< ರೋಮಾಪುರದವರಿಗೆ 1 >
1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ.
ಈಶ್ವರೋ ನಿಜಪುತ್ರಮಧಿ ಯಂ ಸುಸಂವಾದಂ ಭವಿಷ್ಯದ್ವಾದಿಭಿ ರ್ಧರ್ಮ್ಮಗ್ರನ್ಥೇ ಪ್ರತಿಶ್ರುತವಾನ್ ತಂ ಸುಸಂವಾದಂ ಪ್ರಚಾರಯಿತುಂ ಪೃಥಕ್ಕೃತ ಆಹೂತಃ ಪ್ರೇರಿತಶ್ಚ ಪ್ರಭೋ ರ್ಯೀಶುಖ್ರೀಷ್ಟಸ್ಯ ಸೇವಕೋ ಯಃ ಪೌಲಃ
2 ದೇವರು ಮುಂಚಿತವಾಗಿ ಪವಿತ್ರ ವೇದಗಳಲ್ಲಿ ತಮ್ಮ ಪ್ರವಾದಿಗಳ ಮೂಲಕ ವಾಗ್ದಾನಮಾಡಿದ,
ಸ ರೋಮಾನಗರಸ್ಥಾನ್ ಈಶ್ವರಪ್ರಿಯಾನ್ ಆಹೂತಾಂಶ್ಚ ಪವಿತ್ರಲೋಕಾನ್ ಪ್ರತಿ ಪತ್ರಂ ಲಿಖತಿ|
3 ಈ ಸುವಾರ್ತೆಯು ದೇವಪುತ್ರನ ವಿಷಯವಾದದ್ದು. ಯೇಸು ಮನುಷ್ಯತ್ವದ ಪ್ರಕಾರ ದಾವೀದನ ಸಂತಾನದವರೂ
ಅಸ್ಮಾಕಂ ಸ ಪ್ರಭು ರ್ಯೀಶುಃ ಖ್ರೀಷ್ಟಃ ಶಾರೀರಿಕಸಮ್ಬನ್ಧೇನ ದಾಯೂದೋ ವಂಶೋದ್ಭವಃ
4 ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ.
ಪವಿತ್ರಸ್ಯಾತ್ಮನಃ ಸಮ್ಬನ್ಧೇನ ಚೇಶ್ವರಸ್ಯ ಪ್ರಭಾವವಾನ್ ಪುತ್ರ ಇತಿ ಶ್ಮಶಾನಾತ್ ತಸ್ಯೋತ್ಥಾನೇನ ಪ್ರತಿಪನ್ನಂ|
5 ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು.
ಅಪರಂ ಯೇಷಾಂ ಮಧ್ಯೇ ಯೀಶುನಾ ಖ್ರೀಷ್ಟೇನ ಯೂಯಮಪ್ಯಾಹೂತಾಸ್ತೇ ಽನ್ಯದೇಶೀಯಲೋಕಾಸ್ತಸ್ಯ ನಾಮ್ನಿ ವಿಶ್ವಸ್ಯ ನಿದೇಶಗ್ರಾಹಿಣೋ ಯಥಾ ಭವನ್ತಿ
6 ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ.
ತದಭಿಪ್ರಾಯೇಣ ವಯಂ ತಸ್ಮಾದ್ ಅನುಗ್ರಹಂ ಪ್ರೇರಿತತ್ವಪದಞ್ಚ ಪ್ರಾಪ್ತಾಃ|
7 ರೋಮ್ ನಗರದಲ್ಲಿ ದೇವರಿಗೆ ಪ್ರಿಯರೂ ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲಾದವರೂ ಆಗಿರುವವರೆಲ್ಲರಿಗೂ: ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ಕೃಪೆಯೂ ಶಾಂತಿಯೂ ಆಗಲಿ.
ತಾತೇನಾಸ್ಮಾಕಮ್ ಈಶ್ವರೇಣ ಪ್ರಭುಣಾ ಯೀಶುಖ್ರೀಷ್ಟೇನ ಚ ಯುಷ್ಮಭ್ಯಮ್ ಅನುಗ್ರಹಃ ಶಾನ್ತಿಶ್ಚ ಪ್ರದೀಯೇತಾಂ|
8 ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಪ್ರಥಮತಃ ಸರ್ವ್ವಸ್ಮಿನ್ ಜಗತಿ ಯುಷ್ಮಾಕಂ ವಿಶ್ವಾಸಸ್ಯ ಪ್ರಕಾಶಿತತ್ವಾದ್ ಅಹಂ ಯುಷ್ಮಾಕಂ ಸರ್ವ್ವೇಷಾಂ ನಿಮಿತ್ತಂ ಯೀಶುಖ್ರೀಷ್ಟಸ್ಯ ನಾಮ ಗೃಹ್ಲನ್ ಈಶ್ವರಸ್ಯ ಧನ್ಯವಾದಂ ಕರೋಮಿ|
9 ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.
ಅಪರಮ್ ಈಶ್ವರಸ್ಯ ಪ್ರಸಾದಾದ್ ಬಹುಕಾಲಾತ್ ಪರಂ ಸಾಮ್ಪ್ರತಂ ಯುಷ್ಮಾಕಂ ಸಮೀಪಂ ಯಾತುಂ ಕಥಮಪಿ ಯತ್ ಸುಯೋಗಂ ಪ್ರಾಪ್ನೋಮಿ, ಏತದರ್ಥಂ ನಿರನ್ತರಂ ನಾಮಾನ್ಯುಚ್ಚಾರಯನ್ ನಿಜಾಸು ಸರ್ವ್ವಪ್ರಾರ್ಥನಾಸು ಸರ್ವ್ವದಾ ನಿವೇದಯಾಮಿ,
10 ನಾನು ಪ್ರಾರ್ಥನೆ ಮಾಡುವಾಗಲೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತಾ ಇನ್ನು ಮೇಲಾದರೂ ನಿಮ್ಮ ಬಳಿಗೆ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಯಾವ ರೀತಿಯಲ್ಲಾದರೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ.
ಏತಸ್ಮಿನ್ ಯಮಹಂ ತತ್ಪುತ್ರೀಯಸುಸಂವಾದಪ್ರಚಾರಣೇನ ಮನಸಾ ಪರಿಚರಾಮಿ ಸ ಈಶ್ವರೋ ಮಮ ಸಾಕ್ಷೀ ವಿದ್ಯತೇ|
11 ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.
ಯತೋ ಯುಷ್ಮಾಕಂ ಮಮ ಚ ವಿಶ್ವಾಸೇನ ವಯಮ್ ಉಭಯೇ ಯಥಾ ಶಾನ್ತಿಯುಕ್ತಾ ಭವಾಮ ಇತಿ ಕಾರಣಾದ್
12 ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.
ಯುಷ್ಮಾಕಂ ಸ್ಥೈರ್ಯ್ಯಕರಣಾರ್ಥಂ ಯುಷ್ಮಭ್ಯಂ ಕಿಞ್ಚಿತ್ಪರಮಾರ್ಥದಾನದಾನಾಯ ಯುಷ್ಮಾನ್ ಸಾಕ್ಷಾತ್ ಕರ್ತ್ತುಂ ಮದೀಯಾ ವಾಞ್ಛಾ|
13 ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.
ಹೇ ಭ್ರಾತೃಗಣ ಭಿನ್ನದೇಶೀಯಲೋಕಾನಾಂ ಮಧ್ಯೇ ಯದ್ವತ್ ತದ್ವದ್ ಯುಷ್ಮಾಕಂ ಮಧ್ಯೇಪಿ ಯಥಾ ಫಲಂ ಭುಞ್ಜೇ ತದಭಿಪ್ರಾಯೇಣ ಮುಹುರ್ಮುಹು ರ್ಯುಷ್ಮಾಕಂ ಸಮೀಪಂ ಗನ್ತುಮ್ ಉದ್ಯತೋಽಹಂ ಕಿನ್ತು ಯಾವದ್ ಅದ್ಯ ತಸ್ಮಿನ್ ಗಮನೇ ಮಮ ವಿಘ್ನೋ ಜಾತ ಇತಿ ಯೂಯಂ ಯದ್ ಅಜ್ಞಾತಾಸ್ತಿಷ್ಠಥ ತದಹಮ್ ಉಚಿತಂ ನ ಬುಧ್ಯೇ|
14 ಗ್ರೀಕರಿಗೂ ಗ್ರೀಕರಲ್ಲದವರಿಗೂ ಜ್ಞಾನಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ.
ಅಹಂ ಸಭ್ಯಾಸಭ್ಯಾನಾಂ ವಿದ್ವದವಿದ್ವತಾಞ್ಚ ಸರ್ವ್ವೇಷಾಮ್ ಋಣೀ ವಿದ್ಯೇ|
15 ಹೀಗಿರುವುದರಿಂದ ರೋಮ್ ನಗರದಲ್ಲಿರುವ ನಿಮಗೂ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನು ಉತ್ಸುಕನಾಗಿದ್ದೇನೆ.
ಅತಏವ ರೋಮಾನಿವಾಸಿನಾಂ ಯುಷ್ಮಾಕಂ ಸಮೀಪೇಽಪಿ ಯಥಾಶಕ್ತಿ ಸುಸಂವಾದಂ ಪ್ರಚಾರಯಿತುಮ್ ಅಹಮ್ ಉದ್ಯತೋಸ್ಮಿ|
16 ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.
ಯತಃ ಖ್ರೀಷ್ಟಸ್ಯ ಸುಸಂವಾದೋ ಮಮ ಲಜ್ಜಾಸ್ಪದಂ ನಹಿ ಸ ಈಶ್ವರಸ್ಯ ಶಕ್ತಿಸ್ವರೂಪಃ ಸನ್ ಆ ಯಿಹೂದೀಯೇಭ್ಯೋ ಽನ್ಯಜಾತೀಯಾನ್ ಯಾವತ್ ಸರ್ವ್ವಜಾತೀಯಾನಾಂ ಮಧ್ಯೇ ಯಃ ಕಶ್ಚಿದ್ ತತ್ರ ವಿಶ್ವಸಿತಿ ತಸ್ಯೈವ ತ್ರಾಣಂ ಜನಯತಿ|
17 ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,” ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು.
ಯತಃ ಪ್ರತ್ಯಯಸ್ಯ ಸಮಪರಿಮಾಣಮ್ ಈಶ್ವರದತ್ತಂ ಪುಣ್ಯಂ ತತ್ಸುಸಂವಾದೇ ಪ್ರಕಾಶತೇ| ತದಧಿ ಧರ್ಮ್ಮಪುಸ್ತಕೇಪಿ ಲಿಖಿತಮಿದಂ "ಪುಣ್ಯವಾನ್ ಜನೋ ವಿಶ್ವಾಸೇನ ಜೀವಿಷ್ಯತಿ"|
18 ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.
ಅತಏವ ಯೇ ಮಾನವಾಃ ಪಾಪಕರ್ಮ್ಮಣಾ ಸತ್ಯತಾಂ ರುನ್ಧನ್ತಿ ತೇಷಾಂ ಸರ್ವ್ವಸ್ಯ ದುರಾಚರಣಸ್ಯಾಧರ್ಮ್ಮಸ್ಯ ಚ ವಿರುದ್ಧಂ ಸ್ವರ್ಗಾದ್ ಈಶ್ವರಸ್ಯ ಕೋಪಃ ಪ್ರಕಾಶತೇ|
19 ದೇವರ ವಿಷಯವಾಗಿ ತಿಳಿಯಬಹುದಾದದ್ದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಅದನ್ನು ಅವರಿಗೆ ದೇವರೇ ಪ್ರಕಟಿಸಿದರು.
ಯತ ಈಶ್ವರಮಧಿ ಯದ್ಯದ್ ಜ್ಞೇಯಂ ತದ್ ಈಶ್ವರಃ ಸ್ವಯಂ ತಾನ್ ಪ್ರತಿ ಪ್ರಕಾಶಿತವಾನ್ ತಸ್ಮಾತ್ ತೇಷಾಮ್ ಅಗೋಚರಂ ನಹಿ|
20 ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ. (aïdios )
ಫಲತಸ್ತಸ್ಯಾನನ್ತಶಕ್ತೀಶ್ವರತ್ವಾದೀನ್ಯದೃಶ್ಯಾನ್ಯಪಿ ಸೃಷ್ಟಿಕಾಲಮ್ ಆರಭ್ಯ ಕರ್ಮ್ಮಸು ಪ್ರಕಾಶಮಾನಾನಿ ದೃಶ್ಯನ್ತೇ ತಸ್ಮಾತ್ ತೇಷಾಂ ದೋಷಪ್ರಕ್ಷಾಲನಸ್ಯ ಪನ್ಥಾ ನಾಸ್ತಿ| (aïdios )
21 ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು.
ಅಪರಮ್ ಈಶ್ವರಂ ಜ್ಞಾತ್ವಾಪಿ ತೇ ತಮ್ ಈಶ್ವರಜ್ಞಾನೇನ ನಾದ್ರಿಯನ್ತ ಕೃತಜ್ಞಾ ವಾ ನ ಜಾತಾಃ; ತಸ್ಮಾತ್ ತೇಷಾಂ ಸರ್ವ್ವೇ ತರ್ಕಾ ವಿಫಲೀಭೂತಾಃ, ಅಪರಞ್ಚ ತೇಷಾಂ ವಿವೇಕಶೂನ್ಯಾನಿ ಮನಾಂಸಿ ತಿಮಿರೇ ಮಗ್ನಾನಿ|
22 ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ.
ತೇ ಸ್ವಾನ್ ಜ್ಞಾನಿನೋ ಜ್ಞಾತ್ವಾ ಜ್ಞಾನಹೀನಾ ಅಭವನ್
23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.
ಅನಶ್ವರಸ್ಯೇಶ್ವರಸ್ಯ ಗೌರವಂ ವಿಹಾಯ ನಶ್ವರಮನುಷ್ಯಪಶುಪಕ್ಷ್ಯುರೋಗಾಮಿಪ್ರಭೃತೇರಾಕೃತಿವಿಶಿಷ್ಟಪ್ರತಿಮಾಸ್ತೈರಾಶ್ರಿತಾಃ|
24 ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು.
ಇತ್ಥಂ ತ ಈಶ್ವರಸ್ಯ ಸತ್ಯತಾಂ ವಿಹಾಯ ಮೃಷಾಮತಮ್ ಆಶ್ರಿತವನ್ತಃ ಸಚ್ಚಿದಾನನ್ದಂ ಸೃಷ್ಟಿಕರ್ತ್ತಾರಂ ತ್ಯಕ್ತ್ವಾ ಸೃಷ್ಟವಸ್ತುನಃ ಪೂಜಾಂ ಸೇವಾಞ್ಚ ಕೃತವನ್ತಃ; (aiōn )
25 ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್. (aiōn )
ಇತಿ ಹೇತೋರೀಶ್ವರಸ್ತಾನ್ ಕುಕ್ರಿಯಾಯಾಂ ಸಮರ್ಪ್ಯ ನಿಜನಿಜಕುಚಿನ್ತಾಭಿಲಾಷಾಭ್ಯಾಂ ಸ್ವಂ ಸ್ವಂ ಶರೀರಂ ಪರಸ್ಪರಮ್ ಅಪಮಾನಿತಂ ಕರ್ತ್ತುಮ್ ಅದದಾತ್|
26 ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು.
ಈಶ್ವರೇಣ ತೇಷು ಕ್ವಭಿಲಾಷೇ ಸಮರ್ಪಿತೇಷು ತೇಷಾಂ ಯೋಷಿತಃ ಸ್ವಾಭಾವಿಕಾಚರಣಮ್ ಅಪಹಾಯ ವಿಪರೀತಕೃತ್ಯೇ ಪ್ರಾವರ್ತ್ತನ್ತ;
27 ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು.
ತಥಾ ಪುರುಷಾ ಅಪಿ ಸ್ವಾಭಾವಿಕಯೋಷಿತ್ಸಙ್ಗಮಂ ವಿಹಾಯ ಪರಸ್ಪರಂ ಕಾಮಕೃಶಾನುನಾ ದಗ್ಧಾಃ ಸನ್ತಃ ಪುಮಾಂಸಃ ಪುಂಭಿಃ ಸಾಕಂ ಕುಕೃತ್ಯೇ ಸಮಾಸಜ್ಯ ನಿಜನಿಜಭ್ರಾನ್ತೇಃ ಸಮುಚಿತಂ ಫಲಮ್ ಅಲಭನ್ತ|
28 ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.
ತೇ ಸ್ವೇಷಾಂ ಮನಃಸ್ವೀಶ್ವರಾಯ ಸ್ಥಾನಂ ದಾತುಮ್ ಅನಿಚ್ಛುಕಾಸ್ತತೋ ಹೇತೋರೀಶ್ವರಸ್ತಾನ್ ಪ್ರತಿ ದುಷ್ಟಮನಸ್ಕತ್ವಮ್ ಅವಿಹಿತಕ್ರಿಯತ್ವಞ್ಚ ದತ್ತವಾನ್|
29 ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು.
ಅತಏವ ತೇ ಸರ್ವ್ವೇ ಽನ್ಯಾಯೋ ವ್ಯಭಿಚಾರೋ ದುಷ್ಟತ್ವಂ ಲೋಭೋ ಜಿಘಾಂಸಾ ಈರ್ಷ್ಯಾ ವಧೋ ವಿವಾದಶ್ಚಾತುರೀ ಕುಮತಿರಿತ್ಯಾದಿಭಿ ರ್ದುಷ್ಕರ್ಮ್ಮಭಿಃ ಪರಿಪೂರ್ಣಾಃ ಸನ್ತಃ
30 ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ
ಕರ್ಣೇಜಪಾ ಅಪವಾದಿನ ಈಶ್ವರದ್ವೇಷಕಾ ಹಿಂಸಕಾ ಅಹಙ್ಕಾರಿಣ ಆತ್ಮಶ್ಲಾಘಿನಃ ಕುಕರ್ಮ್ಮೋತ್ಪಾದಕಾಃ ಪಿತ್ರೋರಾಜ್ಞಾಲಙ್ಘಕಾ
31 ವಿವೇಚನೆಯಿಲ್ಲದವರೂ ನಂಬಿಕೆಯಿಲ್ಲದವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು.
ಅವಿಚಾರಕಾ ನಿಯಮಲಙ್ಘಿನಃ ಸ್ನೇಹರಹಿತಾ ಅತಿದ್ವೇಷಿಣೋ ನಿರ್ದಯಾಶ್ಚ ಜಾತಾಃ|
32 ಇಂಥವುಗಳನ್ನು ನಡೆಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೈವವಿಧಿಯನ್ನು ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಹಾಗೆ ಮಾಡುವವರನ್ನು ಮೆಚ್ಚುತ್ತಾರೆ.
ಯೇ ಜನಾ ಏತಾದೃಶಂ ಕರ್ಮ್ಮ ಕುರ್ವ್ವನ್ತಿ ತಏವ ಮೃತಿಯೋಗ್ಯಾ ಈಶ್ವರಸ್ಯ ವಿಚಾರಮೀದೃಶಂ ಜ್ಞಾತ್ವಾಪಿ ತ ಏತಾದೃಶಂ ಕರ್ಮ್ಮ ಸ್ವಯಂ ಕುರ್ವ್ವನ್ತಿ ಕೇವಲಮಿತಿ ನಹಿ ಕಿನ್ತು ತಾದೃಶಕರ್ಮ್ಮಕಾರಿಷು ಲೋಕೇಷ್ವಪಿ ಪ್ರೀಯನ್ತೇ|