< ಕೀರ್ತನೆಗಳು 126 >

1 ಯಾತ್ರಾ ಗೀತೆ. ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡವರ ಹಾಗಿದ್ದೆವು.
ヱホバ、シオンの俘囚をかへしたまひし時 われらは夢みるもののごとくなりき
2 ಆಗ ನಮ್ಮ ಬಾಯಿ ನಗೆಯಿಂದಲೂ, ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಜನಾಂಗಗಳು, “ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
そのとき笑はわれらの口にみち歌はわれらの舌にみてり ヱホバかれらのために大なることを作たまへりといへる者もろもろの國のなかにありき
3 ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ; ಆದಕಾರಣ ಸಂತೋಷಿಸುತ್ತಾ ಇದ್ದೇವೆ.
ヱホバわれらのために大なることをなしたまひたれば我儕はたのしめり
4 ಯೆಹೋವ ದೇವರೇ, ನೆಗೆವನಲ್ಲಿರುವ ಹೊಳೆಗಳ ಹಾಗೆ ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
ヱホバよ願くはわれらの俘囚をみなみの川のごとくに歸したまへ
5 ಕಣ್ಣೀರಿನಿಂದ ಬಿತ್ತುವವರು, ಆನಂದ ಗೀತದೊಡನೆ ಕೊಯ್ಯುವರು;
涙とともに播くものは歡喜とともに穫らん
6 ಬಿತ್ತಲು ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವರು, ತಮ್ಮ ಸಿವುಡುಗಳನ್ನು ಹೊತ್ತುಕೊಂಡು ಆನಂದ ಗೀತದೊಡನೆ ತಿರುಗಿ ಬರುವರು.
その人は種をたづさへ涙をながしていでゆけど禾束をたづさへ喜びてかへりきたらん

< ಕೀರ್ತನೆಗಳು 126 >