< ಕೀರ್ತನೆಗಳು 20 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ; ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.
For the choirmaster. A Psalm of David. May the LORD answer you in the day of trouble; may the name of the God of Jacob protect you.
2 ದೇವರು ಪರಿಶುದ್ಧ ಸ್ಥಳದೊಳಗಿಂದ ನಿಮಗೆ ಸಹಾಯ ಕಳುಹಿಸಲಿ; ಅವರು ಚೀಯೋನಿನಿಂದ ನಿಮಗೆ ಆಧಾರ ನೀಡಲಿ.
May He send you help from the sanctuary and sustain you from Zion.
3 ನಿಮ್ಮ ಯಜ್ಞಾರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿಕೊಂಡು, ನಿಮ್ಮ ದಹನಬಲಿಗಳನ್ನು ಸ್ವೀಕರಿಸಲಿ.
May He remember all your gifts and look favorably on your burnt offerings.
4 ದೇವರು ನಿಮ್ಮ ಹೃದಯದ ಬಯಕೆಯನ್ನು ನಿಮಗೆ ದಯಪಾಲಿಸಲಿ; ನಿಮ್ಮ ಎಲ್ಲಾ ಯೋಜನೆಗಳಲ್ಲಿಯೂ ಯಶಸ್ಸನ್ನು ನೀಡಲಿ.
May He give you the desires of your heart and make all your plans succeed.
5 ನಾವು ದೇವರ ಜಯದಲ್ಲಿ ಆನಂದ ಘೋಷಮಾಡಿ, ನಮ್ಮ ದೇವರ ಹೆಸರಿನಲ್ಲಿಯೇ ನಾವು ನಮ್ಮ ಧ್ವಜಗಳನ್ನು ಎತ್ತುವೆವು. ಯೆಹೋವ ದೇವರು ನಿಮ್ಮ ಬಿನ್ನಹಗಳನ್ನೆಲ್ಲಾ ಪೂರೈಸಲಿ.
May we shout for joy at your victory and raise a banner in the name of our God. May the LORD grant all your petitions.
6 ಈಗ ನಾನು ಇದನ್ನು ಬಲ್ಲೆನು: ಯೆಹೋವ ದೇವರು ತಮ್ಮ ಅಭಿಷಿಕ್ತನಿಗೆ ಜಯ ನೀಡುವರು. ತಮ್ಮ ಜಯದ ಬಲಗೈಯ ಶಕ್ತಿಯಿಂದಲೂ ತಮ್ಮ ಪರಿಶುದ್ಧ ಪರಲೋಕದಿಂದಲೂ ಅವನಿಗೆ ಉತ್ತರಕೊಡುವರು.
Now I know that the LORD saves His anointed; He answers him from His holy heaven with the saving power of His right hand.
7 ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ; ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.
Some trust in chariots and others in horses, but we trust in the name of the LORD our God.
8 ಅವರು ಬಗ್ಗಿ ಬೀಳುತ್ತಾರೆ, ನಾವಾದರೋ ಎದ್ದು ಸ್ಥಿರವಾಗಿ ನಿಲ್ಲುವೆವು.
They collapse and fall, but we rise up and stand firm.
9 ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ! ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!
O LORD, save the king. Answer us on the day we call.