< ಕೀರ್ತನೆಗಳು 1 >
1 ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಿಗಳ ಮಾರ್ಗದಲ್ಲಿ ನಿಲ್ಲದೆ, ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,
悪しき者のはかりごとに歩まず、罪びとの道に立たず、あざける者の座にすわらぬ人はさいわいである。
2 ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ, ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು.
このような人は主のおきてをよろこび、昼も夜もそのおきてを思う。
3 ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ, ಅದರ ಎಲೆ ಉದುರುವುದೇ ಇಲ್ಲ. ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು.
このような人は流れのほとりに植えられた木の時が来ると実を結び、その葉もしぼまないように、そのなすところは皆栄える。
4 ಆದರೆ ದುಷ್ಟರು ಹಾಗಲ್ಲ! ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೇ ಇದ್ದಾರೆ.
悪しき者はそうでない、風の吹き去るもみがらのようだ。
5 ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು, ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ.
それゆえ、悪しき者はさばきに耐えない。罪びとは正しい者のつどいに立つことができない。
6 ಯೆಹೋವ ದೇವರು ನೀತಿವಂತರ ಮಾರ್ಗವನ್ನು ಅರಿತಿದ್ದಾರೆ; ಆದರೆ ದುಷ್ಟರ ಮಾರ್ಗವು ನಾಶಕ್ಕೆ ನಡೆಸುವುದು.
主は正しい者の道を知られる。しかし、悪しき者の道は滅びる。