< ಕೀರ್ತನೆಗಳು 46 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರ ಸಂಯೋಜನೆ. ಅಲಾಮೊತ್ ರಾಗವನ್ನು ಆಧಾರಿಸಿದ ಒಂದು ಗೀತೆ. ದೇವರು ನಮ್ಮ ಆಶ್ರಯವೂ ಬಲವೂ ಆಗಿದ್ದಾರೆ; ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕರಾಗಿದ್ದಾರೆ.
In finem, filiis Core pro arcanis, Psalmus. Deus noster refugium, et virtus: adiutor in tribulationibus, quæ invenerunt nos nimis.
2 ಆದ್ದರಿಂದ ಭೂಮಿಯು ಕಂಪಿಸಿದರೂ ಬೆಟ್ಟಗಳು ಸಮುದ್ರದಲ್ಲಿ ಮುಳುಗಿದರೂ,
Propterea non timebimus dum turbabitur terra: et transferentur montes in cor maris.
3 ಅದರ ಸಮುದ್ರವು ಘೋಷಿಸಿ ನೊರೆಕಾರಿದರೂ, ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು.
Sonuerunt, et turbatæ sunt aquæ eorum: conturbati sunt montes in fortitudine eius.
4 ಒಂದು ನದಿ ಇದೆ; ಅದರ ಕಾಲುವೆಗಳು ದೇವರು ವಾಸಿಸುವ ಮಹೋನ್ನತ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ.
Fluminis impetus lætificat civitatem Dei: sanctificavit tabernaculum suum Altissimus.
5 ದೇವರು ಅದರ ಮಧ್ಯದಲ್ಲಿ ಇದ್ದಾರೆ, ಅದು ಕದಲದು; ದೇವರು ಉದಯಕಾಲದಲ್ಲಿ ಅದಕ್ಕೆ ಸಹಾಯ ಮಾಡುವರು.
Deus, in medio eius, non commovebitur: adiuvabit eam Deus mane diluculo.
6 ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ. ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.
Conturbatæ sunt gentes, et inclinata sunt regna: dedit vocem suam, mota est terra.
7 ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ. ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.
Dominus virtutum nobiscum: susceptor noster Deus Iacob.
8 ಬನ್ನಿರಿ, ಯೆಹೋವ ದೇವರ ಕಾರ್ಯಗಳನ್ನು ನೋಡಿರಿ. ಅವರು ಭೂಮಿಯಲ್ಲಿ ಎಂಥಾ ಅತಿಶಯಗಳನ್ನು ಉಂಟುಮಾಡಿದ್ದಾರೆ.
Venite, et videte opera Domini, quæ posuit prodigia super terram:
9 ದೇವರು ಯುದ್ಧಗಳನ್ನು ಭೂಮಿಯ ಅಂತ್ಯದವರೆಗೆ ನಿಲ್ಲಿಸುತ್ತಾರೆ. ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ. ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.
auferens bella usque ad finem terræ. Arcum conteret, et confringet arma: et scuta comburet igni:
10 “ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
Vacate, et videte quoniam ego sum Deus: exaltabor in gentibus, et exaltabor in terra.
11 ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ; ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.
Dominus virtutum nobiscum: susceptor noster Deus Iacob.

< ಕೀರ್ತನೆಗಳು 46 >