< ಕೀರ್ತನೆಗಳು 138 >

1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿಮ್ಮನ್ನು ಸ್ತುತಿಸುವೆನು.
לדוד אודך בכל לבי נגד אלהים אזמרך׃
2 ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಅಡ್ಡಬಿದ್ದು, ನಿಮ್ಮ ಒಡಂಬಡಿಕೆಯ ಪ್ರೀತಿ, ನಿಮ್ಮ ಸತ್ಯತೆಯ ನಿಮಿತ್ತ ನಿಮ್ಮ ಹೆಸರನ್ನು ಕೊಂಡಾಡುವೆನು; ನೀವು ನಿಮ್ಮ ವಾಕ್ಯವನ್ನು ನಿಮ್ಮ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀರಿ.
אשתחוה אל היכל קדשך ואודה את שמך על חסדך ועל אמתך כי הגדלת על כל שמך אמרתך׃
3 ನಾನು ಕರೆದಾಗ ನೀವು ನನಗೆ ಉತ್ತರಕೊಟ್ಟಿರುವಿರಿ. ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು, ನನ್ನನ್ನು ಬಲಪಡಿಸಿದ್ದೀರಿ.
ביום קראתי ותענני תרהבני בנפשי עז׃
4 ಯೆಹೋವ ದೇವರೇ, ನಿಮ್ಮ ತೀರ್ಪುಗಳನ್ನು ಭೂಮಿಯ ಅರಸರೆಲ್ಲರೂ ಕೇಳುವಾಗ, ನಿಮ್ಮನ್ನು ಕೊಂಡಾಡಲಿ.
יודוך יהוה כל מלכי ארץ כי שמעו אמרי פיך׃
5 ಹೌದು, ಅವರು ಯೆಹೋವ ದೇವರ ಮಾರ್ಗಗಳ ಯೆಹೋವ ದೇವರ ಮಹಿಮೆಯು ಮಹೋನ್ನತವಾಗಿದೆ.
וישירו בדרכי יהוה כי גדול כבוד יהוה׃
6 ಯೆಹೋವ ದೇವರು ಉನ್ನತರಾಗಿದ್ದರೂ, ದೀನನನ್ನು ಗಮನಿಸುತ್ತಾರೆ; ಆದರೆ ಗರ್ವಿಷ್ಠನನ್ನು ದೂರದಿಂದ ತಿಳಿದುಕೊಳ್ಳುತ್ತಾರೆ.
כי רם יהוה ושפל יראה וגבה ממרחק יידע׃
7 ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ, ನೀವು ನನ್ನನ್ನು ಬದುಕಿಸಿ, ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿಮ್ಮ ಕೈಯನ್ನು ಚಾಚಿದ್ದೀರಿ; ನಿಮ್ಮ ಬಲಗೈಯಿಂದ ನನ್ನನ್ನು ರಕ್ಷಿಸಿದ್ದೀರಿ.
אם אלך בקרב צרה תחיני על אף איבי תשלח ידך ותושיעני ימינך׃
8 ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.
יהוה יגמר בעדי יהוה חסדך לעולם מעשי ידיך אל תרף׃

< ಕೀರ್ತನೆಗಳು 138 >