< ಜ್ಞಾನೋಕ್ತಿಗಳು 5 >

1 ಮಗನೇ, ನನ್ನ ಜ್ಞಾನಕ್ಕೆ ಗಮನಕೊಡು; ನನ್ನ ಒಳನೋಟದ ಮಾತುಗಳಿಗೆ ಕಿವಿಗೊಡು.
בְּ֭נִי לְחָכְמָתִ֣י הַקְשִׁ֑יבָה לִ֝תְבוּנָתִ֗י הַט־אָזְנֶֽךָ׃
2 ಆಗ ನಿನ್ನ ವಿವೇಚನೆಯನ್ನು ಉಳಿಸಿಕೊಳ್ಳುವೆ. ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.
לִשְׁמֹ֥ר מְזִמֹּ֑ות וְ֝דַ֗עַת שְׂפָתֶ֥יךָ יִנְצֹֽרוּ׃
3 ಏಕೆಂದರೆ ಜಾರಿಣಿಯ ತುಟಿಗಳು ಜೇನುಗರೆಯುವುದು; ಅವಳ ಮಾತು ಎಣ್ಣೆಗಿಂತಲೂ ಮೃದು.
כִּ֤י נֹ֣פֶת תִּ֭טֹּפְנָה שִׂפְתֵ֣י זָרָ֑ה וְחָלָ֖ק מִשֶּׁ֣מֶן חִכָּֽהּ׃
4 ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ, ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.
וְֽ֭אַחֲרִיתָהּ מָרָ֣ה כַֽלַּעֲנָ֑ה חַ֝דָּ֗ה כְּחֶ֣רֶב פִּיֹּֽות׃
5 ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ; ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ. (Sheol h7585)
רַ֭גְלֶיהָ יֹרְדֹ֣ות מָ֑וֶת שְׁ֝אֹ֗ול צְעָדֶ֥יהָ יִתְמֹֽכוּ׃ (Sheol h7585)
6 ಜೀವಮಾರ್ಗದ ವಿಚಾರ ಅವಳಿಗಿಲ್ಲ; ಆದ್ದರಿಂದ ಅವಳ ಮಾರ್ಗಗಳು ಚಂಚಲವಾಗಿವೆ, ಅದರ ಅರಿವೂ ಅವಳಿಗಿಲ್ಲ.
אֹ֣רַח חַ֭יִּים פֶּן־תְּפַלֵּ֑ס נָע֥וּ מַ֝עְגְּלֹתֶ֗יהָ לֹ֣א תֵדֽ͏ָע׃ פ
7 ಮಕ್ಕಳಿರಾ, ನನ್ನ ಕಡೆಗೆ ಈಗ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳಿಂದ ದೂರವಾಗಬೇಡಿರಿ.
וְעַתָּ֣ה בָ֭נִים שִׁמְעוּ־לִ֑י וְאַל־תָּ֝ס֗וּרוּ מֵאִמְרֵי־פִֽי׃
8 ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು; ಅವಳ ಮನೆಯ ಬಾಗಿಲ ಹತ್ತಿರಕ್ಕೆ ಹೋಗದೆ ಇರು.
הַרְחֵ֣ק מֵעָלֶ֣יהָ דַרְכֶּ֑ךָ וְאַל־תִּ֝קְרַ֗ב אֶל־פֶּ֥תַח בֵּיתָֽהּ׃
9 ನೀನು ನಿನ್ನ ಗೌರವವನ್ನು ಬೇರೆಯವರಿಗೆ ಕಳೆಯಬೇಡ, ನಿನ್ನ ಘನತೆನ್ನು ಕ್ರೂರನಿಗೂ ಕೊಡಬೇಡ.
פֶּן־תִּתֵּ֣ן לַאֲחֵרִ֣ים הֹודֶ֑ךָ וּ֝שְׁנֹתֶ֗יךָ לְאַכְזָרִֽי׃
10 ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆ ಎಚ್ಚರಿಕೆ, ನಿನ್ನ ಪ್ರಯಾಸದ ಫಲವು ಪರರ ಮನೆ ಸೇರದಂತೆ ನೋಡಿಕೋ.
פֶּֽן־יִשְׂבְּע֣וּ זָרִ֣ים כֹּחֶ֑ךָ וַ֝עֲצָבֶ֗יךָ בְּבֵ֣ית נָכְרֽ͏ִי׃
11 ನಿನ್ನ ಜೀವನದ ಅಂತ್ಯದಲ್ಲಿ ನಿನ್ನ ದೇಹವೂ ಕ್ಷೀಣಿಸಿದಾಗ, ನೀನು ನರಳಬೇಕಾದೀತು.
וְנָהַמְתָּ֥ בְאַחֲרִיתֶ֑ךָ בִּכְלֹ֥ות בְּ֝שָׂרְךָ֗ וּשְׁאֵרֶֽךָ׃
12 ಆಗ ನೀನು, “ಶಿಸ್ತನ್ನು ನಾನು ಎಷ್ಟೋ ಹಗೆ ಮಾಡಿದೆ; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
וְֽאָמַרְתָּ֗ אֵ֭יךְ שָׂנֵ֣אתִי מוּסָ֑ר וְ֝תֹוכַ֗חַת נָאַ֥ץ לִבִּֽי׃
13 ನನ್ನ ಬೋಧಕರ ಸ್ವರಕ್ಕೆ ನಾನು ವಿಧೇಯನಾಗದೆ ಹೋದೆ. ನನ್ನ ಉಪದೇಶಕರಿಗೆ ನಾನು ಕಿವಿಗೊಡದೆ ಹೋದೆ.
וְֽלֹא־שָׁ֭מַעְתִּי בְּקֹ֣ול מֹורָ֑י וְ֝לִֽמְלַמְּדַ֗י לֹא־הִטִּ֥יתִי אָזְנִֽי׃
14 ನಾನು ದೇವರ ಸಭೆಯಲ್ಲಿ ಗಂಭೀರ ಸಮಸ್ಯೆಗೆ ಒಳಗಾದೆ,” ಎಂದು ಹೇಳುವೆ.
כִּ֭מְעַט הָיִ֣יתִי בְכָל־רָ֑ע בְּתֹ֖וךְ קָהָ֣ל וְעֵדָֽה׃
15 ನಿನ್ನ ಸ್ವಂತ ಕೊಳದ ನೀರನ್ನು ಕುಡಿ, ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.
שְׁתֵה־מַ֥יִם מִבֹּורֶ֑ךָ וְ֝נֹזְלִ֗ים מִתֹּ֥וךְ בְּאֵרֶֽךָ׃
16 ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?
יָפ֣וּצוּ מַעְיְנֹתֶ֣יךָ ח֑וּצָה בָּ֝רְחֹבֹ֗ות פַּלְגֵי־מָֽיִם׃
17 ಅವು ನಿನಗೆ ಸ್ವಂತವಾಗಿರಲಿ; ಪರರು ಭಾಗಿಗಳಾಗಿರಬಾರದು.
יִֽהְיוּ־לְךָ֥ לְבַדֶּ֑ךָ וְאֵ֖ין לְזָרִ֣ים אִתָּֽךְ׃
18 ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ; ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.
יְהִֽי־מְקֹורְךָ֥ בָר֑וּךְ וּ֝שְׂמַ֗ח מֵאֵ֥שֶׁת נְעוּרֶֽךָ׃
19 ಆಕೆಯು ಮನೋಹರವಾದ ಹರಿಣಿ, ಅಂದವಾದ ಜಿಂಕೆಯ ಹಾಗೆಯೂ; ಆಕೆಯ ಎದೆಯು ನಿನ್ನನ್ನು ಸದಾ ತೃಪ್ತಿಪಡಿಸಲಿ; ಆಕೆಯ ಪ್ರೀತಿಯಿಂದ ನೀನು ಸದಾ ಪರವಶನಾಗಿರು.
אַיֶּ֥לֶת אֲהָבִ֗ים וְֽיַעֲלַ֫ת־חֵ֥ן דַּ֭דֶּיהָ יְרַוֻּ֣ךָ בְכָל־עֵ֑ת בְּ֝אַהֲבָתָ֗הּ תִּשְׁגֶּ֥ה תָמִֽיד׃
20 ಮಗನೇ, ಬೇರೆಯವನ ಹೆಂಡತಿಗೆ ವಶವಾಗುವುದೇಕೆ? ಅನ್ಯಳ ಎದೆಯನ್ನೇಕೆ ಅಪ್ಪಿಕೊಳ್ಳುವೆ?
וְלָ֤מָּה תִשְׁגֶּ֣ה בְנִ֣י בְזָרָ֑ה וּ֝תְחַבֵּ֗ק חֵ֣ק נָכְרִיָּֽה׃
21 ನಿನ್ನ ಮಾರ್ಗಗಳು ಯೆಹೋವ ದೇವರ ಮುಂದೆಯೇ ಇವೆ. ಅವರು ನಿನ್ನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾರೆ.
כִּ֤י נֹ֨כַח ׀ עֵינֵ֣י יְ֭הוָה דַּרְכֵי־אִ֑ישׁ וְֽכָל־מַעְגְּלֹתָ֥יו מְפַלֵּֽס׃
22 ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ; ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.
עַֽוֹונֹותָ֗יו יִלְכְּדֻנֹ֥ו אֶת־הָרָשָׁ֑ע וּבְחַבְלֵ֥י חַ֝טָּאתֹ֗ו יִתָּמֵֽךְ׃
23 ಶಿಸ್ತುಪಾಲನೆಯಿಲ್ಲದೆ ಅವನು ನಾಶವಾಗುವನು; ತನ್ನ ಅತಿಮೂರ್ಖತನದಿಂದಲೇ ತಪ್ಪಿಹೋಗುವನು.
ה֗וּא יָ֭מוּת בְּאֵ֣ין מוּסָ֑ר וּבְרֹ֖ב אִוַּלְתֹּ֣ו יִשְׁגֶּֽה׃ פ

< ಜ್ಞಾನೋಕ್ತಿಗಳು 5 >