< ಕೀರ್ತನೆಗಳು 21 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮ ಬಲದಲ್ಲಿ ಅರಸನು ಆನಂದಿಸುತ್ತಾನೆ; ನೀವು ಆತನಿಗೆ ಕೊಡುವ ಜಯಗಳಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುತ್ತಾನೆ!
Господе! С Твоје се силе весели цар; и како му је велика радост што Ти помажеш!
2 ಅರಸನ ಹೃದಯದ ಆಶೆಯನ್ನು ನೀವು ಈಡೇರಿಸಿದ್ದೀರಿ; ಆತನ ತುಟಿಗಳ ಬಿನ್ನಹವನ್ನು ಹಿಂದಿಟ್ಟುಕೊಳ್ಳಲಿಲ್ಲ.
Шта му је срце желело, дао си му, и молитве уста његових ниси одбио.
3 ನೀವು ಉತ್ತಮ ಆಶೀರ್ವಾದಗಳಿಂದ ಅರಸನನ್ನು ಸ್ವಾಗತಿಸಿದ್ದೀರಿ; ಚೊಕ್ಕ ಬಂಗಾರದ ಕಿರೀಟವನ್ನು ಆತನ ತಲೆಯ ಮೇಲಿಟ್ಟಿದ್ದೀರಿ.
Јер си га дочекао благословима милосним, метнуо си му на главу венац од драгог камења.
4 ಜೀವವನ್ನು ಅರಸನು ನಿಮ್ಮಿಂದ ಬೇಡಲು, ನೀವು ಆತನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟಿದ್ದೀರಿ.
Молио Те је за живот и дао си му да му се продуже дани довека.
5 ನೀವು ಕೊಟ್ಟ ಜಯಗಳ ಮೂಲಕ ಅರಸನ ಪ್ರಭಾವ ಹೆಚ್ಚಾಗಿದೆ; ಗೌರವವನ್ನೂ ಘನತೆಯನ್ನೂ ಆತನ ಮೇಲೆ ಇಟ್ಟಿರುತ್ತೀರಿ.
Велика је слава његова Твојом помоћу; славу си и красоту метнуо на њ.
6 ನೀವು ನಿಶ್ಚಯವಾಗಿ ಅರಸನಿಗೆ ನಿತ್ಯ ಆಶೀರ್ವಾದ ದಯಪಾಲಿಸಿದ್ದೀರಿ; ನಿಮ್ಮ ಸನ್ನಿಧಿಯಲ್ಲಿ ಆತನು ಅಧಿಕ ಆನಂದಪಡುವಂತೆ ಮಾಡಿದ್ದೀರಿ.
Дао си му благослове довека, развеселио си га радошћу лица свог.
7 ಏಕೆಂದರೆ ಅರಸನು ಯೆಹೋವ ದೇವರಲ್ಲಿ ಭರವಸೆ ಇಡುತ್ತಾನೆ; ಮಹೋನ್ನತರ ಒಡಂಬಡಿಕೆಯ ಪ್ರೀತಿಯಿಂದ ಅರಸನು ಕದಲದೆ ಇರುವನು.
Јер се цар узда у Господа и у милост Вишњег; и не колеба се.
8 ನಿಮ್ಮ ಹಸ್ತವು ನಿಮ್ಮ ಶತ್ರುಗಳನ್ನೆಲ್ಲಾ ವಶಪಡಿಸಿಕೊಳ್ಳುವುದು. ನಿಮ್ಮ ಬಲಗೈ ನಿಮ್ಮ ವೈರಿಗಳನ್ನು ಸಿಕ್ಕಿಸುವುದು.
Наћи ће рука Твоја све непријатеље Твоје, наћи ће десница Твоја оне који мрзе на Тебе.
9 ನೀವು ಬರುವ ಕಾಲದಲ್ಲಿ ಅವರನ್ನು ಅಗ್ನಿಕುಂಡದಂತೆ ದಹಿಸಿಬಿಡುವಿರಿ. ಯೆಹೋವ ದೇವರು ತಮ್ಮ ಬೇಸರದಿಂದ ಅವರನ್ನು ದಂಡಿಸಿಬಿಡುವರು; ಬೆಂಕಿಯು ಅವರನ್ನು ಭಸ್ಮ ಮಾಡುವುದು.
Учинићеш их као пећ зажарену, кад се разгневиш; гнев ће их Господњи прогутати, и огањ ће их прождрети.
10 ಅವರ ವಂಶವನ್ನು ಭೂಲೋಕದೊಳಗಿಂದಲೂ ಅವರ ಸಂತತಿಯನ್ನು ಮಾನವರೊಳಗಿಂದಲೂ ಉಳಿಯದಿರಲಿ.
Род њихов истребићеш са земље, и семе њихово између синова човечијих;
11 ಅವರು ನಿಮಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು, ಅವರು ಕುಯುಕ್ತಿಯನ್ನು ಕಲ್ಪಿಸಿದರೂ ಅದು ಕೈಗೂಡದಿರಲಿ.
Јер подигоше на Тебе зло, смислише и не могоше извршити.
12 ನಿಮ್ಮ ಬಿಲ್ಲನ್ನು ಅವರಿಗೆ ವಿರೋಧವಾಗಿ ಎತ್ತುವಾಗ ಅವರು ನಿಮಗೆ ಬೆನ್ನುಮಾಡಿ ಓಡಿಹೋಗಲಿ.
Јер ћеш их метнути за белегу, из лукова својих пустићеш стреле у лице њихово.
13 ಯೆಹೋವ ದೇವರೇ, ನಿಮ್ಮ ಬಲದಲ್ಲಿ ಉನ್ನತರಾಗಿದ್ದೀರಿ, ನಾವು ನಿಮ್ಮ ಪರಾಕ್ರಮವನ್ನು ಹಾಡಿ ಕೀರ್ತಿಸುವೆವು.
Подигни се Господе, силом својом; ми ћемо певати и славити јакост Твоју.