< ರೂತಳು 1 >

1 ನ್ಯಾಯಸ್ಥಾಪಕರು ಆಳುತ್ತಿದ್ದ ಆ ದಿನಗಳಲ್ಲಿ ಇಸ್ರಾಯೇಲ್ ದೇಶದೊಳಗೆ ಬರ ಉಂಟಾಗಿದ್ದಾಗ, ಯೆಹೂದದ ಬೇತ್ಲೆಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಮಾಡಬೇಕೆಂದು ಹೋದನು.
וַיְהִ֗י בִּימֵי֙ שְׁפֹ֣ט הַשֹּׁפְטִ֔ים וַיְהִ֥י רָעָ֖ב בָּאָ֑רֶץ וַיֵּ֨לֶךְ אִ֜ישׁ מִבֵּ֧ית לֶ֣חֶם יְהוּדָ֗ה לָגוּר֙ בִּשְׂדֵ֣י מֹואָ֔ב ה֥וּא וְאִשְׁתֹּ֖ו וּשְׁנֵ֥י בָנָֽיו׃
2 ಆ ಮನುಷ್ಯನ ಹೆಸರು ಎಲೀಮೆಲೆಕನು. ಅವನ ಹೆಂಡತಿಯ ಹೆಸರು ನೊವೊಮಿ. ಅವನ ಪುತ್ರರಲ್ಲಿ ಒಬ್ಬನ ಹೆಸರು ಮಹ್ಲೋನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಬಂದು ಮೋವಾಬ್ ದೇಶದಲ್ಲಿ ವಾಸವಾಗಿದ್ದರು.
וְשֵׁ֣ם הָאִ֣ישׁ אֱ‍ֽלִימֶ֡לֶךְ וְשֵׁם֩ אִשְׁתֹּ֨ו נָעֳמִ֜י וְשֵׁ֥ם שְׁנֵֽי־בָנָ֣יו ׀ מַחְלֹ֤ון וְכִלְיֹון֙ אֶפְרָתִ֔ים מִבֵּ֥ית לֶ֖חֶם יְהוּדָ֑ה וַיָּבֹ֥אוּ שְׂדֵי־מֹואָ֖ב וַיִּֽהְיוּ־שָֽׁם׃
3 ಆದರೆ ನೊವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಆಕೆಯೂ ಆಕೆಯ ಇಬ್ಬರು ಪುತ್ರರೂ ಉಳಿದರು.
וַיָּ֥מָת אֱלִימֶ֖לֶךְ אִ֣ישׁ נָעֳמִ֑י וַתִּשָּׁאֵ֥ר הִ֖יא וּשְׁנֵ֥י בָנֶֽיהָ׃
4 ಇವರು ಒರ್ಫಾ, ರೂತ್ ಎಂಬ ಹೆಸರುಗಳುಳ್ಳ ಇಬ್ಬರು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷ ಅಲ್ಲಿ ವಾಸವಾಗಿದ್ದರು.
וַיִּשְׂא֣וּ לָהֶ֗ם נָשִׁים֙ מֹֽאֲבִיֹּ֔ות שֵׁ֤ם הָֽאַחַת֙ עָרְפָּ֔ה וְשֵׁ֥ם הַשֵּׁנִ֖ית ר֑וּת וַיֵּ֥שְׁבוּ שָׁ֖ם כְּעֶ֥שֶׂר שָׁנִֽים׃
5 ಅಲ್ಲಿಯೇ ಮಹ್ಲೋನ ಮತ್ತು ಕಿಲ್ಯೋನ ಇಬ್ಬರೂ ಸತ್ತುಹೋದರು. ಆ ಸ್ತ್ರೀಯು ತನ್ನ ಇಬ್ಬರು ಪುತ್ರರನ್ನೂ ತನ್ನ ಗಂಡನನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.
וַיָּמ֥וּתוּ גַם־שְׁנֵיהֶ֖ם מַחְלֹ֣ון וְכִלְיֹ֑ון וַתִּשָּׁאֵר֙ הָֽאִשָּׁ֔ה מִשְּׁנֵ֥י יְלָדֶ֖יהָ וּמֵאִישָֽׁהּ׃
6 ಯೆಹೋವ ದೇವರು ತಮ್ಮ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದರೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು.
וַתָּ֤קָם הִיא֙ וְכַלֹּתֶ֔יהָ וַתָּ֖שָׁב מִשְּׂדֵ֣י מֹואָ֑ב כִּ֤י שָֽׁמְעָה֙ בִּשְׂדֵ֣ה מֹואָ֔ב כִּֽי־פָקַ֤ד יְהוָה֙ אֶת־עַמֹּ֔ו לָתֵ֥ת לָהֶ֖ם לָֽחֶם׃
7 ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ಹೊರಟಳು.
וַתֵּצֵ֗א מִן־הַמָּקֹום֙ אֲשֶׁ֣ר הָיְתָה־שָׁ֔מָּה וּשְׁתֵּ֥י כַלֹּתֶ֖יהָ עִמָּ֑הּ וַתֵּלַ֣כְנָה בַדֶּ֔רֶךְ לָשׁ֖וּב אֶל־אֶ֥רֶץ יְהוּדָֽה׃
8 ನೊವೊಮಿಯು ತನ್ನ ಇಬ್ಬರು ಸೊಸೆಯರಿಗೆ, “ನೀವು ನಿಮ್ಮ ನಿಮ್ಮ ತಾಯಿಯ ಮನೆಗೆ ತಿರುಗಿ ಹೋಗಿರಿ. ನೀವು ಮರಣ ಹೊಂದಿದ ಪತಿಯರಿಗೂ ನನಗೂ ದಯೆ ತೋರಿಸಿದ ಹಾಗೆಯೇ ಯೆಹೋವ ದೇವರು ನಿಮಗೆ ದಯೆ ತೋರಲಿ.
וַתֹּ֤אמֶר נָעֳמִי֙ לִשְׁתֵּ֣י כַלֹּתֶ֔יהָ לֵ֣כְנָה שֹּׁ֔בְנָה אִשָּׁ֖ה לְבֵ֣ית אִמָּ֑הּ יַעֲשֶׂה (יַ֣עַשׂ) יְהוָ֤ה עִמָּכֶם֙ חֶ֔סֶד כַּאֲשֶׁ֧ר עֲשִׂיתֶ֛ם עִם־הַמֵּתִ֖ים וְעִמָּדִֽי׃
9 ನೀವು ಮದುವೆಯಾಗಿ ನಿಮ್ಮ ಗಂಡನ ಮನೆಯಲ್ಲಿ ವಿಶ್ರಾಂತಿ ಹೊಂದುವಂತೆ, ಯೆಹೋವ ದೇವರು ಆಶೀರ್ವದಿಸಲಿ,” ಎಂದು ಹೇಳಿದಳು. ನಂತರ ನೊವೊಮಿಯು ಅವರಿಗೆ ಮುದ್ದಿಟ್ಟಳು.
יִתֵּ֤ן יְהוָה֙ לָכֶ֔ם וּמְצֶ֣אןָ מְנוּחָ֔ה אִשָּׁ֖ה בֵּ֣ית אִישָׁ֑הּ וַתִּשַּׁ֣ק לָהֶ֔ן וַתִּשֶּׂ֥אנָה קֹולָ֖ן וַתִּבְכֶּֽינָה׃
10 ಆಗ ಅವರು ಗಟ್ಟಿಯಾಗಿ ಅತ್ತು ಆಕೆಗೆ, “ನಿಶ್ಚಯವಾಗಿ ನಿಮ್ಮ ಜನರ ಬಳಿಗೆ ನಿಮ್ಮ ಸಂಗಡ ತಿರುಗಿ ಬರುತ್ತೇವೆ,” ಎಂದರು.
וַתֹּאמַ֖רְנָה־לָּ֑הּ כִּי־אִתָּ֥ךְ נָשׁ֖וּב לְעַמֵּֽךְ׃
11 ಅದಕ್ಕೆ ನೊವೊಮಿಯು, “ಬೇಡ ನನ್ನ ಮಕ್ಕಳೇ, ನೀವು ಹಿಂತಿರುಗಿ ಹೋಗಿರಿ. ನನ್ನ ಸಂಗಡ ಏಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ಮುಂದೆ ನನ್ನ ಗರ್ಭದಲ್ಲಿ ನನಗೆ ಪುತ್ರರಾಗುವರೋ?
וַתֹּ֤אמֶר נָעֳמִי֙ שֹׁ֣בְנָה בְנֹתַ֔י לָ֥מָּה תֵלַ֖כְנָה עִמִּ֑י הַֽעֹֽוד־לִ֤י בָנִים֙ בְּֽמֵעַ֔י וְהָי֥וּ לָכֶ֖ם לַאֲנָשִֽׁים׃
12 ನನ್ನ ಮಕ್ಕಳೇ, ನೀವು ನಿಮ್ಮ ಮನೆಗೆ ಹಿಂದಿರುಗಿ ಹೋಗಿರಿ. ಏಕೆಂದರೆ ನಾನು ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ, ನಾನು ಸಂತಾನವಾಗುವ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹೆತ್ತರೂ,
שֹׁ֤בְנָה בְנֹתַי֙ לֵ֔כְןָ כִּ֥י זָקַ֖נְתִּי מִהְיֹ֣ות לְאִ֑ישׁ כִּ֤י אָמַ֙רְתִּי֙ יֶשׁ־לִ֣י תִקְוָ֔ה גַּ֣ם הָיִ֤יתִי הַלַּ֙יְלָה֙ לְאִ֔ישׁ וְגַ֖ם יָלַ֥דְתִּי בָנִֽים׃
13 ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ,” ಎಂದಳು.
הֲלָהֵ֣ן ׀ תְּשַׂבֵּ֗רְנָה עַ֚ד אֲשֶׁ֣ר יִגְדָּ֔לוּ הֲלָהֵן֙ תֵּֽעָגֵ֔נָה לְבִלְתִּ֖י הֱיֹ֣ות לְאִ֑ישׁ אַ֣ל בְּנֹתַ֗י כִּֽי־מַר־לִ֤י מְאֹד֙ מִכֶּ֔ם כִּֽי־יָצְאָ֥ה בִ֖י יַד־יְהוָֽה׃
14 ಆಗ ಅವರು ತಿರುಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಾ ತನ್ನ ಅತ್ತೆಯನ್ನು ಮುದ್ದಿಟ್ಟು ಹೊರಟು ಹೋದಳು; ಆದರೆ ರೂತಳು ಅತ್ತೆಯನ್ನು ಅಂಟಿಕೊಂಡಳು.
וַתִּשֶּׂ֣נָה קֹולָ֔ן וַתִּבְכֶּ֖ינָה עֹ֑וד וַתִּשַּׁ֤ק עָרְפָּה֙ לַחֲמֹותָ֔הּ וְר֖וּת דָּ֥בְקָה בָּֽהּ׃
15 ಆಗ ನೊವೊಮಿ, “ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರುಗಿ ಹೋದಳು. ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು,” ಎಂದಳು.
וַתֹּ֗אמֶר הִנֵּה֙ שָׁ֣בָה יְבִמְתֵּ֔ךְ אֶל־עַמָּ֖הּ וְאֶל־אֱלֹהֶ֑יהָ שׁ֖וּבִי אַחֲרֵ֥י יְבִמְתֵּֽךְ׃
16 ಅದಕ್ಕೆ ರೂತಳು, “ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು.
וַתֹּ֤אמֶר רוּת֙ אַל־תִּפְגְּעִי־בִ֔י לְעָזְבֵ֖ךְ לָשׁ֣וּב מֵאַחֲרָ֑יִךְ כִּ֠י אֶל־אֲשֶׁ֨ר תֵּלְכִ֜י אֵלֵ֗ךְ וּבַאֲשֶׁ֤ר תָּלִ֙ינִי֙ אָלִ֔ין עַמֵּ֣ךְ עַמִּ֔י וֵאלֹהַ֖יִךְ אֱלֹהָֽי׃
17 ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ,” ಎಂದಳು.
בַּאֲשֶׁ֤ר תָּמ֙וּתִי֙ אָמ֔וּת וְשָׁ֖ם אֶקָּבֵ֑ר כֹּה֩ יַעֲשֶׂ֨ה יְהוָ֥ה לִי֙ וְכֹ֣ה יֹסִ֔יף כִּ֣י הַמָּ֔וֶת יַפְרִ֖יד בֵּינִ֥י וּבֵינֵֽךְ׃
18 ರೂತಳು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ನೊವೊಮಿ ತಿಳಿದು ಸುಮ್ಮನಾದಳು.
וַתֵּ֕רֶא כִּֽי־מִתְאַמֶּ֥צֶת הִ֖יא לָלֶ֣כֶת אִתָּ֑הּ וַתֶּחְדַּ֖ל לְדַבֵּ֥ר אֵלֶֽיהָ׃
19 ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ನಡೆದುಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣದವರಲ್ಲಿ ಕುತೂಹಲ ಮೂಡಿಸಿತು. ಅವರು, “ಇವಳು ನೊವೊಮಿಯೋ?” ಎಂದರು.
וַתֵּלַ֣כְנָה שְׁתֵּיהֶ֔ם עַד־בֹּאָ֖נָה בֵּ֣ית לָ֑חֶם וַיְהִ֗י כְּבֹאָ֙נָה֙ בֵּ֣ית לֶ֔חֶם וַתֵּהֹ֤ם כָּל־הָעִיר֙ עֲלֵיהֶ֔ן וַתֹּאמַ֖רְנָה הֲזֹ֥את נָעֳמִֽי׃
20 ಆಗ ಆಕೆಯು ಅವರಿಗೆ, “ನನ್ನನ್ನು ‘ನೊವೊಮಿ’ ಎಂದು ಕರೆಯಬೇಡಿರಿ. ಮಾರಾ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು.
וַתֹּ֣אמֶר אֲלֵיהֶ֔ן אַל־תִּקְרֶ֥אנָה לִ֖י נָעֳמִ֑י קְרֶ֤אןָ לִי֙ מָרָ֔א כִּי־הֵמַ֥ר שַׁדַּ֛י לִ֖י מְאֹֽד׃
21 ನಾನು ಪರಿಪೂರ್ಣಳಾಗಿ ಹೊರಟುಹೋದೆನು. ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?” ಎಂದಳು.
אֲנִי֙ מְלֵאָ֣ה הָלַ֔כְתִּי וְרֵיקָ֖ם הֱשִׁיבַ֣נִי יְהוָ֑ה לָ֣מָּה תִקְרֶ֤אנָה לִי֙ נָעֳמִ֔י וַֽיהוָה֙ עָ֣נָה בִ֔י וְשַׁדַּ֖י הֵ֥רַֽע לִֽי׃
22 ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತಳೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶದಿಂದ ತಿರುಗಿಬಂದಳು. ಅವರು ಜವೆಗೋಧಿಯ ಸುಗ್ಗಿಯ ಕಾಲ ಪ್ರಾರಂಭವಾದಾಗ ಬೇತ್ಲೆಹೇಮಿಗೆ ತಲುಪಿದರು.
וַתָּ֣שָׁב נָעֳמִ֗י וְר֨וּת הַמֹּואֲבִיָּ֤ה כַלָּתָהּ֙ עִמָּ֔הּ הַשָּׁ֖בָה מִשְּׂדֵ֣י מֹואָ֑ב וְהֵ֗מָּה בָּ֚אוּ בֵּ֣ית לֶ֔חֶם בִּתְחִלַּ֖ת קְצִ֥יר שְׂעֹרִֽים׃

< ರೂತಳು 1 >