< ಕೀರ್ತನೆಗಳು 146 >

1 ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಯೆಹೋವ ದೇವರನ್ನು ಸ್ತುತಿಸು.
הַֽלְלוּ־יָהּ הַֽלְלִי נַפְשִׁי אֶת־יְהֹוָֽה׃
2 ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.
אֲהַלְלָה יְהֹוָה בְּחַיָּי אֲזַמְּרָה לֵאלֹהַי בְּעוֹדִֽי׃
3 ಅಧಿಪತಿಗಳಲ್ಲಿಯೂ ರಕ್ಷಿಸಲಾಗದ ಮಾನವರಲ್ಲಿಯೂ ಭರವಸವಿಡಬೇಡಿರಿ.
אַל־תִּבְטְחוּ בִנְדִיבִים בְּבֶן־אָדָם ׀ שֶׁאֵין לוֹ תְשׁוּעָֽה׃
4 ಅವರ ಶ್ವಾಸವು ಹೋಗಲು ಮಣ್ಣಿಗೆ ಸೇರುತ್ತಾರೆ, ಅದೇ ದಿವಸದಲ್ಲಿ ಅವರ ಆಲೋಚನೆಗಳೆಲ್ಲಾ ನಾಶವಾಗುತ್ತವೆ.
תֵּצֵא רוּחוֹ יָשֻׁב לְאַדְמָתוֹ בַּיּוֹם הַהוּא אָבְדוּ עֶשְׁתֹּֽנֹתָֽיו׃
5 ಯಾಕೋಬನ ದೇವರನ್ನು ತಮ್ಮ ಸಹಾಯಕರಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಯೆಹೋವ ದೇವರ ಮೇಲೆ ನಿರೀಕ್ಷೆ ಇಡುವನು.
אַשְׁרֵי שֶׁאֵל יַעֲקֹב בְּעֶזְרוֹ שִׂבְרוֹ עַל־יְהֹוָה אֱלֹהָֽיו׃
6 ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದ ದೇವರೇ ಎಂದೆಂದಿಗೂ ನಂಬಿಗಸ್ತರು.
עֹשֶׂה ׀ שָׁמַיִם וָאָרֶץ אֶת־הַיָּם וְאֶת־כׇּל־אֲשֶׁר־בָּם הַשֹּׁמֵר אֱמֶת לְעוֹלָֽם׃
7 ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ, ಹಸಿದವರಿಗೆ ಆಹಾರವನ್ನು ಕೊಡುತ್ತಾರೆ. ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ.
עֹשֶׂה מִשְׁפָּט ׀ לָעֲשׁוּקִים נֹתֵן לֶחֶם לָרְעֵבִים יְהֹוָה מַתִּיר אֲסוּרִֽים׃
8 ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ. ಅವರು ದೀನರನ್ನು ಎತ್ತುತ್ತಾರೆ. ನೀತಿವಂತರನ್ನು ಪ್ರೀತಿಸುತ್ತಾರೆ.
יְהֹוָה ׀ פֹּקֵחַ עִוְרִים יְהֹוָה זֹקֵף כְּפוּפִים יְהֹוָה אֹהֵב צַדִּיקִֽים׃
9 ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ. ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ. ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ.
יְהֹוָה ׀ שֹׁמֵר אֶת־גֵּרִים יָתוֹם וְאַלְמָנָה יְעוֹדֵד וְדֶרֶךְ רְשָׁעִים יְעַוֵּֽת׃
10 ಚೀಯೋನೇ, ನಿಮ್ಮ ದೇವರಾದ ಯೆಹೋವ ದೇವರು ತಲತಲಾಂತರಕ್ಕೂ, ಸರ್ವ ಸಂತತಿಗಳವರೆಗೂ ಆಳಿಕೆ ಮಾಡುತ್ತಾರೆ. ಯೆಹೋವ ದೇವರಿಗೆ ಸ್ತೋತ್ರ.
יִמְלֹךְ יְהֹוָה ׀ לְעוֹלָם אֱלֹהַיִךְ צִיּוֹן לְדֹר וָדֹר הַֽלְלוּ־יָֽהּ׃

< ಕೀರ್ತನೆಗಳು 146 >