< ಕೀರ್ತನೆಗಳು 63 >
1 ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ.
Saamu ti Dafidi. Nígbà tí ó wà nínú aginjù Juda. Ọlọ́run, ìwọ ni Ọlọ́run mi, nígbà gbogbo ni mo ń ṣàfẹ́rí rẹ, òǹgbẹ rẹ ń gbẹ ọkàn mi, ara mi fà sí ọ, ní ilẹ̀ gbígbẹ àti ilẹ̀ tí ń ṣàárẹ̀ níbi tí kò sí omi.
2 ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ.
Èmi ti rí ọ ní ibi mímọ́, mo rí agbára àti ògo rẹ.
3 ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.
Nítorí ìfẹ́ rẹ dára ju ayé lọ, ètè mi yóò fògo fún ọ.
4 ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು.
Èmi ó yìn ọ́ níwọ̀n ìgbà tí mo wà láààyè, èmi ó gbé ọwọ́ sókè, èmi ó sì pe orúkọ rẹ.
5 ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು.
A ó tẹ́ ọkàn mi lọ́rùn bí ọlọ́ràá oúnjẹ; pẹ̀lú ètè ìyìn, ẹnu mi yóò yìn ọ́.
6 ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು.
Nígbà tí mo rántí rẹ lórí ibùsùn mi; èmi ń ronú rẹ títí ìṣọ́ òru.
7 ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು.
Nítorí ìwọ ni ìrànlọ́wọ́ mi, mo kọrin níbi òjìji ìyẹ́ apá rẹ.
8 ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.
Ọkàn mí fà sí ọ: ọwọ́ ọ̀tún rẹ gbé mi ró.
9 ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.
Àwọn tí ó ń wá ọkàn mí ni a ó parun; wọn ó sọ̀kalẹ̀ lọ sí ìsàlẹ̀ ilẹ̀ ayé.
10 ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು.
Wọn ó ti ọwọ́ idà ṣubú wọn ó sì di jíjẹ fún kọ̀lọ̀kọ̀lọ̀.
11 ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.
Ṣùgbọ́n ọba yóò yọ̀ nínú Ọlọ́run ẹni tí ó fi orúkọ Ọlọ́run búra yóò ṣògo ṣùgbọ́n ẹnu àwọn òpùrọ́ la ó pamọ́.