< ಕೀರ್ತನೆಗಳು 50 >

1 ಆಸಾಫನ ಕೀರ್ತನೆ. ದೇವಾಧಿ ದೇವರಾದ ಯೆಹೋವ ದೇವರು ತಾವೇ ಮಾತನಾಡುತ್ತಿದ್ದಾರೆ, ಸೂರ್ಯೋದಯದಿಂದ ಅಸ್ತಮಾನದವರೆಗೂ ಇರುವ ಭೂಲೋಕದವರು ಕರೆಯುತ್ತಿದ್ದಾರೆ.
מִזְמוֹר לְאָסָף אֵל ׀ אֱֽלֹהִים יְֽהֹוָה דִּבֶּר וַיִּקְרָא־אָרֶץ מִמִּזְרַח־שֶׁמֶשׁ עַד־מְבֹאֽוֹ׃
2 ಪರಿಪೂರ್ಣ ಸೌಂದರ್ಯದ ಚೀಯೋನಿನಿಂದ ದೇವರು ಪ್ರಕಾಶಿಸುತ್ತಿದ್ದಾರೆ.
מִצִּיּוֹן מִכְלַל־יֹפִי אֱלֹהִים הוֹפִֽיעַ׃
3 ನಮ್ಮ ದೇವರು ಬರುತ್ತಾರೆ, ಎಷ್ಟು ಮಾತ್ರವೂ ಮೌನವಾಗಿರುವುದಿಲ್ಲ. ಬೆಂಕಿಯು ಅವರ ಮುಂದೆ ಪ್ರಜ್ವಲಿಸುವುದು; ಅವರ ಸುತ್ತಲೂ ದೊಡ್ಡ ಬಿರುಗಾಳಿಯು ಬೀಸುವುದು.
יָבֹא אֱלֹהֵינוּ וְֽאַל־יֶחֱרַשׁ אֵשׁ־לְפָנָיו תֹּאכֵל וּסְבִיבָיו נִשְׂעֲרָה מְאֹֽד׃
4 ತಮ್ಮ ಜನರಿಗೆ ನ್ಯಾಯತೀರಿಸುವುದಕ್ಕೆ ಭೂಮಿ ಆಕಾಶಗಳನ್ನೂ ಹೀಗೆಂದು ಕರೆಯುತ್ತಿದ್ದಾರೆ:
יִקְרָא אֶל־הַשָּׁמַיִם מֵעָל וְאֶל־הָאָרֶץ לָדִין עַמּֽוֹ׃
5 “ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡ ನನ್ನ ಭಕ್ತರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.”
אִסְפוּ־לִי חֲסִידָי כֹּרְתֵי בְרִיתִי עֲלֵי־זָֽבַח׃
6 ಮತ್ತು ದೇವರು ನ್ಯಾಯಾಧಿಪತಿಯಾಗಿದ್ದಾರೆ. ಆಕಾಶಗಳು ದೇವರ ನೀತಿಯನ್ನು ಪ್ರಕಟಿಸುತ್ತವೆ.
וַיַּגִּידוּ שָׁמַיִם צִדְקוֹ כִּֽי־אֱלֹהִים ׀ שֹׁפֵט הוּא סֶֽלָה׃
7 “ನನ್ನ ಜನರೇ, ಕೇಳಿರಿ, ನಾನು ಮಾತನಾಡುತ್ತಿದ್ದೇನೆ, ಇಸ್ರಾಯೇಲೇ, ನಿಮಗೆ ವಿರೋಧವಾಗಿ ಹೀಗೆಂದು ನಾನು ಸಾಕ್ಷಿ ಕೊಡುವೆನು: ನಾನು ದೇವರು, ಹೌದು ನಿಮ್ಮ ದೇವರು ನಾನೇ.
שִׁמְעָה עַמִּי ׀ וַאֲדַבֵּרָה יִשְׂרָאֵל וְאָעִידָה בָּךְ אֱלֹהִים אֱלֹהֶיךָ אָנֹֽכִי׃
8 ನಿಮ್ಮ ಯಜ್ಞಗಳ ವಿರೋಧವಾಗಿ ನಾನು ತಪ್ಪು ಹೊರಿಸುತ್ತಾಯಿಲ್ಲ, ಅಥವಾ ನನ್ನ ಮುಂದೆ ಯಾವಾಗಲೂ ಇರುವ ದಹನಬಲಿಗಳ ವಿರೋಧವಾಗಿಯೂ ನಾನು ತಪ್ಪು ಹೊರಿಸುತ್ತಾಯಿಲ್ಲ.
לֹא עַל־זְבָחֶיךָ אוֹכִיחֶךָ וְעוֹלֹתֶיךָ לְנֶגְדִּי תָמִֽיד׃
9 ನಿಮ್ಮ ಮನೆಯಿಂದ ಹೋರಿಯಾಗಲಿ ಕೊಟ್ಟಿಗೆಯಿಂದ ಹೋತಗಳಾಗಲಿ ನನಗೆ ಅವಶ್ಯವಿಲ್ಲ.
לֹא־אֶקַּח מִבֵּיתְךָ פָר מִמִּכְלְאֹתֶיךָ עַתּוּדִֽים׃
10 ಏಕೆಂದರೆ ಅಡವಿಯ ಮೃಗಗಳೆಲ್ಲವೂ ನನ್ನವೇ. ಸಾವಿರ ಬೆಟ್ಟಗಳಲ್ಲಿರುವ ಪಶುಗಳೂ ಸಹ ನನ್ನವೇ.
כִּי־לִי כׇל־חַיְתוֹ־יָעַר בְּהֵמוֹת בְּהַרְרֵי־אָֽלֶף׃
11 ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಬಯಲಿನ ಮೃಗಗಳು ನನ್ನವುಗಳಾಗಿವೆ.
יָדַעְתִּי כׇּל־עוֹף הָרִים וְזִיז שָׂדַי עִמָּדִֽי׃
12 ನನಗೆ ಹಸಿವಾದರೆ ನಿಮಗೆ ಹೇಳಬೇಕಾಗಿಲ್ಲ, ಏಕೆಂದರೆ ಭೂಲೋಕವೂ ಅದರಲ್ಲಿರುವುದೆಲ್ಲವೂ ನನ್ನವೇ.
אִם־אֶרְעַב לֹא־אֹמַר לָךְ כִּי־לִי תֵבֵל וּמְלֹאָֽהּ׃
13 ಹೋರಿಗಳ ಮಾಂಸವನ್ನು ನಾನು ಭುಜಿಸುವುದಿಲ್ಲ. ಹೋತಗಳ ರಕ್ತವನ್ನು ನಾನು ಕುಡಿಯುವುದಿಲ್ಲ.
הַאוֹכַל בְּשַׂר אַבִּירִים וְדַם עַתּוּדִים אֶשְׁתֶּֽה׃
14 “ದೇವರಾಗಿರುವ ನನಗೆ ಸ್ತೋತ್ರವನ್ನು ಬಲಿಯಾಗಿ ಅರ್ಪಿಸಿರಿ. ಮಹೋನ್ನತನಾಗಿರುವ ನನಗೆ ಹರಕೆಗಳನ್ನು ಸಲ್ಲಿಸಿರಿ.
זְבַח לֵאלֹהִים תּוֹדָה וְשַׁלֵּם לְעֶלְיוֹן נְדָרֶֽיךָ׃
15 ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆಯಿರಿ, ನಾನು ನಿಮ್ಮನ್ನು ಬಿಡಿಸುವೆನು, ನೀವು ನನ್ನನ್ನು ಘನಪಡಿಸುವಿರಿ.”
וּקְרָאֵנִי בְּיוֹם צָרָה אֲחַלֶּצְךָ וּֽתְכַבְּדֵֽנִי׃
16 ಆದರೆ ದುಷ್ಟನಿಗೆ ದೇವರು ಹೇಳುವುದೇನೆಂದರೆ: “ನನ್ನ ನಿಯಮಗಳನ್ನು ಪಠಿಸುವುದಕ್ಕೆ ಹಕ್ಕು ನಿಮಗೆ ಏನಿದೆ? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಛರಿಸುವುದೇಕೆ?
וְלָרָשָׁע ׀ אָמַר אֱלֹהִים מַה־לְּךָ לְסַפֵּר חֻקָּי וַתִּשָּׂא בְרִיתִי עֲלֵי־פִֽיךָ׃
17 ನೀನು ನನ್ನ ಶಿಕ್ಷಣವನ್ನು ದ್ವೇಷಿಸಿ, ನನ್ನ ವಾಕ್ಯಗಳನ್ನು ನಿಮ್ಮ ಹಿಂದೆ ಬಿಸಾಡಿಬಿಟ್ಟೀರಲ್ಲಾ.
וְאַתָּה שָׂנֵאתָ מוּסָר וַתַּשְׁלֵךְ דְּבָרַי אַחֲרֶֽיךָ׃
18 ಕಳ್ಳನನ್ನು ಕಂಡರೆ ಅವನೊಂದಿಗೆ ಸೇರಿಕೊಳ್ಳುತ್ತೀರಿ. ವ್ಯಭಿಚಾರಿಗಳ ಸಂಗಡ ನಿಮಗೆ ಪಾಲು ಇದೆ.
אִם־רָאִיתָ גַנָּב וַתִּרֶץ עִמּוֹ וְעִם מְנָאֲפִים חֶלְקֶֽךָ׃
19 ನೀವು ನಿಮ್ಮ ಬಾಯನ್ನು ಕೇಡಿಗೆ ಉಪಯೋಗಿಸುತ್ತೀರಿ. ನಿಮ್ಮ ನಾಲಿಗೆಯು ಮೋಸವನ್ನು ಜೋಡಿಸುತ್ತದೆ.
פִּיךָ שָׁלַחְתָּ בְרָעָה וּלְשׁוֹנְךָ תַּצְמִיד מִרְמָֽה׃
20 ನೀವು ಕುಳಿತುಕೊಂಡು ನಿಮ್ಮ ಸಹೋದರರಿಗೆ ವಿರೋಧವಾಗಿ ಸುಳ್ಳಾಡುತ್ತೀರಿ. ನಿಮ್ಮ ಒಡಹುಟ್ಟಿದವರ ಮೇಲೆ ಚಾಡಿ ಹೇಳುತ್ತೀರಿ.
תֵּשֵׁב בְּאָחִיךָ תְדַבֵּר בְּבֶֽן־אִמְּךָ תִּתֶּן־דֹּֽפִי׃
21 ಇವುಗಳನ್ನೆಲ್ಲಾ ನೀವು ಮಾಡಿದ್ದೀರಿ, ಆದರೂ ನಾನು ಮೌನವಾಗಿದ್ದೆನು. ಆದ್ದರಿಂದ ನಾನೂ ಸಹ ನಿಮ್ಮ ಹಾಗೆ ಒಬ್ಬನೆಂದು ನೀವು ನೆನಸಿಕೊಂಡಿದ್ದೀರಿ. ಆದರೆ ಈಗ ನಾನು ನಿಮ್ಮನ್ನು ಗದರಿಸಿ ನಿಮ್ಮ ಕಣ್ಣು ಮುಂದೆಯೇ ನಿಮ್ಮ ಅಪರಾಧ ಪ್ರಕಟಿಸುವೆನು.
אֵלֶּה עָשִׂיתָ ׀ וְֽהֶחֱרַשְׁתִּי דִּמִּיתָ הֱיֽוֹת־אֶהְיֶה כָמוֹךָ אוֹכִיחֲךָ וְאֶעֶרְכָה לְעֵינֶֽיךָ׃
22 “ದೇವರನ್ನು ಮರೆತು ಬಿಡುವವರೇ, ಇದನ್ನು ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ. ಇಲ್ಲವಾದರೆ ಎಚ್ಚರಿಕೆಯಾಗಿರಿ. ನನ್ನ ಕೈಯಿಂದ ಬಿಡಿಸುವವರು ಯಾರೂ ಇರುವುದಿಲ್ಲವೆಂಬುದನ್ನು ಗ್ರಹಿಸಿಕೊಳ್ಳಿರಿ.
בִּינוּ־נָא זֹאת שֹׁכְחֵי אֱלוֹהַּ פֶּן־אֶטְרֹף וְאֵין מַצִּֽיל׃
23 ಯಾರು ಧನ್ಯವಾದದ ಬಲಿಯನ್ನು ಅರ್ಪಿಸುವರೋ ಅವರೇ ನನ್ನನ್ನು ಘನಪಡಿಸುವರು. ತಮ್ಮ ನಡವಳಿಕೆಯನ್ನು ಕ್ರಮಪಡಿಸಿಕೊಳ್ಳುವವರಿಗೆ ನನ್ನ ರಕ್ಷಣೆಯನ್ನು ತೋರಿಸುವೆನು.”
זֹבֵחַ תּוֹדָה יְֽכַבְּדָנְנִי וְשָׂם דֶּרֶךְ אַרְאֶנּוּ בְּיֵשַׁע אֱלֹהִֽים׃

< ಕೀರ್ತನೆಗಳು 50 >