< ಕೀರ್ತನೆಗಳು 64 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ. ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ.
To the chief Musician. A Psalm of David. Hear, O God, my voice in my plaint; preserve my life from fear of the enemy:
2 ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ, ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ.
Hide me from the secret counsel of evil-doers, from the tumultuous crowd of the workers of iniquity,
3 ಅವರು ತಮ್ಮ ನಾಲಿಗೆಯನ್ನು ಖಡ್ಗದಂತೆ ಮಸೆಯುತ್ತಾರೆ.
Who have sharpened their tongue like a sword, [and] have aimed their arrow, a bitter word;
4 ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ. ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ.
That they may shoot in secret at the perfect: suddenly do they shoot at him, and fear not.
5 ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ. ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ, “ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ.
They encourage themselves in an evil matter, they concert to hide snares; they say, Who will see them?
6 ಅವರು ಅನ್ಯಾಯಗಳನ್ನು ಕಲ್ಪಿಸಿ, “ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ. ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ.
They devise iniquities: We have it ready, the plan is diligently sought out. And each one's inward [thought] and heart is deep.
7 ಆದರೆ ದೇವರು ಅವರ ಬಾಣದಿಂದಲೇ, ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು.
But God will shoot an arrow at them: suddenly are they wounded;
8 ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ ಬೀಳುವಂತೆ ಮಾಡಿಕೊಳ್ಳುವರು. ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು.
By their own tongue they are made to fall over one another: all that see them shall flee away.
9 ಎಲ್ಲಾ ಮನುಷ್ಯರೂ ಭಯಪಟ್ಟು ದೇವರ ಕಾರ್ಯಗಳನ್ನು ಸಾರುವರು. ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು.
And all men shall fear, and shall declare God's doing; and they shall wisely consider his work.
10 ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು ದೇವರನ್ನೇ ಆಶ್ರಯಿಸಿಕೊಳ್ಳುವರು. ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು.
The righteous shall rejoice in Jehovah, and trust in him; and all the upright in heart shall glory.

< ಕೀರ್ತನೆಗಳು 64 >