< ತೀತನಿಗೆ ಬರೆದ ಪತ್ರಿಕೆ 2 >

1 ನೀನಾದರೋ ಸ್ವಸ್ಥಬೋಧನೆಗೆ ಅನುಗುಣವಾಗಿ ಉಪದೇಶಿಸು.
Pour toi, enseigne ce qui est conforme à la saine doctrine:
2 ವೃದ್ಧರು ಆತ್ಮ ಸಂಯಮವುಳ್ಳವರೂ ಗೌರವಕ್ಕೆ ಯೋಗ್ಯರೂ ಸ್ವಯಂನಿಯಂತ್ರಿತರೂ ನಂಬಿಕೆ, ಪ್ರೀತಿ, ತಾಳ್ಮೆ ಇವುಗಳಲ್ಲಿ ಬದಲಾಗದವರೂ ಆಗಿರಬೇಕೆಂದು ಉಪದೇಶಿಸು.
Aux vieillards, d’être sobres, pudiques, graves, prudents, purs dans la foi, dans la charité, dans la patience;
3 ಅದೇ ಪ್ರಕಾರ, ವೃದ್ಧಸ್ತ್ರೀಯರು ನಡತೆಯಲ್ಲಿ ಭಕ್ತಿಗೆ ತಕ್ಕ ಹಾಗೆ ಇರುವವರಾಗಿರಬೇಕು. ಅವರು ಸುಳ್ಳಾಗಿ ದೂರುವವರೂ ಮದ್ಯಾಸಕ್ತರೂ ಆಗಿರದೆ, ಒಳ್ಳೆಯವುಗಳನ್ನು ಬೋಧಿಸುವವರಾಗಿರಬೇಕು ಎಂದು ಅವರಿಗೆ ಉಪದೇಶಿಸು.
Et de même aux femmes âgées, d’avoir un maintien qui respire la sainteté, de n’être ni médisantes ni adonnées au vin, de bien instruire,
4 ಇದಲ್ಲದೆ ದೇವರ ವಾಕ್ಯವು ದೂಷಣೆಯಾಗದಂತೆ ಯೌವನ ಸ್ತ್ರೀಯರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ
D’enseigner la sagesse aux jeunes filles, d’aimer leurs maris, de chérir leurs enfants,
5 ಸ್ವಶಿಸ್ತನ್ನು ಹೊಂದಿದವರೂ ಪತಿವ್ರತೆಯರೂ ಮನೆಯಲ್ಲಿ ಕೆಲಸ ಮಾಡುವವರೂ ದಯೆವುಳ್ಳವರೂ ತಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಿರಿ.
D’être prudentes, chastes, sobres, appliquées au soin de leur maison, bonnes, soumises à leurs maris, afin que la parole, de Dieu ne soit point blasphémée.
6 ಹಾಗೆಯೇ, ಯೌವನಸ್ಥರು ಆತ್ಮ ಸ್ವಶಿಸ್ತನ್ನು ಹೊಂದಿದವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸು.
Exhorte également les jeunes hommes à être tempérants.
7 ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ
Montre-toi toi-même, en toutes choses, un modèle de bonnes œuvres, dans la doctrine, dans l’intégrité, dans la gravité.
8 ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.
Que ta parole soit saine, irrépréhensible, afin que notre adversaire rougisse, n’ayant aucun mal à dire de nous.
9 ಸೇವಕರು ತಮ್ಮ ಸ್ವಂತ ಯಜಮಾನರಿಗೆ ಅಧೀನರಾಗಿದ್ದು ಎಲ್ಲವುಗಳಲ್ಲಿ ಅವರನ್ನು ಮೆಚ್ಚಿಸುವವರಾಗಿ ಎದುರು ಮಾತನಾಡದೆ,
Exhorte les serviteurs à être soumis à leurs maîtres, à leur complaire en tout, à ne les point contredire,
10 ಯಾವುದನ್ನೂ ಕದ್ದಿಟ್ಟುಕೊಳ್ಳದೆ, ನಮ್ಮ ರಕ್ಷಕರಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿಯೂ ಅಲಂಕರಿಸುವಂತೆ, ಒಳ್ಳೆಯ ನಂಬಿಗಸ್ತರೆಂದು ಎಲ್ಲದರಲ್ಲಿಯೂ ತೋರಿಸಬೇಕೆಂದು ಅವರನ್ನು ಉಪದೇಶಿಸು.
À ne rien dérober, mais à montrer en tout une fidélité parfaite, afin qu’en toutes choses ils fassent honneur à la doctrine de Dieu notre Sauveur.
11 ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.
Car la grâce de Dieu notre Sauveur, est apparue à tous les hommes,
12 ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ. (aiōn g165)
Nous enseignant à renoncer à l’impiété et aux désirs du siècle, et à vivre sobrement, justement et pieusement dans ce monde, (aiōn g165)
13 ನಮಗೆ ರಕ್ಷಕರೂ ಮಹಾ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಭಾಗ್ಯಕರವಾದ ಮಹಿಮೆಯ ಪ್ರತ್ಯಕ್ಷತೆಯ ನಿರೀಕ್ಷೆಯನ್ನೂ ಎದುರು ನೋಡುತ್ತಿರಬೇಕೆಂದು ಕೃಪೆಯು ನಮಗೆ ಬೋಧಿಸುತ್ತದೆ.
Attendant la bienheureuse espérance et l’avènement de la gloire du grand Dieu et de notre Sauveur Jésus-Christ,
14 ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.
Qui s’est livré lui-même pour nous, afin de nous racheter de toute iniquité, et de se faire un peuple pur, agréable et zélé pour les bonnes œuvres.
15 ಈ ಕಾರ್ಯಗಳ ವಿಷಯದಲ್ಲಿ, ನೀನು ಉಪದೇಶಿಸುತ್ತಾ ಇರು. ಪ್ರೋತ್ಸಾಹಮಾಡುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
Dis ces choses, exhorte et reprends avec une pleine autorité. Que personne ne te méprise.

< ತೀತನಿಗೆ ಬರೆದ ಪತ್ರಿಕೆ 2 >