< ರೂತಳು 2 >

1 ನೊವೊಮಿಯ ಗಂಡ ಎಲೀಮೆಲೆಕನ ಗೋತ್ರದಲ್ಲಿ ಬೋವಜ ಎಂಬ ಹೆಸರುಳ್ಳ ಪ್ರಬಲ ಮತ್ತು ಧನವಂತನಾಗಿರುವ ಬಂಧುವಿದ್ದನು.
नाओमीका पतिका नातेदार अर्थात् एलीमेलेकका कुलका बोअज नाउँ गरेको एक जना हुने-खाने मानिस थिए ।
2 ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಕ್ಕೆ ಹೋಗಿ ಯಾರ ದಯೆಯು ನನಗೆ ಆಗುವುದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿ ಕೊಳ್ಳುವೆನು,” ಎಂದಳು. ನೊವೊಮಿ, “ಹೋಗಿ ಬಾ, ಮಗಳೇ,” ಎಂದಳು.
मोआबी महिला रूथले नाओमीलाई भनिन्, “खेतहरूका अन्‍नका बालाहरूमाझ रहेका शिला-बाला खोज्न मलाई जान दिनुहोस् । मैले जसको दृष्‍टिमा कृपा पाउँछु, म तिनलाई नै पछ्याउनेछु ।” त्यसैले नाओमीले तिनलाई भनिन्, “जाऊ, मेरी छोरी ।”
3 ರೂತಳು ಹೊಲದಲ್ಲಿ ಕೊಯ್ಯುವವರ ಹಿಂದೆ ಹೋಗಿ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಹೊಲದ ಭಾಗ ಎಲೀಮೆಲೆಕನ ಕುಲದವನಾದ ಬೋವಜನದಾಗಿತ್ತು.
रूथ गइन् र तिनीहरूले कटनी गरेपछि रहेका अन्‍नहरूको शिला-बाला खोजिन् । तिनी एलिमेलेकका कुलका बोअजको खेतका खण्डमा आइपुगिन् ।
4 ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ, “ಯೆಹೋವ ದೇವರು ನಿಮ್ಮ ಸಂಗಡ ಇರಲಿ,” ಎಂದನು. ಅದಕ್ಕೆ ಅವರು, “ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದರು.
बोअज बेथलेहेमबाट आएर कटनी गर्नेहरूलाई भने, “परमप्रभु तिमीहरूसँग हुनुभएको होस् ।” तिनीहरूले जवाफ दिए, “परमप्रभुले तपाईंलाई आशिष् दिनुभएको होस् ।”
5 ಬೋವಜನು ಕೊಯ್ಯುವವರ ಮೇಲೆ ಮೇಲ್ವಿಚಾರಕನಾಗಿದ್ದ ತನ್ನ ಸೇವಕನಿಗೆ, “ಈ ಯುವತಿ ಯಾರು?” ಎಂದನು.
त्यसपछि बोअजले कटनी गर्नेहरूको निरक्षण गर्ने तिनका नोकरलाई भने, “यो महिला कुन पुरुषकी हुन्?”
6 ಅದಕ್ಕೆ ಆ ಮೇಲ್ವಿಚಾರಕನು, “ಇವಳು ಮೋವಾಬ್ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಯುವತಿ.
कटनी गर्नेहरूको निरीक्षण गर्ने नोकरले जवाफ दिएर भने, “यी जवान महिला मोआबको मुलकबाट नाओमीसँग फर्केर आएकी महिला हुन् ।
7 ಇವಳು, ‘ಕೊಯ್ಯುವವರ ಹಿಂದೆ ಹೋಗಿ ಸಿವುಡುಗಳ ನಡುವೆ ನಾನು ಹಕ್ಕಲಾರಿಸಿಕೊಳ್ಳುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೇಳಿಕೊಂಡಳು. ಸ್ವಲ್ಪ ಸಮಯ ನೆರಳಿನಲ್ಲಿ ವಿಶ್ರಮಿಸಿಕೊಂಡು, ಬೆಳಗಿನಿಂದ ಈವರೆಗೂ ಇಲ್ಲಿಯೇ ಇದ್ದಾಳೆ,” ಎಂದನು.
तिनले मलाई भनिन्, “कृपया, कामदारहरूले अन्‍न कटनी गरेपछि खेतमा बाँकी रहेकाहरूको शिला-बाला खोज्‍न मलाई दिनुहोस् ।' त्यसैले तिनी यहाँ आइन् र तिनले घरमा थोरै विश्राम गरेबाहेक, बिहानदेखि अहिलेसम्म निरन्तर लागिरहेकी छिन् ।”
8 ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ನನ್ನ ಮಾತನ್ನು ಕೇಳು. ನೀನು ಹಕ್ಕಲಾದುಕೊಳ್ಳಲು ಬೇರೆಯವರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಜೊತೆಯಲ್ಲಿಯೇ ಇರು.
बोअजले रूथलाई भने, “मेरी छोरी, तिमीले मेरो कुरा सुन्दैछौ? शिला-बाला जम्मा गर्न अरुको खेतहरूमा नजाऊ; मेरो खेत नछोड । बरु, यहाँ नै बस र मेरा महिला कामदारहरूसँगै काम गर ।
9 ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ. ಅವರ ಹಿಂದೆಯೇ ಹೋಗು, ಯಾರೂ ನಿನ್ನನ್ನು ಮುಟ್ಟದಹಾಗೆ ಅವರಿಗೆ ಆಜ್ಞಾಪಿಸಿದ್ದೇನೆ. ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ನನ್ನ ಸೇವಕರು ಸೇದಿಟ್ಟ ನೀರನ್ನು ಕುಡಿ,” ಎಂದನು.
मानिसहरूले कटनी गरेको ठाउँमा हेरिराख र अरु महिलाहरूलाई पछ्याऊ । के मैले पुरुषहरूलाई तिमीलाई नछुनू भनी निर्देशन् दिएको छैन र? तिमीलाई तिर्खा लागेको बेला घैलाहरू भएको ठाउँमा जाऊ र मानिसहरूले भरेर ल्याएका पानी पिऊ ।”
10 ಆಗ ಅವಳು ಅವನಿಗೆ ಸಾಷ್ಟಾಂಗಬಿದ್ದು ವಂದಿಸಿ ಅವನಿಗೆ, “ಪರದೇಶಿಯಾದ ನನ್ನನ್ನು ಕಂಡು ನನ್ನ ಮೇಲೆ ನಿಮ್ಮ ದಯೆಯನ್ನು ತೋರಿಸಿದ್ದು ಏಕೆ?” ಎಂದಳು.
तब तिनी बोअजको सामु झुकिन् र घोप्टो परेर दण्डवत गरिन् । तिनले उनलाई भनिन्, “म विदेशीप्रति तपाईं चिन्तित हुने गरी तपाईंको नजरमा मैले किन कृपा पाएकी छु?”
11 ಆಗ ಬೋವಜನು ಅವಳಿಗೆ ಉತ್ತರವಾಗಿ, “ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿದ್ದೆಲ್ಲವೂ ನೀನು ನಿನ್ನ ತಂದೆತಾಯಿಗಳನ್ನೂ ನೀನು ಹುಟ್ಟಿದ ದೇಶವನ್ನೂ ಬಿಟ್ಟು ನೀನು ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿದಿದೆ.
बोअजले जवाफ दिए र तिनलाई भने, “तिम्रा पतिको मृत्युदेखि तिमीले गरेका सबै कुरा मलाई भनिएको छ । आफ्नो सासूलाई पछ्याउन र तिमीले नचिनको मानिसहरूकहाँ आउन तिमीले आफ्ना बुबा-आमा र आफ्‍नो जन्म थलो छोडेकी छ्यौ ।
12 ನೀನು ಮಾಡಿದ್ದಕ್ಕೆ ಯೆಹೋವ ದೇವರು ನಿನಗೆ ಬದಲು ಕೊಡಲಿ. ಇಸ್ರಾಯೇಲ್ ದೇವರಾದ ಯೆಹೋವ ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಅವರಿಂದ ದೊಡ್ಡ ಪ್ರತಿಫಲ ಅನುಗ್ರಹಿಸಲಿ,” ಎಂದನು.
परमप्रभुले तिम्रो कामको ईनाम दिनुभएको होस् । तिमीले जसको पखेटामुनि शरण पाएकी छ्यौ उही परमप्रभु इस्राएलका परमेश्‍वरबाट पुरा भुक्‍तानी पाउन सक ।”
13 ಅದಕ್ಕೆ ಅವಳು, “ನನ್ನ ಒಡೆಯನೇ, ನನಗೆ ನಿಮ್ಮ ದೃಷ್ಟಿಯಲ್ಲಿ ಉಪಕಾರವಾಗಲಿ. ಏಕೆಂದರೆ ನಾನು ನಿಮ್ಮ ದಾಸಿಯರಲ್ಲಿ ಒಬ್ಬಳಂತೆ ನಿಲ್ಲುವುದಕ್ಕೂ ಯೋಗ್ಯಳಲ್ಲ ಆದರೂ ದಯೆಯಿಂದ ಮಾತನಾಡಿಸಿದಿರಿ” ಎಂದಳು.
तिनले भनिन्, “मेरा मालिक, तपाईंको दृष्‍टिमा मैले कृपा पाउन सकूँ, किनभने म तपाईंका नोकर्नीहरूमध्येकी नभए तापनि तपाईंले मलाई सान्त्वना दिनुभएको छ र तपाईंले मसँग दयापूर्वक कुरा गर्नुभएको छ ।”
14 ಊಟದ ವೇಳೆಯಲ್ಲಿ ಬೋವಜನು ಅವಳಿಗೆ, “ಇಲ್ಲಿ ಹತ್ತಿರ ಬಂದು ರೊಟ್ಟಿ ತಿಂದು ತುತ್ತನ್ನು ಹುಳಿರಸದಲ್ಲಿ ಅದ್ದಿ ತಿನ್ನು,” ಎಂದನು. ಅವಳು ಕೊಯ್ಯುವವರ ಬಳಿಯಲ್ಲಿ ಕುಳಿತಳು. ಆಗ ಅವನು ಅವಳಿಗೆ ಹುರಿದ ತೆನೆಯನ್ನು ಕೊಟ್ಟನು. ಅವಳು ತಿಂದು ತೃಪ್ತಿಪಟ್ಟು, ಇನ್ನೂ ಉಳಿಸಿಕೊಂಡಳು.
खाने बेलामा बोअजले रूथलाई भने, “यहाँ आऊ, र केही रोटी खाऊ र तिम्रो रोटीको टुक्रा सिर्कामा चोप ।” तिनी कटनी गर्नेहरूको छेउमा बसिन् र तिनले तिनलाई केही भुटेको अन्‍न दिए । तिनले अघाइन्ञ्‍जेलसम्म खाइन् र केही उबारिन् ।
15 ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವಜನು ತನ್ನ ಸೇವಕರಿಗೆ ಆಜ್ಞಾಪಿಸಿ, “ಇವಳು ಕೊಯ್ದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ಬೈಯಬೇಡಿರಿ.
तिनी अन्‍न बटुल्न उठ्दा, बोअजले तिनका जवान मानिसहरूलाई यसो भन्‍दै आज्ञा दिए, “तिनलाई बिटाहरूको बिचतिर पनि अन्‍न बटुल्न देऊ र तिनलाई नबटुल नभन् ।
16 ಅವಳು ಹಕ್ಕಲಾದುಕೊಳ್ಳುವ ಹಾಗೆ ನೀವು ಅವಳಿಗೋಸ್ಕರ ಸಿವುಡುಗಳಲ್ಲಿ ಕೆಲವನ್ನು ಕೆಳಗೆ ಹಾಕಿರಿ. ಅವಳನ್ನು ಗದರಿಸಬೇಡಿರಿ,” ಎಂದನು.
साथै बिटाहरूबाट तिनको निम्ति केही अन्‍नका बालाहरू थुतेर निकाल, र तिनलाई बटुल्‍नको निम्ति तिनीहरूलाई छोडिदेऊ अनि तिनलाई नहप्काऊ ।”
17 ಹಾಗೆಯೇ ಅವಳು ಸಾಯಂಕಾಲದವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಮೂವತ್ತು ಕಿಲೋಗ್ರಾಂ ಜವೆಗೋಧಿಯಾಗಿತ್ತು.
त्यसैले तिनले खेतमा साँझसम्म शिला-बाला बटुलिन् । तिनले बटुलेकी अन्‍नका बालाहरू कुटिन् र अन्‍न झण्डै पाँच पाथी जति भयो ।
18 ಅವಳು ಅದನ್ನು ತೆಗೆದುಕೊಂಡು ಪಟ್ಟಣಕ್ಕೆ ಬಂದಳು. ಅವಳು ಹಕ್ಕಲಾದುಕೊಂಡಿದ್ದನ್ನು ಅವಳ ಅತ್ತೆಯು ಕಂಡಳು. ರೂತಳು ತೃಪ್ತಿಯಾದ ಮೇಲೆ ಉಳಿಸಿ ತಂದದ್ದನ್ನು ಅವಳಿಗೆ ಕೊಟ್ಟಳು.
तिनले यसलाई उठाइन् र शहरतिर गइन् । तिनकी सासुले तिनले जे बटुलेकी थिइन् सो देखिन् । रूथले आफ्नो खाजाबाट उबारेकी भुटेको अन्‍न निकालिन् र तिनलाई दिइन् ।
19 ಆಗ ರೂತಳ ಅತ್ತೆಯು ಆಕೆಗೆ, “ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡೆ? ಎಲ್ಲಿ ಕೆಲಸಮಾಡಿದೆ? ನಿನ್ನನ್ನು ಪರಾಮರಿಸಿದವನಿಗೆ ಆಶೀರ್ವಾದವಾಗಲಿ,” ಎಂದಳು. ಅದಕ್ಕವಳು ತಾನು ಯಾರ ಹತ್ತಿರ ಕೆಲಸಮಾಡಿದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ, “ನಾನು ಈ ಹೊತ್ತು ಕೆಲಸ ಮಾಡಿದವನ ಹೆಸರು ಬೋವಜ,” ಎಂದು ಹೇಳಿದಳು.
तिनकी सासुले तिनलाई भनिन्, “तिमीले आज शिला-बाला कहाँ बटुल्यौ? तिमी काम गर्न कहाँ गयौ? तिमीलाई सहायता गर्ने मानिस आशिषित होस् ।” रूथले आफूले काम गरेको खेतको मालिकबारे तिनकी सासुलाई बताइन् । तिनले भनिन्, “मैले आज काम गरेको खेतको मालिकको नाउँ बोअज हो ।”
20 ನೊವೊಮಿ ತನ್ನ ಸೊಸೆಗೆ, “ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ,” ಎಂದಳು. ಅನಂತರ ನೊವೊಮಿ ಅವಳಿಗೆ, “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ,” ಎಂದಳು.
नाओमीले तिनकी बुहारीलाई भनिन्, “जीवित र मृतकप्रति आफ्नो विश्‍वासनीयता नछोड्नुहुने परमप्रभुद्धारा तिनी आशिषित होऊन् ।” नाओमीले तिनलाई भनिन्, “ती मानिस मोल तिरेर छुट्टाउनेमध्येका हाम्रो नजीकका एक कुटुम्ब हुन् ।”
21 ಅದಕ್ಕೆ ಮೋವಾಬ್ಯಳಾದ ರೂತಳು, “ಅವನು, ‘ನನ್ನ ಪೈರೆಲ್ಲಾ ಕೊಯ್ದು ತೀರುವವರೆಗೂ, ನೀನು ನನ್ನ ಕೆಲಸದವರ ಸಂಗಡ ಕೂಡಿಕೊಂಡಿರು’ ಎಂದು ನನಗೆ ಹೇಳಿದನು,” ಎಂದಳು.
मोआबी महिला रूथले भनिन्, “तिनले मलाई भने, 'मेरा जवान मानिसहरूले कटनी नसिध्याएसम्म तिमी तिनीहरूको नजिक रहिरहनुपर्छ' ।”
22 ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನನ್ನ ಮಗಳೇ, ಮತ್ತೊಂದು ಹೊಲದಲ್ಲಿ ಮನುಷ್ಯರು ನಿನ್ನನ್ನು ಕಂಡುಕೊಳ್ಳದ ಹಾಗೆ ನೀನು ಅವನ ದಾಸಿಗಳ ಸಂಗಡ ಹೊರಟುಹೋಗುವುದು ಒಳ್ಳೆಯದು,” ಎಂದಳು.
नाओमीले तिनकी बुहारी रूथलाई भनिन्, “मेरी छोरी, तिमी तिनका जवान महिला कामदारहरूसँग जानु असल हुन्छ, ताकि तिमीलाई अरुको खेतमा जोखिम नआओस् ।”
23 ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವವರೆಗೆ ಹಕ್ಕಲಾದುಕೊಳ್ಳುವುದಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿಕೊಂಡು ಹೋಗುತ್ತಿದ್ದಳು.
त्यसैले तिनी जौ र गहूँको कटनीको अन्तसम्म शिला-बाला जम्मा गर्न बोअजका महिला कामदारहरूको नजिकै रहिन् ।

< ರೂತಳು 2 >