< ಕೀರ್ತನೆಗಳು 12 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ. ಯೆಹೋವ ದೇವರೇ, ರಕ್ಷಿಸಿರಿ, ಏಕೆಂದರೆ ದೇವಭಕ್ತರು ಮುಗಿದು ಹೋಗುತ್ತಿದ್ದಾರೆ; ಜನರಲ್ಲಿ ನಂಬಿಗಸ್ತರು ಇಲ್ಲದೆ ಹೋಗುತ್ತಿದ್ದಾರೆ.
לַמְנַצֵּ֥חַ עַֽל־הַשְּׁמִינִ֗ית מִזְמֹ֥ור לְדָוִֽד׃ הֹושִׁ֣יעָה יְ֭הוָה כִּי־גָמַ֣ר חָסִ֑יד כִּי־פַ֥סּוּ אֱ֝מוּנִ֗ים מִבְּנֵ֥י אָדָֽם׃
2 ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ; ಅವರು ತಮ್ಮ ತುಟಿಯಿಂದ ಹೊಗಳಿ, ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.
שָׁ֤וְא ׀ יְֽדַבְּרוּ֮ אִ֤ישׁ אֶת־רֵ֫עֵ֥הוּ שְׂפַ֥ת חֲלָקֹ֑ות בְּלֵ֖ב וָלֵ֣ב יְדַבֵּֽרוּ׃
3 ಹೊಗಳಿಕೆಯ ಎಲ್ಲಾ ತುಟಿಗಳನ್ನೂ ಗರ್ವ ಮಾತನಾಡುವ ಎಲ್ಲಾ ನಾಲಿಗೆಯನ್ನೂ ಯೆಹೋವ ದೇವರು ಮೌನವಾಗಿರಿಸಲಿ.
יַכְרֵ֣ת יְ֭הוָה כָּל־שִׂפְתֵ֣י חֲלָקֹ֑ות לָ֝שֹׁ֗ון מְדַבֶּ֥רֶת גְּדֹלֹֽות׃
4 ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”
אֲשֶׁ֤ר אָֽמְר֨וּ ׀ לִלְשֹׁנֵ֣נוּ נַ֭גְבִּיר שְׂפָתֵ֣ינוּ אִתָּ֑נוּ מִ֖י אָדֹ֣ון לָֽנוּ׃
5 “ಬಡವರು ಹಿಂಸೆಗೆ ಒಳಗಾಗಿರುವುದರಿಂದಲೂ ಗತಿಯಿಲ್ಲದವರು ನರಳಾಡುವುದರಿಂದಲೂ ನಾನು ಈಗಲೇ ಏಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಪೀಡಿಸುವವರಿಂದ ನಾನು ಬಡವರನ್ನು ಕಾಪಾಡುವೆನು.”
מִשֹּׁ֥ד עֲנִיִּים֮ מֵאַנְקַ֪ת אֶבְיֹ֫ונִ֥ים עַתָּ֣ה אָ֭קוּם יֹאמַ֣ר יְהוָ֑ה אָשִׁ֥ית בְּ֝יֵ֗שַׁע יָפִ֥יחַֽ לֹֽו׃
6 ಯೆಹೋವ ದೇವರ ವಾಕ್ಯಗಳು ದೋಷವಿಲ್ಲದ್ದು. ಅವು ಮಣ್ಣಿನ ಕುಲುಮೆಯಲ್ಲಿ ಶುದ್ಧೀಕರಿಸಿದ ಬೆಳ್ಳಿಯಂತೆಯೂ ಏಳು ಸಾರಿ ಪುಟಕ್ಕೆ ಹಾಕಿದ ಬಂಗಾರದಂತೆಯೂ ಇವೆ.
אִֽמֲרֹ֣ות יְהוָה֮ אֲמָרֹ֪ות טְהֹ֫רֹ֥ות כֶּ֣סֶף צָ֭רוּף בַּעֲלִ֣יל לָאָ֑רֶץ מְ֝זֻקָּ֗ק שִׁבְעָתָֽיִם׃
7 ಯೆಹೋವ ದೇವರೇ, ನೀವು ಗತಿಯಿಲ್ಲದವರನ್ನು ದುಷ್ಟರಿಂದ ಯಾವಾಗಲೂ ಕಾಪಾಡಿ ಸಂರಕ್ಷಿಸುತ್ತೀರಿ,
אַתָּֽה־יְהוָ֥ה תִּשְׁמְרֵ֑ם תִּצְּרֶ֓נּוּ ׀ מִן־הַדֹּ֖ור ז֣וּ לְעֹולָֽם׃
8 ಮನುಷ್ಯರು ಅಸಹ್ಯವಾದದ್ದನ್ನು ಗೌರವಿಸುವಾಗ, ಆ ದುಷ್ಟರು ಎಲ್ಲಾ ಕಡೆಗಳಲ್ಲಿಯೂ ಸ್ವತಂತ್ರವಾಗಿ ಅಲೆದಾಡುತ್ತಿರುವರು.
סָבִ֗יב רְשָׁעִ֥ים יִתְהַלָּכ֑וּן כְּרֻ֥ם זֻ֝לּ֗וּת לִבְנֵ֥י אָדָֽם׃

< ಕೀರ್ತನೆಗಳು 12 >