< ಕೀರ್ತನೆಗಳು 74 >

1 ಆಸಾಫನ ಮಾಸ್ಕಿಲ ರಾಗದ ಕೀರ್ತನೆ. ದೇವರೇ, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಟ್ಟದ್ದೇಕೆ? ನಿಮ್ಮ ಮೇವಿನ ಕುರಿಮಂದೆಯ ವಿಷಯವಾಗಿ ಬೇಸರಗೊಳ್ಳುವುದು ಏಕೆ?
מַשְׂכִּיל לְאָסָף לָמָה אֱלֹהִים זָנַחְתָּ לָנֶצַח יֶעְשַׁן אַפְּךָ בְּצֹאן מַרְעִיתֶֽךָ׃
2 ಪೂರ್ವಕಾಲದಲ್ಲಿ ನೀವು ಕೊಂಡುಕೊಂಡ ನಿಮ್ಮ ಜನರನ್ನೂ ನೀವು ವಿಮೋಚಿಸಿದ ನಿಮ್ಮ ಬಾಧ್ಯತೆಯನ್ನೂ ನೀವು ವಾಸಮಾಡಿದ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೊಳ್ಳಿರಿ.
זְכֹר עֲדָֽתְךָ ׀ קָנִיתָ קֶּדֶם גָּאַלְתָּ שֵׁבֶט נַחֲלָתֶךָ הַר־צִיּוֹן זֶה ׀ שָׁכַנְתָּ בּֽוֹ׃
3 ನಿತ್ಯ ನಾಶವಾದ ಈ ಪ್ರದೇಶಗಳ ಕಡೆಗೂ ಈ ಪರಿಶುದ್ಧ ನಿವಾಸವನ್ನು ವೈರಿಗಳು ಹಾಳುಮಾಡಿದ್ದರ ಕಡೆಗೂ ನಿಮ್ಮ ಹೆಜ್ಜೆಗಳನ್ನು ತಿರುಗಿಸಿರಿ.
הָרִימָה פְעָמֶיךָ לְמַשֻּׁאוֹת נֶצַח כׇּל־הֵרַע אוֹיֵב בַּקֹּֽדֶשׁ׃
4 ನಿಮ್ಮ ವೈರಿಗಳು ನೀವು ನಮ್ಮನ್ನು ಸಂಧಿಸಿದ ಸ್ಥಳದಲ್ಲಿ ಗರ್ಜಿಸುತ್ತಾರೆ. ತಮ್ಮ ಗುರುತುಗಳನ್ನು ಆರಾಧನಾ ಚಿಹ್ನೆಗಳಾಗಿ ಇಟ್ಟಿದ್ದಾರೆ.
שָׁאֲגוּ צֹרְרֶיךָ בְּקֶרֶב מוֹעֲדֶךָ שָׂמוּ אוֹתֹתָם אֹתֽוֹת׃
5 ದಟ್ಟವಾದ ಮರಗಳ ಮಧ್ಯೆ ಕೊಡಲಿ ಎತ್ತುವವನ ಹಾಗೆ ಆ ಜನರು ವರ್ತಿಸಿದ್ದಾರೆ.
יִוָּדַע כְּמֵבִיא לְמָעְלָה בִּסְבׇךְ־עֵץ קַרְדֻּמּֽוֹת׃
6 ಈಗ ಚಿತ್ರ ಕೆಲಸಗಳನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆಯಿಂದಲೂ ಅವರು ಹೊಡೆದು ಹಾಕುತ್ತಿದ್ದಾರೆ.
(ועת) [וְעַתָּה] פִּתּוּחֶיהָ יָּחַד בְּכַשִּׁיל וְכֵילַפּוֹת יַהֲלֹמֽוּן׃
7 ನಿಮ್ಮ ಪರಿಶುದ್ಧ ಸ್ಥಳಕ್ಕೆ ಬೆಂಕಿಹಚ್ಚಿದ್ದಾರೆ. ನಿಮ್ಮ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಅಪವಿತ್ರಗೊಳಿಸಿದ್ದಾರೆ.
שִׁלְחוּ בָאֵשׁ מִקְדָּשֶׁךָ לָאָרֶץ חִלְּלוּ מִֽשְׁכַּן־שְׁמֶֽךָ׃
8 “ಅವುಗಳನ್ನು ಒಟ್ಟಾಗಿ ಕೆಡವಿಬಿಡೋಣ,” ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಟ್ಟಿದ್ದಾರೆ.
אָמְרוּ בְלִבָּם נִינָם יָחַד שָׂרְפוּ כׇל־מוֹעֲדֵי־אֵל בָּאָֽרֶץ׃
9 ದೇವರಿಂದ ನಮಗೆ ಅದ್ಭುತವಾದ ಸಂಕೇತಗಳು ಕೊಟ್ಟಿರುವುದಿಲ್ಲ. ಪ್ರವಾದಿಗಳು ನಮಗೆ ಉಳಿದಿರುವುದಿಲ್ಲ. ಇದು ಎಷ್ಟು ಕಾಲ ಎಂದು ನಾವ್ಯಾರೂ ತಿಳಿದಿರುವುದಿಲ್ಲ.
אוֹתֹתֵינוּ לֹא רָאִינוּ אֵֽין־עוֹד נָבִיא וְלֹֽא־אִתָּנוּ יֹדֵעַ עַד־מָֽה׃
10 ದೇವರೇ, ವೈರಿಯು ನಿಂದಿಸುವುದು ಎಷ್ಟರವರೆಗೆ? ಶತ್ರುವು ನಿಮ್ಮ ಹೆಸರನ್ನು ಎಂದೆಂದಿಗೂ ದೂಷಿಸುವನೋ?
עַד־מָתַי אֱלֹהִים יְחָרֶף צָר יְנָאֵץ אוֹיֵב שִׁמְךָ לָנֶֽצַח׃
11 ಏಕೆ ನಿಮ್ಮ ಕೈಯನ್ನು, ನಿಮ್ಮ ಬಲಗೈಯನ್ನು ಸಹ ಹಿಂದೆಳೆಯುತ್ತೀರಿ? ನಿಮ್ಮ ಎದೆಯೊಳಗಿಂದ ಅದನ್ನು ಹೊರಗೆ ತೆಗೆದು ಅವರನ್ನು ದಂಡಿಸಿರಿ.
לָמָּה תָשִׁיב יָדְךָ וִימִינֶךָ מִקֶּרֶב (חוקך) [חֵיקְךָ] כַלֵּֽה׃
12 ದೇವರೇ, ನೀವು ಪೂರ್ವದಿಂದಲೂ ನನ್ನ ಅರಸರಾಗಿದ್ದೀರಿ. ಭೂಲೋಕಕ್ಕೆ ರಕ್ಷಣೆಯನ್ನು ತರುವವರೂ ನೀವೇ ಆಗಿದ್ದೀರಿ.
וֵאלֹהִים מַלְכִּי מִקֶּדֶם פֹּעֵל יְשׁוּעוֹת בְּקֶרֶב הָאָֽרֶץ׃
13 ನೀವು ನಿಮ್ಮ ಬಲದಿಂದ ಸಮುದ್ರವನ್ನು ವಿಭಾಗಿಸಿದ್ದೀರಿ. ತಿಮಿಂಗಿಲಗಳ ತಲೆಗಳನ್ನು ನೀರಿನಲ್ಲಿ ಬಡಿಸಿದ್ದೀರಿ.
אַתָּה פוֹרַרְתָּ בְעׇזְּךָ יָם שִׁבַּרְתָּ רָאשֵׁי תַנִּינִים עַל־הַמָּֽיִם׃
14 ನೀವು ಲಿವ್ಯಾತಾನ ಮೃಗದ ತಲೆಗಳನ್ನು ಬಡೆದಿರಲು ಅದನ್ನು ಮರುಭೂಮಿಯ ಜೀವಜಂತುಗಳಿಗೆ ಆಹಾರವಾಗಿ ಕೊಟ್ಟಿದ್ದೀರಿ.
אַתָּה רִצַּצְתָּ רָאשֵׁי לִוְיָתָן תִּתְּנֶנּוּ מַאֲכָל לְעָם לְצִיִּֽים׃
15 ನೀವು ಬುಗ್ಗೆಯನ್ನೂ, ಪ್ರವಾಹವನ್ನೂ ವಿಭಾಗ ಮಾಡಿದ್ದೀರಿ. ನೀವು ಯಾವಾಗಲೂ ತುಂಬಿ ಹರಿಯುವ ನದಿಗಳನ್ನು ಒಣಗಿಸಿದ್ದೀರಿ.
אַתָּה בָקַעְתָּ מַעְיָן וָנָחַל אַתָּה הוֹבַשְׁתָּ נַהֲרוֹת אֵיתָֽן׃
16 ಹಗಲು ನಿಮ್ಮದು, ರಾತ್ರಿಯು ಸಹ ನಿಮ್ಮದು. ನೀವು ಸೂರ್ಯಚಂದ್ರನನ್ನೂ ಸ್ಥಾಪಿಸಿದ್ದೀರಿ.
לְךָ יוֹם אַף־לְךָ לָיְלָה אַתָּה הֲכִינוֹתָ מָאוֹר וָשָֽׁמֶשׁ׃
17 ನೀವು ಭೂಮಿಯ ಮೇರೆಗಳನ್ನೆಲ್ಲಾ ನಿರ್ಣಯಿಸಿದ್ದೀರಿ. ಬೇಸಿಗೆ ಮತ್ತು ಚಳಿಗಾಲವನ್ನು ನೀವು ನಿರ್ಮಿಸಿದ್ದೀರಿ.
אַתָּה הִצַּבְתָּ כׇּל־גְּבוּלוֹת אָרֶץ קַיִץ וָחֹרֶף אַתָּה יְצַרְתָּֽם׃
18 ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.
זְכׇר־זֹאת אוֹיֵב חֵרֵף ׀ יְהֹוָה וְעַם נָבָל נִאֲצוּ שְׁמֶֽךָ׃
19 ನಿಮ್ಮ ಪಾರಿವಾಳದ ಪ್ರಾಣವನ್ನು ದುಷ್ಟಮೃಗಗಳಿಗೆ ಒಪ್ಪಿಸಕೊಡಬೇಡಿರಿ. ನಿಮ್ಮ ದೀನರ ಮಂಡಳಿಯನ್ನು ಸದಾಕಾಲಕ್ಕೆ ಮರೆತುಬಿಡಬೇಡಿರಿ.
אַל־תִּתֵּן לְחַיַּת נֶפֶשׁ תּוֹרֶךָ חַיַּת עֲנִיֶּיךָ אַל־תִּשְׁכַּח לָנֶֽצַח׃
20 ಒಡಂಬಡಿಕೆಗೆ ಗೌರವವನ್ನು ಕೊಡಿರಿ. ಏಕೆಂದರೆ ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿ ಇವೆ.
הַבֵּט לַבְּרִית כִּי מָלְאוּ מַחֲשַׁכֵּי־אֶרֶץ נְאוֹת חָמָֽס׃
21 ಕುಗ್ಗಿದವನು ಅವಮಾನದಿಂದ ಹಿಂದಿರುಗದಿರಲಿ. ದೀನನೂ, ಬಡವನೂ ನಿಮ್ಮ ಹೆಸರನ್ನು ಸ್ತುತಿಸಲಿ.
אַל־יָשֹׁב דַּךְ נִכְלָם עָנִי וְאֶבְיוֹן יְֽהַלְלוּ שְׁמֶֽךָ׃
22 ದೇವರೇ, ಏಳು; ನಿಮ್ಮ ನ್ಯಾಯವನ್ನು ವಾದಿಸಿರಿ. ದಿನವೆಲ್ಲಾ ಮೂರ್ಖನು ನಿಮ್ಮನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪಕಮಾಡಿಕೊಳ್ಳಿರಿ.
קוּמָה אֱלֹהִים רִיבָה רִיבֶךָ זְכֹר חֶרְפָּתְךָ מִנִּי־נָבָל כׇּל־הַיּֽוֹם׃
23 ನಿಮ್ಮ ವೈರಿಗಳ ಗದ್ದಲವನ್ನೂ ನಿಮ್ಮ ವಿರೋಧಿಗಳ ಆಕ್ರೋಶ ನಿರಂತರವಾಗಿ ಬೆಳೆಯುವ ಕಲಹವನ್ನೂ ಮರೆತುಬಿಡಬೇಡಿರಿ.
אַל־תִּשְׁכַּח קוֹל צֹרְרֶיךָ שְׁאוֹן קָמֶיךָ עֹלֶה תָמִֽיד׃

< ಕೀರ್ತನೆಗಳು 74 >