< 시편 87 >
1 (고라 자손의 시. 곧 노래) 그 기지가 성산에 있음이여
ಕೋರಹೀಯರ ಕೀರ್ತನೆ. ಒಂದು ಗೀತೆ. ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ.
2 여호와께서 야곱의 모든 거처보다 시온의 문들을 사랑하시는도다
ದೇವರು ಚೀಯೋನಿನ ದ್ವಾರಗಳನ್ನು ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ.
3 하나님의 성이여, 너를 가리켜 영광스럽다 말하는도다 (셀라)
ದೇವರ ಪಟ್ಟಣವೇ, ನಿನ್ನ ವಿಷಯವಾದ ಮಹಿಮೆಯು ಏನೆಂದರೆ,
4 내가 라합과 바벨론을 나를 아는 자 중에 있다 말하리라 보라 블레셋과 두로와 구스여 이도 거기서 났다 하리로다
“ರಾಹಬ್, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು, ‘ಚೀಯೋನಿನಲ್ಲೇ ಹುಟ್ಟಿದವು.’”
5 시온에 대하여 말하기를 이 사람, 저 사람이 거기서 났나니 지존자가 친히 시온을 세우리라 하리로다
ಚೀಯೋನಿನ ವಿಷಯವಾಗಿ, “ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು. ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು.
6 여호와께서 민족들을 등록하실 때에는 그 수를 세시며 이 사람이 거기서 났다 하시리로다 (셀라)
ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ, “ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು.
7 노래하는 자와 춤추는 자는 말하기를 나의 모든 근원이 네게 있다 하리로다
“ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,” ಎಂದು ಸಂಗೀತಕಾರರು ಹಾಡುವರು.