< ಕೀರ್ತನೆಗಳು 45 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ಕೋರಹೀಯನ ಪುತ್ರರ ಸಂಯೋಜನೆ. ಒಂದು ಮಸ್ಕಿಲ್. ಒಂದು ಮದುವೆಯ ಹಾಡು. ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
Teèe iz srca mojega rijeè dobra; rekoh: djelo je moje za cara; jezik je moj trska hitroga pisara.
2 ನೀವು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರರಾಗಿದ್ದೀರಿ. ನಿಮ್ಮ ತುಟಿಗಳಲ್ಲಿ ಕೃಪೆಯ ಅಭಿಷೇಕವಿದೆ; ಆದ್ದರಿಂದ ದೇವರು ಎಂದೆಂದಿಗೂ ನಿಮ್ಮನ್ನು ಆಶೀರ್ವದಿಸಿದ್ದಾರೆ.
Ti si najljepši izmeðu sinova ljudskih, blagodat teèe iz usta tvojih, jer te je blagoslovio Bog dovijeka.
3 ಪರಾಕ್ರಮಶಾಲಿಯೇ, ನಿಮ್ಮ ಖಡ್ಗವನ್ನು ಸೊಂಟಕ್ಕೆ ಬಿಗಿದುಕೊಳ್ಳಿರಿ. ನಿಮ್ಮ ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಳ್ಳಿರಿ.
Pripaši, junaèe, uz bedru svoju maè svoj, èast svoju i krasotu svoju.
4 ನೀವು ಸತ್ಯತೆ ದೀನತ್ವ ಹಾಗು ನೀತಿಗೋಸ್ಕರ ನಿಮ್ಮ ಘನತೆಯಿಂದ ಜಯದ ಸವಾರಿ ಮಾಡಿರಿ. ನಿಮ್ಮ ಬಲಗೈ ಮಹಾಕೃತ್ಯಗಳನ್ನು ಪ್ರಕಾಶಪಡಿಸಲಿ.
I tako okiæen pohitaj, sjedi na kola za istinu i krotku pravdu, i desnica æe tvoja pokazati èudesa.
5 ನಿಮ್ಮ ಹದವಾದ ಬಾಣಗಳು ರಾಜದ್ರೋಹಿಗಳನ್ನು ಇರಿಯಲಿ. ಜನಾಂಗಗಳು ನಿಮ್ಮ ಪಾದಕ್ಕೆ ಬೀಳಲಿ.
Oštre su strijele tvoje; narodi æe pasti pod vlast tvoju; prostrijeliæe srca neprijatelja carevijeh.
6 ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನ್ಯಾಯದಂಡವೇ ನಿಮ್ಮ ರಾಜದಂಡವಾಗಿದೆ.
Prijesto je tvoj, Bože, vjeèan i nepokolebljiv; skiptar je carstva tvojega skiptar pravice.
7 ನೀವು ನೀತಿಯನ್ನು ಪ್ರೀತಿಸುತ್ತೀರಿ, ಅನೀತಿಯನ್ನು ದ್ವೇಷಿಸುತ್ತೀರಿ. ಆದ್ದರಿಂದ ದೇವರೇ, ನಿಮ್ಮ ದೇವರು, ನಿಮ್ಮ ಸಂಗಡಿಗರಿಗಿಂತ ನಿಮ್ಮನ್ನು ಉನ್ನತಗೊಳಿಸಿ ಆನಂದ ತೈಲದಿಂದ ಅಭಿಷೇಕಿಸಿದ್ದಾರೆ.
Ljubiš pravdu i mrziš na bezakonje; toga radi pomaza te, Bože, Bog tvoj uljem radosti više nego drugove tvoje.
8 ನಿಮ್ಮ ವಸ್ತ್ರಗಳೆಲ್ಲಾ ರಸಗಂಧವೂ ಅಗರೂ ಚಂದನ ಇವುಗಳ ಸುವಾಸನೆ ಬೀರುತ್ತದೆ. ದಂತದ ಅರಮನೆಯೊಳಗಿಂದ ಉನ್ನತ ವಾದ್ಯಗಳು ನಿಮ್ಮನ್ನು ಆನಂದಗೊಳಿಸುವುದು.
Sve haljine tvoje mirišu smirnom, alojem i kasijom. Koji žive u dvorima od Minijske slonove kosti, oni te vesele.
9 ರಾಜ ಪುತ್ರಿಯರು ನಿಮ್ಮ ಗೌರವ ಸ್ತ್ರೀಯರಲ್ಲಿ ಇದ್ದಾರೆ. ನಿಮ್ಮ ಬಲಗಡೆ ರಾಣಿಯು ಓಫೀರ್ ಬಂಗಾರವನ್ನು ಧರಿಸಿದ್ದಾಳೆ.
Carske kæeri dvore te; s desne ti strane stoji carica u Ofirskom zlatu.
10 ಕೇಳು ಮಗಳೇ, ಇದನ್ನು ಆಲೋಚಿಸಿ, ಕಿವಿಗೊಡು. ನಿಮ್ಮ ಜನರನ್ನೂ, ನಿಮ್ಮ ತಂದೆಯ ಮನೆಯನ್ನೂ ಮರೆತುಬಿಡು.
Èuj, kæeri, pogledaj i obrati k meni uho svoje, zaboravi narod svoj i dom oca svojega.
11 ನಿನ್ನ ಸೌಂದರ್ಯವನ್ನು ಮಹಾರಾಜರು ಮೆಚ್ಚಲಿ, ಅವರೇ ನಿನ್ನ ಒಡೆಯ ಅವರನ್ನು ಗೌರವಿಸು.
I caru æe omiljeti ljepota tvoja; jer je on Gospod tvoj, i njemu se pokloni.
12 ಟೈರಿನ ಮಗಳು ಕಾಣಿಕೆಯೊಂದಿಗೆ ಬರುವಳು; ಐಶ್ವರ್ಯವಂತರು ನಿನ್ನನ್ನು ವರಿಸಲು ಹುಡುಕಿ ಬರುವರು.
Kæi Tirova doæi æe s darovima, najbogatiji u narodu tebe æe moliti.
13 ಅರಸನ ಮಗಳು ತನ್ನ ಅಂತಃಪುರದಲ್ಲಿ ಪೂರ್ಣ ವೈಭವದಿಂದ ಇದ್ದಾಳೆ. ಅವಳ ವಸ್ತ್ರವು ಚಿನ್ನದಿಂದ ನೇಯ್ದಿದೆ.
Sva je ukrašena kæi careva iznutra, haljina joj je zlatom iskiæena.
14 ಕಸೂತಿ ಉಡುಪುಗಳಲ್ಲಿ ಮಹಾರಾಜರ ಬಳಿಗೆ ಆಕೆಯು ಹೊರಡುತ್ತಾಳೆ, ಅವಳ ಸಂಗಡ ಸಖಿಯರಾದ ಕನ್ಯೆಯರು ಸಹ ಹೊರಡುವರು.
U vezenoj haljini vode je k caru; za njom vode k tebi djevojke, druge njezine.
15 ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ಆಕೆಯನ್ನು ತರುತ್ತಿದ್ದಾರೆ. ಹೀಗೆ ಅವರು ರಾಜಭವನದೊಳಗೆ ಪ್ರವೇಶಿಸುವರು.
Vode ih veselo i radosno, ulaze u dvor carev.
16 ನಿಮ್ಮ ಪಿತೃಗಳ ಸ್ಥಳಗಳನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವರು. ಮಹಾರಾಜರು ಅವರನ್ನು ಭೂಮಿಯ ದೇಶದಲ್ಲೆಲ್ಲಾ ರಾಜಪುತ್ರರಾಗಿ ಇರಿಸುವರು.
Mjesto otaca tvojih biæe sinovi tvoji, postaviæeš ih knezovima po svoj zemlji.
17 ತಲತಲಾಂತರವೂ ನಿಮ್ಮ ಹೆಸರನ್ನು ನಾನು ಸ್ಮರಿಸುವಂತೆ ಮಾಡುವೆನು. ಆದ್ದರಿಂದ ಜನರು ಯುಗಯುಗಾಂತರವೂ ನಿಮ್ಮನ್ನು ಹೊಗಳುವರು.
Uèiniæu da se ne zaboravlja ime tvoje od koljena na koljeno; po tom æe te slaviti narodi vavijek vijeka.