< ಕೀರ್ತನೆಗಳು 114 >

1 ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ, ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ,
בצאת ישראל ממצרים בית יעקב מעם לעז
2 ಯೆಹೂದವು ದೇವರ ಪರಿಶುದ್ಧ ಸ್ಥಳವಾಯಿತು, ಇಸ್ರಾಯೇಲು ದೇವರ ರಾಜ್ಯವಾಯಿತು.
היתה יהודה לקדשו ישראל ממשלותיו
3 ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ನದಿ ಹಿಂದಿರುಗಿತು.
הים ראה וינס הירדן יסב לאחור
4 ಬೆಟ್ಟಗಳು ಟಗರುಗಳಂತೆ ಓಡಿತು, ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು.
ההרים רקדו כאילים גבעות כבני-צאן
5 ಸಮುದ್ರವೇ, ನಿನಗೆ ಏನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನ್ ನದಿಯೇ, ಏಕೆ ಹಿಂದಿರುಗುತ್ತೀ?
מה-לך הים כי תנוס הירדן תסב לאחור
6 ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ?
ההרים תרקדו כאילים גבעות כבני-צאן
7 ಯೆಹೋವ ದೇವರ ಸನ್ನಿಧಿಯಲ್ಲಿಯೂ, ಯಾಕೋಬಿನ ದೇವರ ಮುಂದೆಯೂ ಭೂಮಿಯೇ ನಡುಗು.
מלפני אדון חולי ארץ מלפני אלוה יעקב
8 ದೇವರು ಬಂಡೆಯನ್ನು ನೀರಿನ ಕೆರೆಯಾಗಿಯೂ, ಕಗ್ಗಲ್ಲನ್ನು ನೀರಿನ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ.
ההפכי הצור אגם-מים חלמיש למעינו-מים

< ಕೀರ್ತನೆಗಳು 114 >