< ಕೀರ್ತನೆಗಳು 131 >

1 ದಾವೀದನ ಯಾತ್ರಾ ಗೀತೆ. ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.
שִׁיר הַֽמַּעֲלוֹת לְדָוִד יְהֹוָה ׀ לֹא־גָבַהּ לִבִּי וְלֹא־רָמוּ עֵינַי וְלֹֽא־הִלַּכְתִּי ׀ בִּגְדֹלוֹת וּבְנִפְלָאוֹת מִמֶּֽנִּי׃
2 ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆ ನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ. ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ.
אִם־לֹא שִׁוִּיתִי ׀ וְדוֹמַמְתִּי נַפְשִׁי כְּגָמֻל עֲלֵי אִמּוֹ כַּגָּמֻל עָלַי נַפְשִֽׁי׃
3 ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು. ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.
יַחֵל יִשְׂרָאֵל אֶל־יְהֹוָה מֵעַתָּה וְעַד־עוֹלָֽם׃

< ಕೀರ್ತನೆಗಳು 131 >