< ಜ್ಞಾನೋಕ್ತಿಗಳು 29 >

1 ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು.
যে বারবার অনুযুক্ত হয়েও ঘাড় শক্ত করে, সে হঠাৎ ভেঙে পড়বে, তার প্রতীকার হবে না।
2 ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ. ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.
ধার্ম্মিকেরা বাড়লে প্রজারা আনন্দ করে, কিন্তু দুষ্ট লোক কর্তৃত্ব পেলে প্রজারা শোকার্ত হয়।
3 ಜ್ಞಾನಪ್ರಿಯನು ತಂದೆಗೆ ಆನಂದ ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.
যে প্রজ্ঞা ভালবাসে, সে বাবার আনন্দজনক হয়; কিন্তু যে বেশ্যাতে আসক্ত হয়, তার ধন নষ্ট হবে।
4 ನ್ಯಾಯದಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ, ಆದರೆ ಲಂಚಕೋರ ಅಧಿಕಾರಿ ದೇಶವನ್ನು ಕೆಡವಿ ಹಾಕುತ್ತಾನೆ.
রাজা ন্যায় বিচার করে দেশ প্রতিষ্ঠা করেন; কিন্তু উপহার প্রিয় তা লন্ডভন্ড করে।
5 ತನ್ನ ನೆರೆಯವನನ್ನು ಸುಮ್ಮನೇ ಹೊಗಳುತ್ತಿರುವವನು, ನೆರೆಯವನ ಕಾಲಿಗೆ ಬಲೆಯನ್ನು ಒಡ್ಡುತ್ತಾನೆ.
যে ব্যক্তি নিজের প্রতিবেশীর তোষামোদ করে, সে তার পায়ের নীচে জাল পাতে।
6 ಕೆಟ್ಟವನು ತನ್ನ ಪಾಪದಿಂದಲೇ ಸಿಕ್ಕಿಹಾಕಿಕೊಳ್ಳುತ್ತಾನೆ, ಆದರೆ ನೀತಿವಂತನು ಸಂತೋಷದಿಂದ ಹಾಡಿ ಹರ್ಷಿಸುತ್ತಾನೆ.
দুর্বৃত্তের অধর্মে ফাঁদ থাকে, কিন্তু ধার্মিক আনন্দিত হয়ে গান করে।
7 ಬಡವರ ನ್ಯಾಯಕ್ಕಾಗಿ ನೀತಿವಂತನು ಚಿಂತಿಸುತ್ತಾನೆ. ಆದರೆ ದುಷ್ಟನಿಗೆ ಅಂಥಾ ಚಿಂತೆಯೇ ಇಲ್ಲ.
ধার্মিক দীনহীনদের বিচার বোঝে; দুষ্ট লোক জ্ঞান বোঝে না।
8 ಪರಿಹಾಸ್ಯಗಾರರು ಪಟ್ಟಣದಲ್ಲಿ ಗಲಾಟೆ ಎಬ್ಬಿಸುತ್ತಾರೆ. ಆದರೆ ಜ್ಞಾನಿಗಳು ಕೋಪವನ್ನು ಆರಿಸುವರು.
নিন্দাপ্রিয়েরা নগরে আগুন লাগিয়ে দেয়; কিন্তু জ্ঞানবানেরা রাগ ফিরিয়ে দেয়।
9 ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯಮಾಡುವಾಗ, ಮೂರ್ಖನು ರೇಗಿದರೂ ಅಪಹಾಸ್ಯಮಾಡಿದರೂ ಸಮಾಧಾನವೇ ಇರುವುದಿಲ್ಲ.
অজ্ঞানের সঙ্গে জ্ঞানবানের ঝগড়া হলে, সে রাগ করুক কি হাঁসুক, কিছুই শান্তি হয় না।
10 ಕೊಲೆಪಾತಕರು ಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ಆದರೆ ಯಥಾರ್ಥವಂತರನ್ನು ನಾಶಮಾಡಲು ಯತ್ನಿಸುತ್ತಾರೆ.
১০রক্তপাতকারীরা সিদ্ধ লোককে ঘৃণা করে; আর সরল লোকের প্রাণনাশের চেষ্টা করে।
11 ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು. ಆದರೆ ಜ್ಞಾನಿಯು ಕೋಪವನ್ನು ಶಾಂತಿಯಿಂದ ತಡೆಹಿಡಿಯುತ್ತಾನೆ.
১১নির্বোধ নিজের সব রাগ প্রকাশ করে, কিন্তু জ্ঞানী তা সম্বরণ করে রাগ কমায়।
12 ಒಬ್ಬ ಅಧಿಕಾರಿಯು ಸುಳ್ಳಿಗೆ ಕಿವಿಗೊಟ್ಟರೆ, ಅವನ ಸೇವಕರೆಲ್ಲರೂ ದುಷ್ಟರಾಗುತ್ತಾರೆ.
১২যে শাসনকর্ত্তা মিথ্যা কথায় কান দেয়, তার পরিচারকেরা সকলে দুষ্ট।
13 ಬಡವರಿಗೂ ದಬ್ಬಾಳಿಕೆ ನಡೆಸುವವರಿಗೂ ಒಂದು ಸಂಗತಿ ಹುದುವಾಗಿರುವುದು: ಯೆಹೋವ ದೇವರು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವರು ಎಂಬುದೇ.
১৩দরিদ্র ও উপদ্রবী এক সঙ্গে মেলে; সদাপ্রভু উভয়েরই চোখ আলোকিত করেন।
14 ಅರಸನು ಬಡವರಿಗೆ ಪಕ್ಷಪಾತವಿಲ್ಲದೆ ನ್ಯಾಯತೀರಿಸಿದರೆ, ಅವನ ಸಿಂಹಾಸನವು ಎಂದೆಂದಿಗೂ ಸ್ಥಿರಗೊಳ್ಳುವುದು.
১৪যে রাজা বিশ্বস্তভাবে দীনহীনদের বিচার করেন, তাঁর সিংহাসন চিরকাল স্থির থাকবে।
15 ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
১৫দন্ড ও তিরস্কার প্রজ্ঞা দেয়; কিন্তু অশাসিত বালক মায়ের লজ্জাজনক।
16 ದುಷ್ಟರು ವೃದ್ಧಿಯಾದಾಗ, ಪಾಪವು ವೃದ್ಧಿಯಾಗುತ್ತದೆ. ಆದರೆ ನೀತಿವಂತರು ದುಷ್ಟರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
১৬দুষ্টরা বাড়লে অধর্ম্ম বাড়ে; কিন্তু ধার্মিকরা তাদের পতন দেখবে।
17 ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು; ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.
১৭তোমার ছেলেকে শাস্তি দাও, সে তোমাকে শান্তি দেবে, সে তোমার প্রাণকে আনন্দিত করবে।
18 ದೈವ ಪ್ರಕಟನೆ ಇಲ್ಲದಿರುವಾಗ, ಜನರು ನಾಶವಾಗುತ್ತಾರೆ; ಆದರೆ ಜ್ಞಾನೋಪದೇಶವನ್ನು ಕೈಗೊಳ್ಳುವವನು ಧನ್ಯನು.
১৮দর্শনের অভাবে প্রজারা উচ্ছৃঙ্খল হয়; কিন্তু যে ব্যবস্থা মানে, সে ধন্য হয়।
19 ಮಾತಿನಿಂದ ಮಾತ್ರ ಕೆಲಸಗಾರರನ್ನು ತಿದ್ದಲು ಸಾಧ್ಯವಿಲ್ಲ; ಏಕೆಂದರೆ ಅವರು ಅರ್ಥಮಾಡಿಕೊಂಡರೂ, ಅದರಂತೆ ನಡೆಯುವುದಿಲ್ಲ.
১৯বাক্য দিয়ে দাসের শাসন হয় না, কারণ সে বুঝলেও কথা মানবে না।
20 ದುಡುಕಿ ಮಾತನಾಡುವ ವ್ಯಕ್ತಿಯನ್ನು ನೀನು ನೋಡಿದ್ದೀಯೋ? ಅಂಥವನಿಗಿಂತಲೂ ಬುದ್ಧಿಹೀನನ ವಿಷಯದಲ್ಲಿ ಹೆಚ್ಚು ನಿರೀಕ್ಷೆ ಇದೆ.
২০তুমি কি হটকারী লোককে দেখছ? তার থেকে বরং নির্বোধের বিষয়ে বেশী আশা আছে।
21 ಬಾಲ್ಯದಿಂದ ಕೆಲಸಗಾರನನ್ನು ಅನುಕೂಲವಾಗಿ ಸಾಕಿ ಬಿಟ್ಟರೆ, ತರುವಾಯ ಅವನು ಎದುರು ಬೀಳಲು ಸಾಧ್ಯ.
২১যে দাসকে ছোট বেলা থেকে সুন্দর ভাবে প্রতিপালন করে, শেষে সেই দাস তার ছেলে হয়ে ওঠে।
22 ಕೋಪಿಷ್ಟನು ಜಗಳವನ್ನೆಬ್ಬಿಸುವನು, ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ.
২২রাগী লোক ঝগড়া সৃষ্টি করে, রাগী লোক অনেক অধর্ম্ম করে।
23 ಗರ್ವವು ಮನುಷ್ಯನನ್ನು ಹೀನಸ್ಥಿತಿಗೆ ತರುವುದು; ಆದರೆ ಆತ್ಮದಲ್ಲಿ ದೀನರು ಮೆಚ್ಚಿಕೆಯನ್ನು ಪಡೆಯುವರು.
২৩মানুষের অহঙ্কার তাকে নীচে নামাবে, কিন্তু কোমল হৃদয়ের লোক সম্মান পাবে।
24 ಕಳ್ಳರ ಸಹವಾಸ ಮಾಡುವವರು ತಮಗೆ ತಾವೇ ಶತ್ರುಗಳು. ಅವರು ಆಣೆ ಇಟ್ಟರೂ ಅವರಲ್ಲಿ ಬದಲಾವಣೆ ಇರುವುದಿಲ್ಲ.
২৪চোরের অংশীদার নিজের প্রাণকে ঘৃণা করে; সে দিব্যি করাবার কথা শোনে, কিন্তু কিছু বলে না।
25 ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು; ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.
২৫লোক-ভয় ফাঁদের মত; কিন্তু যে সদাপ্রভুতে বিশ্বাস করে, সে উচ্চে স্থাপিত হবে।
26 ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ. ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.
২৬অনেকে শাসনকর্ত্তার অনুগ্রহ খোঁজে; কিন্তু মানুষের বিচার সদাপ্রভু থেকেই হয়।
27 ನೀತಿವಂತರು ಅಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ದುಷ್ಟರು ಪ್ರಾಮಾಣಿಕರನ್ನು ತಿರಸ್ಕರಿಸುತ್ತಾರೆ.
২৭অন্যায়কারী ব্যক্তি ধার্ম্মিকদের ঘৃণাস্পদ; আর সরল আচরণকারী দুষ্টের ঘৃণাস্পদ।

< ಜ್ಞಾನೋಕ್ತಿಗಳು 29 >