< ಕೀರ್ತನೆಗಳು 35 >

1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ.
Господе! Буди супарник супарницима мојим; удри оне који ударају на ме.
2 ಗುರಾಣಿಯನ್ನೂ ಖಡ್ಗವನ್ನೂ ಹಿಡಿದುಕೊಂಡು ನನ್ನ ಸಹಾಯಕ್ಕೆ ಎದ್ದು ಬನ್ನಿರಿ.
Узми оружје и штит, и дигни се мени у помоћ.
3 ಬರ್ಜಿಯನ್ನೂ ಭಲ್ಲೆಯನ್ನೂ ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿರಿ. “ನಾನೇ ನಿಮ್ಮ ರಕ್ಷಣೆ” ಎಂದು ನನಗೆ ಹೇಳಿರಿ.
Потегни копље, и пресеци пут онима који ме гоне, реци души мојој: Ја сам спасење твоје.
4 ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
Нека се постиде и посраме који траже душу моју; нека се одбију натраг и постиде који ми зло хоће.
5 ಅವರು ಗಾಳಿಗೆ ಹಾರುವ ಹೊಟ್ಟಿನ ಹಾಗೆ ಆಗಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
Нека буду као прах пред ветром, и анђео Господњи нека их прогони.
6 ಅಂಥವರ ಮಾರ್ಗವು ಕತ್ತಲೆಯೂ ಜಾರುವಿಕೆಯೂ ಆಗಿರಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
Нека буде пут њихов таман и клизав, и анђео Господњи нека их тера.
7 ಏಕೆಂದರೆ ಕಾರಣವಿಲ್ಲದೆ ತಮ್ಮ ಬಲೆಯನ್ನು ನನಗೆ ಒಡ್ಡಿದ್ದಾರೆ; ಕಾರಣವಿಲ್ಲದೆ ನನಗೆ ಗುಂಡಿಯನ್ನು ಅಗೆದಿದ್ದಾರೆ.
Јер низашта застреше мрежом јаму за мене, низашта ископаше јаму души мојој.
8 ನಾಶವು ಅವರಿಗೆ ಅನಿರೀಕ್ಷಿತವಾಗಿ ಬರಲಿ; ಅವರು ಅಡಗಿಸಿಟ್ಟ ಬಲೆಯು ಅವರನ್ನೇ ಹಿಡಿಯಲಿ; ವಿನಾಶನಕ್ಕಾಗಿ ಅವರು ಗುಂಡಿಯಲ್ಲಿ ಬೀಳಲಿ.
Нека дође на њега погибао ненадна, и мрежа коју је наместио нека улови њега, нека он у њу падне на погибао.
9 ಆಗ ನನ್ನ ಪ್ರಾಣವು ಯೆಹೋವ ದೇವರಲ್ಲಿ ಉಲ್ಲಾಸಗೊಂಡು, ದೇವರ ರಕ್ಷಣೆಯಲ್ಲಿ ಸಂತೋಷಿಸುವುದು.
А душа ће се моја радовати о Господу, и веселиће се за помоћ Његову.
10 ಯೆಹೋವ ದೇವರೇ, “ನಿಮ್ಮ ಹಾಗೆ ಯಾರು ಇದ್ದಾರೆ? ಬಡವನನ್ನು ಅವನಿಗಿಂತ ಬಲಿಷ್ಠನಿಂದ ಕಾಪಾಡುತ್ತೀರಿ ದರಿದ್ರನನ್ನೂ, ಕೊರತೆಯುಳ್ಳವನನ್ನೂ ಸುಲಿದುಕೊಳ್ಳುವವನಿಂದ ಬಿಡಿಸುತ್ತೀರಿ,” ಎಂದು ನನ್ನ ಪೂರ್ಣ ಪ್ರಾಣವೇ ಹೇಳುವುದು.
Све ће кости моје рећи: Господе! Ко је као Ти, који избављаш страдалца од оног који му досађује, и ништега и убогога од оног који га упропашћује?
11 ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ.
Усташе на ме лажни сведоци; шта не знам, за оно ме питају.
12 ನನ್ನ ಉಪಕಾರಕ್ಕೆ ಬದಲಾಗಿ ನನಗೆ ಕೇಡನ್ನು ಮಾಡಿ ನನ್ನನ್ನು ದುಃಖದಲ್ಲಿರುವವರಂತೆ ಬಿಟ್ಟುಬಿಟ್ಟಿದ್ದರೆ
Плаћају ми зло за добро, и сиротовање души мојој.
13 ನಾನಾದರೋ ಅವರು ಅಸ್ವಸ್ಥರಾದಾಗ ಗೋಣಿತಟ್ಟು ಹೊದ್ದುಕೊಂಡು ಉಪವಾಸದಿಂದ ತಗ್ಗಿಸಿಕೊಂಡೆನು; ನನ್ನ ಪ್ರಾರ್ಥನೆಗಳಿಗೆ ಉತ್ತರ ದೊರೆಯಲಿಲ್ಲ.
Ја се у болести њиховој облачих у врећу, мучих постом душу своју, и молитва се моја враћаше у прсима мојим.
14 ಆದುದರಿಂದ ಸ್ವಸ್ಥರಾದವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಎಂದು ಭಾವಿಸಿಕೊಂಡು, ನನ್ನ ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವನಾಗಿ ತಲೆಬಾಗಿ ಅಳುತ್ತಿದ್ದೆನು.
Као пријатељ, као брат поступах; бејах сетан и с обореном главом као онај који за матером жали.
15 ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ.
А они се радују кад се ја спотакнем, и купе се, купе се на ме, задају ране, не знам зашто, чупају и не престају.
16 ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ.
С неваљалим и подругљивим беспосличарима шкргућу на ме зубима својим.
17 ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ.
Господе! Хоћеш ли дуго гледати? Отми душу моју од нападања њиховог, од ових лавова јединицу моју.
18 ಆಗ ನಾನು ದೊಡ್ಡ ಸಭೆಗಳಲ್ಲಿ ನಿಮ್ಮನ್ನು ಕೊಂಡಾಡುವೆನು; ಬಹುಜನರಲ್ಲಿ ನಿಮ್ಮನ್ನು ಸ್ತುತಿಸುವೆನು.
Признаћу Те у сабору великом, усред многог народа хвалићу Те.
19 ನಿಷ್ಕಾರಣವಾಗಿರುವ ನನ್ನ ಶತ್ರುಗಳು ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು ಕಣ್ಣು ಸನ್ನೆ ಮಾಡದೆ ಇರಲಿ.
Да ми се не би светили који ми злобе неправедно, и намигивали очима који мрзе на ме низашта.
20 ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರಾಗಿ ಬಾಳುವವರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.
Јер они не говоре о миру, него на мирне на земљи измишљају лажне ствари.
21 ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.
Разваљују на ме уста своја, и говоре: Добро! Добро! Види око наше.
22 ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; ನನಗೆ ದೂರವಾಗಿರಲೂ ಬೇಡಿರಿ.
Видиш, Господе! Немој ћутати; Господе! Немој одступити од мене.
23 ನನ್ನ ದೇವರೇ, ನನ್ನ ಯೆಹೋವ ದೇವರೇ, ನನ್ನ ನ್ಯಾಯವನ್ನು ನಿರ್ಣಯಿಸಿರಿ, ನನ್ನ ವ್ಯಾಜ್ಯದ ಪರವಾಗಿ ಎದ್ದೇಳಿರಿ.
Пробуди се, устани на суд мој, Боже мој и Господе, и на парницу моју.
24 ಯೆಹೋವ ದೇವರೇ, ನನ್ನ ದೇವರೇ, ನಿಮ್ಮ ನೀತಿಯ ಪ್ರಕಾರ ನನಗೆ ನ್ಯಾಯತೀರಿಸಿರಿ; ಅವರು ನನ್ನ ವಿರುದ್ಧ ಸಂತೋಷಪಡದೆ ಇರಲಿ.
Суди ми по правди својој, Господе, Боже мој, да ми се не свете.
25 ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.
Не дај да говоре у срцу свом: Добро! То смо хтели! Не дај да говоре: Прождресмо га.
26 ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊಂದಲಿ.
Нек се постиде и посраме сви који се радују злу мом, нек се обуку у стид и у срам који се размећу нада мном.
27 ನನ್ನ ನೀತಿಯಲ್ಲಿ ಸಂತೋಷಪಡುವವರು ಉತ್ಸಾಹಧ್ವನಿ ಮಾಡಿ, ಆನಂದಪಡಲಿ; “ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ.
Нека се радују и веселе који ми желе правду, и говоре једнако: Велик Господ, који жели мира слузи свом!
28 ಆಗ ನನ್ನ ನಾಲಿಗೆಯು ನಿಮ್ಮ ನೀತಿಯನ್ನೂ ದಿನವೆಲ್ಲಾ ನಿಮ್ಮ ಸ್ತೋತ್ರವನ್ನೂ ವರ್ಣಿಸುವುದು.
И мој ће језик казивати правду Твоју, и хвалу Теби сваки дан.

< ಕೀರ್ತನೆಗಳು 35 >