< ಅರಣ್ಯಕಾಂಡ 7 >
1 ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ,
Na mokolo oyo Moyize asilisaki kotonga Mongombo, asopelaki yango mafuta mpo na kobulisa yango elongo na bisalelo na yango. Asalaki mpe bongo mpo na etumbelo elongo na bisalelo na yango, asopelaki yango mafuta mpo na kobulisa yango.
2 ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
Bongo bakambi ya Isalaele, bakonzi ya mabota, elingi koloba bakonzi ya bikolo oyo bakambaki mosala ya kotanga motango ya bato,
3 ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
bamemaki makabo na bango liboso ya Yawe: bashario motoba mpe bangombe zomi na mibale. Shario moko mpo na bakambi mibale, mpe ngombe moko mpo na mokonzi moko na moko; bamemaki yango liboso ya Mongombo.
4 ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
Yawe alobaki na Moyize:
5 “ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
« Ndima kozwa makabo oyo bayei na yango; okosala na yango mosala ya Ndako ya kapo ya Bokutani. Okopesa yango epai ya Balevi kolanda mokumba ya moko na moko. »
6 ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು.
Moyize andimaki kozwa bashar mpe bangombe mpe apesaki yango epai ya Balevi.
7 ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು.
Apesaki bashar mibale mpe bangombe minei epai ya bana mibali ya Gerishoni kolanda bosenga ya mosala na bango.
8 ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.
Apesaki bashar minei mpe bangombe mwambe epai ya bana mibali ya Merari kolanda bosenga ya mosala na bango na bokambami ya Itamari, mwana mobali ya Nganga-Nzambe Aron.
9 ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
Apesaki eloko te epai ya bana mibali ya Keati, pamba te bazalaki na mokumba ya komema na mapeka na bango biloko ya bule.
10 ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.
Bakambi bamemaki makabo na bango mpo na libulisi ya etumbelo, na mokolo oyo basopelaki yango mafuta; bamemaki makabo yango liboso ya etumbelo.
11 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
Bongo Yawe alobaki na Moyize: « Tika ete mokolo na mokolo, mokambi moko na moko amema likabo na ye mpo na libulisi ya etumbelo! »
12 ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
Na mokolo ya liboso, Nashoni, mwana mobali ya Aminadabi, moto ya libota ya Yuda, amemaki likabo na ye.
13 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
Likabo na ye ezalaki: etando ya palata ya kilo moko na ndambo, mbeki moko ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale ezalaki ya kotonda na farine basangisa na mafuta mpo na makabo;
14 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mpe mbeki moko ya wolo ya bagrame nkama moko na zomi etonda na ansa,
15 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
ngombe moko ya mobali, meme moko ya mobali, mwana meme moko ya mobu moko mpo na mbeka ya kotumba,
16 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
ntaba moko ya mobali lokola mbeka mpo na masumu;
17 ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು. ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Nashoni, mwana mobali ya Aminadabi.
18 ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
Na mokolo ya mibale, Netaneeli, mwana mobali ya Tsuwari, mokambi ya libota ya Isakari,
19 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
20 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
21 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
22 ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
ntaba moko ya mobali lokola mbeka mpo na masumu;
23 ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Netaneeli, mwana mobali ya Tsuwari.
24 ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
Na mokolo ya misato, Eliabi, mwana mobali ya Eloni, mokambi ya libota ya Zabuloni,
25 ಅವನ ಅರ್ಪಣೆ ಏನೆಂದರೆ: ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
26 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
27 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
28 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
29 ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Eliabi, mwana mobali ya Eloni.
30 ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
Na mokolo ya minei, Elitsuri, mwana mobali ya Shedewuri, mokambi ya libota ya Ribeni,
31 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
32 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
33 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
34 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
35 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Elitsuri, mwana mobali ya Shedewuri.
36 ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
Na mokolo ya mitano, Shelumieli, mwana mobali ya Tsurishadayi, mokambi ya libota ya Simeoni,
37 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
38 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
39 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
40 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
41 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
mpe, lokola mbeka mpo na kozongisa boyokani: bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Wana nde ezalaki makabo ya Shelumieli, mwana mobali ya Tsurishadayi.
42 ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
Na mokolo ya motoba, Eliazafi, mwana mobali ya Deweli, mokambi ya libota ya Gadi,
43 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
44 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
45 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
46 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
47 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Eliazafi, mwana mobali ya Deweli.
48 ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
Na mokolo ya sambo, Elishama, mwana mobali ya Amiwudi, mokambi ya libota ya Efrayimi,
49 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
50 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
51 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
52 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
53 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Elishama, mwana mobali ya Amiwudi.
54 ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
Na mokolo ya mwambe, Gamilieli, mwana mobali ya Pedakitsuri, mokambi ya libota ya Manase,
55 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
56 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
57 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
58 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
59 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Gamilieli, mwana mobali ya Pedakitsuri.
60 ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
Na mokolo ya libwa, Abidani, mwana mobali ya Gideoni, mokambi ya libota ya Benjame,
61 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
62 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
63 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
64 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
65 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Abidani, mwana mobali ya Gideoni.
66 ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
Na mokolo ya zomi, Akiezeri, mwana mobali ya Amishadayi, mokambi ya libota ya Dani,
67 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
68 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
69 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
70 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
71 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Akiezeri, mwana mobali ya Amishadayi.
72 ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
Na mokolo ya zomi na moko, Pagieli, mwana mobali ya Okirani, mokambi ya libota ya Aseri,
73 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
74 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
75 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
76 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
ntaba moko ya mobali lokola mbeka mpo na masumu;
77 ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Pagieli, mwana mobali ya Okirani.
78 ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
Na mokolo ya zomi na mibale, Akira, mwana mobali ya Enani, mokambi ya libota ya Nefitali,
79 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
amemaki makabo oyo: etando ya palata ya kilo moko na bagrame nkama mitano, mbeki ya palata ya bagrame nkama mwambe, kolanda ndenge bamekaka kilo kati na Esika ya bule, nyonso mibale etonda na farine basangisa na mafuta mpo na makabo,
80 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
mbeki moko ya wolo ya bagrame nkama moko na zomi etonda na ansa.
81 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
Amemaki lisusu: mwana ngombe ya mobali, meme moko ya mobali, mwana meme moko ya mobu moko mpo na mbeka ya kotumba,
82 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ntaba moko ya mobali lokola mbeka mpo na masumu;
83 ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಏನಾನನ ಮಗ ಅಹೀರನ ಅರ್ಪಣೆಯು.
mpe, lokola mbeka mpo na kozongisa boyokani, bangombe mibale ya mibali, bameme mitano ya mibali, bantaba mitano ya mibali mpe bana meme mitano ya mobu moko. Yango nde ezalaki makabo ya Akira, mwana mobali ya Enani.
84 ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,
Yango nde ezalaki makabo ya bakambi ya Isalaele mpo na libulisi ya etumbelo, na mokolo oyo basopelaki yango mafuta. Na kosangisa, bango nyonso bapesaki: bitando ya palata zomi na mibale, bambeki ya palata zomi na mibale, bambeki ya wolo zomi na mibale.
85 ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್.
Etando moko na moko ya palata ezalaki ya kilo moko na bagrame nkama mitano, mpe mbeki moko na moko ezalaki ya bagrame nkama mwambe: palata nyonso esalaki bakilo tuku mibale na sambo na bagrame nkama mitano, kolanda ndenge bazalaki komeka bakilo na Esika ya bule.
86 ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್,
Mbeki moko na moko ya wolo ezalaki ya bagrame nkama moko na zomi: wolo nyonso esalaki bagrame nkoto moko na nkama misato.
87 ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
Mpo na bambeka ya kotumba, bango nyonso bapesaki: bangombe zomi na mibale ya mibali, bameme zomi na mibale ya mibali, bana meme zomi na mibale ya mobu moko elongo na makabo mosusu mpe bantaba zomi na mibale lokola mbeka mpo na masumu.
88 ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60. ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
Na kosangisa, bango nyonso bapesaki lokola mbeka mpo na kozongisa boyokani: bangombe tuku mibale na minei ya mibali, bameme tuku motoba ya mibali, bantaba tuku motoba ya mibali, bana meme tuku motoba ya mobu moko. Yango nde ezalaki makabo ya libulisi ya etumbelo sima na kosopela yango mafuta.
89 ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.
Tango Moyize azalaki kokota na Ndako ya kapo ya Bokutani mpo na kosolola na Yawe, azalaki koyoka mongongo koloba na ye wuta na mofinuku oyo ezalaki likolo ya Sanduku ya Litatoli kati na basheribe mibale, mpe azalaki kosolola na ye.