< ಕೀರ್ತನೆಗಳು 69 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ದಾವೀದನ ಕೀರ್ತನೆ. ದೇವರೇ, ನನ್ನನ್ನು ರಕ್ಷಿಸಿರಿ. ಏಕೆಂದರೆ, ಪ್ರವಾಹ ಕುತ್ತಿಗೆಯ ವರೆಗೆ ಬಂದಿದೆ.
大卫的诗,交与伶长。调用百合花。 神啊,求你救我! 因为众水要淹没我。
2 ನೆಲವಿಲ್ಲದಿರುವ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತಿದ್ದೇನೆ. ಪ್ರವಾಹಗಳು ನನ್ನ ಮೇಲೆ ಹಾದುಹೋಗುವ ನೀರಿನ ಅಗಾಧಕ್ಕೆ ನಾನು ಬಂದಿದ್ದೇನೆ.
我陷在深淤泥中,没有立脚之地; 我到了深水中,大水漫过我身。
3 ನಾನು ಮೊರೆಯಿಟ್ಟು ದಣಿದಿದ್ದೇನೆ. ನನ್ನ ಗಂಟಲು ಒಣಗಿದೆ. ನಾನು ದೇವರನ್ನು ಎದುರು ನೋಡುವುದರಿಂದ ನನ್ನ ಕಣ್ಣು ಕ್ಷೀಣವಾಗಿವೆ.
我因呼求困乏,喉咙发干; 我因等候 神,眼睛失明。
4 ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.
无故恨我的,比我头发还多; 无理与我为仇、要把我剪除的,甚为强盛。 我没有抢夺的,要叫我偿还。
5 ದೇವರೇ, ನೀವು ನನ್ನ ಮೂರ್ಖತನವನ್ನು ತಿಳಿದಿದ್ದೀರಿ. ನನ್ನ ಅಪರಾಧಗಳು ನಿಮಗೆ ಮರೆಯಾಗಿಲ್ಲ.
神啊,我的愚昧,你原知道; 我的罪愆不能隐瞒。
6 ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
万军的主—耶和华啊, 求你叫那等候你的,不要因我蒙羞! 以色列的 神啊, 求你叫那寻求你的,不要因我受辱!
7 ನಾನು ನಿಮ್ಮ ನಿಮಿತ್ತ ನಿಂದೆಗೆ ಒಳಗಾಗಿದ್ದೇನೆ. ಅವಮಾನವು ನನ್ನ ಮುಖವನ್ನು ಮುಚ್ಚಿದೆ.
因我为你的缘故受了辱骂, 满面羞愧。
8 ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.
我的弟兄看我为外路人; 我的同胞看我为外邦人。
9 ಏಕೆಂದರೆ ನಿಮ್ಮ ಆಲಯದ ಮೇಲಿನ ಆಸಕ್ತಿಯು ಬೆಂಕಿಯಂತೆ ನನ್ನನ್ನು ದಹಿಸಿಬಿಟ್ಟಿದೆ. ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
因我为你的殿心里焦急,如同火烧, 并且辱骂你人的辱骂都落在我身上。
10 ನಾನು ಅತ್ತು ಉಪವಾಸ ಮಾಡಿದಾಗ ನಿಂದೆಗೆ ಒಳಗಾಗಬೇಕಾಯಿತು.
我哭泣,以禁食刻苦我心; 这倒算为我的羞辱。
11 ಗೋಣಿತಟ್ಟನ್ನು ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ. ಇದರಿಂದ ನಾನು ಅವರಿಗೆ ಗಾದೆಯ ಮಾತಾದೆನು.
我拿麻布当衣裳, 就成了他们的笑谈。
12 ಊರುಬಾಗಿಲಲ್ಲಿ ಕೂತುಕೊಳ್ಳುವವರು ಪರಿಹಾಸ್ಯ ಮಾಡುತ್ತಾರೆ. ನಾನು ಮದ್ಯಪಾನಿಗಳಿಗೆ ಗಾಯನ ವಿಷಯವಾಗಿದ್ದೇನೆ.
坐在城门口的谈论我; 酒徒也以我为歌曲。
13 ಯೆಹೋವ ದೇವರೇ, ನಾನಾದರೋ ನಿಮಗೆ ಮೊರೆಯಿಟ್ಟಿದ್ದೇನೆ. ಇದು ನಿಮ್ಮ ಮೆಚ್ಚಿಕೆಯ ಸಕಾಲ. ಓ ದೇವರೇ, ನಿಮ್ಮ ಮಹಾಪ್ರೀತಿಯಿಂದ ನನಗೆ ನಿಮ್ಮ ನಿಶ್ಚಯ ರಕ್ಷಣೆಯನ್ನು ದಯಪಾಲಿಸಿರಿ.
但我在悦纳的时候向你—耶和华祈祷。 神啊,求你按你丰盛的慈爱, 凭你拯救的诚实应允我!
14 ನನ್ನನ್ನು ಕೆಸರಿನೊಳಗಿಂದ ಬಿಡಿಸಿರಿ. ನಾನು ಮುಳುಗದೆ ಇರಲಿ. ನನ್ನನ್ನು ದ್ವೇಷಿಸಿಸುವವರಿಂದಲೂ ನೀರಿನ ಅಗಾಧದಿಂದಲೂ ನನಗೆ ಬಿಡುಗಡೆ ಆಗಲಿ.
求你搭救我出离淤泥, 不叫我陷在其中; 求你使我脱离那些恨我的人, 使我出离深水。
15 ನೀರಿನ ಪ್ರವಾಹವು ನನ್ನ ಮೇಲೆ ಹಾದುಹೋಗದೆ ಇರಲಿ. ಅಗಾಧವು ನನ್ನನ್ನು ನುಂಗದೆ ಇರಲಿ. ಕುಣಿಯು ನನ್ನ ಮೇಲೆ ತನ್ನ ಬಾಯನ್ನು ಮುಚ್ಚದೆ ಇರಲಿ.
求你不容大水漫过我, 不容深渊吞灭我, 不容坑坎在我以上合口。
16 ಯೆಹೋವ ದೇವರೇ, ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನಗೆ ಉತ್ತರಕೊಡಿರಿ. ನಿಮ್ಮ ಮಹಾ ಕರುಣೆಯಿಂದ ನನ್ನ ಕಡೆಗೆ ತಿರುಗಿರಿ.
耶和华啊,求你应允我! 因为你的慈爱本为美好; 求你按你丰盛的慈悲回转眷顾我!
17 ನಿಮ್ಮ ಮುಖವನ್ನು ನಿಮ್ಮ ಸೇವಕನಿಗೆ ಮರೆಮಾಡಬೇಡಿರಿ. ನಾನು ಇಕ್ಕಟ್ಟಿನಲ್ಲಿದ್ದೇನೆ. ಬೇಗ ನನಗೆ ಉತ್ತರಕೊಡಿರಿ.
不要掩面不顾你的仆人; 我是在急难之中,求你速速地应允我!
18 ನನಗೆ ಸಮೀಪವಾಗಿ ನನ್ನನ್ನು ಕಾಪಾಡಿರಿ. ನನ್ನ ಶತ್ರುಗಳ ನಿಮಿತ್ತ ನನ್ನನ್ನು ಬಿಡಿಸಿರಿ.
求你亲近我,救赎我! 求你因我的仇敌把我赎回!
19 ನೀವು ನನಗಿರುವ ನಿಂದೆ, ನಾಚಿಕೆ ಹಾಗೂ ನನ್ನ ಅವಮಾನವನ್ನೂ ತಿಳಿದಿದ್ದೀರಿ. ನನ್ನ ವೈರಿಗಳೆಲ್ಲರು ನಿಮ್ಮ ಮುಂದೆ ಇದ್ದಾರೆ.
你知道我受的辱骂、欺凌、羞辱; 我的敌人都在你面前。
20 ನಿಂದೆಯು ನನ್ನ ಹೃದಯವನ್ನು ಮುರಿದಿದೆ. ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ. ಅನುತಾಪಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಇರಲಿಲ್ಲ. ಸಂತೈಸುವವರಿಗೋಸ್ಕರ ಸಹ ಎದುರು ನೋಡಿದೆನು, ಆದರೆ ಯಾರೂ ಸಿಕ್ಕಲಿಲ್ಲ.
辱骂伤破了我的心, 我又满了忧愁。 我指望有人体恤,却没有一个; 我指望有人安慰,却找不着一个。
21 ನನ್ನ ಆಹಾರಕ್ಕಾಗಿ ಕಹಿಯಾದದ್ದನ್ನು ಕೊಟ್ಟರು. ನನ್ನ ದಾಹಕ್ಕಾಗಿ ನನಗೆ ಹುಳಿರಸವನ್ನು ಕುಡಿಯಲು ಕೊಟ್ಟರು.
他们拿苦胆给我当食物; 我渴了,他们拿醋给我喝。
22 ಅವರ ಊಟವೇ ಅವರಿಗೆ ಉರುಲಾಗಲಿ. ಸುಖವಾಗಿರುವವರಿಗೆ ಅದು ಬೋನಾಗಲಿ.
愿他们的筵席在他们面前变为网罗, 在他们平安的时候变为机槛。
23 ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ
愿他们的眼睛昏蒙,不得看见; 愿你使他们的腰常常战抖。
24 ಅವರು ಕೋಪಕ್ಕೆ ಗುರಿಯಾಗಲಿ. ಅವರು ಬೇಸರಕ್ಕೆ ತುತ್ತಾಗಲಿ.
求你将你的恼恨倒在他们身上, 叫你的烈怒追上他们。
25 ಅವರ ವಾಸಸ್ಥಾನವು ಹಾಳಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
愿他们的住处变为荒场; 愿他们的帐棚无人居住。
26 ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.
因为,你所击打的,他们就逼迫; 你所击伤的,他们戏说他的愁苦。
27 ಅಪರಾಧದ ಮೇಲೆ ಅಪರಾಧವು ಅವರ ಮೇಲೆ ಬರಲಿ. ಅವರು ನಿಮ್ಮ ರಕ್ಷಣೆಯಲ್ಲಿ ಸೇರದೆ ಇರಲಿ.
愿你在他们的罪上加罪, 不容他们在你面前称义。
28 ಜೀವಪುಸ್ತಕದೊಳಗಿಂದ ಅವರ ಹೆಸರು ಅಳಿದು ಹೋಗಲಿ. ನೀತಿವಂತರ ಸಂಗಡ ಅವರ ಹೆಸರು ಬರೆಯದೆ ಇರಲಿ.
愿他们从生命册上被涂抹, 不得记录在义人之中。
29 ದೇವರೇ, ನಾನು ನೊಂದು ವ್ಯಥೆಗೊಂಡಿದ್ದೇನೆ. ನಿಮ್ಮ ರಕ್ಷಣೆಯು ನನ್ನನ್ನು ಕಾಪಾಡಲಿ.
但我是困苦忧伤的; 神啊,愿你的救恩将我安置在高处。
30 ನಾನು ದೇವರ ಹೆಸರನ್ನು ಹಾಡಿ ಸ್ತುತಿಸುವೆನು. ಸ್ತೋತ್ರದಿಂದ ದೇವರನ್ನು ಸ್ತುತಿಸುವೆನು.
我要以诗歌赞美 神的名, 以感谢称他为大!
31 ಅದು ಯೆಹೋವ ದೇವರಿಗೆ ಎಳೆಯ ಎತ್ತು ಯಜ್ಞಗಳಿಗಿಂತ, ಕೊಂಬೂ ಗೊರಸುಗಳುಳ್ಳ ಹೋರಿಗಳಿಗಿಂತ ಮೆಚ್ಚಿಕೆಯಾಗಿರುವುದು.
这便叫耶和华喜悦,胜似献牛, 或是献有角有蹄的公牛。
32 ಇದನ್ನು ದೀನರು ಕಂಡು ಸಂತೋಷಪಡುವರು. ದೇವರನ್ನು ಹುಡುಕುವವರೇ, ನಿಮ್ಮ ಹೃದಯವು ಚೈತನ್ಯಗೊಳ್ಳಲಿ.
谦卑的人看见了就喜乐; 寻求 神的人,愿你们的心苏醒。
33 ಯೆಹೋವ ದೇವರು ಬಡವರ ಮೊರೆಗೆ ಕಿವಿಗೊಡುತ್ತಾರೆ. ಸೆರೆಯಲ್ಲಿರುವ ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.
因为耶和华听了穷乏人, 不藐视被囚的人。
34 ಆಕಾಶವೂ ಭೂಮಿಯೂ ಸಮುದ್ರಗಳೂ, ಅವುಗಳಲ್ಲಿ ಸಂಚರಿಸುವುದೆಲ್ಲವೂ ದೇವರನ್ನು ಸ್ತುತಿಸಲಿ.
愿天和地、 洋海和其中一切的动物都赞美他!
35 ದೇವರು ಚೀಯೋನನ್ನು ರಕ್ಷಿಸುವರು. ದೇವರು ಯೆಹೂದದ ಪಟ್ಟಣಗಳನ್ನು ಕಟ್ಟುವರು. ಜನರು ಅಲ್ಲಿ ವಾಸಮಾಡಿ, ಅದನ್ನು ಸ್ವಾಧೀನಮಾಡಿಕೊಳ್ಳುವರು.
因为 神要拯救锡安,建造犹大的城邑; 他的民要在那里居住,得以为业。
36 ದೇವರ ಸೇವಕರ ಸಂತತಿಯು ಅದನ್ನು ಬಾಧ್ಯವಾಗಿ ಹೊಂದುವುದು. ದೇವರ ಹೆಸರನ್ನು ಪ್ರೀತಿಸುವವರು ಅದರಲ್ಲಿ ವಾಸಮಾಡುವರು.
他仆人的后裔要承受为业; 爱他名的人也要住在其中。