< ಜ್ಞಾನೋಕ್ತಿಗಳು 11 >

1 ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ; ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.
속이는 저울은 여호와께서 미워하셔도 공평한 추는 그가 기뻐하시느니라
2 ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ಆದರೆ ದೀನತೆಯೊಂದಿಗೆ ಜ್ಞಾನ ಬರುವುದು.
교만이 오면 욕도 오거니와 겸손한 자에게는 지혜가 있느니라
3 ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡೆಸುವುದು; ಅಪನಂಬಿಗಸ್ತರ ಕಪಟತನವೇ ಅವರನ್ನು ನಾಶಪಡಿಸುವುದು.
정직한 자의 성실은 자기를 인도하거니와 사특한 자의 패역은 자기를 망케하느니라
4 ಉಗ್ರತೆಯ ದಿನದಲ್ಲಿ ಸಂಪತ್ತು ಲಾಭಕರವಾಗುವುದಿಲ್ಲ; ಆದರೆ ನೀತಿಯ ನಡತೆ ಮರಣದಿಂದ ವಿಮೋಚಿಸುವುದು.
재물은 진노하시는 날에 무익하나 의리는 죽음을 면케 하느니라
5 ನಿಷ್ಕಳಂಕರ ನೀತಿಯು ಅವರ ಮಾರ್ಗವನ್ನು ಸರಾಗ ಮಾಡುವುದು; ಆದರೆ ದುಷ್ಟರು ತಮ್ಮ ದುಷ್ಟತ್ವದಿಂದಲೇ ಬೀಳುವರು.
완전한 자는 그 의로 인하여 그 길이 곧게 되려니와 악한 자는 그 악을 인하여 넘어지리라
6 ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವುದು; ಆದರೆ ಅಪನಂಬಿಗಸ್ತರು ದುಷ್ಟ ಆಸೆಗಳಿಂದ ಸಿಕ್ಕಿಹಾಕಿಕೊಳ್ಳುತ್ತಾರೆ.
악인은 죽을 때에 그 소망이 끊어지나니 불의의 소망이 없어지느니라
7 ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವುವು; ತನ್ನ ಬಲದಿಂದ ನಿರೀಕ್ಷಿಸಿದ್ದೆಲ್ಲವೂ ಇಲ್ಲದಂತಾಗುವುದು.
의인은 환난에서 구원을 얻고 악인은 와서 그를 대신하느니라
8 ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ, ದುಷ್ಟನು ಅದರ ಸ್ಥಳದಲ್ಲಿ ಸಿಕ್ಕಿಬೀಳುವನು.
사특한 자는 입으로 그 이웃을 망하게 하여도 의인은 그 지식으로 말미암아 구원을 얻느니라
9 ಒಬ್ಬ ಭಕ್ತಿಹೀನನು ಬಾಯಿಂದ ತನ್ನ ನೆರೆಯವನನ್ನು ಹಾಳು ಮಾಡುತ್ತಾನೆ, ಆದರೆ ನೀತಿವಂತನು ತಿಳುವಳಿಕೆಯ ಮೂಲಕ ಬಿಡಿಸಲಾಗುವನು.
의인이 형통하면 성읍이 즐거워하고 악인이 패망하면 기뻐 외치느니라
10 ನೀತಿವಂತರು ಅಭಿವೃದ್ಧಿಹೊಂದಿದರೆ, ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ, ಜಯೋತ್ಸವ ಉಂಟಾಗುತ್ತದೆ.
성읍은 정직한 자의 축원을 인하여 진흥하고 악한 자의 입을 인하여 무너지느니라
11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಪ್ರಗತಿಯಾಗುತ್ತದೆ, ಆದರೆ ದುಷ್ಟರ ಬಾಯಿಂದ ಅದು ನಾಶವಾಗುತ್ತದೆ.
지혜 없는 자는 그 이웃을 멸시하나 명철한 자는 잠잠하느니라
12 ಜ್ಞಾನವಿಲ್ಲದವನು ತನ್ನ ನೆರಯವನನ್ನು ಹೀನೈಸುತ್ತಾನೆ, ಆದರೆ ತಿಳುವಳಿಕೆಯುಳ್ಳವನು ಮೌನವಾಗಿರುತ್ತಾನೆ.
두루 다니며 한담하는 자는 남의 비밀을 누설하나 마음이 신실한 자는 그런 것을 숨기느니라
13 ಚಾಡಿಕೋರನು ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ, ಆದರೆ ನಂಬಿಗಸ್ತನು ಆ ಸಂಗತಿಯನ್ನು ಮುಚ್ಚುತ್ತಾನೆ.
도략이 없으면 백성이 망하여도 모사가 많으면 평안을 누리느니라
14 ಆಲೋಚನೆ ಇಲ್ಲದೆ ಇರುವಲ್ಲಿ ಜನರು ಬೀಳುತ್ತಾರೆ, ಆದರೆ ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
타인을 위하여 보증이 되는 자는 손해를 당하여도 보증이 되기를 싫어하는 자는 평안하니라
15 ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ, ಹೊಣೆಗಾರನಾಗಿರದವನು ಸುರಕ್ಷಿತವಾಗಿರುವನು.
유덕한 여자는 존영을 얻고 근면한 남자는 재물을 얻느니라
16 ದಯೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಸಂಪಾದಿಸಿಕೊಳ್ಳುತ್ತಾಳೆ, ನಿಷ್ಕರುಣ ವ್ಯಕ್ತಿ ಸಂಪತ್ತನ್ನು ಮಾತ್ರ ಪಡೆದುಕೊಳ್ಳುತ್ತಾನೆ.
인자한 자는 자기의 영혼을 이롭게 하고 잔인한 자는 자기의 몸을 해롭게 하느니라
17 ದಯೆಯುಳ್ಳವನು ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ, ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.
악인의 삯은 허무하되 의를 뿌린 자의 상은 확실하니라
18 ದುಷ್ಟನು ಮೋಸದ ಸಂಬಳವನ್ನು ಸಂಪಾದಿಸುತ್ತಾನೆ, ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹವಾದ ಬಹುಮಾನವಿರುವುದು.
의를 굳게 지키는 자는 생명에 이르고 악을 따르는 자는 사망에 이르느니라
19 ನೀತಿವಂತನ ಮಾರ್ಗಗಳಲ್ಲಿ ಅಚಲವಾಗಿರುವವನು ಜೀವ ಹೊಂದುತ್ತಾನೆ, ಕೆಟ್ಟದ್ದನ್ನು ಬೆನ್ನಟ್ಟುವವನು ತನ್ನ ಮರಣವನ್ನು ಬೆನ್ನಟ್ಟುತ್ತಾನೆ.
마음이 패려한 자는 여호와의 미움을 받아도 행위가 온전한 자는 그의 기뻐하심을 받느니라
20 ವಕ್ರ ಹೃದಯವುಳ್ಳವರು ಯೆಹೋವ ದೇವರಿಗೆ ಅಸಹ್ಯವಾದವರು, ಆದರೆ, ಸನ್ಮಾರ್ಗದಲ್ಲಿ ಯಥಾರ್ಥವಾಗಿ ಇರುವವರಲ್ಲಿ ಅವರು ಆನಂದಿಸುತ್ತಾರೆ.
악인은 피차 손을 잡을지라도 벌을 면치 못할 것이나 의인의 자손은 구원을 얻으리라
21 ದುಷ್ಟನಿಗೆ ಶಿಕ್ಷೆ ತಪ್ಪುವುದಿಲ್ಲ; ನೀತಿವಂತರ ವಂಶವು ಬಿಡುಗಡೆ ಹೊಂದುವುದು.
아름다운 여인이 삼가지 아니하는 것은 마치 돼지 코에 금고리 같으니라
22 ಹಂದಿಯ ಮೂಗಿಗೆ ಬಂಗಾರದ ಮೂಗುತಿಯು ಹೇಗೋ, ಹಾಗೆಯೇ ವಿವೇಕವಿಲ್ಲದ ಸ್ತ್ರೀಗೆ ಸೌಂದರ್ಯವು.
의인의 소원은 오직 선하나 악인의 소망은 진노를 이루느니라
23 ನೀತಿವಂತರ ಅಪೇಕ್ಷೆಯು ಶುಭಕ್ಕಾಸ್ಪದ, ದುಷ್ಟರ ಅಪೇಕ್ಷೆಯು ತೀರ್ಪಿಗೀಡು.
흩어 구제하여도 더욱 부하게 되는 일이 있나니 과도히 아껴도 가난하게 될 뿐이니라
24 ಒಬ್ಬನು ತನ್ನ ಸಂಪತ್ತನ್ನು ಉದಾರವಾಗಿ ವ್ಯಯಮಾಡಿದರೂ ಅವನು ವೃದ್ಧಿಯಾಗುತ್ತಾನೆ, ಆದರೆ ಇನ್ನೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನು ಬಡತನಕ್ಕೆ ಬರುತ್ತಾನೆ.
구제를 좋아하는 자는 풍족하여질 것이요 남을 윤택하게 하는 자는 윤택하여지리라
25 ಉದಾರಿಯು ಅಭಿವೃದ್ಧಿ ಹೊಂದುವನು; ಬೇರೆಯವರಿಗೆ ಚೈತನ್ಯ ಕೊಡುವವನು ಚೈತನ್ಯ ಹೊಂದುವನು.
곡식을 내지 아니하는 자는 백성에게 저주를 받을 것이나 파는 자는 그 머리에 복이 임하리라
26 ಧಾನ್ಯವನ್ನು ಬಚ್ಚಿಟ್ಟುಕೊಳ್ಳುವವನನ್ನು ಜನರು ಶಪಿಸುವರು; ಆದರೆ ಅದನ್ನು ಮಾರುವವನ ಮೇಲೆ ಆಶೀರ್ವಾದವು ನೆಲೆಯಾಗಿರುವುದು.
선을 간절히 구하는 자는 은총을 얻으려니와 악을 더듬어 찾는 자에게는 악이 임하리라
27 ಒಳ್ಳೆಯದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದುತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವುದು.
자기의 재물을 의지하는 자는 패망하려니와 의인은 푸른 잎사귀 같아서 번성하리라
28 ತನ್ನ ಐಶ್ವರ್ಯದಲ್ಲಿ ಭರವಸೆ ಇಡುವವನು ಬಿದ್ದುಹೋಗುವನು, ಆದರೆ ನೀತಿವಂತರು ಹಸಿರೆಲೆಯ ಹಾಗೆ ಚಿಗುರುವರು.
자기 집을 해롭게 하는 자의 소득은 바람이라 미련한 자는 마음이 지혜로운 자의 종이 되리라
29 ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಮೂರ್ಖನು ಜ್ಞಾನನಿಗೆ ಸೇವಕನಾಗಿರುವನು.
의인의 열매는 생명나무라 지혜로운 자는 사람을 얻느니라
30 ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ.
보라 의인이라도 이 세상에서 보응을 받겠거든 하물며 악인과 죄인이리요
31 ಇಗೋ, ಭೂಮಿಯ ಮೇಲೆ ನೀತಿವಂತರು ತಮ್ಮ ಫಲವನ್ನು ಹೊಂದಲಿಕ್ಕಿರುವಾಗ, ದುಷ್ಟರು ಮತ್ತು ಪಾಪಿಗಳು ಎಷ್ಟೋ ಹೆಚ್ಚಾಗಿ ತಮ್ಮ ಫಲವನ್ನು ಹೊಂದುತ್ತಾರೆ.

< ಜ್ಞಾನೋಕ್ತಿಗಳು 11 >