< ರೋಮಾಪುರದವರಿಗೆ 9 >

1 ನಾನು ಕ್ರಿಸ್ತ ಯೇಸುವಿನಲ್ಲಿ ಸತ್ಯವನ್ನು ಮಾತನಾಡುತ್ತೇನೆ. ನಾನು ಸುಳ್ಳು ಹೇಳುತ್ತಾ ಇಲ್ಲ. ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮ ದೇವರ ಮೂಲಕ ಖಚಿತ ಪಡಿಸುತ್ತದೆ.
Digo verdad en Cristo, dándome testimonio mi conciencia en el Espíritu Santo, de que no miento:
2 ನನ್ನ ಹೃದಯದಲ್ಲಿ ಮಹಾದುಖಃವೂ ಎಡೆಬಿಡದ ವೇದನೆಯೂ ತೀರದವೇದನೆಯೂ ಇದೆ.
siento tristeza grande y continuo dolor en mi corazón.
3 ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ.
Porque desearía ser yo mismo anatema de Cristo por mis hermanos, deudos míos según la carne,
4 ಇಸ್ರಾಯೇಲರಾದ ಅವರಿಗೆ ಸ್ವೀಕಾರವೂ ದೇವರ ಮಹಿಮೆಯೂ ಒಡಂಬಡಿಕೆಗಳೂ ನಿಯಮ ಕೊಡೋಣವೂ ದೇವಾಲಯದ ಸೇವೆಯೂ ಹಾಗೂ ವಾಗ್ದಾನಗಳೂ ಒಪ್ಪಿಸಲಾಗಿವೆ.
los israelitas, de quienes es la filiación, la gloria, las alianzas, la entrega de la Ley, el culto y las promesas;
5 ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್. (aiōn g165)
cuyos son los padres, y de quienes, según la carne, desciende Cristo, que es sobre todas las cosas, Dios bendito por los siglos. Amén. (aiōn g165)
6 ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.
No es que la palabra de Dios haya quedado sin efecto; porque no todos los que descienden de Israel, son Israel;
7 ಅಥವಾ ಅಬ್ರಹಾಮನ ಸಂತತಿಯವರೆಲ್ಲ ಅವನ ಮಕ್ಕಳಲ್ಲ. ಆದರೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ಹೇಳಲಾಗಿದೆ.
ni por el hecho de ser del linaje de Abrahán, son todos hijos; sino que “en Isaac será llamada tu descendencia”.
8 ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು.
Esto es, no los hijos de la carne son hijos de Dios, sino que los hijos de la promesa son los considerados como descendencia.
9 ಏಕೆಂದರೆ, “ನೇಮಕವಾದ ಕಾಲದಲ್ಲಿ ನಾನು ತಿರುಗಿ ಬಂದಾಗ ಸಾರಳಿಗೆ ಒಬ್ಬ ಮಗನಿರುವನು,” ಅದು ವಾಗ್ದಾನದ ಮಾತಾಗಿತ್ತು.
Porque esta fue la palabra de la promesa: “Por este tiempo volveré, y Sara tendrá un hijo”.
10 ಇದು ಮಾತ್ರವಲ್ಲದೆ, ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನ ಮೂಲಕ ಅವಳಿಜವಳಿ ಮಕ್ಕಳನ್ನು ಪಡೆದಳು.
Y así sucedió no solamente con Sara, sino también con Rebeca, que concibió de uno solo, de Isaac nuestro Padre.
11 ಹೀಗೆ, ಆ ಮಕ್ಕಳು ಹುಟ್ಟುವುದಕ್ಕೆ ಮುಂಚೆ, ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುವುದಕ್ಕೆ ಮುಂಚೆಯೇ, ದೇವರ ಆಯ್ಕೆಯ ಉದ್ದೇಶವು ಕೃತ್ಯಗಳಿಗೆ ಅನುಸಾರವಲ್ಲವೆಂಬುದು ಸ್ಥಿರವಾಯಿತು.
Pues, no siendo aún nacidos ( los hijos de ella ), ni habiendo aún hecho cosa buena o mala —para que el designio de Dios se cumpliese, conforme a su elección, no en virtud de obras sino de Aquel que llama—
12 ಆದರೆ ಅದು ಕರೆಯುವಾತನಿಂದಲೇ, “ಹಿರಿಯನು ಕಿರಿಯವನಿಗೆ ಸೇವೆಮಾಡುವನು,” ಎಂದು ರೆಬೆಕ್ಕಳಿಗೆ ಹೇಳಲಾಗಿತ್ತು.
le fue dicho a ella: “El mayor servirá al menor”;
13 ಇದಕ್ಕನುಸಾರವಾಗಿ, “ಯಾಕೋಬನನ್ನು ನಾನು ಪ್ರೀತಿಸಿದೆನು, ಆದರೆ ಏಸಾವನನ್ನು ಹಗೆ ಮಾಡಿದೆನು,” ಎಂದು ಬರೆದಿರುತ್ತದೆ.
según está escrito: “A Jacob amé, mas aborrecí a Esaú”.
14 ಹಾಗಾದರೆ ನಾವು ಏನು ಹೇಳೋಣ? ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ.
¿Qué diremos, pues? ¿Qué hay injusticia por parte de Dios? De ninguna manera.
15 ದೇವರು ಮೋಶೆಗೆ ಹೇಳಿದ್ದೇನೆಂದರೆ, “ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.”
Pues Él dice a Moisés: “Tendré misericordia de quien Yo quiera tener misericordia, y me apiadaré de quien Yo quiera apiadarme”.
16 ಆದ್ದರಿಂದ ದೇವರ ಆಯ್ಕೆಯು ಮನುಷ್ಯನ ಬಯಕೆ ಅಥವಾ ಪ್ರಯತ್ನದಿಂದಾಗಿರದೆ, ದೇವರ ಕರುಣೆಯಿಂದಲೇ ಆಗಿದೆ.
Así que no es obra del que quiere, ni del que corre, sino de Dios que tiene misericordia.
17 ಏಕೆಂದರೆ, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು,” ಎಂದು ಪವಿತ್ರ ವೇದದಲ್ಲಿ ದೇವರು ಫರೋಹನಿಗೆ ಹೇಳುತ್ತಾರೆ.
Porque la Escritura dice al Faraón: “Para esto mismo Yo te levanté, para ostentar en ti mi poder y para que mi nombre sea anunciado en toda la tierra”.
18 ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ.
De modo que de quien Él quiere, tiene misericordia; y a quien quiere, le endurece.
19 ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ.
Pero me dirás: ¿Y por qué entonces vitupera? Pues ¿quién puede resistir a la voluntad de Él?
20 ಎಲೈ, ಮನುಷ್ಯನೇ, ದೇವರಿಗೆ ಎದುರಾಗಿ ಮಾತನಾಡಲು ನೀನು ಯಾರು? “ರೂಪಿಸಿರುವುದು ರೂಪಿಸಿದವನಿಗೆ, ‘ಏಕೆ ನನ್ನನ್ನು ಹೀಗೆ ರೂಪಿಸಿದೆ?’” ಎಂದು ಪ್ರಶ್ನಿಸಬಹುದೋ?
Oh, hombre, ¿quién eres tú que pides cuentas a Dios? ¿Acaso el vaso dirá al que lo modeló: “¿Por qué me has hecho así?”
21 ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?
¿O es que el alfarero no tiene derecho sobre el barro, para hacer de la misma masa un vaso para honor y otro para uso vil?
22 ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು?
¿Qué, pues, si Dios, queriendo manifestar su ira y dar a conocer su poder, sufrió con mucha longanimidad los vasos de ira, destinados a perdición,
23 ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು.
a fin de manifestar las riquezas de su gloria en los vasos de misericordia, que Él preparó de antemano para gloria,
24 ಇದಕ್ಕಾಗಿಯೇ ದೇವರು ಯೆಹೂದ್ಯರನ್ನು ಮಾತ್ರವೇ ಕರೆಯದೆ ಯೆಹೂದ್ಯರಲ್ಲದವರನ್ನು ಸಹ ಕರೆದಿದ್ದಾರಲ್ಲಾ?
a saber, nosotros, a los cuales Él llamó, no solo de entre los judíos, sino también de entre los gentiles?
25 ಹೋಶೇಯನ ಪ್ರವಾದನೆಯಲ್ಲಿ ದೇವರು, “ನನ್ನ ಜನರಲ್ಲದವರನ್ನು ‘ನನ್ನ ಜನರು,’ ಎಂದು ಕರೆಯುವರು. ನಾನು ಪ್ರೀತಿಸದವರನ್ನು ನನ್ನ ‘ಪ್ರಿಯರು’ ಎಂದೂ ಹೇಳುವರು.”
Como también dice en Oseas: “Llamaré pueblo mío al que no es mi pueblo, y amada a la no amada.
26 ಮತ್ತು, “ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ, ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,” ಎಂದು ದೇವರು ಹೇಳುತ್ತಾರೆ.
Y sucederá que en el lugar donde se les dijo: No sois mi pueblo, allí mismo serán llamados hijos del Dios vivo”.
27 ಇದಲ್ಲದೆ ಯೆಶಾಯನು ಇಸ್ರಾಯೇಲರನ್ನು ಕುರಿತು ಕೂಗಿ ಹೇಳುವುದೇನೆಂದರೆ, “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಣೆಹೊಂದುವರು.
También Isaías clama sobre Israel: “Aun cuando el número de los hijos de Israel fuere como las arenas del mar, solo un resto será salvo;
28 ಏಕೆಂದರೆ ಕರ್ತನು ತಮ್ಮ ವಾಕ್ಯವನ್ನು ಭೂಮಿಯ ಮೇಲೆ ಅಂತಿಮವಾಗಿಯೂ ತ್ವರಿತವಾಗಿಯೂ ನೆರವೇರಿಸುವರು.”
porque el Señor hará su obra sobre la tierra rematando y cercenando”.
29 ಯೆಶಾಯನು ಈ ಹಿಂದೆ, “ಸೇನಾಧೀಶ್ವರರಾದ ದೇವರು ನಮಗೆ ಸಂತತಿಯನ್ನು ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರದ ಹಾಗೆ ಇರುತ್ತಿದ್ದೆವು.” ಎಂದು ಹೇಳಿದ್ದಾನೆ.
El mismo Isaías ya antes había dicho: “Si el Señor de los ejércitos no nos hubiera dejado una semilla, habríamos venido a ser como Sodoma y asemejados a Gomorra”.
30 ಹಾಗಾದರೆ ನಾವು ಏನು ಹೇಳೋಣ? ನೀತಿಯನ್ನು ಅನುಸರಿಸದ ಯೆಹೂದ್ಯರಲ್ಲದವರು ನಂಬಿಕೆಯ ಮೂಲಕ ದೊರಕುವ ನೀತಿಯನ್ನು ಪಡೆದರು.
¿Qué diremos en conclusión? Que los gentiles, los cuales no andaban tras la justicia, llegaron a la justicia, a la justicia que nace de la fe;
31 ಆದರೆ ನೀತಿಯ ನಿಯಮವನ್ನು ಅನುಸರಿಸಿದ ಇಸ್ರಾಯೇಲರಾದರೋ ಆ ನೀತಿಯ ಮಾರ್ಗವನ್ನು ಪಡೆಯಲಿಲ್ಲ.
mas Israel, que andaba tras la Ley de la justicia, no llegó a la Ley.
32 ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು.
¿Por qué? Porque no ( la buscó ) por la fe, sino como por obras, y así tropezaron en la piedra de tropiezo;
33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”
como está escrito: “He aquí que pongo en Sión una piedra de escándalo, y peñasco de tropiezo; y el que creyere en Él no será confundido”.

< ರೋಮಾಪುರದವರಿಗೆ 9 >