< ಕೀರ್ತನೆಗಳು 76 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಆಸಾಫನ ಕೀರ್ತನೆ. ಒಂದು ಗೀತೆ. ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ.
阿撒夫的詩歌。交與樂官,樂用絃樂。 天主在猶大地顯示了自己,在以色列廣揚了自己的名。
2 ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು.
他在撒冷支搭了自己的帳幕,他在熙雍建豎了自己的住處。
3 ದೇವರು ಅಲ್ಲಿಯೇ ಬಿಲ್ಲಿನ ಉರಿಬಾಣಗಳನ್ನೂ ಗುರಾಣಿಯನ್ನೂ ಖಡ್ಗವನ್ನೂ ಯುದ್ಧಾಯುಧಗಳನ್ನು ಮುರಿದುಬಿಟ್ಟರು.
在那裏他打斷了弓上的火箭,他也打斷了槍柄、盾牌與刀劍。
4 ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ.
大能者,您大發光明,是來自遠古的山陵。
5 ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ.
膽大的人,全被剝奪,一睡不醒,那勇敢的將領,手臂麻木失靈。
6 ಯಾಕೋಬನ ದೇವರೇ, ನಿಮ್ಮ ಗದರಿಕೆಯಿಂದ ರಥವೂ ಕುದುರೆಯೂ ಚಲನೆಯಿಲ್ಲದೆ ಬಿದ್ದಿವೆ.
雅各伯的天主,因您的恐嚇,戰車戰馬都驚得麻木僵直。
7 ನೀವು ಭಯಭಕ್ತಿಗೆ ಪಾತ್ರರು, ನೀವು ಒಂದು ಸಾರಿ ಬೇಸರಗೊಂಡರೆ, ನಿಮ್ಮ ಮುಂದೆ ನಿಲ್ಲುವವನ್ಯಾರು?
您尊嚴可畏;您盛怒時,何人能在您面前站立?
8 ಪರಲೋಕದಿಂದ ನ್ಯಾಯ ನಿರ್ಣಯವನ್ನು ಮಾಡಿದ್ದೀರಿ. ದೇವರೇ, ನ್ಯಾಯತೀರಿಸುವುದಕ್ಕೂ
您由天上宣佈判案,大地戰慄默默無言。
9 ಭೂಮಿಯ ದೀನರೆಲ್ಲರನ್ನು ರಕ್ಷಿಸುವುದಕ್ಕೂ ನೀವು ಪ್ರಾರಂಭಿಸುವಾಗ ಭೂಮಿಯು ಭಯಗೊಂಡು ಮೌನವಾಯಿತು.
因為天主起來施行審判,是要救世上的一切貧賤。
10 ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.
人 的狂怒成全您的光榮,幸免憤怒的人,向您祝頌。
11 ನಿಮ್ಮ ದೇವರಾದ ಯೆಹೋವ ದೇವರಿಗೆ ಹರಕೆಮಾಡಿ ಸಲ್ಲಿಸಿರಿ. ದೇವರ ಸುತ್ತಲಿರುವವರೆಲ್ಲರು ಭಯಭಕ್ತಿಗೆ ಪಾತ್ರರಾದವರಿಗೆ ಕಾಣಿಕೆಗಳನ್ನು ತರಲಿ.
您們許願要向上主您們的天主還願;他四周的人都要向可敬者供奉祭獻。
12 ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.
他抑壓首領們的氣燄,他使地上的眾王抖顫。

< ಕೀರ್ತನೆಗಳು 76 >