< ಜ್ಞಾನೋಕ್ತಿಗಳು 31 >

1 ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:
Àwọn ọ̀rọ̀-ìjìnlẹ̀ ti Lemueli ọba, ọ̀rọ̀ ẹ̀kọ́ tí ìyá rẹ̀ kọ́ ọ,
2 ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು! ನನ್ನ ಪ್ರಾರ್ಥನೆಗೆ ಉತ್ತರವಾದ ನನ್ನ ಮಗನೇ ಕೇಳು!
“Gbọ́ ìwọ ọmọ mi, gbọ́ ìwọ ọmọ inú mi! Gbọ́ ìwọ ọmọ ẹ̀jẹ́ mi.
3 ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು. ರಾಜರನ್ನೇ ಹಾಳುಮಾಡಬಲ್ಲ ಸ್ತ್ರೀಯರಿಗೆ ನಿನ್ನ ಹಣ ಸಮಯವನ್ನು ವ್ಯಯಮಾಡದಿರು.
Má ṣe lo agbára rẹ lórí obìnrin, okun rẹ lórí àwọn tí ó pa àwọn ọba run.
4 ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ, ದ್ರಾಕ್ಷಾರಸ ಕುಡಿಯುವದು ರಾಜರಿಗೆ ಯೋಗ್ಯವಲ್ಲ. ಮದ್ಯಪಾನ ಅಧಿಕಾರಿಗಳಿಗೆ ಯೋಗ್ಯವಲ್ಲ;
“Kì í ṣe fún àwọn ọba, ìwọ Lemueli, kì í ṣe fún ọba láti mu ọtí wáìnì, kì í ṣe fún alákòóso láti máa wá ọtí líle,
5 ಕುಡಿದರೆ ಅವರು ನಿಯಮವನ್ನು ಮರೆತು, ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ.
kí wọn má ba à mu ọtí yó kí wọn sì gbàgbé ohun tí òfin wí, kí wọn sì fi ẹ̀tọ́ àwọn tí ara ń ni dù wọ́n.
6 ನಾಶವಾಗುವವರಿಗೆ ಮದ್ಯಪಾನವಿರಲಿ. ಮನೋವ್ಯಥೆಪಡುವವರಿಗೆ ಮದ್ಯವಿರಲಿ.
Fi ọtí líle fún àwọn tí ń ṣègbé wáìnì fún àwọn tí ó wà nínú ìrora.
7 ಅವರು ಕುಡಿದು ಬಡತನವನ್ನು ಮರೆಯಲಿ. ತಮ್ಮ ಯಾತನೆಯನ್ನು ಜ್ಞಾಪಕಕ್ಕೆ ತಾರದಿರಲಿ.
Jẹ́ kí wọn mu ọtí kí wọn sì gbàgbé òsì wọn kí wọn má sì rántí òsì wọn mọ́.
8 ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು, ಅನಾಥರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಟ್ಟು ಮಾತನಾಡು.
“Sọ̀rọ̀ lórúkọ àwọn tí kò le sọ̀rọ̀ fúnra wọn fún ẹ̀tọ́ àwọn ẹni tí ń parun.
9 ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು. ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು.
Sọ̀rọ̀ kí o sì ṣe ìdájọ́ àìṣègbè jà fún ẹ̀tọ́ àwọn tálákà àti aláìní.”
10 ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು.
Ta ni ó le rí aya oníwà rere? Ó níye lórí ju iyùn lọ.
11 ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ, ಅವನಿಗೆ ಯಾವ ಆದಾಯದ ಕೊರತೆಯೂ ಇರುವುದಿಲ್ಲ.
Ọkọ rẹ̀ ní ìgbẹ́kẹ̀lé púpọ̀ nínú rẹ̀ kò sì ṣí ìwà rere tí kò pé lọ́wọ́ rẹ̀.
12 ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೆಯದನ್ನೇ ಮಾಡುವಳು.
Ire ní ó ń ṣe fún un, kì í ṣe ibi ní gbogbo ọjọ́ ayé rẹ̀.
13 ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು, ತನ್ನ ಚಟುವಟಿಕೆಯ ಕೈಗಳಿಂದ ಕೆಲಸ ಮಾಡುವಳು.
Ó sa aṣọ irun àgùntàn olówùú àti ọ̀gbọ̀ Ó sì ṣiṣẹ́ pẹ̀lú ìyárí.
14 ಆಕೆಯು ವರ್ತಕರ ಹಡಗುಗಳಂತೆ ಇರುವಳು; ದೂರದಿಂದ ಆಹಾರವನ್ನು ಆಕೆಯು ತರುವಳು.
Ó dàbí ọkọ̀ ojú omi tí àwọn oníṣòwò; ó ń gbé oúnjẹ rẹ̀ wá láti ọ̀nà jíjìn.
15 ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು; ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು, ತನ್ನ ದಾಸಿಯರಿಗೆ ದಿನದ ಕೆಲಸವನ್ನು ಹಂಚುವಳು.
Ó dìde nígbà tí òkùnkùn sì kùn; ó ṣe oúnjẹ fún ìdílé rẹ̀ àti ìpín oúnjẹ fún àwọn ìránṣẹ́bìnrin rẹ̀.
16 ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ. ತನ್ನ ಕೈಕೆಲಸದ ಆದಾಯದಿಂದ ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
Ó kíyèsi oko kan, ó sì rà á; nínú ohun tí ó ń wọlé fún un ó gbin ọgbà àjàrà rẹ̀.
17 ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ. ತನ್ನ ಶಕ್ತಿಯುತ ತೋಳುಗಳಿಂದ ಕೆಲಸ ಮಾಡುತ್ತಾಳೆ.
Ó bẹ̀rẹ̀ iṣẹ́ rẹ̀ tagbára tagbára apá rẹ̀ le koko fún iṣẹ́.
18 ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ. ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
Ó rí i pé òwò òun pé fìtílà rẹ̀ kì í sì í kú ní òru.
19 ಅವಳು ರಾಟೆಯ ಮೇಲೆ ಕೈಹಾಕಿ, ಕದಿರನ್ನು ಹಿಡಿಯುತ್ತಾಳೆ.
Ní ọwọ́ rẹ̀, ó di kẹ̀kẹ́ òwú mú ó sì na ọwọ́ rẹ̀ di ìrànwú mú.
20 ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ. ಹೌದು, ದಿಕ್ಕಿಲ್ಲದವರಿಗೆ ದಾನ ಮಾಡುತ್ತಾಳೆ.
O la ọwọ́ rẹ̀ sí àwọn tálákà ó sì na ọwọ́ rẹ̀ sí àwọn aláìní.
21 ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ. ಏಕೆಂದರೆ ಆಕೆಯ ಮನೆಯವರೆಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.
Nígbà tí òjò-dídì rọ̀, kò bẹ̀rù nítorí ìdílé rẹ̀ nítorí gbogbo wọn ni ó wọ aṣọ tí ó nípọn.
22 ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ. ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.
Ó ṣe aṣọ títẹ́ fún ibùsùn rẹ̀; ẹ̀wù dáradára àti elése àlùkò ni aṣọ rẹ̀.
23 ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ. ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು.
A bọ̀wọ̀ fún ọkọ rẹ̀ ní ẹnu ibodè ìlú níbi tí ó ń jókòó láàrín àwọn àgbàgbà ìlú.
24 ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ. ಆಕೆಯು ನಡುಕಟ್ಟುಗಳನ್ನು ತಯಾರಿಸಿ ವರ್ತಕರಿಗೆ ಒದಗಿಸುತ್ತಾಳೆ.
Ó ń ṣe àwọn aṣọ dáradára ó sì ń tà wọ́n ó sì ń kó ọjà fún àwọn oníṣòwò.
25 ಆಕೆಯ ಉಡುಪು ಬಲವೂ ಘನತೆಯೂ ಆಗಿವೆ. ಭವಿಷ್ಯತ್ತಿನ ಭಯವಿಲ್ಲದೆ ಆಕೆಯು ನಗುವಳು.
Agbára àti ọlá ni ó wò ọ́ láṣọ ó le fi ọjọ́ iwájú rẹ́rìn-ín.
26 ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ. ಆಕೆಯ ನಾಲಿಗೆಯ ಮೇಲೆ ನಂಬಿಗಸ್ತ ಶಿಕ್ಷಣ ಇದೆ.
A sọ̀rọ̀ pẹ̀lú ọgbọ́n ìkọ́ni òtítọ́ sì ń bẹ létè e rẹ̀
27 ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಸೋಮಾರಿಯಾಗಿ ಕೆಲಸಮಾಡದೆ ಆಹಾರವನ್ನು ತಿನ್ನುವುದಿಲ್ಲ.
Ó ń bojútó gbogbo ètò ilé rẹ̀ kì í sì í jẹ oúnjẹ ìmẹ́lẹ́.
28 ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು. ಆಕೆಯ ಪತಿಯು ಸಹ ಆಕೆಯನ್ನು,
Àwọn ọmọ rẹ̀ dìde wọ́n sì pè é ní alábùkún ọkọ rẹ̀ pẹ̀lú ń gbóríyìn fún un.
29 “ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು.
“Ọ̀pọ̀lọpọ̀ obìnrin ní ń ṣe nǹkan ọlọ́lá ṣùgbọ́n ìwọ ju gbogbo wọn lọ.”
30 ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ. ಆದರೆ ಯೆಹೋವ ದೇವರಿಗೆ ಭಯಪಡುವವಳೇ ಪ್ರಶಂಸನೀಯಳು.
Ojú dáradára a máa tan ni, ẹwà sì jẹ́ asán nítorí obìnrin tí ó bẹ̀rù Olúwa yẹ kí ó gba oríyìn.
31 ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ. ಪಟ್ಟಣದ ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
Sì fún un ní èrè tí ó tọ́ sí i kí o sì jẹ́ kí iṣẹ́ rẹ̀ fún un ní ìyìn ní ẹnu ibodè ìlú.

< ಜ್ಞಾನೋಕ್ತಿಗಳು 31 >