< ಕೀರ್ತನೆಗಳು 111 >

1 ಯೆಹೋವ ದೇವರನ್ನು ಸ್ತುತಿಸಿರಿ. ನಾನು ಯೆಹೋವ ದೇವರನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ, ಸಭೆಯಲ್ಲಿಯೂ ಕೊಂಡಾಡುವೆನು.
할렐루야 내가 정직한 자의 회와 공회 중에서 전심으로 여호와께 감사하리로다
2 ಯೆಹೋವ ದೇವರ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷ ಪಡುವವರೆಲ್ಲರು ಅವುಗಳನ್ನೇ ಧ್ಯಾನಿಸುತ್ತಾರೆ.
여호와의 행사가 크시니 이를 즐거워하는 자가 다 연구하는도다
3 ದೇವರ ಕೆಲಸವು ಘನತೆಯೂ, ಮಹಿಮೆಯೂ ಉಳ್ಳದ್ದು; ದೇವರ ನೀತಿಯು ಎಂದೆಂದಿಗೂ ನಿಲ್ಲುವುದು.
그 행사가 존귀하고 엄위하며 그 의가 영원히 있도다
4 ದೇವರು ತಮ್ಮ ಅದ್ಭುತಗಳ ಜ್ಞಾಪಕವನ್ನು ಉಳಿದಿರುವಂತೆ ಮಾಡಿದ್ದಾರೆ; ಯೆಹೋವ ದೇವರು ಕೃಪೆಯೂ, ಅನುಕಂಪವೂ ಉಳ್ಳವರು.
그 기이한 일을 사람으로 기억케 하셨으니 여호와는 은혜로우시고 자비하시도다
5 ಅವರು ತಮಗೆ ಭಯಪಡುವವರಿಗೆ ಆಹಾರ ಕೊಟ್ಟಿದ್ದಾರೆ; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವರು.
여호와께서 자기를 경외하는 자에게 양식을 주시며 그 언약을 영원히 기억하시리로다
6 ಜನಾಂಗಗಳ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ದೇವರು ಶಕ್ತಿಯ ಕ್ರಿಯೆಗಳನ್ನು ತಮ್ಮ ಜನರಿಗೆ ತಿಳಿಸಿದ್ದಾರೆ.
저가 자기 백성에게 열방을 기업으로 주사 그 행사의 능을 저희에게 보이셨도다
7 ದೇವರ ಕೈಕೆಲಸಗಳು ಸತ್ಯವೂ, ನ್ಯಾಯವೂ ಆಗಿವೆ; ಅವರ ಸೂತ್ರಗಳೆಲ್ಲಾ ವಿಶ್ವಾಸಕ್ಕೆ ಯೋಗ್ಯವಾದವುಗಳು.
그 손의 행사는 진실과 공의며 그 법도는 다 확실하니
8 ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ; ಅವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಒಳಗೊಂಡಿರುತ್ತದೆ.
영원 무궁히 정하신 바요 진실과 정의로 행하신 바로다
9 ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ; ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.
여호와께서 그 백성에게 구속을 베푸시며 그 언약을 영원히 세우셨으니 그 이름이 거룩하고 지존하시도다
10 ಯೆಹೋವ ದೇವರ ಭಯವು ಜ್ಞಾನದ ಮೂಲವು; ಅವರ ಸೂತ್ರಗಳನ್ನು ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು; ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.
여호와를 경외함이 곧 지혜의 근본이라 그 계명을 지키는 자는 다 좋은 지각이 있나니 여호와를 찬송함이 영원히 있으리로다

< ಕೀರ್ತನೆಗಳು 111 >