< ಕೀರ್ತನೆಗಳು 81 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಗಿತ್ತೀ ರಾಗದಿಂದ ಹಾಡತಕ್ಕದ್ದು. ಆಸಾಫನ ಕೀರ್ತನೆ. ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿ ಗೈಯಿರಿ.
Don mai bi da kaɗe-kaɗe. Bisa ga gittit. Ta Asaf. Ku rera don farin ciki ga Allah ƙarfinmu; ku yi sowa ga Allah na Yaƙub!
2 ವಾದ್ಯ ಪ್ರಾರಂಭಿಸಿರಿ; ದಮ್ಮಡಿಯನ್ನೂ, ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ಬಾರಿಸಿರಿ.
Ku fara kaɗe-kaɗe, ku buga ganga, ku kaɗa garaya da molo masu daɗi.
3 ಅಮಾವಾಸ್ಯೆಯಲ್ಲಿಯೂ ಉತ್ಸವ ದಿವಸವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.
Ku busa ƙahon rago a Sabon Wata, da kuma sa’ad da wata ya kai tsakiya, a ranar Bikinmu;
4 ಏಕೆಂದರೆ ಇದು ಇಸ್ರಾಯೇಲಿಗೆ ಕಟ್ಟಳೆ. ಯಾಕೋಬನ ದೇವರ ನ್ಯಾಯ ಪ್ರಮಾಣವೇ.
wannan ƙa’ida ce domin Isra’ila, farilla ta Allah na Yaƙub.
5 ದೇವರು ಈಜಿಪ್ಟಿಗೆ ವಿರೋಧವಾಗಿ ಹೊರಟಾಗ, ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ನಾವು ತಿಳಿಯದ ಭಾಷೆಯನ್ನು ಕೇಳಿದಾಗ:
Ya kafa shi a matsayin ƙa’ida domin Yusuf sa’ad da ya fito daga Masar. Muka ji yaren da ba mu fahimta ba.
6 “ಅವರ ಹೆಗಲ ಮೇಲಿಂದ ಭಾರವನ್ನು ತೆಗೆದುಹಾಕಿದೆನು, ಬುಟ್ಟಿಗಳಿಂದ ಅವರ ಕೈಗಳು ಬಿಡುಗಡೆಯಾದವು.
Ya ce, “Na kau da nauyi daga kafaɗunku; an’yantar da hannuwansu daga kwando.
7 ಇಕ್ಕಟ್ಟಿನಲ್ಲಿ ನೀವು ಕರೆಮಾಡಿದಿರಿ, ಆಗ ನಾನು ನಿಮ್ಮನ್ನು ವಿಮೋಚಿಸಿದೆನು. ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟೆನು. ಮೆರೀಬಾ ನೀರಿನ ಹತ್ತಿರ ನಿಮ್ಮನ್ನು ಪರೀಕ್ಷಿಸಿದೆನು.
Cikin damuwarku kun yi kira na kuwa kuɓutar da ku, na amsa muku daga girgijen tsawa; na gwada ku a ruwan Meriba. (Sela)
8 ನನ್ನ ಜನರೇ ಕೇಳಿರಿ, ಇಸ್ರಾಯೇಲೇ, ನೀನು ನನ್ನ ಮಾತನ್ನು ಕೇಳಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ.
“Ku ji, ya mutanena, zan kuwa gargaɗe ku, in ba za ku saurare ni ba, ya Isra’ila!
9 ನಿಮ್ಮಲ್ಲಿ ಅನ್ಯದೇವರು ಇರಬಾರದು; ಪರದೇವರಿಗೆ ಅಡ್ಡ ಬೀಳಬಾರದು.
Kada ku kasance da baƙon allah a cikinku; ba za ku rusuna ga baƙon allah ba.
10 ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ; ನಿಮ್ಮ ಬಾಯಿಯನ್ನು ಅಗಲವಾಗಿ ತೆರೆ, ಆಗ ಅದನ್ನು ತುಂಬಿಸುವೆನು.
Ni ne Ubangiji Allahnku wanda ya fitar da ku daga Masar. Ku buɗe bakinku zan kuwa cika shi.
11 “ಆದರೆ ನನ್ನ ಜನರು ನನ್ನ ಮಾತನ್ನು ಕೇಳಲಿಲ್ಲ; ಇಸ್ರಾಯೇಲು ನನಗೆ ಅಧೀನವಾಗಲಿಲ್ಲ.
“Amma mutanena ba su saurare ni ba; Isra’ila bai miƙa kansa gare ni ba.
12 ಆದ್ದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಂತೆ ನಡೆದುಕೊಂಡರು.
Saboda haka na ba da su ga zukatansu da suka taurare don su bi dabararsu.
13 “ಹಾ, ನನ್ನ ಜನರು ನನ್ನ ಮಾತನ್ನು ಕೇಳಿದರೆ ಒಳ್ಳೆದಾಗಿತ್ತು! ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಮೇಲಾಗುತ್ತಿತ್ತು,
“A ce mutanena za su saurare ni, a ce Isra’ila zai bi hanyoyina,
14 ತೀವ್ರವಾಗಿ ಅವರ ಶತ್ರುಗಳನ್ನು ಧೀನಪಡಿಸುವೆನು. ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
da nan da nan sai in rinjayi abokan gābansu in kuma juye hannuna a kan maƙiyansu!
15 ಯೆಹೋವ ದೇವರನ್ನು ದ್ವೇಷಿಸುವವರು ತಮ್ಮನ್ನು ತಾವೇ ದೇವರಿಗೆ ಒಪ್ಪಿಸಿಕೊಡುವರು. ಆದರೂ ಅವರಿಗೆ ಶಿಕ್ಷೆ ತಪ್ಪುವುದಿಲ್ಲ.
Waɗanda suke ƙin Ubangiji za su fāɗi a gabansa da rawar jiki, hukuncinsu kuma zai dawwama har abada.
16 ನಿಮಗಾದರೋ ಉತ್ತಮವಾದ ಗೋಧಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ನಿಮ್ಮನ್ನು ತೃಪ್ತಿಪಡಿಸುವೆನು.”
Amma za a ciyar da ku da alkama mafi kyau; da zuma daga dutsen da zai ƙosar da ku.”

< ಕೀರ್ತನೆಗಳು 81 >