< ಜ್ಞಾನೋಕ್ತಿಗಳು 7 >
1 ಮಗನೇ, ನನ್ನ ಮಾತುಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.
১আমার পুত্র, আমার কথা সব পালন কর, আমার আদেশ সব তোমার কাছে সঞ্চয় কর।
2 ನನ್ನ ಆಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣುಗುಡ್ಡೆಯಂತೆ ನನ್ನ ಕಟ್ಟಳೆಗಳನ್ನು ಕಾಪಾಡು.
২আমার আদেশ সব পালন কর, জীবন পাবে এবং চোখের তারার মত আমার ব্যবস্থা রক্ষা কর;
3 ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿಟ್ಟುಕೋ; ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
৩তোমার আঙ্গুলে সেগুলো বেঁধে রাখ, তোমার হৃদয় ফলকে তা লিখে রাখ।
4 ಜ್ಞಾನಕ್ಕೆ, “ನೀನು ನನ್ನ ಸಹೋದರಿ,” ಎಂದೂ, ಒಳನೋಟಕ್ಕೆ, “ನನ್ನ ಬಂಧು” ಎಂದೂ ಹೇಳು.
৪প্রজ্ঞাকে বল, “তুমি আমার বোন এবং সুবিবেচনাকে তোমার সখী বল,”
5 ಅವು ವ್ಯಭಿಚಾರಿಣಿಯಿಂದಲೂ ಸವಿಮಾತನಾಡುವ ದಾರಿತಪ್ಪಿದ ಸ್ತ್ರೀಯಿಂದಲೂ ನಿನ್ನನ್ನು ಕಾಪಾಡುತ್ತವೆ.
৫তাতে তুমি পরস্ত্রী থেকে রক্ষা পাবে, ব্যাভিচারিনীর স্বছন্দ শব্দ থেকে রক্ষা পাবে।
6 ನಾನು ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ಇಣಕಿ ನೋಡಿದಾಗ,
৬আমি নিজের ঘরের জানালা থেকে জালি দিয়ে দেখছিলাম;
7 ಮುಗ್ಧರ ನಡುವೆ, ಯುವಕರ ಮಧ್ಯದಲ್ಲಿ, ತಿಳುವಳಿಕೆಯಿಲ್ಲದ ಯೌವನಸ್ಥನನ್ನು ಕಂಡೆನು.
৭নির্বোধদের মধ্যে আমার চোখ পড়ল, আমি যুবকদের মধ্যে এক জনকে দেখলাম, সে বুদ্ধিহীন যুবক।
8 ಅವನು ಅವಳ ಮೂಲೆ ಮನೆಯ ದಿಕ್ಕಿನಲ್ಲಿ ಬೀದಿಯಿಂದ ಹಾದುಹೋಗುತ್ತಿದ್ದನು.
৮সে গলিতে গেল, ঐ স্ত্রীর কোণের কাছে আসল, তার বাড়ীর পথে চলল।
9 ಸಂಜೆಯ ಮಬ್ಬಿನಲ್ಲಿ ರಾತ್ರಿಯ ಕತ್ತಲೆಯು ಕವಿಯುತ್ತಿತ್ತು.
৯তখন সন্ধ্যাবেলা, দিন শেষ হয়েছিল, রাত অন্ধকার হয়েছিল।
10 ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
১০তখন দেখ, এক স্ত্রী তার সামনে আসল, সে বেশ্যার পোশাক পরেছিল ও অভিসন্ধির হৃদয় ছিল;
11 ಅವಳು ಕೂಗಾಟದವಳು, ಹಟಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವುದೇ ಇಲ್ಲ.
১১সে ঝগড়াটে ও অবাধ্যা, তার পা ঘরে থাকে না;
12 ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ ಹೀಗೆ ಅವಳು ಮೂಲೆ ಮೂಲೆಗೂ ಹೊಂಚು ಹಾಕುತ್ತಾಳೆ.
১২সে কখনও সড়কে, কখনও রাস্তায়, কোণে কোণে অপেক্ষা করতে থাকে।
13 ಅವಳು ಆ ಯುವಕನನ್ನು ಹಿಡಿದುಕೊಂಡು ಮುದ್ದಿಟ್ಟು, ನಾಚಿಕೆಯಿಲ್ಲದೆ ಅವಳು ಹೀಗೆನ್ನುತ್ತಾಳೆ:
১৩সে তাকে ধরে চুমু খেল, নির্লজ্জ মুখে তাকে বলল,
14 “ಈ ದಿವಸ ನನ್ನ ಹರಕೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ನನ್ನ ಸಮಾಧಾನದ ಯಜ್ಞವನ್ನು ಅರ್ಪಿಸಿದ್ದೇನೆ.
১৪আমাকে মঙ্গলের জন্য বলিদান করতে হয়েছে, আজ আমি নিজের মানত পূর্ণ করেছি;
15 ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ಹುಡುಕಿ ಕಂಡುಕೊಂಡಿದ್ದೇನೆ.
১৫তাই তোমার সঙ্গে দেখা করতে বাইরে এসেছি, সযত্নে তোমার মুখ দেখতে এসেছি, তোমাকে পেয়েছি।
16 ಈಜಿಪ್ಟಿನ ನಯವಾದ ನಾರು ಮಡಿಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
১৬আমি খাটে বুটাদার চাদর পেতেছি, মিশরের সূতোর্ চিত্রবিচিত্র পর্দার কাপড় লাগিয়েছি।
17 ರಕ್ತಬೋಳ, ಅಗರು, ಲವಂಗ, ಚಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆಗೊಳಿಸಿದ್ದೇನೆ.
১৭আমি গন্ধরস, অগুরু ও দারুচিনি দিয়ে নিজের বিছানা গন্ধে ভরিয়ে দিয়েছি।
18 ಬಾ, ಬೆಳಗಿನವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಂಡು ಕಾಮ ವಿಲಾಸಗಳಿಂದ ನಾವು ಸಂತೋಷಿಸೋಣ.
১৮চল, আমরা সকাল পর্যন্ত কামরসে মত্ত হই, আমরা প্রেমের বাহুল্যে আমোদ করি।
19 ಏಕೆಂದರೆ ಯಜಮಾನನು ಮನೆಯಲ್ಲಿ ಇಲ್ಲ; ಅವನು ದೀರ್ಘ ಪ್ರಯಾಣದಲ್ಲಿದ್ದಾನೆ.
১৯কারণ কর্তা ঘরে নেই, তিনি দূরে গেছেন;
20 ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”
২০টাকার তোড়া সঙ্গে নিয়ে গেছেন, পূর্ণিমার দিন ঘরে আসবেন।
21 ಮನವೊಲಿಸುವ ಮಾತುಗಳಿಂದ ಅವಳು ಅವನನ್ನು ದಾರಿ ತಪ್ಪಿಸಿ, ಅವಳು ತನ್ನ ಮೋಹಕ ಮಾತುಗಳಿಂದ ಅವನನ್ನು ಆಕರ್ಷಿಸುತ್ತಾಳೆ.
২১অনেক মিষ্টি কথায় সে তার মন চুরি করল, ঠোটের চাটুকরিতে তাকে আকর্ষণ করল।
22 ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ, ಅಥವಾ ಜಿಂಕೆಯು ಬಲೆಗೆ ಸಿಕ್ಕಿಬೀಳುವಂತೆ,
২২তখনি সে তার পেছনে গেল, যেমন গরু মরতে যায়, যেমন শেকলে বাঁধা ব্যক্তি বকর শাস্তি পেতে যায়;
23 ಅವನು ತನ್ನ ಪ್ರಾಣವು ಅಪಾಯದಲ್ಲಿರುವುದನ್ನು ತಿಳಿಯದೆ, ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವವರೆಗೆ, ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
২৩শেষে তার যকৃত বানে বিধল; যেমন পাখি ফাঁদে পড়তে বেগে ধাবিত হয়, আর জানে না যে, তার জীবন বিপদগ্রস্ত।
24 ಆದ್ದರಿಂದ ನನ್ನ ಮಕ್ಕಳೇ, ನನಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
২৪এখন আমার পুত্ররা, আমার কথা শোন, আমার মুখের কথায় মন দাও।
25 ಅವಳ ಮಾರ್ಗಗಳಿಗೆ ನಿಮ್ಮ ಹೃದಯವು ತಿರುಗದೆ ಇರಲಿ; ತಪ್ಪಿಯೂ ಅವಳ ದಾರಿಯಲ್ಲಿ ಹೋಗಬೇಡಿರಿ.
২৫তোমার মন ওর পথে না যাক, তুমি ওর পথে যেও না।
26 ಏಕೆಂದರೆ ಅನೇಕರು ಅವಳಿಗೆ ಬಲಿಯಾಗಿ ಬಿದ್ದಿದ್ದಾರೆ. ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.
২৬কারণ সে অনেককে আঘাত করে মেরে ফেলেছে, তারা গণনা করতে পারবে না।
27 ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ. (Sheol )
২৭তার ঘর পাতালের পথ, যে পথ মৃত্যুর কক্ষে নেমে যায়। (Sheol )