
32 Kitakat se akonkosr som nu sin sou in sruf lal Naphtali.
೩೨ಚೀಟು ಆರನೆಯ ಸಾರಿ ನಫ್ತಾಲಿಯ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು
33 Masrol ke acn se inge fahla Heleph lac nu ke sak oak in Zaanannim ac fahla nu Adaminekeb ac nu Jamnia, ac fahla nwe Lakkum ac safla ke Infacl Jordan.
೩೩ಚಾನನ್ನೀಮಿನಲ್ಲಿರುವ ಹೆಲೇಫಿನ ಅಲ್ಲೋನ ಮರದಿಂದ ಆದಾಮಿನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
34 Na masrol sacn kuhfla nu roto som nu Aznoth Tabor, ac liki acn sacn fahla nu Hukkok pusralla Zebulun nu eir, ac Asher nu roto, ac Infacl Jordan nu kutulap.
೩೪ಇದಲ್ಲದೆ ಮೇರೆಯು ತಿರುಗಿ ಅದೇ ಸ್ಥಳದಿಂದ ಅಜ್ನೊತ್-ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ, ದಕ್ಷಿಣದಲ್ಲಿ ಜೆಬುಲೂನ್ಯರ ಮೇರೆಗೂ, ಪಶ್ಚಿಮದಲ್ಲಿ ಆಶೇರರ ಮತ್ತು ಯೆಹೂದ್ಯರ ಮೇರೆಗೂ ಪೂರ್ವದಲ್ಲಿ ಯೊರ್ದನ್ ಹೊಳೆಗೂ ಹೊಂದಿಕೊಂಡಿರುತ್ತದೆ.
35 Siti inge nukewa rauniyukla ke pot fulat: Ziddim, Zer, Hammath, Rakkath, Chinnereth,
೩೫ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
37 Kedesh, Edrei, Enhazor,
೩೭ಕೆದೆಷ್ ಎದ್ರೈ, ಏನ್ ಹಾಚೋರ್,
38 Yiron, Migdalel, Horem, Bethanath, ac Beth Shemesh — siti singoul eu nufon wi inkul nukewa ma raunela.
೩೮ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ ಷೆಮೆಷ್, ಬೆತನಾತ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲುಗಳುಳ್ಳ ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,
39 Siti inge wi acn ma raunela, oan in acn ma itukyang nu sin sou in sruf lal Naphtali tuh in ma lalos.
೩೯ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಾಗಿದೆ.
40 Kitakat se akitkosr som nu sin sou in sruf lal Dan.
೪೦ಚೀಟು ಏಳನೆಯ ಸಾರಿ ದಾನನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವತ್ತಾಗಿ ದೊರಕಿದ ಊರುಗಳು ಯಾವುವೆಂದರೆ:
41 Acn inge pa Zorah, Eshtaol, Irshemesh,
೪೧ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್,
42 Shaalbim, Aijalon, Ithlah,
೪೨ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
44 Eltekeh, Gibbethon, Baalath,
೪೪ಎಲ್ತೆಕೇ, ಗಿಬ್ಬೆತೋನ್, ಬಾಲತ್,
45 Jehud, Beneberak, Gathrimmon,
೪೫ಯೆಹುದ್, ಬೆನೇಬೆರಕ್, ಗತ್ ರಿಮ್ಮೋನ್,
46 Mejarkon, ac Rakkon, ac acn nukewa raunela Joppa.
೪೬ಮೇಯರ್ಕೋನ್, ರಕ್ಕೋನ್ ಇವೇ. ಯೊಪ್ಪಕ್ಕೆ ಹೊಂದಿರುವ ಪ್ರದೇಶವೂ ಇವರಿಗೇ ದೊರಕಿತು.
47 Ke itukla acn sin tulik natul Dan inge, elos som nu Laish ac mweuni. Elos sruokya ac onela mwet we, ac eisla acn sac lalos. Elos oakwuki we ac ekulla inen siti sac liki Laish nu ke Dan, in oana inen papa tumun sruf lalos.
೪೭ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿ ಆ ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸಿಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರಿಟ್ಟರು.
48 Siti inge wi acn ma raunela, oan in acn ma itukyang nu sin sou in sruf lal Dan tuh in ma lalos.
೪೮ದಾನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಅದರಲ್ಲಿದ್ದ ಗ್ರಾಮ ಮತ್ತು ನಗರಗಳು ಇವೇ.
49 Ke mwet Israel elos kitalik tari acn nukewa, elos sang ipin acn se nu sel Joshua wen natul Nun tuh in ma lal.
೪೯ಇಸ್ರಾಯೇಲ್ಯರು ದೇಶವನ್ನು ಮೇರೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗನಾದ ಯೆಹೋಶುವನಿಗೂ ತಮ್ಮದರಲ್ಲಿ ಪಾಲು ಕೊಟ್ಟರು.
50 In oana ma LEUM GOD El tuh sapkin, elos sang siti se el tuh siyuk ah: Timnath Serah, su oan fineol uh in Ephraim. Joshua el sifil musaela siti se inge ac muta we.
೫೦ಅವನು ತನಗೋಸ್ಕರ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಕೇಳಿಕೊಳ್ಳಲು ಅವರು ಯೆಹೋವನ ಆಜ್ಞೆಯಂತೆ ಅದನ್ನು ಅವನಿಗೆ ಕೊಟ್ಟು ಬಿಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿಕೊಂಡು ಅದರಲ್ಲೇ ವಾಸವಾಗಿದ್ದನು.
51 Eleazar mwet tol, Joshua wen natul Nun, ac mwet kol lun kais sie sou in sruf lun Israel, elos kitalik acn inge ke fa ye mutun LEUM GOD in acn Shiloh, ke mutunoa in Lohm Nuknuk sin LEUM GOD. Pa inge saflaiyen kitakatelik lun acn inge.
೫೧ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ, ಇಸ್ರಾಯೇಲ್ಯರ ಕುಲಮುಖ್ಯಸ್ಥರೂ ಸೇರಿ ಇಸ್ರಾಯೇಲ್ಯರಿಗೆ ಶೀಲೋವಿನಲ್ಲಿದ್ದ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟು ಹಾಕಿ ಹಂಚಿಕೊಟ್ಟ ಪ್ರಾಂತ್ಯಗಳು ಇವೇ. ಹೀಗೆ ದೇಶ ವಿಭಜನೆಯ ಕಾರ್ಯವು ಪೂರ್ಣಗೊಂಡಿತು.