< ಕೀರ್ತನೆಗಳು 100 >

1 ಕೀರ್ತನೆ. ಕೃತಜ್ಞತೆಯ ಗೀತೆ. ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ.
普世大地請向上主歡呼,
2 ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ; ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ.
要興高彩烈地事奉上主;走到上主面前,應該歡呼!
3 ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.
您們應該明認雅威就是天主,祂造成了我們,我們非祂莫屬;我們是祂的人民,是祂牧場的羊隊。
4 ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.
高唱感恩歌,邁向祂的大門,吟詠讚美詩,進入祂的庭院,向祂致謝,讚美祂的聖名。
5 ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು. ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.
因為上主良善寬仁,祂的慈愛直到永恒,祂的忠信世世常存。

< ಕೀರ್ತನೆಗಳು 100 >