< ಕೀರ್ತನೆಗಳು 79 >
1 ಆಸಾಫನ ಕೀರ್ತನೆ. ದೇವರೇ, ಜನಾಂಗಗಳು ನಿಮ್ಮ ಬಾಧ್ಯತೆಗೆ ಬಂದು, ನಿಮ್ಮ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
(아삽의 시) 하나님이여, 열방이 주의 기업에 들어와서 주의 성전을 더럽히고 예루살렘으로 돌 무더기가 되게 하였나이다
2 ನಿಮ್ಮ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ನಿಮ್ಮ ಭಕ್ತರ ಮಾಂಸವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿದ್ದಾರೆ.
저희가 주의 종들의 시체를 공중의 새에게 밥으로 주며 주의 성도들의 육체를 땅 짐승에게 주며
3 ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ. ಅವರನ್ನು ಹೂಳಿಡುವವನೊಬ್ಬನೂ ಇಲ್ಲ.
그들의 피를 예루살렘 사면에 물 같이 흘렸으며 그들을 매장하는 자가 없었나이다
4 ನಾವು ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
우리는 우리 이웃에게 비방거리가 되며 우리를 에운 자에게 조소와 조롱거리가 되었나이다
5 ಯೆಹೋವ ದೇವರೇ ಎಷ್ಟರವರೆಗೆ ಕೋಪಗೊಂಡಿರುವಿರಿ? ಸತತವೂ ನೀವು ಕೋಪದಿಂದಿರುವಿರೋ? ಎಷ್ಟರವರೆಗೆ ನಿಮ್ಮ ರೋಷವು ಬೆಂಕಿಯಂತೆ ಉರಿಯುವುದು?
여호와여, 어느 때까지니이까? 영원히 노하시리이까? 주의 진노가 불붙듯 하시리이까?
6 ನಿಮ್ಮನ್ನು ಸ್ವೀಕರಿಸದ ಜನಾಂಗಗಳ ಮೇಲೆಯೂ, ನಿಮ್ಮ ಹೆಸರನ್ನು ಕರೆಯದ ರಾಜ್ಯಗಳ ಮೇಲೆಯೂ ನಿಮ್ಮ ಕೋಪವನ್ನು ಸುರಿಸಿಬಿಡಿರಿ.
주를 알지 아니하는 열방과 주의 이름을 부르지 아니하는 열국에 주의 노를 쏟으소서
7 ಏಕೆಂದರೆ ಅವರು ಯಾಕೋಬರನ್ನು ನುಂಗಿಬಿಟ್ಟಿದ್ದಾರೆ. ಅವರ ನಿವಾಸವನ್ನು ಹಾಳು ಮಾಡಿದ್ದಾರೆ.
저희가 야곱을 삼키고 그 거처를 황폐케 함이니이다
8 ಪೂರ್ವಿಕರ ಪಾಪಗಳನ್ನು ನಮಗೆ ವಿರೋಧವಾಗಿ ಜ್ಞಾಪಕ ಮಾಡಿಕೊಳ್ಳಬೇಡಿರಿ. ನಿಮ್ಮ ಕರುಣೆಯು ಬೇಗ ನಮ್ಮನ್ನು ಎದುರುಗೊಳ್ಳಲಿ. ನಾವು ಬಹಳವಾಗಿ ಕುಗ್ಗಿಹೋಗಿದ್ದೇವೆ.
우리 열조의 죄악을 기억하여 우리에게 돌리지 마옵소서 우리가 심히 천하게 되었사오니 주의 긍휼하심으로 속히 우리를 영접하소서
9 ನಮ್ಮ ರಕ್ಷಕರಾಗಿರುವವರೇ, ನಮ್ಮ ದೇವರೇ, ನಿಮ್ಮ ಹೆಸರಿನ ಘನದ ನಿಮಿತ್ತ ನಮಗೆ ಸಹಾಯಮಾಡಿರಿ. ನಿಮ್ಮ ಹೆಸರಿಗೆ ತಕ್ಕಂತೆ ನಮ್ಮನ್ನು ಬಿಡಿಸಿರಿ. ನಮ್ಮ ಪಾಪಗಳನ್ನು ತೊಳೆದುಬಿಡಿರಿ.
우리 구원의 하나님이여, 주의 이름의 영광을 위하여 우리를 도우시며 주의 이름을 위하여 우리를 건지시며 우리 죄를 사하소서
10 ಅವರ ದೇವರು ಎಲ್ಲಿ ಎಂದು ಇತರ ಜನಾಂಗಗಳು ಏಕೆ ಹೇಳಬೇಕು? ಚೆಲ್ಲಿರುವ ನಿಮ್ಮ ಸೇವಕರ ರಕ್ತದ ಪ್ರತಿದಂಡನೆಯು ನಮ್ಮ ಕಣ್ಣುಗಳ ಮುಂದೆ ಇತರ ಜನಾಂಗಗಳಲ್ಲಿ ಗೊತ್ತಾಗಲಿ.
어찌하여 열방으로 저희 하나님이 어디 있느냐? 말하게 하리이까 주의 종들의 피 흘림 당한 보수를 우리 목전에 열방 중에 알리소서
11 ಸೆರೆಯವರ ನಿಟ್ಟುಸಿರು ನಿಮ್ಮ ಮುಂದೆ ಬರಲಿ. ನಿಮ್ಮ ಮಹಾಶಕ್ತಿಯ ಪ್ರಕಾರ ಸಾಯುವುದಕ್ಕಿರುವವರನ್ನು ಕಾಪಾಡಿರಿ.
갇힌 자의 탄식으로 주의 앞에 이르게 하시며 죽이기로 정한 자를 주의 크신 능력을 따라 보존하소서
12 ಯೆಹೋವ ದೇವರೇ, ನಿಮ್ಮನ್ನು ನಿಂದಿಸಿದ ನಮ್ಮ ನೆರೆಯವರಿಗೆ ಏಳರಷ್ಟು ಪ್ರತಿದಂಡನೆಯನ್ನು ಅವರ ಮಡಿಲಿಗೆ ಕೊಡಿರಿ.
주여 우리 이웃이 주를 훼방한 그 훼방을 저희 품에 칠배나 갚으소서
13 ಆಗ ನಿಮ್ಮ ಜನರೂ, ನಿಮ್ಮ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿಮ್ಮನ್ನು ಕೊಂಡಾಡಿ, ತಲತಲಾಂತರಕ್ಕೂ ನಿಮ್ಮ ಸ್ತೋತ್ರವನ್ನು ಸಾರುವೆವು.
그러하면 주의 백성 곧 주의 기르시는 양 된 우리는 영원히 주께 감사하며 주의 영예를 대대로 전하리이다