< ಕೀರ್ತನೆಗಳು 39 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದೂತೂನನಿಗಾಗಿ, ದಾವೀದನ ಕೀರ್ತನೆ. “ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು, ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು. ದುಷ್ಟರು ನನ್ನ ಮುಂದೆ ಇರುವಾಗ ನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,” ಎಂದು ತೀರ್ಮಾನಿಸಿಕೊಂಡೆನು.
For the choirmaster. For Jeduthun. A Psalm of David. I said, “I will watch my ways so that I will not sin with my tongue; I will guard my mouth with a muzzle as long as the wicked are present.”
2 ಆದ್ದರಿಂದ ನಾನು ಮೌನವಾಗಿದ್ದೆನು. ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು. ಆದರೆ ನನ್ನ ವ್ಯಥೆಯು ಅಧಿಕವಾಯಿತು.
I was speechless and still; I remained silent, even from speaking good, and my sorrow was stirred.
3 ನನ್ನ ಹೃದಯವು ಸಂತಾಪದಿಂದ ಕಾವೇರಿತು. ನಾನು ಧ್ಯಾನವು ಬೆಂಕಿಯಂತೆ ಉರಿಯಿತು. ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:
My heart grew hot within me; as I mused, the fire burned. Then I spoke with my tongue:
4 “ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ, ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ.
“Show me, O LORD, my end and the measure of my days. Let me know how fleeting my life is.
5 ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ. ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ; ಪ್ರತಿ ಮನುಷ್ಯನ ಜೀವನ ಬರೀ ಉಸಿರೇ.
You, indeed, have made my days as handbreadths, and my lifetime as nothing before You. Truly each man at his best exists as but a breath.
6 “ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ; ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ; ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು.
Surely every man goes about like a phantom; surely he bustles in vain; he heaps up riches not knowing who will haul them away.
7 “ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು? ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ.
And now, O Lord, for what do I wait? My hope is in You.
8 ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ; ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ.
Deliver me from all my transgressions; do not make me the reproach of fools.
9 ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ; ಇದನ್ನು ಮಾಡಿದವರು ನೀವೇ.
I have become mute; I do not open my mouth because of what You have done.
10 ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ; ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ.
Remove Your scourge from me; I am perishing by the force of Your hand.
11 ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗ ಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ. ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ.
You discipline and correct a man for his iniquity, consuming like a moth what he holds dear; surely each man is but a vapor.
12 “ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಗೆ ಕಿವಿಗೊಡಿರಿ; ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ; ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ; ನಾನೂ ಪ್ರವಾಸಿಯಾಗಿದ್ದೇನೆ.
Hear my prayer, O LORD, and give ear to my cry for help; do not be deaf to my weeping. For I am a foreigner dwelling with You, a stranger like all my fathers.
13 ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”
Turn Your gaze away from me, that I may again be cheered before I depart and am no more.”

< ಕೀರ್ತನೆಗಳು 39 >