< ಕೀರ್ತನೆಗಳು 99 >
1 ಯೆಹೋವ ದೇವರು ಆಳಿಕೆ ಮಾಡುತ್ತಾರೆ. ರಾಷ್ಟ್ರಗಳು ನಡುಗಲಿ. ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ. ಭೂಮಿಯು ಕದಲಲಿ.
耶和华作王;万民当战抖! 他坐在二基路伯上,地当动摇。
2 ಯೆಹೋವ ದೇವರು ಚೀಯೋನಿನಲ್ಲಿ ಮಹೋನ್ನತರಾಗಿದ್ದಾರೆ. ಎಲ್ಲಾ ಜನಗಳ ಮೇಲೆ ಉನ್ನತರಾಗಿದ್ದಾರೆ.
耶和华在锡安为大; 他超乎万民之上。
3 ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ. ದೇವರು ಪರಿಶುದ್ಧರು.
他们当称赞他大而可畏的名; 他本为圣!
4 ನ್ಯಾಯ ಪ್ರಿಯ ರಾಜರೇ, ನೀವು ನೀತಿಯನ್ನು ಸ್ಥಿರಪಡಿಸುತ್ತೀರಿ. ನ್ಯಾಯವನ್ನೂ ನೀತಿಯನ್ನೂ ಯಾಕೋಬ್ಯರಲ್ಲಿ ನೀವು ಮನದಟ್ಟಾಗಿಸಿರುವಿರಿ.
王有能力,喜爱公平,坚立公正, 在雅各中施行公平和公义。
5 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ಅವರ ಪಾದಪೀಠದಲ್ಲಿ ಆರಾಧಿಸಿರಿ. ಏಕೆಂದರೆ ಅವರು ಪರಿಶುದ್ಧರಾಗಿದ್ದಾರೆ.
你们当尊崇耶和华—我们的 神, 在他脚凳前下拜。 他本为圣!
6 ಯೆಹೋವ ದೇವರ ಯಾಜಕರಲ್ಲಿ ಮೋಶೆಯೂ ಆರೋನನೂ ಇದ್ದಾರೆ. ದೇವರ ಹೆಸರೆತ್ತಿ ಕರೆದವರಲ್ಲಿ ಸಮುಯೇಲನೂ ಸಹ ಒಬ್ಬನು. ಇವರೆಲ್ಲರೂ ಯೆಹೋವ ದೇವರನ್ನು ಕರೆದರು. ದೇವರು ಅವರಿಗೆ ಉತ್ತರಕೊಟ್ಟರು.
在他的祭司中有摩西和亚伦; 在求告他名的人中有撒母耳。 他们求告耶和华,他就应允他们。
7 ಮೇಘಸ್ತಂಭದಿಂದ ಅವರ ಸಂಗಡ ಮಾತನಾಡಿದರು. ದೇವರು ಅವರಿಗೆ ಕೊಟ್ಟ ಶಾಸನಗಳನ್ನೂ ತೀರ್ಪುಗಳನ್ನೂ ಅವರು ಕೈಗೊಂಡರು.
他在云柱中对他们说话; 他们遵守他的法度和他所赐给他们的律例。
8 ನಮ್ಮ ದೇವರಾದ ಯೆಹೋವ ದೇವರೇ, ನೀವು ಅವರಿಗೆ ಉತ್ತರಕೊಟ್ಟಿದ್ದೀರಿ. ನೀವು ದುಷ್ಕೃತ್ಯಗಳಿಗಾಗಿ ಇಸ್ರಾಯೇಲರನ್ನು ದಂಡಿಸಿದರೂ ಅವರನ್ನು ಕ್ಷಮಿಸುವ ದೇವರಾಗಿದ್ದೀರಿ.
耶和华—我们的 神啊,你应允他们; 你是赦免他们的 神, 却按他们所行的报应他们。
9 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ದೇವರ ಪರಿಶುದ್ಧ ಪರ್ವತದಲ್ಲಿ ಆರಾಧಿಸಿರಿ. ನಮ್ಮ ದೇವರಾದ ಯೆಹೋವ ದೇವರು ಪರಿಶುದ್ಧರು.
你们要尊崇耶和华—我们的 神, 在他的圣山下拜, 因为耶和华—我们的 神本为圣!