< ಜ್ಞಾನೋಕ್ತಿಗಳು 22 >

1 ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತಲೂ ಗೌರವದಿಂದಿರುವುದು ಉತ್ತಮ.
Heri kuchagua jina jema kuliko utajiri mwingi, kuheshimiwa ni bora kuliko fedha au dhahabu.
2 ಧನಿಕರು, ಬಡವರು ಇದನ್ನು ಸಾಮಾನ್ಯವಾಗಿ ಹೊಂದಿರುವರು: ಇವರೆಲ್ಲರನ್ನು ಸೃಷ್ಟಿಸಿದಾತ ಯೆಹೋವ ದೇವರೇ.
Tajiri na maskini wanafanana kwa hili: Bwana ni Muumba wao wote.
3 ಜಾಣನು ಕೇಡನ್ನು ಮುಂದಾಗಿ ಕಂಡು ತಾನು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾನೆ.
Mtu mwenye busara huona hatari na kujificha, bali mjinga huendelea mbele kama kipofu nayo ikamtesa.
4 ಯೆಹೋವ ದೇವರ ಭಯವೂ ದೀನತೆಯೂ ಕೊಡುವ ಪ್ರತಿಫಲ, ಐಶ್ವರ್ಯವೂ ಮಾನವೂ ಜೀವವೂ ಆಗಿದೆ.
Unyenyekevu na kumcha Bwana huleta utajiri, heshima na uzima.
5 ದುಷ್ಟರ ದಾರಿಯಲ್ಲಿ ಮುಳ್ಳುಗಳೂ, ಉರುಲುಗಳೂ ಇವೆ; ತನ್ನ ಜೀವವನ್ನು ಕಾಪಾಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
Katika mapito ya waovu kuna miiba na mitego, bali yeye ailindaye nafsi yake hukaa mbali nayo.
6 ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ.
Mfundishe mtoto njia impasayo kuiendea, naye hataiacha hata akiwa mzee.
7 ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ; ಸಾಲಗಾರನು ಸಾಲಕೊಟ್ಟವನಿಗೆ ಗುಲಾಮನು.
Matajiri huwatawala maskini naye akopaye ni mtumwa wa akopeshaye.
8 ಕೆಟ್ಟತನವನ್ನು ಬಿತ್ತುವವನು ಕೇಡನ್ನು ಕೊಯ್ಯುವನು; ಅವನ ಕೋಪದ ಬೆತ್ತವು ಮುರಿದು ಹೋಗುವುದು.
Yeye aupandaye uovu huvuna taabu, nayo fimbo ya ghadhabu yake itaangamizwa.
9 ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು, ಏಕೆಂದರೆ ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
Mtu mkarimu yeye mwenyewe atabarikiwa kwa kuwa hushiriki chakula chake na maskini.
10 ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು; ವಿವಾದವೂ ನಿಂದೆಯೂ ನಿಂತುಹೋಗುವುವು.
Mfukuze mwenye dhihaka, na mvutano utatoweka; ugomvi na matukano vitakoma.
11 ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ ಅರಸನು ಸ್ನೇಹಿತನಾಗಿರುವನು.
Yeye apendaye moyo safi na yeye ambaye maneno yake ni ya neema, mfalme atakuwa rafiki yake.
12 ಯೆಹೋವ ದೇವರ ಕಣ್ಣುಗಳು ತಿಳುವಳಿಕೆಯನ್ನು ಕಾಯುತ್ತವೆ; ಅವರು ದ್ರೋಹಿಯ ಮಾತುಗಳನ್ನು ಕೆಡವಿ ಹಾಕುತ್ತಾರೆ.
Macho ya Bwana hulinda maarifa, bali huyapinga maneno ya asiye mwaminifu.
13 ಸೋಮಾರಿಯು, “ಹೊರಗೆ ಸಿಂಹವಿದೆ! ಅದು ನನ್ನನ್ನು ಬೀದಿಗಳಲ್ಲಿ ಕೊಂದುಹಾಕುತ್ತದೆ,” ಎಂದು ಹೇಳುತ್ತಾನೆ.
Mvivu husema, “Yuko simba nje!” au, “Nitauawa katika mitaa!”
14 ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಯೆಹೋವ ದೇವರಿಗೆ ಸಿಟ್ಟನ್ನು ಎಬ್ಬಿಸುವವನು ಅದರಲ್ಲಿ ಬೀಳುವನು.
Kinywa cha mwanamke kahaba ni shimo refu; yeye aliye chini ya ghadhabu ya Bwana atatumbukia ndani yake.
15 ಮೂರ್ಖತನ ಯುವಕನ ಹೃದಯದಲ್ಲಿ ಬಂಧಿಸಲಾಗಿದೆ; ಆದರೆ ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವುದು.
Upumbavu umefungwa ndani ya moyo wa mtoto, bali fimbo ya adhabu itaufukuzia mbali naye.
16 ತನ್ನ ಸಂಪತ್ತನ್ನು ವೃದ್ಧಿಗೊಳಿಸುವುದಕ್ಕೆ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ದಾನ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
Yeye amwoneaye maskini ili kujiongezea mali, naye ampaye tajiri zawadi, wote huwa maskini.
17 ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.
Tega sikio na usikie misemo ya wenye hekima, elekeza moyo wako kwenye yale nifundishayo,
18 ಏಕೆಂದರೆ ಅವುಗಳನ್ನು ನಿನ್ನ ಹೃದಯದಲ್ಲಿ ಇಟ್ಟು ಕಾಪಾಡು, ಅವು ನಿನ್ನ ತುಟಿಗಳ ಮೇಲೆ ಸಿದ್ಧವಿದ್ದರೆ ಮೆಚ್ಚುಗೆಯಾಗಿವೆ.
kwa maana inapendeza unapoyahifadhi moyoni mwako na kuwa nayo yote tayari midomoni mwako.
19 ನಿನ್ನ ಭರವಸೆಯು ಯೆಹೋವ ದೇವರಲ್ಲಿ ಇರುವಂತೆ ಈ ದಿವಸ ನಿನಗೇ ತಿಳಿಯಪಡಿಸಿದ್ದೇನೆ.
Ili tumaini lako liwe katika Bwana, hata wewe, ninakufundisha leo.
20 ನಾನು ನಿಮಗಾಗಿ ಮೂವತ್ತು ಹೇಳಿಕೆಗಳನ್ನು ಬರೆದಿಲ್ಲವೋ? ಸಲಹೆ ಮತ್ತು ಪರಿಜ್ಞಾನದ ಹೇಳಿಕೆಗಳು,
Je, sijakuandikia misemo thelathini, misemo ya mashauri na maarifa,
21 ಪ್ರಾಮಾಣಿಕವಾಗಿರಲು ಮತ್ತು ಸತ್ಯವನ್ನು ಮಾತನಾಡಲು ನಿಮಗೆ ಕಲಿಸುವುದು, ಆದ್ದರಿಂದ ನೀವು ಸೇವೆ ಸಲ್ಲಿಸುವವರಿಗೆ ಸತ್ಯವಾದ ವರದಿಗಳನ್ನು ಹಿಂತಿರುಗಿಸುವಂತೆ ನಾನು ನಿಮಗೆ ಬರೆದಿದ್ದೇನೆ.
kukufundisha maneno ya kweli na ya kuaminika, ili uweze kutoa majibu sahihi kwake yeye aliyekutuma?
22 ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ; ನ್ಯಾಯಾಲಯದಲ್ಲಿ ದರಿದ್ರರನ್ನು ತುಳಿಯಬೇಡ.
Usiwadhulumu maskini kwa sababu ni maskini, wala kumdhulumu mhitaji mahakamani,
23 ಏಕೆಂದರೆ ಯೆಹೋವ ದೇವರು ಅವರ ವ್ಯಾಜ್ಯವನ್ನು ನಡೆಸಿ, ಸೂರೆ ಮಾಡಿದವರ ಪ್ರಾಣವನ್ನು ಸೂರೆ ಮಾಡುವರು.
kwa sababu Bwana atalichukua shauri lao naye atawateka wao waliowateka.
24 ಮುಂಗೊಪಿಯೊಂದಿಗೆ ಸ್ನೇಹ ಬೆಳೆಸಬೇಡ; ಸುಲಭವಾಗಿ ಕೋಪಗೊಳ್ಳುವವರೊಂದಿಗೆ ಸಹವಾಸ ಮಾಡಬೇಡ;
Usifanye urafiki na mtu mwenye hasira ya haraka, usishirikiane na yule aliye mwepesi kukasirika,
25 ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು, ನಿನ್ನನ್ನೇ ಉರುಲಿಗೆ ಸಿಕ್ಕಿಸಿಕೊಳ್ಳುವೆ.
la sivyo utajifunza njia zake na kujiingiza mwenyewe kwenye mtego.
26 ಬೇರೆಯವರ ಸಾಲವನ್ನು ಖಾತರಿಪಡಿಸಲೂ ಬೇರೊಬ್ಬರಿಗೆ ಭದ್ರತೆಯನ್ನು ನೀಡಲು ಒಪ್ಪಬೇಡ.
Usiwe mwenye kupana mikono katika rehani, au kuweka dhamana kwa ajili ya madeni.
27 ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?
Kama ukikosa njia ya kulipa, kitanda chako kitachukuliwa ukiwa umekilalia.
28 ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.
Usisogeze jiwe la mpaka wa zamani lililowekwa na baba zako.
29 ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆ ಸಲ್ಲಿಸುವನು.
Je, unamwona mtu stadi katika kazi yake? Atahudumu mbele ya wafalme; hatahudumu mbele ya watu duni.

< ಜ್ಞಾನೋಕ್ತಿಗಳು 22 >