< ಕೀರ್ತನೆಗಳು 33 >

1 ನೀತಿವಂತರೇ, ಯೆಹೋವ ದೇವರಿಗಾಗಿ ಸಂತೋಷದಿಂದ ಹಾಡಿರಿ; ಯಥಾರ್ಥರು ಅವರನ್ನು ಕೊಂಡಾಡುವುದು ಯೋಗ್ಯವಾಗಿದೆ.
רַנְּנוּ צַדִּיקִים בַּֽיהֹוָה לַיְשָׁרִים נָאוָה תְהִלָּֽה׃
2 ಯೆಹೋವ ದೇವರನ್ನು ಕಿನ್ನರಿಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಅವರನ್ನು ಕೀರ್ತಿಸಿರಿ.
הוֹדוּ לַיהֹוָה בְּכִנּוֹר בְּנֵבֶל עָשׂוֹר זַמְּרוּ־לֽוֹ׃
3 ದೇವರಿಗೆ ಹೊಸಹಾಡನ್ನು ಹಾಡಿರಿ. ದೊಡ್ಡ ಶಬ್ದದಿಂದ ಇಂಪಾಗಿ ಹಾಡಿರಿ.
שִֽׁירוּ־לוֹ שִׁיר חָדָשׁ הֵיטִיבוּ נַגֵּן בִּתְרוּעָֽה׃
4 ಏಕೆಂದರೆ ಯೆಹೋವ ದೇವರ ವಾಕ್ಯವು ಯಥಾರ್ಥವೂ ಸತ್ಯವೂ ಆಗಿರುತ್ತವೆ. ಅವರ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಂಬಿಗಸ್ತರಾಗಿರುತ್ತಾರೆ.
כִּֽי־יָשָׁר דְּבַר־יְהֹוָה וְכׇל־מַעֲשֵׂהוּ בֶּאֱמוּנָֽה׃
5 ಅವರು ನೀತಿಯನ್ನೂ, ನ್ಯಾಯವನ್ನೂ ಪ್ರೀತಿಸುತ್ತಾರೆ; ಭೂಲೋಕವೆಲ್ಲಾ ಯೆಹೋವ ದೇವರ ಒಡಂಬಡಿಕೆಯ ಪ್ರೀತಿಯಿಂದ ತುಂಬಿದೆ.
אֹהֵב צְדָקָה וּמִשְׁפָּט חֶסֶד יְהֹוָה מָלְאָה הָאָֽרֶץ׃
6 ಯೆಹೋವ ದೇವರ ವಾಕ್ಯದಿಂದ ಆಕಾಶವೂ, ಅವರ ಬಾಯಿಯ ಉಸಿರಿನಿಂದ ನಕ್ಷತ್ರ ಮಂಡಲವೂ ಉಂಟಾದವು.
בִּדְבַר יְהֹוָה שָׁמַיִם נַעֲשׂוּ וּבְרוּחַ פִּיו כׇּל־צְבָאָֽם׃
7 ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ; ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.
כֹּנֵס כַּנֵּד מֵי הַיָּם נֹתֵן בְּאוֹצָרוֹת תְּהוֹמֽוֹת׃
8 ಭೂಲೋಕವೆಲ್ಲಾ ಯೆಹೋವ ದೇವರಿಗೆ ಭಯಪಡಲಿ; ಭೂಲೋಕ ನಿವಾಸಿಗಳೆಲ್ಲರೂ ಅವರಿಗೆ ಭಯಭಕ್ತಿಯಿಂದಿರಲಿ.
יִֽירְאוּ מֵיְהֹוָה כׇּל־הָאָרֶץ מִמֶּנּוּ יָגוּרוּ כׇּל־יֹשְׁבֵי תֵבֵֽל׃
9 ಏಕೆಂದರೆ ಅವರು ಹೇಳಿದ ಮಾತ್ರಕ್ಕೆ ಸಮಸ್ತವೂ ಸೃಷ್ಟಿಯಾಯಿತು; ಅವರು ಆಜ್ಞಾಪಿಸಲು ಭೂಲೋಕವು ಸ್ಥಿರವಾಯಿತು.
כִּי הוּא אָמַר וַיֶּהִי הֽוּא־צִוָּה וַֽיַּעֲמֹֽד׃
10 ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.
יְֽהֹוָה הֵפִיר עֲצַת־גּוֹיִם הֵנִיא מַחְשְׁבוֹת עַמִּֽים׃
11 ಆದರೆ ಯೆಹೋವ ದೇವರ ಆಲೋಚನೆಗಳು ಎಂದೆಂದಿಗೂ ಅವರ ಹೃದಯದ ಉದ್ದೇಶಗಳು ತಲತಲಾಂತರಕ್ಕೂ ನಿಲ್ಲುತ್ತವೆ.
עֲצַת יְהֹוָה לְעוֹלָם תַּעֲמֹד מַחְשְׁבוֹת לִבּוֹ לְדֹר וָדֹֽר׃
12 ಯೆಹೋವ ದೇವರು ಯಾರ ದೇವರಾಗಿದ್ದಾರೋ, ಅಂಥ ಭಾಗ್ಯವಂತರು. ದೇವರು ತಮಗಾಗಿ ಆಯ್ದುಕೊಂಡ ಜನರೂ ಭಾಗ್ಯವಂತರು.
אַשְׁרֵי הַגּוֹי אֲשֶׁר־יְהֹוָה אֱלֹהָיו הָעָם ׀ בָּחַר לְנַחֲלָה לֽוֹ׃
13 ಪರಲೋಕದಿಂದ ಯೆಹೋವ ದೇವರು ದೃಷ್ಟಿಸಿ, ಮಾನವರೆಲ್ಲರನ್ನೂ ನೋಡುತ್ತಾರೆ.
מִשָּׁמַיִם הִבִּיט יְהֹוָה רָאָה אֶֽת־כׇּל־בְּנֵי הָאָדָֽם׃
14 ತಮ್ಮ ನಿವಾಸ ಸ್ಥಳದಿಂದ ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.
מִֽמְּכוֹן־שִׁבְתּוֹ הִשְׁגִּיחַ אֶל כׇּל־יֹשְׁבֵי הָאָֽרֶץ׃
15 ಎಲ್ಲರ ಹೃದಯಗಳನ್ನು ರೂಪಿಸುವವರು ದೇವರೇ, ಜನರು ಮಾಡುವ ಕೆಲಸಗಳನ್ನೆಲ್ಲಾ ಗಮನಿಸುವವರೂ ಅವರೇ.
הַיֹּצֵר יַחַד לִבָּם הַמֵּבִין אֶל־כׇּל־מַעֲשֵׂיהֶֽם׃
16 ಅಧಿಕ ಸೈನ್ಯದಿಂದ ಅರಸನು ಜಯಹೊಂದುವುದಿಲ್ಲ; ಪರಾಕ್ರಮಶಾಲಿಯು ಅಧಿಕ ಶಕ್ತಿಯಿಂದ ಬಿಡುಗಡೆಯಾಗುವುದಿಲ್ಲ.
אֵֽין־הַמֶּלֶךְ נוֹשָׁע בְּרׇב־חָיִל גִּבּוֹר לֹא־יִנָּצֵל בְּרׇב־כֹּֽחַ׃
17 ಬಿಡುಗಡೆಗೆ ಕುದುರೆಯ ಬಲ ವ್ಯರ್ಥವಾಗಿದೆ; ಅದಕ್ಕೆ ಮಹಾಶಕ್ತಿ ಇದ್ದರೂ ಅದು ರಕ್ಷಿಸಲಾರದು.
שֶׁקֶר הַסּוּס לִתְשׁוּעָה וּבְרֹב חֵילוֹ לֹא יְמַלֵּֽט׃
18 ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ, ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.
הִנֵּה עֵין יְהֹוָה אֶל־יְרֵאָיו לַֽמְיַחֲלִים לְחַסְדּֽוֹ׃
19 ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ, ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.
לְהַצִּיל מִמָּוֶת נַפְשָׁם וּלְחַיּוֹתָם בָּרָעָֽב׃
20 ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ; ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.
נַפְשֵׁנוּ חִכְּתָה לַֽיהֹוָה עֶזְרֵנוּ וּמָגִנֵּנוּ הֽוּא׃
21 ದೇವರಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಅವರ ಪರಿಶುದ್ಧ ಹೆಸರಿನಲ್ಲಿ ಭರವಸೆ ಇಟ್ಟಿದ್ದೇವೆ.
כִּי־בוֹ יִשְׂמַח לִבֵּנוּ כִּי בְשֵׁם קׇדְשׁוֹ בָטָֽחְנוּ׃
22 ನಾವು ನಿಮ್ಮನ್ನು ನಿರೀಕ್ಷಿಸುವ ಪ್ರಕಾರ, ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನಮ್ಮ ಮೇಲೆ ಇರಲಿ.
יְהִי־חַסְדְּךָ יְהֹוָה עָלֵינוּ כַּאֲשֶׁר יִחַלְנוּ לָֽךְ׃

< ಕೀರ್ತನೆಗಳು 33 >