< ಕೀರ್ತನೆಗಳು 136 >
1 ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು;
Halleluja! Looft Jahweh, want Hij is goed: Zijn genade duurt eeuwig!
2 ದೇವಾಧಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
Looft den God der goden: Zijn genade duurt eeuwig!
3 ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
Looft den Heer der heren: Zijn genade duurt eeuwig!
4 ಅವರೊಬ್ಬರೇ ಮಹಾ ಅದ್ಭುತಗಳನ್ನು ಮಾಡುತ್ತಾರೆ;
Die grote wonderen doet, Hij alleen: Zijn genade duurt eeuwig!
5 ತಮ್ಮ ಜ್ಞಾನದಿಂದ ಪರಲೋಕಗಳನ್ನು ನಿರ್ಮಿಸಿದರು;
Die met wijsheid de hemelen schiep: Zijn genade duurt eeuwig!
6 ನೀರಿನ ಮೇಲೆ ಭೂಮಿಯನ್ನು ವಿಸ್ತರಿಸಿದರು;
De aarde op de wateren legde: Zijn genade duurt eeuwig!
7 ದೊಡ್ಡ ಬೆಳಕುಗಳನ್ನು ನಿರ್ಮಿಸಿದರು;
De grote lichten heeft gemaakt: Zijn genade duurt eeuwig!
8 ಸೂರ್ಯನು ಹಗಲನ್ನಾಳುವಂತೆ ಮಾಡಿದರು;
De zon, om over de dag te heersen: Zijn genade duurt eeuwig!
9 ರಾತ್ರಿಯನ್ನಾಳಲು ಚಂದ್ರನನ್ನೂ, ನಕ್ಷತ್ರಗಳನ್ನೂ ಇಟ್ಟರು;
Maan en sterren, om te heersen over de nacht: Zijn genade duurt eeuwig!
10 ಈಜಿಪ್ಟಿನವರ ಚೊಚ್ಚಲ ಮಕ್ಕಳನ್ನು ದಂಡಿಸಿದರು;
Die Egypte in zijn eerstgeborenen sloeg: Zijn genade duurt eeuwig!
11 ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ;
En Israël uit zijn midden voerde: Zijn genade duurt eeuwig!
12 ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ ಅವರನ್ನು ಹೊರತಂದರು;
Met sterke hand, en vaste arm: Zijn genade duurt eeuwig!
13 ಕೆಂಪು ಸಮುದ್ರವನ್ನು ವಿಭಾಗಿಸಿದರು;
Die de Rode Zee in tweeën kliefde: Zijn genade duurt eeuwig!
14 ಇಸ್ರಾಯೇಲನ್ನು ಅದರ ನಡುವೆ ದಾಟಿಸಿದರು;
Israël erdoor deed gaan: Zijn genade duurt eeuwig!
15 ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿದರು;
Maar Farao in de Rode Zee heeft gestort met zijn heir: Zijn genade duurt eeuwig!
16 ತಮ್ಮ ಜನರನ್ನು ಮರುಭೂಮಿಯಲ್ಲಿ ನಡೆಸಿದರು;
Die zijn volk door de woestijn heeft geleid: Zijn genade duurt eeuwig!
17 ದೊಡ್ಡ ಅರಸರನ್ನು ದಂಡಿಸಿದರು;
Machtige vorsten versloeg: Zijn genade duurt eeuwig!
18 ಶ್ರೇಷ್ಠ ಅರಸರನ್ನು ಸಹ ದಂಡಿಸಿದರು;
Beroemde koningen doodde: Zijn genade duurt eeuwig!
19 ಅಮೋರಿಯರ ಅರಸನಾದ ಸೀಹೋನನು ದಂಡನೆಹೊಂದಿದನು;
Sichon, den vorst der Amorieten: Zijn genade duurt eeuwig!
20 ಬಾಷಾನಿನ ಅರಸನಾದ ಓಗನು ಸಂಹಾರವಾದ ಮತ್ತೊಬ್ಬನು;
Og, den koning van Basjan: Zijn genade duurt eeuwig! En alle vorsten van Kanaän: Zijn genade duurt eeuwig!
21 ಅವರ ದೇಶವನ್ನು ಬಾಧ್ಯತೆಯಾಗಿ ದೇವರು ಕೊಟ್ಟರು;
Die hun land ten erfdeel gaf: Zijn genade duurt eeuwig!
22 ತಮ್ಮ ಸೇವಕ ಇಸ್ರಾಯೇಲನಿಗೆ ಅದು ಸೊತ್ತಾಯಿತು;
Tot bezit aan Israël; zijn dienaar: Zijn genade duurt eeuwig!
23 ನಾವು ಹೀನ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನೆನಪಿಸಿಕೊಂಡರು;
Die in onze vernedering ons gedacht: Zijn genade duurt eeuwig!
24 ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು;
En ons van onzen vijand verloste: Zijn genade duurt eeuwig!
25 ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತಾರೆ;
Die voedsel geeft aan al wat leeft: Zijn genade duurt eeuwig!
26 ಪರಲೋಕದ ದೇವರನ್ನು ಕೊಂಡಾಡಿರಿ;
Looft den God der hemelen: Zijn genade duurt eeuwig!