< ಕೀರ್ತನೆಗಳು 113 >

1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಸೇವಕರೇ, ಯೆಹೋವ ದೇವರ ಹೆಸರನ್ನು ಸ್ತುತಿಸಿರಿ.
הַלְלוּ ־ יָהּ ׀ הַלְלוּ עַבְדֵי יְהֹוָה הַֽלְלוּ אֶת־שֵׁם יְהֹוָֽה׃
2 ಇಂದಿನಿಂದ ಯುಗಯುಗಕ್ಕೂ ಯೆಹೋವ ದೇವರ ಹೆಸರಿಗೆ ಸ್ತುತಿಯುಂಟಾಗಲಿ.
יְהִי שֵׁם יְהֹוָה מְבֹרָךְ מֵעַתָּה וְעַד־עוֹלָֽם׃
3 ಸೂರ್ಯೋದಯದಿಂದ ಅದರ ಅಸ್ತಮಾನದವರೆಗೂ ಯೆಹೋವ ದೇವರ ಹೆಸರು ಸ್ತುತಿಹೊಂದತಕ್ಕದ್ದು.
מִמִּזְרַח־שֶׁמֶשׁ עַד־מְבוֹאוֹ מְהֻלָּל שֵׁם יְהֹוָֽה׃
4 ಯೆಹೋವ ದೇವರು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವರು; ಅವರ ಮಹಿಮೆಯು ಆಕಾಶಗಳ ಮೇಲೆ ಮೆರೆಯುತ್ತದೆ.
רָם עַל־כׇּל־גּוֹיִם ׀ יְהֹוָה עַל הַשָּׁמַיִם כְּבוֹדֽוֹ׃
5 ನಮ್ಮ ದೇವರಾದ ಯೆಹೋವ ದೇವರ ಹಾಗೆ ಯಾರು ಇದ್ದಾರೆ? ಉನ್ನತಲೋಕದಲ್ಲಿ ಅವರು ವಾಸಿಸುತ್ತಾರೆ.
מִי כַּיהֹוָה אֱלֹהֵינוּ הַֽמַּגְבִּיהִי לָשָֽׁבֶת׃
6 ಆಕಾಶವನ್ನೂ, ಭೂಮಿಯನ್ನೂ ತಗ್ಗಿಸಿಕೊಂಡು ನೋಡುತ್ತಾರೆ.
הַֽמַּשְׁפִּילִי לִרְאוֹת בַּשָּׁמַיִם וּבָאָֽרֶץ׃
7 ಧೂಳಿನೊಳಗಿಂದ ದರಿದ್ರರನ್ನು ಎಬ್ಬಿಸುತ್ತಾರೆ, ತಿಪ್ಪೆಯೊಳಗಿಂದ ಬಡವರನ್ನು ಎತ್ತುತ್ತಾರೆ.
מְקִימִי מֵעָפָר דָּל מֵאַשְׁפֹּת יָרִים אֶבְיֽוֹן׃
8 ದೇವರು ಅವರನ್ನು ಅಧಿಪತಿಗಳ ಸಂಗಡ ಇರುವಂತೆ ಮಾಡುತ್ತಾರೆ. ತಮ್ಮ ಜನರ ಅಧಿಪತಿಗಳ ಸಂಗಡ ಕೂರಿಸುತ್ತಾರೆ.
לְהוֹשִׁיבִי עִם־נְדִיבִים עִם נְדִיבֵי עַמּֽוֹ׃
9 ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.
מֽוֹשִׁיבִי ׀ עֲקֶרֶת הַבַּיִת אֵֽם־הַבָּנִים שְׂמֵחָה הַֽלְלוּ־יָֽהּ׃

< ಕೀರ್ತನೆಗಳು 113 >