< ಪ್ರಕಟಣೆ 8 >

1 ಕುರಿಮರಿ ಆಗಿರುವವರು ಏಳನೆಯ ಮುದ್ರೆಯನ್ನು ಒಡೆದಾಗ ಪರಲೋಕದಲ್ಲಿ ಸುಮಾರು ಅರ್ಧ ತಾಸಿನವರೆಗೂ ನಿಶ್ಶಬ್ದವಿತ್ತು.
ज़ैखन गबड़े सतोवं मोहर खोल्ली, त स्वर्गे मां अध्धे घंटे तगर खामोशी राई।
2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.
मीं तैन सत स्वर्गदूत ज़ैना परमेशरेरे सामने खड़े रहतन, लाए, ते तैन सत नड़शिंगे दित्ते जे।
3 ಚಿನ್ನದ ಧೂಪಾರತಿಯಿದ್ದ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಸಿಂಹಾಸನದ ಮುಂದಿನ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳೊಂದಿಗೆ ಅರ್ಪಿಸಲು ಅವನಿಗೆ ಬಹಳ ಧೂಪವು ಕೊಡಲಾಗಿತ್ತು.
फिरी अक होरो स्वर्गदूत सोन्नेरू धूपदान घिन्तां अव, ते बलिदान केरनेरी ठारी कां जेव; ते तैस बड़ो धूप दित्तो, कि सेब्भी पवित्र लोकां केरि प्रार्थनान सेइं साथी तैस सोन्नेरे बलिदान केरनेरी ठारी पुड़ ज़ै तखतेरे सामने च़ाढ़े।
4 ದೇವದೂತನ ಕೈಯಿಂದ ಧೂಪದ ಹೊಗೆಯು, ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ, ದೇವಸನ್ನಿಧಿಗೆ ಏರಿಹೋಯಿತು.
ते तैस धूपेरो तू परमेशरेरे लोकां केरि प्रार्थनान सेइं साथी स्वर्गदूतां केरे ज़िरिये परमेशरेरे सामने पुज़ो।
5 ಆಗ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಬಲಿಪೀಠದ ಬೆಂಕಿಯಿಂದ ಅದನ್ನು ತುಂಬಿಸಿ, ಭೂಮಿಯ ಮೇಲೆ ಎಸೆದನು. ಆಗ ಗುಡುಗುಗಳೂ ಸಪ್ಪಳವೂ ಮಿಂಚುಗಳೂ ಮತ್ತು ಭೂಕಂಪವೂ ಉಂಟಾದವು.
तैखन स्वर्गदूत धूपदान नेइतां तैस मां बलिदान केरनेरी ठारारी अग भरी, ते धेतली पुड़ छ़ड़ी, ते गुड़नेरी आवाज़ ते बिजली ते भुंज़ल भोने लाए।
6 ಆಗ ಏಳು ತುತೂರಿಗಳನ್ನು ಹಿಡಿದಿರುವ ಏಳು ದೇವದೂತರು ಅವುಗಳನ್ನು ಊದಲು ಸಿದ್ಧರಾದರು.
ते तैना सते स्वर्गदूत ज़ैन कां सत नड़शिनगे थिये, बज़ानेरे लेइ तियार भोए।
7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಲು, ರಕ್ತದೊಂದಿಗೆ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿದವು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋಯಿತು.
पेइले स्वर्गदूत नड़शिनगों बज़ाव, ते खूने सेइं मिलोरी आण ते अग धेरतली पुड़ शारी; ते धेरतली ट्लेइन मरां अक हिस्सो फुकोई, ते बुट भी अक तीयाही फुकोए, ते सब नीलो घास भी फुकोव।
8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಉರಿಯುತ್ತಿರುವ ದೊಡ್ಡ ಬೆಟ್ಟದಂಥದ್ದು ಸಮುದ್ರದಲ್ಲಿ ಎಸೆಯಲಾಯಿತು. ಸಮುದ್ರದ ಮೂರರಲ್ಲಿ ಒಂದು ಭಾಗವು ರಕ್ತವಾಯಿತು.
दुइयोवं स्वर्गदूते नड़शिनगों बज़ाव, त किछ ज़ेन्च़रे बड्डे पहाड़ेरू ज़ेरू अग्गी सेइं फुकोतू समुन्द्रे मां शारू; ते समुन्द्र अक तीहाई खून भोव।
9 ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗ ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗ ನಾಶವಾದವು.
ते अक तीहाई जानवर ज़ैना समुन्द्रे मां रहते थिये मेरि जे, ते समुन्दरेरेरां अक तीहाई ज़िहाज़ां तुबा भुआं।
10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೀಪದಂತೆ ಉರಿಯುವ ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು.
ट्लेइयोवं स्वर्गदूते नड़शिनगो बज़ाव, ते अक बड्डो तारो ज़ै दीयेरो ज़ेरो बलतो थियो, स्वर्गेरां ट्लुटो, ते दरियां केरे एक्की तीहाई पुड़, ते पैन्न पुड़ पेव।
11 ಆ ನಕ್ಷತ್ರದ ಹೆಸರು, ಮಾಚಿಪತ್ರೆ, ಆಗ ಮೂರರಲ್ಲಿ ಒಂದು ಭಾಗವು ಕಹಿಯಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕ ಜನರು ಸತ್ತರು.
ते तैस तारेरू नवं नागदौनाए, ते अक तीहाई पानी नागदौनारू ज़ेरू ट्लिठू भोवं, ते बड़े मैन्हु तैस पैनेरे ट्लिठू भोने सेइं मेरि जे।
12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು, ಆಗ ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ ಮೂರನೇ ಭಾಗವು ಕತ್ತಲಾಯಿತು. ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ, ಮೂರನೇ ಭಾಗವು ಕತ್ತಲಾಯಿತು. ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಹೋಯಿತು. ರಾತ್ರಿಯು ಹಾಗೆಯೇ ಆಯಿತು.
च़ेवरोवं स्वर्गदूते नड़शिनगो बज़ाव, ते दिहाड़ो अक तीहाई, ते चेंदनरी अक तीहाई ते तारां केरि एक्की तीहाई पुड़ हलचल पेई, इड़ी तगर कि तैन केरो अक तीहाई हिस्सो आंधरो भोव ते दिहैड़री एक्की तीहैई मां लौ न राई, ते तेन्च़रे राती मां भी।
13 ನಾನು ನೋಡಲಾಗಿ, ಆಕಾಶದ ಮಧ್ಯದಲ್ಲಿ ಹಾರುತ್ತಿರುವ ಒಂದು ಗರುಡ ಪಕ್ಷಿ ಮಹಾಧ್ವನಿಯಿಂದ: ಇನ್ನೂ ಊದಲಿರುವ ಮೂವರು ದೂತರ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ, “ಅಯ್ಯೋ! ಅಯ್ಯೋ! ಅಯ್ಯೋ!” ಎಂದಿತು.
ज़ैखन मीं हेरू, त अम्बरेरे मझ़ामेई अक उकाब उडरते ते ज़ोरे सेइं इन ज़ोते शुनू, “कि तैन ट्लाई स्वर्गदूतां केरे नड़शिनगेरे आवाज़ारे वजाई सेइं ज़ैना बज़ाने हेजू बाकिन, धेरतली रानेबालन पुड़ अफ़सोस! अफ़सोस! अफ़सोस!”

< ಪ್ರಕಟಣೆ 8 >