< ಕೀರ್ತನೆಗಳು 107 >
1 ಯೆಹೋವ ದೇವರನ್ನು ಕೊಂಡಾಡಿರಿ, ಅವರು ಒಳ್ಳೆಯವರು; ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.
Wysławiajcie PANA, bo [jest] dobry, bo jego miłosierdzie [trwa] na wieki.
2 ಯೆಹೋವ ದೇವರು ವಿಮೋಚಿಸಿದವರು ಹಾಗೆ ಹೇಳಲಿ; ವೈರಿಯ ಕೈಯಿಂದ ಬಿಡುಗಡೆಯಾದವರು ಆ ಕಥೆಯನ್ನು ಹೇಳಲಿ
Niech [to] mówią odkupieni przez PANA, ci, których odkupił z ręki wroga;
3 ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಸಹ ಹಾಗೆ ಹೇಳಲಿ.
I zgromadził z ziem, ze wschodu i zachodu, z północy i południa.
4 ಮರುಭೂಮಿಯಲ್ಲಿಯೂ, ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು, ವಾಸಿಸುವುದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ ಹೋದರು.
Błądzili po pustyni, po bezdrożnym pustkowiu, nie znajdując miasta, gdzie mogliby zamieszkać.
5 ಹಸಿದು, ದಾಹಗೊಂಡು ಅವರ ಪ್ರಾಣವು ಕುಗ್ಗಿಹೋಯಿತು.
[Byli] głodni i spragnieni, aż omdlewała w nich dusza.
6 ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿದರು.
A gdy zawołali do PANA w swoim utrapieniu, uwolnił ich z ucisku;
7 ಜನರು ವಾಸಿಸುವ ಪಟ್ಟಣಕ್ಕೆ ಹೋಗುವಹಾಗೆ, ಜನರನ್ನು ಸರಿಯಾದ ಹಾದಿಯಲ್ಲಿ ನಡೆಸಿದರು.
I prowadził ich prostą drogą, aby doszli do miasta, w którym mogliby zamieszkać.
8 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರ ಉಪಕಾರಮಾಡಲಿ, ಮಾನವರಿಗೆ ದೇವರು ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
Niech wysławiają PANA [za] jego miłosierdzie i cudowne dzieła [wobec] synów ludzkich;
9 ದೇವರು ದಾಹಪಟ್ಟ ಪ್ರಾಣವನ್ನು ತೃಪ್ತಿಪಡಿಸಿ, ಹಸಿದ ಪ್ರಾಣವನ್ನು ಒಳ್ಳೆಯದರಿಂದ ತುಂಬಿಸಿದ್ದಾರೆ.
Bo napoił spragnioną duszę, a głodną duszę napełnił dobrami.
10 ಕೆಲವರು ಕತ್ತಲಲ್ಲಿ ಮತ್ತು ಮರಣದ ನೆರಳಿನಲ್ಲಿ ಕುಳಿತರು, ಕೆಲವರು ಸಂಕಟದಲ್ಲಿಯೂ, ಕಬ್ಬಿಣದ ಬೇಡಿಗಳಲ್ಲಿ ಬಂಧಿತರಾಗಿ ಸೆರೆಬಿದ್ದವರು ಕೆಲವರು.
Siedzieli w ciemności i w cieniu śmierci, spętani nędzą i żelazem;
11 ಅವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತರ ಯೋಜನೆಯ ಬಗ್ಗೆ ಹೀನೈಯಿಸಿದ್ದರಿಂದ ಅವರಿಗೆ ಹಾಗಾಯಿತು.
Bo buntowali się przeciw słowom Boga i pogardzili radą Najwyższego.
12 ದೇವರು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕನಿಲ್ಲದೆ ಕೆಳಗೆ ಬಿದ್ದರು.
Dlatego upokorzył ich serce trudem, upadli, a nie było nikogo, kto by im pomógł.
13 ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
A [gdy] wołali do PANA w swoim utrapieniu, wybawił ich z ucisku;
14 ಕತ್ತಲೆಯೊಳಗಿಂದಲೂ, ಮರಣದ ನೆರಳಿನಿಂದಲೂ ದೇವರು ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟರು.
Wyprowadził ich z ciemności i z cienia śmierci, a ich pęta rozerwał.
15 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ದೇವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
Niech wysławiają PANA [za] jego miłosierdzie i za cudowne dzieła [wobec] synów ludzkich.
16 ದೇವರು ಕಂಚಿನ ಕದಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದುಬಿಟ್ಟಿದ್ದಾರೆ.
Bo skruszył bramy spiżowe i połamał żelazne rygle.
17 ಮೂಢರು ತಮ್ಮ ದ್ರೋಹದಿಂದಲೂ ಕೆಲವರು ತಮ್ಮ ಅಕ್ರಮಗಳಿಂದಲೂ ಶ್ರಮೆ ಪಡುತ್ತಾರೆ.
Głupcy z powodu swej występnej drogi i nieprawości doznają utrapień.
18 ಅವರ ಪ್ರಾಣವು ಎಲ್ಲಾ ಆಹಾರಕ್ಕೂ ಅಸಹ್ಯಪಡುವಷ್ಟು ಅಸ್ವಸ್ಥರಾಗುತ್ತಾರೆ. ಅವರು ಮರಣದ ಬಾಗಿಲುಗಳಿಗೆ ಸಮೀಪಿಸುತ್ತಾರೆ.
Ich dusza brzydzi się wszelkim pokarmem i zbliżają się do bram śmierci.
19 ಆಗ ಅವರು ಸಹ ಇಕ್ಕಟ್ಟಿನಲ್ಲಿ ಅವರು ಯೆಹೋವ ದೇವರಿಗೆ ಕೂಗಿದರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
A gdy wołają do PANA w swoim utrapieniu, wybawia ich z udręczeń.
20 ದೇವರು ತಮ್ಮ ವಾಕ್ಯವನ್ನು ಕಳುಹಿಸಿ, ಅವರನ್ನು ಸ್ವಸ್ಥಮಾಡಿದರು; ನಾಶನದಿಂದಲೂ ಅವರನ್ನು ತಪ್ಪಿಸಿದರು.
Posłał swoje słowo i uzdrowił ich, i wybawił ich z grobu.
21 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಕುಂದದ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
Niech wysławiają PANA [za] jego miłosierdzie i cudowne dzieła [wobec] synów ludzkich;
22 ಧನ್ಯವಾದ ಬಲಿಗಳನ್ನು ಅರ್ಪಿಸಿ, ದೇವರ ಕೆಲಸಗಳನ್ನು ಉತ್ಸಾಹದಿಂದ ಸಾರಲಿ.
I niech składają ofiary dziękczynienia, i głoszą z radością jego dzieła.
23 ಕೆಲವರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುತ್ತಾರೆ. ಅವರು ಜಲರಾಶಿಯಲ್ಲಿ ವ್ಯಾಪಾರ ಮಾಡುವವರು,
Ci, którzy na statkach wyruszają w morze, handlujący na wielkich wodach;
24 ಯೆಹೋವ ದೇವರ ಕೆಲಸಗಳನ್ನೂ, ಅಗಾಧ ಜಲದಲ್ಲಿ ದೇವರ ಅದ್ಭುತಗಳನ್ನೂ ಕಾಣುತ್ತಾರೆ.
Widzą dzieła PANA i jego cuda w głębinach.
25 ದೇವರು ಆಜ್ಞಾಪಿಸಿ ಬಿರುಗಾಳಿಯನ್ನು ಎಬ್ಬಿಸಿದರು; ಅದು ಅದರ ತೆರೆಗಳನ್ನು ಎಬ್ಬಿಸಿತು.
Gdy daje rozkaz, powstaje wicher i podnoszą się fale morskie.
26 ಅವರು ಆಕಾಶದವರೆಗೆ ಏರುತ್ತಾರೆ, ತಿರುಗಿ ಅಗಾಧಗಳವರೆಗೆ ಇಳಿಯುತ್ತಾರೆ; ಅಪಾಯದಲ್ಲಿ ಅವರ ಪ್ರಾಣವು ಕಳವಳದಿಂದ ಕರಗಿ ಹೋಗುತ್ತದೆ.
Oni wstępują aż [do] nieba i zstępują w głębiny, tak że ich dusza mdleje w niebezpieczeństwie.
27 ಅವರು ಅತ್ತಿತ್ತ ತೂಗಾಡಿ ಕುಡುಕರಂತೆ ಓಲಾಡುತ್ತಿದ್ದರು. ಅವರ ಜ್ಞಾನವೆಲ್ಲಾ ಮುಗಿದು ಹೋಯಿತು.
Chwieją się i zataczają jak pijany, a cała ich mądrość zanika.
28 ಆಗ ಅವರು ಸಹ ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿದನು.
Gdy wołają do PANA w swoim utrapieniu, wybawia ich z udręczeń.
29 ದೇವರು ಬಿರುಗಾಳಿಯನ್ನು ಶಾಂತ ಮಾಡಿದರು. ಅದರ ತೆರೆಗಳು ನಿಂತುಹೋದವು.
Zamienia burzę w ciszę, tak że uspokajają się jej fale.
30 ಅವು ಶಾಂತವಾದಾಗ ಜನರು ಸಂತೋಷಪಟ್ಟರು. ಹೀಗೆ ಅವರು ಅಪೇಕ್ಷಿಸಿದ ಬಂದರಿಗೆ ದೇವರು ಅವರನ್ನು ನಡೆಸಿದರು.
Wtedy oni weselą się, że ucichły; i tak przyprowadza ich do upragnionego portu.
31 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
Niech wysławiają PANA [za] jego miłosierdzie i cudowne dzieła [wobec] synów ludzkich.
32 ಜನರ ಸಭೆಯಲ್ಲಿ ದೇವರನ್ನು ಕೊಂಡಾಡಲಿ, ಹಿರಿಯರ ಸಭೆಯಲ್ಲಿ ದೇವರನ್ನು ಸ್ತುತಿಸಲಿ.
Niech go wywyższają w zgromadzeniu ludu i w radzie starszych niech go chwalą.
33 ದೇವರು ನದಿಗಳನ್ನು ಮರುಭೂಮಿಯಾಗಿ ಮಾರ್ಪಡಿಸಿದರು, ನೀರಿನ ಬುಗ್ಗೆಗಳನ್ನು ದಾಹಗೊಂಡ ಭೂಮಿಯಂತೆ ಮಾಡಿದರು.
Zamienia rzeki w pustynię, a źródła wód w suchą ziemię;
34 ದೇವರು ಫಲವುಳ್ಳ ಭೂಮಿಯನ್ನು ಬಂಜರಾಗುವಂತೆ ಮಾಡಿದರು. ಇದಕ್ಕೆಲ್ಲ ಕಾರಣ ಅದರ ನಿವಾಸಿಗಳ ಕೆಟ್ಟತನವೇ ಆಗಿತ್ತು.
Ziemię urodzajną [zamienia] w jałową z powodu niegodziwości tych, którzy w niej mieszkają.
35 ದೇವರು ಮರುಭೂಮಿಯನ್ನು ನೀರಿನ ಕೆರೆಯಾಗಿಯೂ, ಒಣ ಭೂಮಿಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸಿದರು.
Pustynię zamienia w jezioro, a suchą ziemię w źródła wód.
36 ಆದರೆ ದೇವರು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದರು; ಆ ಜನರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿದರು.
I osadza tam głodnych, aby zakładali miasta do zamieszkania;
37 ಅವರು ಹೊಲಗಳನ್ನು ಬಿತ್ತಿ, ದ್ರಾಕ್ಷಿಯ ಬಳ್ಳಿಗಳನ್ನು ನೆಟ್ಟರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
I obsiewali pole, sadzili winnice i zbierali obfity plon.
38 ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು; ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.
Błogosławi im tak, że bardzo się rozmnażają, i nie zmniejsza [liczebności] ich bydła.
39 ಆದರೆ ಜನರು ಸಂಖ್ಯೆಯಲ್ಲಿ ಕಡಿಮೆಯಾಗಿ ಚಿಂತೆ ಸಂಕಟದಿಂದ ಕುಗ್ಗಿಹೋದರು.
Ale potem maleje ich liczba i upokorzeni są uciskiem, nędzą i utrapieniem;
40 ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ, ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.
On wylewa wzgardę na władców i sprawia, że błądzą po bezdrożach pustkowia.
41 ಆದರೂ ದೇವರು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ, ಅವನ ಕುಟುಂಬಗಳನ್ನು ಮಂದೆಯ ಹಾಗೆ ಮಾಡಿದರು.
Lecz podnosi nędznego z utrapienia i rozmnaża [jego] rodzinę jak stado.
42 ನೀತಿವಂತರು ನೋಡಿ ಸಂತೋಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.
Widząc to, prawi rozweselą się, a wszelka nieprawość zamknie swe usta.
43 ಜ್ಞಾನಿಗಳು ಇವುಗಳನ್ನು ಗಮನಿಸಲಿ, ಯೆಹೋವ ದೇವರ ಪ್ರೀತಿಕೃತ್ಯಗಳನ್ನು ಗ್ರಹಿಸಿಕೊಳ್ಳಲಿ.
Kto jest tak mądry, aby tego upatrywał i rozumiał litość PANA?