< ಪರಮಗೀತೆ 1 >
2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.
願君以熱吻與我接吻! 因為你的愛撫甜於美酒。
3 ನೀನು ಹಚ್ಚಿಕೊಂಡಿರುವ ಸುಗಂಧ ತೈಲದ ಪರಿಮಳವು ಮೆಚ್ಚಿಕೆಯಾಗಿದೆ. ನಿನ್ನ ಹೆಸರು ಸುರಿದ ಸುಗಂಧ ತೈಲವಾಗಿದೆ. ಆದ್ದರಿಂದ ಕನ್ಯೆಯರು ನಿನ್ನನ್ನು ಪ್ರೀತಿ ಮಾಡುತ್ತಾರೆ!
你的香氣芳怡人,你的令名香液四射,為此少女都愛慕你。
4 ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಲು ಅವಸರಪಡು! ಅರಸನು ನನ್ನನ್ನು ತನ್ನ ಕೊಠಡಿಯೊಳಗೆ ಕರೆದುಕೊಂಡು ಬರಲಿ. ಸ್ನೇಹಿತರು ನಾವು ನಿನ್ನಲ್ಲಿ ಉಲ್ಲಾಸಪಟ್ಟು, ಸಂತೋಷ ಪಡುತ್ತೇವೆ. ದ್ರಾಕ್ಷಾರಸಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಯನ್ನು ಹೊಗಳುತ್ತೇವೆ. ಪ್ರಿಯತಮೆ ಅವರು ಯಥಾರ್ಥವಾಗಿ ನಿನ್ನನ್ನು ಮೆಚ್ಚುತ್ತಾರೆ!
願你拉著我隨你奔跑! 君王,願你引我進你的內室;我們都要因你歡樂踴躍,讚歎你那詌於酒的愛撫;怪不得眾少女都愛慕你!
5 ಯೆರೂಸಲೇಮಿನ ಪುತ್ರಿಯರೇ, ನಾನು ಕಪ್ಪಾದವಳು ಆದರೂ ಸುಂದರಿ. ಕೇದಾರಿನ ಗುಡಾರಗಳಂತೆಯೂ, ಸೊಲೊಮೋನನ ಡೇರೆಯ ತೆರೆಗಳಂತೆಯೂ ಚೆಲುವೆ.
耶路撒冷女郎! 我雖黑,郤秀麗,有如刻達爾的帳棚,又似撒耳瑪的營幕。
6 ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ. ನನ್ನ ಸಹೋದರರು ನನ್ನ ಮೇಲೆ ಕೋಪಮಾಡಿಕೊಂಡು, ದ್ರಾಕ್ಷಿತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ಆದರೆ ನನ್ನ ಸ್ವಂತ ದ್ರಾಕ್ಷಿತೋಟವನ್ನು ನಾನು ಅಲಕ್ಷ್ಯ ಮಾಡಬೇಕಾಯಿತು.
你們不要怪我黑,是太陽曬黑了我。我母親的兒子向我發怒,派我去看守葡萄園,我郤沒有去看守。
7 ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸುವುದು ಎಲ್ಲಿ? ಮಧ್ಯಾಹ್ನದಲ್ಲಿ ನೀನು ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ? ನನಗೆ ತಿಳಿಸು. ನಾನು ನಿನ್ನ ಜೊತೆಗಾರರ ಮಂದೆಗಳ ಬಳಿಯಲ್ಲಿ ಮುಸುಕು ಹಾಕಿದವಳಂತೆ ಏಕೆ ಅಲೆಯಬೇಕು?
我心愛的! 請告訴我:你在那兒放羊﹖中午又在那兒臥羊﹖別令我在你伴侶的羊群間,獨自徘徊!◆耶京女郎:
8 ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನಿನಗೆ ಗೊತ್ತಿಲ್ಲವಾದರೆ, ನೀನು ಮಂದೆಯ ಜಾಡಿನಲ್ಲಿಯೇ ಹೋಗಿ, ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.
女中的佳麗! 妳若不知道,出去跟蹤羊群的足跡,靠近牧人的帳棚,牧放妳的小羊。◆新郎:
9 ನನ್ನ ಪ್ರಿಯಳೇ, ಫರೋಹನ ರಥಕ್ಕೆ ಕಟ್ಟಿದ ಕುದುರೆಗೆ ನಿನ್ನನ್ನು ಹೋಲಿಸಿದ್ದೇನೆ.
我的愛卿! 我看妳好似牝馬,套在法郎的御車上。
10 ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ, ನಿನ್ನ ಕೊರಳು ಕಂಠ ಮಾಲೆಗಳಿಂದಲೂ ರಮ್ಯವಾಗಿವೆ.
妳的雙頰配以耳環,妳的頸項繞以珠鏈,何其美麗!
11 ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು.
我們要為妳製造金鏈,嵌上銀珠。◆新娘:
12 ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ, ನನ್ನ ಪರಿಮಳ ತೈಲವು ಸುವಾಸನೆಯನ್ನು ಬೀರುತ್ತಿತ್ತು.
君王正在坐席的時候,我的香膏已放出清香。
13 ನನ್ನ ಪ್ರಿಯತಮನು ನನ್ನ ಸ್ತನಗಳ ಮಧ್ಯದಲ್ಲಿ ವಿಶ್ರಾಂತಿ ಪಡೆಯುವ ರಕ್ತಬೋಳದ ಚೀಲದಂತಿರುವನು.
我的的愛人有如沒藥囊,常繫在我的胸前;
14 ನನ್ನ ಪ್ರಿಯನು ನನಗೆ ಏನ್ಗೆದಿಯ ದ್ರಾಕ್ಷಿ ತೋಟಗಳಲ್ಲಿರುವ ಗೋರಂಟಿ ಹೂಗೊಂಚಲಿನಂತೆ ಇರುವನು.
我的愛人有如鳳仙花,生在恩革狄葡萄園中。◆新郎:
15 ನನ್ನ ಪ್ರಿಯಳೇ, ನೀನು ಎಷ್ಟು ಸೌಂದರ್ಯವಂತೆ! ಆಹಾ, ನೀನು ಸೌಂದರ್ಯವಂತಳೇ! ನಿನ್ನ ಕಣ್ಣುಗಳು ಪಾರಿವಾಳಗಳಂತಿವೆ.
我的愛卿,妳多麼美麗! 妳的雙眼有如鴿眼。◆新娘:
16 ನನ್ನ ಪ್ರಿಯನೇ, ಇಗೋ, ನೀನು ಎಷ್ಟು ಸೌಂದರ್ಯವಂತನು! ಹೌದು, ರಮ್ಯವಾದವನು! ಹಸಿರು ಚಿಗುರುಗಳೇ ನಮ್ಮ ಮಂಚವಾಗಿದೆ.
我的愛人,你多麼英俊,多麼可愛! 我們的未床榻,是青綠的草地。◆新郎:
17 ನಮ್ಮ ಮನೆಯ ತೊಲೆಗಳು ದೇವದಾರು ಮರಗಳು. ನಮ್ಮ ಮೇಲ್ಛಾವಣಿ ತುರಾಯಿ ಮರಗಳು.
香松作我們的屋樑,扁柏作我們的屋椽。