< 민수기 10 >

1 여호와께서 모세에게 일러 가라사대
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದು:
2 은나팔 둘을 만들되 쳐서 만들어서 그것으로 회중을 소집하며 진을 진행케 할 것이라
“ನಕ್ಷೆಯ ಕೆಲಸದಿಂದ ಹೊಡೆದು ಮಾಡಿದ ಬೆಳ್ಳಿಯ ತಗಡಿನ ಎರಡು ತುತೂರಿಗಳನ್ನು ನೀನು ಮಾಡಿಸಬೇಕು. ಸಭೆಯನ್ನು ಕರೆಯುವುದಕ್ಕಾಗಿಯೂ, ಪಾಳೆಯಗಳ ಪ್ರಯಾಣಕ್ಕಾಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು.
3 두 나팔을 불 때에는 온 회중이 회막 문 앞에 모여서 네게로 나아올 것이요
ಅವುಗಳನ್ನು ಊದುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
4 하나만 불 때에는 이스라엘 천부장된 족장들이 모여서 네게로 나아올 것이며
ಒಂದನ್ನು ಮಾತ್ರ ಊದುವಾಗ, ಇಸ್ರಾಯೇಲರಲ್ಲಿ ಮುಖ್ಯಸ್ಥರಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.
5 너희가 그것을 울려 불 때에는 동편 진들이 진행할 것이고
ನೀವು ಜಯಧ್ವನಿಯಂತೆ ಊದುವಾಗ ಪೂರ್ವದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಮುಂದೆ ಹೊರಡಬೇಕು.
6 제 이차로 울려 불 때에는 남편 진들이 진행할 것이라 무릇 진행하려 할 때에는 나팔 소리를 울려 불 것이며
ನೀವು ಎರಡನೆಯ ಸಾರಿ ಆರ್ಭಟವಾಗಿ ಊದುವಾಗ, ದಕ್ಷಿಣದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಪ್ರಯಾಣ ಮಾಡಬೇಕು. ಅವರ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿ ಊದಬೇಕು.
7 또 회중을 모을 때에도 나팔을 불 것이나 소리를 울려 불지 말것이며
ಆದರೆ ಸಭೆಯನ್ನು ಕೂಡಿಸುವಾಗ ನೀವು ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬೇಡಿರಿ.
8 그 나팔은 아론의 자손인 제사장들이 불지니 이는 너희 대대에 영원한 율례니라
“ಯಾಜಕರಾಗಿರುವ ಆರೋನನ ಪುತ್ರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು.
9 또 너희 땅에서 너희가 자기를 압박하는 대적을 치러 나갈 때에는 나팔을 울려 불지니 그리하면 너희 하나님 여호와가 너희를 기억하고 너희를 너희 대적에게서 구원하리라
ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರವಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ಜನರನ್ನು ಎಚ್ಚರಿಸುವಂತೆ ತುತೂರಿಗಳನ್ನು ಆರ್ಭಟವಾಗಿ ಊದಬೇಕು. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನೆನಪು ಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ಬಿಡಿಸುವನು.
10 또 너희 희락의 날과 너희 정한 절기와 월삭에는 번제물의 위에와 화목제물의 위에 나팔을 불라 그로 말미암아 너희 하나님이 너희를 기억하리라 나는 너희 하나님 여호와니라!
ನಿಮ್ಮ ಸಂತೋಷದ ದಿವಸದಲ್ಲಿಯೂ, ನಿಮ್ಮ ಹಬ್ಬಗಳಲ್ಲಿಯೂ ನಿಮ್ಮ ತಿಂಗಳಿನ ಆರಂಭದಲ್ಲಿಯೂ ತುತೂರಿಗಳನ್ನು ಊದಬೇಕು. ನಿಮ್ಮ ದಹನಬಲಿಗಳನ್ನೂ ಸಮಾಧಾನದ ಬಲಿಯನ್ನೂ ಅರ್ಪಿಸುವಾಗ ಅವುಗಳನ್ನು ಊದಬೇಕು. ಅವುಗಳ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.”
11 제 이년 이월 이십일에 구름이 증거막에서 떠오르매
ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎದ್ದಿತು.
12 이스라엘 자손이 시내 광야에서 출발하여 자기 길을 행하더니 바란 광야에 구름이 머무니라
ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.
13 이와 같이 그들이 여호와께서 모세로 명하신 것을 좇아 진행하기를 시작하였는데
ಆಗ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಪ್ರಯಾಣಮಾಡಿದ್ದು ಇದು ಮೊದಲನೇ ಸಾರಿ.
14 수두로 유다 자손 진기에 속한 자들이 그 군대대로 진행하였으니 유다 군대는 암미나답의 아들 나손이 영솔하였고
ಯೆಹೂದನ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀನಾದಾಬನ ಮಗ ನಹಶೋನನು ಇದ್ದನು.
15 잇사갈 자손 지파의 군대는 수알의 아들 느다넬이 영솔하였고
ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗ ನೆತನೆಯೇಲ್ ಇದ್ದನು.
16 스불론 자손 지파의 군대는 헬론의 아들 엘리압이 영솔하였더라
ಜೆಬುಲೂನನ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗ ಎಲೀಯಾಬನು ಇದ್ದನು.
17 이에 성막을 걷으매 게르손 자손과 므라리 자손이 성막을 메고 발행하였으며
ಆಗ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ, ಮೆರಾರೀಯರೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
18 다음으로 르우벤 진기에 속한 자들이 그 군대대로 발행하였으니 르우벤의 군대는 스데울의 아들 엘리술이 영솔하였고
ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಶೆದೇಯೂರನ ಮಗ ಎಲೀಚೂರನು ಇದ್ದನು.
19 시므온 자손 지파의 군대는 수리삿대의 아들 슬루미엘이 영솔하였고
ಸಿಮೆಯೋನನ ಗೋತ್ರದ ಸೈನ್ಯದ ಮೇಲೆ ಚುರೀಷದ್ದೈಯನ ಮಗ ಶೆಲುಮೀಯೇಲನು ಇದ್ದನು.
20 갓 자손 지파의 군대는 드우엘의 아들 엘리아삽이 영솔하였더라
ಗಾದನ ಗೋತ್ರದ ಸೈನ್ಯದ ಮೇಲೆ ದೆವುಯೇಲನ ಮಗ ಎಲ್ಯಾಸಾಫನು ಇದ್ದನು.
21 고핫인은 성물을 메고 진행하였고 그들이 이르기 전에 성막을 세웠으며
ಅವರ ಹಿಂದೆ ಪರಿಶುದ್ಧ ವಸ್ತುಗಳನ್ನು ಹೊರುವ ಕೊಹಾತ್ಯರು ಹೊರಟರು. ಇವರು ಬರುವಷ್ಟರೊಳಗೆ ಉಳಿದ ಲೇವಿಯರು ಗುಡಾರವನ್ನು ನಿಲ್ಲಿಸಿದರು.
22 다음으로 에브라임 자손 진기에 속한 자들이 그 군대대로 진행하였으니 에브라임 군대는 암미훗의 아들 엘리사마가 영솔하였고
ಎಫ್ರಾಯೀಮನ ಪಾಳೆಯದ ಧ್ವಜವು ಅವನ ಸೈನ್ಯಗಳ ಪ್ರಕಾರ ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀಹೂದನ ಮಗ ಎಲೀಷಾಮನು ಇದ್ದನು.
23 므낫세 자손 지파의 군대는 브다술의 아들 가말리엘이 영솔하였고
ಮನಸ್ಸೆಯ ಗೋತ್ರದ ಮೇಲೆ ಪೆದಾಚೂರನ ಮಗ ಗಮಲಿಯೇಲನು ಇದ್ದನು.
24 베냐민 자손 지파의 군대는 기드오니의 아들 아비단이 영솔하였더라
ಬೆನ್ಯಾಮೀನನ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗ ಅಬೀದಾನನು ಇದ್ದನು.
25 다음으로 단 자손 진기에 속한 자들이 그 군대대로 진행하였으니 이 군대는 모든 진의 후진이었더라 단 군대는 암미삿대의 아들 아히에셀이 영솔하였고
ದಾನನ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಇದ್ದನು.
26 아셀 자손 지파의 군대는 오그란의 아들 바기엘이 영솔하였고
ಆಶೇರನ ಗೋತ್ರದ ಸೈನ್ಯಗಳ ಮೇಲೆ ಒಕ್ರಾನನ ಮಗ ಪಗೀಯೇಲನು ಇದ್ದನು.
27 납달리 자손 지파의 군대는 에난의 아들 아히라가 영솔하였더라
ನಫ್ತಾಲಿಯ ಗೋತ್ರದ ಸೈನ್ಯದ ಮೇಲೆ ಏನಾನ ಮಗ ಅಹೀರನು ಇದ್ದನು.
28 모세가 가로되 `청컨대 우리를 떠나지 마소서 당신은 우리가 광야에서 어떻게 진 칠 것을 아나니 우리의 눈이 되리이다
ಈ ಪ್ರಕಾರ ಇಸ್ರಾಯೇಲರು ತಮ್ಮ ಗೋತ್ರಗಳ ಪ್ರಕಾರ ಪ್ರಯಾಣವಾಗಿ ಹೊರಟರು.
29 우리와 동행하면 여호와께서 우리에게 복을 내리시는 대로 우리도 당신에게 행하리이다'
ಮೋಶೆ ತನ್ನ ಮಾವನಾಗಿದ್ದ ಮಿದ್ಯಾನನಾದ ರೆಯೂವೇಲನ ಮಗ ಹೊಬಾಬನಿಗೆ, “ಯೆಹೋವ ದೇವರು ನಮಗೆ ಕೊಡುತ್ತೇನೆಂದು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸಂಗಡ ನೀನೂ ಬಾ, ನಾವು ನಿನಗೆ ಒಳ್ಳೆಯದನ್ನು ಮಾಡುವೆವು. ಏಕೆಂದರೆ ಯೆಹೋವ ದೇವರು ಇಸ್ರಾಯೇಲರನ್ನು ಕುರಿತು ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾರೆ,” ಎಂದು ಹೇಳಿದನು.
30 그들이 여호와의 산에서 떠나 삼일 길을 행할 때에 여호와의 언약궤가 그 삼일 길에 앞서 행하며 그들의 쉴 곳을 찾았고
ಆಗ ಅವನು ಅವನಿಗೆ, “ನಾನು ಬರುವುದಿಲ್ಲ. ನನ್ನ ದೇಶಕ್ಕೂ ನನ್ನ ಬಂಧುಗಳ ಬಳಿಗೂ ನಾನು ಹೋಗುತ್ತೇನೆ,” ಎಂದನು.
31 그들이 여호와의 산에서 떠나 삼일 길을 행할 때에 여호와의 언약궤가 그 삼일 길에 앞서 행하며 그들의 쉴 곳을 찾았고
ಅದಕ್ಕೆ ಮೋಶೆ, “ನಮ್ಮನ್ನು ಬಿಡಬೇಡ. ಏಕೆಂದರೆ ನಾವು ಎಲ್ಲಿ ಇಳಿದುಕೊಳ್ಳಬೇಕೆಂಬುದು ನಿನಗೆ ಮಾತ್ರ ತಿಳಿದಿದೆ. ನೀನು ನಮಗೆ ಕಣ್ಣುಗಳಾಗಿರುವೆ.
32 그들이 행진할때에 낮에는 여호와의 구름이 그 위에 덮였었더라
ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.
33 궤가 떠날 때에는 모세가 가로되 `여호와여! 일어나사 주의 대적들을 흩으시고 주를 미워하는 자로 주의 앞에서 도망하게 하소서!'하였고
ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು.
34 궤가 쉴 때에는 가로되 `여호와여! 이스라엘 천만인에게로 돌아오소서!' 하였더라
ಅವರು ಪಾಳೆಯದಿಂದ ಹೊರಟಾಗ, ಯೆಹೋವ ದೇವರ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು.
ಇದಲ್ಲದೆ ಮಂಜೂಷವು ಹೊರಡುವಾಗ ಮೋಶೆಯು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಎದ್ದೇಳಿರಿ, ನಿಮ್ಮ ಶತ್ರುಗಳು ಚದರಿಹೋಗಲಿ. ನಿಮ್ಮನ್ನು ಹಗೆ ಮಾಡುವವರು ನಿಮ್ಮ ಎದುರಿನಿಂದ ಓಡಿಹೋಗಲಿ.”
ಮಂಜೂಷವು ನಿಂತಾಗ ಅವನು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಸಾವಿರಾರು ಇಸ್ರಾಯೇಲರ ಕುಟುಂಬಗಳ ಬಳಿಗೆ ಹಿಂದಿರುಗು.”

< 민수기 10 >