< ಅರಣ್ಯಕಾಂಡ 4 >

1 ಯೆಹೋವ ದೇವರು ಮೋಶೆಯ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
সদাপ্রভু মোশি ও হারোণকে বললেন,
2 “ಲೇವಿಯರೊಳಗೆ ಕೊಹಾತ್ಯರಲ್ಲಿಯ ಕುಟುಂಬಗಳನ್ನು ಗೋತ್ರಗಳನ್ನಾಗಿ ಲೆಕ್ಕಮಾಡು.
“তোমরা লেবির সন্তানদের মধ্যে নিজেদের গোষ্ঠী ও পিতৃকুল অনুসারে কহাতের সন্তানদের জনগণনার পরিচালনা করবে।
3 ಮೂವತ್ತು ವರ್ಷವಾದವರನ್ನೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷದವರವರೆಗೆ ದೇವದರ್ಶನ ಗುಡಾರದಲ್ಲಿ ಕೆಲಸ ಮಾಡುವುದಕ್ಕೆ ಬರುವವರನ್ನು ಲೆಕ್ಕಮಾಡು.
ত্রিশ বছর বয়সী থেকে পঞ্চাশ বছর বয়সী পর্যন্ত যত লোক সমাগম তাঁবুতে কর্মচারীদের শ্রেণীভুক্ত হয়, তাদেরকে গণনা কর।
4 “ದೇವದರ್ಶನದ ಗುಡಾರದಲ್ಲಿ ಕೊಹಾತ್ಯರು ಮಾಡುವ ಸೇವೆ ಯಾವುದೆಂದರೆ, ದೇವದರ್ಶನ ಗುಡಾರದ ಅತಿಪರಿಶುದ್ಧವಾದ ವಸ್ತುಗಳನ್ನು ಕಾಪಾಡುವುದು.
সমাগম তাঁবুতে কহাতের সন্তানদের সেবা কাজ অতি পবিত্রস্থান সংক্রান্ত।
5 ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ,
যখন শিবির এগিয়ে যাবে, তখন হারোণ ও তার ছেলেরা ভিতরে যাবে এবং পর্দা নামিয়ে সেটা দিয়ে পবিত্রস্থান থেকে মহাপবিত্রস্থানকে আলাদা করবে এবং সাক্ষ্য সিন্দুক ঢাকা দেবে।
6 ಅದರ ಮೇಲೆ ಕಡಲುಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗದಲ್ಲಿ ಪೂರ್ಣವಾದ ನೀಲಿವಸ್ತ್ರವನ್ನು ಹಾಸಿ, ಕೋಲುಗಳನ್ನು ಅದರ ಸ್ಥಳದಲ್ಲಿ ಇಡಬೇಕು.
তার উপরে শীলের চামড়ায় ঢেকে দেবে ও তার উপরে সম্পূর্ণ নীল রঙের একটি বস্ত্র পাতবে এবং তার বহন-দন্ড পরাবে।
7 “ಸಮ್ಮುಖದ ರೊಟ್ಟಿಯ ಮೇಜಿನ ಮೇಲೆ ಅವರು ನೀಲಿವಸ್ತ್ರವನ್ನು ಹಾಸಿ, ಅದರ ಮೇಲೆ ಪಾತ್ರೆಗಳನ್ನು, ಸೌಟುಗಳನ್ನು, ಬೋಗುಣಿಗಳನ್ನು ಮತ್ತು ಪಾನಾರ್ಪಣೆಯ ಹೂಜಿಗಳನ್ನು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಯನ್ನು ಅದರ ಮೇಲೆ ಇಡಬೇಕು.
তারা দর্শন-রুটির টেবিলের উপরে একটি নীল রঙের বস্ত্র পাতবে ও তার উপরে থালা, চামচ, সেকপাত্র ও ঢালবার জন্য পাত্রগুলি রাখবে এবং টেবিলের উপর সর্বদা রুটি রাখবে।
8 ಅವೆಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ, ಅದನ್ನು ಕಡಲುಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ, ಅದರ ಕೋಲುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
তারা সব কিছুর উপরে একটি লাল রঙের বস্ত্র এবং শুশুকের চামড়া দিয়ে ঢেকে দেবে। তারা টেবিলে বহন-দন্ড পরাবে।
9 “ಇದಲ್ಲದೆ ಅವರು ನೀಲಿವಸ್ತ್ರವನ್ನು ತೆಗೆದುಕೊಂಡು, ಅದರಿಂದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ, ಅದರ ಬತ್ತಿ ಕತ್ತರಿಸುವ ಸಲಕರಣೆಗಳನ್ನೂ, ಅದರ ಬಟ್ಟಲುಗಳನ್ನೂ, ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು.
তারা একটি নীল রঙের বস্ত্র নিয়ে বাতিদানী, তার বাতিগুলি, চিমটি এবং ট্রে ও সমস্ত তেলের পাত্র ঢেকে রাখবে।
10 ಅವರು ಅದನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ಕಡಲುಹಂದಿಯ ಚರ್ಮಗಳ ಮುಚ್ಚಳದೊಳಗೆ ಇಟ್ಟು, ಅಡ್ಡ ದಂಡಕ್ಕೆ ಕಟ್ಟಬೇಕು.
১০তারা বাতিদান এবং তার সমস্ত পাত্র শীলের চামড়ায় ঢেকে দিয়ে বয়ে নিয়ে যাবার পাটাতনের উপরে রাখবে।
11 “ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿವಸ್ತ್ರವನ್ನು ಹಾಸಿ, ಅದನ್ನು ಕಡಲುಹಂದಿಯ ಚರ್ಮಗಳ ಮುಚ್ಚಳದೊಳಗೆ ಮುಚ್ಚಿ, ಅದರ ಕೋಲುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
১১তারা সোনার বেদির উপরে নীল রঙের বস্ত্র পেতে তার উপরে শুশুকের চামড়ায় ঢেকে দেবে এবং তার বহন-দন্ড পরাবে।
12 “ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವ ಸೇವೆಯ ಎಲ್ಲಾ ಸಲಕರಣೆಗಳನ್ನು ಅವರು ತೆಗೆದುಕೊಂಡು ನೀಲಿ ವಸ್ತ್ರದಿಂದ ಕಟ್ಟಿ, ಕಡಲುಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ, ಅಡ್ಡ ದಂಡಕ್ಕೆ ಕಟ್ಟಬೇಕು.
১২তারা পবিত্রস্থানের পরিচর্য্যার জন্য সমস্ত পাত্র নিয়ে নীল রঙের বস্ত্রের মধ্যে রাখবে এবং শুশুকের চামড়া দিয়ে তা ঢেকে দন্ডের উপরে রাখবে।
13 “ಬಲಿಪೀಠದ ಬೂದಿಯನ್ನು ತೆಗೆದು, ಅದರ ಮೇಲೆ ಧೂಮ್ರವರ್ಣದ ವಸ್ತ್ರವನ್ನು ಹಾಸಿ,
১৩তারা বেদি থেকে ছাই ফেলে তার উপরে বেগুনী রঙের বস্ত্র পাতবে।
14 ಅದರ ಮೇಲೆ ಸೇವೆ ಮಾಡುವ ಎಲ್ಲಾ ಸಲಕರಣೆಗಳನ್ನು, ಅಗ್ನಿ ಪಾತ್ರೆಗಳನ್ನು, ಮುಳ್ಳುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಬಲಿಪೀಠದ ಎಲ್ಲಾ ಸಲಕರಣೆಗಳನ್ನು ಅದರ ಮೇಲಿಟ್ಟು, ಕಡಲುಹಂದಿಯ ಚರ್ಮಗಳ ಹೊದಿಕೆಯನ್ನು ಹಾಕಿ, ಹೊರುವ ಕೋಲುಗಳನ್ನು ಇಡಬೇಕು.
১৪তারা পাটাতনের উপরে বেদির পরিচর্য্যার জন্য সমস্ত পাত্র, আগুন রাখার পাত্র, তিনটি কাঁটাযুক্ত দন্ড, হাতা ও বাটি, বেদির সমস্ত পাত্র রাখবে; আর তারা তার উপরে শুশুকের চামড়া দিয়ে ঢেকে দেবে এবং তার বহন দণ্ড পরাবে।
15 “ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ.
১৫এই ভাবে শিবিরের এগিয়ে যাবার দিনের হারোণ ও তার ছেলেরা পবিত্রস্থান ও পবিত্রস্থানের সমস্ত পাত্রে ঢাকা দেওয়া শেষ করার পর কহাতের সন্তানরা তা বহন করতে আসবে; কিন্তু তারা পবিত্র বস্তু স্পর্শ করবে না, পাছে তাদের মৃত্যু হয়। সমাগম তাঁবুতে এইসব কিছু বয়ে নিয়ে যাওয়াই কহাতের সন্তানদের কাজ হবে।
16 “ಯಾಜಕನಾದ ಆರೋನನ ಮಗ ಎಲಿಯಾಜರನ ಕೆಲಸ ಯಾವುದೆಂದರೆ, ದೀಪದ ಎಣ್ಣೆಯೂ, ಸುಗಂಧ ಧೂಪವೂ, ನಿತ್ಯದ ಧಾನ್ಯ ಸಮರ್ಪಣೆಯೂ, ಅಭಿಷೇಕದ ತೈಲವೂ, ಸಮಸ್ತ ಗುಡಾರವೂ, ಅದರಲ್ಲಿರುವ ಸಕಲವೂ, ಪರಿಶುದ್ಧ ಸ್ಥಳದಲ್ಲಿರುವ ಅದರ ಸಾಮಗ್ರಿಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.”
১৬দীপের তেল ও ধূপের জন্য সুগন্ধি দ্রব্য, নিত্য ভক্ষ্য নৈবেদ্য ও অভিষেকের তেলের দেখাশোনা করা, সমস্ত সমাগম তাঁবু এবং যা কিছু তার মধ্যে আছে, পবিত্রস্থান ও তার সমস্ত দ্রব্যের দেখাশোনা করা হারোণের ছেলে ইলীয়াসর যাজকের কাজ হবে।”
17 ಇದಲ್ಲದೆ ಯೆಹೋವ ದೇವರು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
১৭সদাপ্রভু মোশি ও হারোণকে বললেন,
18 “ನೀವು ಲೇವಿಯರೊಳಗಿಂದ ಕೊಹಾತ್ಯರ ಗೋತ್ರದ ಕಟುಂಬಗಳು ನಾಶವಾಗಿ ಹೋಗದಂತೆ ನೋಡಿಕೊಳ್ಳಿರಿ.
১৮“তোমরা লেবীয়দের মধ্যে থেকে কহাতীয় সমস্ত গোষ্ঠীর বংশকে উচ্ছেদ কোরো না।
19 ಅವರು ಮಹಾಪರಿಶುದ್ಧ ವಸ್ತುಗಳ ಸಮೀಪಕ್ಕೆ ಬರುವಾಗ, ಅವರು ಸಾಯದೆ ಬದುಕುವ ಹಾಗೆ ಹೀಗೆ ಎಚ್ಚರಿಕೆ ವಹಿಸಬೇಕು: ಆರೋನನೂ ಅವನ ಪುತ್ರರೂ ಒಳಗೆ ಪ್ರವೇಶಿಸಿ, ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಯನ್ನೂ ನೇಮಿಸಬೇಕು.
১৯কিন্তু যখন তারা অতি পবিত্র বস্তুর কাছাকাছি আসে, তখন যেন তারা বেঁচে থাকে, মারা না যায়, এই জন্য তোমরা তাদের প্রতি এইরকম কোরো; হারোণ ও তার ছেলেরা ভিতরে যাবে এবং তাদের প্রত্যেক জনকে নিজেদের সেবা কাজ ও ভার বহনে নিযুক্ত করবে।”
20 ಆದರೆ ಕೊಹಾತ್ಯರು ದೇವದರ್ಶನದ ಗುಡಾರದ ಒಳಗೆ ಬಂದು, ಒಂದು ಕ್ಷಣವೂ ಆ ಪವಿತ್ರ ವಸ್ತುಗಳನ್ನು ನೋಡಬಾರದು, ನೋಡಿ ಸಾವನ್ನಪ್ಪದಿರಲಿ.”
২০কিন্তু তারা এক বারের জন্যও পবিত্র বস্তু দেখতে ভিতরে যাবে না, না হলে তারা মারা পড়ে।
21 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
২১সদাপ্রভু মোশিকে বললেন,
22 “ಗೇರ್ಷೋನನ ಪುತ್ರರ ಲೆಕ್ಕವನ್ನು ಸಹ ಅವರ ತಂದೆಗಳ ಮನೆಗಳ ಪ್ರಕಾರವಾಗಿಯೂ, ಅವರ ಕುಲಗಳ ಪ್ರಕಾರವಾಗಿಯೂ ತೆಗೆದುಕೊಳ್ಳಬೇಕು.
২২তুমি গের্শোন সন্তানদের পিতৃকুল ও গোষ্ঠী অনুসারে তাদেরও সংখ্যা গ্রহণ কর।
23 ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳ ಪುರುಷರನ್ನೂ ದೇವದರ್ಶನ ಗುಡಾರದಲ್ಲಿ ಸೇವೆ ಮಾಡುವುದಕ್ಕೂ, ಅದನ್ನು ಪೂರೈಸುವುದಕ್ಕೂ ಸೇರುವವರೆಲ್ಲರನ್ನೂ ಎಣಿಸು.
২৩ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজ করার শ্রেণীভুক্ত হয়, তাদেরকে গণনা কর।
24 “ಗೇರ್ಷೋನ್ಯರ ಕುಟುಂಬಗಳ ಸೇವೆಯೂ ಜವಾಬ್ದಾರಿಕೆ ಯಾವುದೆಂದರೆ,
২৪সেবা কাজের ও ভার বহনের মধ্যে গের্শোনীয় গোষ্ঠীদের সেবা কাজ এইগুলি।
25 ಅವರು ಗುಡಾರದ ಪರದೆಗಳನ್ನೂ ದೇವದರ್ಶನ ಗುಡಾರವನ್ನೂ ಅದರ ಹೊದಿಕೆಯನ್ನೂ ಅದರ ಮೇಲಿರುವ ಕಡಲುಹಂದಿಯ ಚರ್ಮಗಳ ಹೊದಿಕೆಯನ್ನೂ ದೇವದರ್ಶನ ಗುಡಾರದ ಬಾಗಿಲಿನ ಪರದೆಯನ್ನೂ
২৫তারা সমাগম তাঁবুর পর্দা, সমাগম তাঁবু, তাঁবুর আবরণ, তার উপরের শীলের চামড়ার আচ্ছাদন, সমাগম তাঁবুর ফটকের আচ্ছাদন বস্ত্র বহন করবে।
26 ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಿಲಿನ ಪರದೆಯನ್ನೂ ಅವುಗಳ ಹಗ್ಗಗಳನ್ನೂ, ಅವುಗಳ ಸೇವೆಯ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು.
২৬তারা উঠানের সমস্ত পর্দা, উঠানের দরজার পর্দা, যেটা সমাগম তাঁবু ও বেদির কাছাকাছি, তার রশি ও সেবার জন্য সমস্ত জিনিস পত্র বহন করবে।
27 ಗೇರ್ಷೋನ್ಯರು ಆರೋನ್, ಅವನ ಪುತ್ರರ ನಿರ್ದೇಶನದ ಮೇರೆಗೆ ಅವರ ಹೊರೆಹೊರುವದನ್ನು ಮತ್ತು ಇತರ ಕೆಲಸಗಳನ್ನು ಮಾಡಲಿ. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.
২৭হারোণের ও তার ছেলেদের আদেশ অনুসারে গের্শোন সন্তানরা নিজেদের ভার বহন ও সমস্ত সেবা কাজ করবে। তোমরা সমস্ত ভার বহন করার কাজে তাদের নিযুক্ত করবে।
28 ಗೇರ್ಷೋನ್ಯರ ಕುಟುಂಬದವರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯೂ ಇದೆ. ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವುದು ಅವರಿಗೆ ಅಪ್ಪಣೆಯಾಗಿದೆ.
২৮সমাগম তাঁবুতে এটাই গের্শোন গোষ্ঠীর সন্তানদের সেবা কাজ। হারোণ যাজকের ছেলে ঈথামর তাদের কাজে নেতৃত্ব দেবে।
29 “ಮೆರಾರೀಯ ಪುತ್ರರನ್ನು ಅವರ ಕುಲಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ಎಣಿಸಬೇಕು.
২৯তুমি মরারি সন্তানদের গোষ্ঠী ও পিতৃকুল অনুসারে তাদেরকে গণনা কর।
30 ಮೂವತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷಗಳವರೆಗೆ ದೇವದರ್ಶನದ ಗುಡಾರದ ಸೇವೆ ಮಾಡುವುದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು.
৩০ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজ করার জন্য শ্রেণীভুক্ত হয়, তাদেরকে গণনা কর।
31 ದೇವದರ್ಶನದ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವುದಕ್ಕೆ ನೀಡಿದ ಅಪ್ಪಣೆಯು ಏನೆಂದರೆ: ಗುಡಾರದ ಹಲಿಗೆಗಳೂ ಅದರ ಅಡ್ಡ ದಂಡ ಅದರ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ
৩১সমাগম তাঁবুতে এই সমস্ত ভার বহন করাই তাদের সেবা কাজ হবে। সমাগম তাঁবুর পাটাতন, তক্তা, স্তম্ভ, ভিত্তি,
32 ಸುತ್ತಲಿರುವ ಅಂಗಳದ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ ಅದರ ಗೂಟಗಳೂ ಅವುಗಳ ಹಗ್ಗಗಳೂ ಅವುಗಳ ಎಲ್ಲಾ ಸಲಕರಣೆಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವುದಕ್ಕೆ ಕೊಟ್ಟ ಅಪ್ಪಣೆಯ ಸಲಕರಣೆಗಳನ್ನು ನೀವು ಹೆಸರೆಸರಾಗಿ ಎಣಿಸಬೇಕು.
৩২সমাগম তাঁবু ঘেরা উঠানের স্তম্ভ, সে সকলের অর্গল, স্তম্ভ ও চূঙ্গি এবং প্রাঙ্গণের চতুর্দ্দিক্‌স্থিত স্তম্ভ সকল, সে সকলের ভিত্তি, গোঁজ, রশি, তার সঙ্গে তাদের হাতের কাজ। বয়ে নিয়ে যাওয়া সমস্ত দ্রব্য তাদের নামে গণনা করবে।
33 ಮೆರಾರೀಯ ಪುತ್ರರ ಕುಟುಂಬಗಳ ಸೇವೆಯೂ, ದೇವದರ್ಶನದ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೆ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.”
৩৩এগুলি মরারি গোষ্ঠীর সন্তানদের সেবা কাজ; সমাগম তাঁবুতে তারা যা কাজ করবে সেগুলি হারোণ যাজকের ছেলে ঈথামরের নির্দেশ অনুযায়ী হবে।
34 ಮೋಶೆಯೂ, ಆರೋನನೂ, ಸಭೆಯ ಮುಖ್ಯಸ್ಥನೂ, ಕೊಹಾತ್ಯರ ಪುತ್ರರನ್ನು ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ
৩৪মোশি, হারোণ ও মণ্ডলীর শাসনকর্তারা, গোষ্ঠী ও পিতৃকুল অনুসারে কহাতীয় সন্তানদের গণনা করলেন।
35 ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರೂ ಎಂದರೆ ಐವತ್ತು ವರ್ಷಗಳವರೆಗೆ ದೇವದರ್ಶನದ ಗುಡಾರದಲ್ಲಿ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು ಎಣಿಸಿದರು.
৩৫তাঁরা ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজ করার জন্য শ্রেণীভুক্ত হল, তাদেরকে গণনা করলেন।
36 ಕುಲಗಳ ಪ್ರಕಾರ ಅವರಲ್ಲಿ ಎಣಿಕೆಯಾದವರು 2,750 ಮಂದಿಯಾಗಿದ್ದರು.
৩৬তারা তাদের গোষ্ঠী অনুসারে দুই হাজার সাতশো পঞ্চাশ জন লোক গণনা করল।
37 ಮೋಶೆಗೆ ಯೆಹೋವ ದೇವರು ಅಪ್ಪಣೆ ಮಾಡಿದ ಹಾಗೆ ಮೋಶೆಯೂ, ಆರೋನನೂ ಎಣಿಸಿದ ಕೊಹಾತ್ಯರ ಕುಟುಂಬಗಳಲ್ಲಿ ಎಣಿಕೆಯಾದವರೂ, ದೇವದರ್ಶನ ಗುಡಾರದಲ್ಲಿ ಸೇವೆ ಮಾಡುವವರೆಲ್ಲರೂ ಇವರೇ.
৩৭মোশিকে দেওয়া সদাপ্রভুর আদেশ অনুসারে মোশি ও হারোণ কহাতীয় গোষ্ঠী অনুসারে সমাগম তাঁবুতে সেবা কাজে নিযুক্ত লোক গণনা করলেন।
38 ಗೇರ್ಷೋನನ ಪುತ್ರರಲ್ಲಿ ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಕೆಯಾದರು.
৩৮আর গের্শোন সন্তানদের মধ্যে যাদেরকে তাদের গোষ্ঠী ও পিতৃকুল অনুসারে গণনা করা হল,
39 ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ, ಎಂದರೆ ಐವತ್ತು ವರ್ಷಗಳವರೆಗೆ ದೇವದರ್ಶನ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನೂ,
৩৯ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজ করার জন্য শ্রেণীভুক্ত হল।
40 ಎಂದರೆ ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ, ಅವರಲ್ಲಿ ಎಣಿಕೆಯಾದವರು 2,630 ಮಂದಿಯಾಗಿದ್ದರು.
৪০তাদের গোষ্ঠী ও পিতৃকুল অনুসারে গণনা করলে দুই হাজার ছয়শো ত্রিশ জন হল।
41 ಯೆಹೋವ ದೇವರ ಅಪ್ಪಣೆಯ ಹಾಗೆ ಮೋಶೆಯೂ, ಆರೋನನೂ ಎಣಿಸಿದ ಗೇರ್ಷೋನನ ಪುತ್ರರ ಕುಟುಂಬಗಳಲ್ಲಿ ಎಣಿಕೆಯಾದವರೂ, ದೇವದರ್ಶನದ ಗುಡಾರದಲ್ಲಿ ಸೇವೆ ಮಾಡುವವರೆಲ್ಲರೂ ಇವರೇ.
৪১মোশি ও হারোণ সদাপ্রভুর আদেশ অনুসারে সমাগম তাঁবুতে সেবা কাজে নিযুক্ত গের্শোন গোষ্ঠীর সন্তানদের গণনা করলেন।
42 ಮೆರಾರೀಯ ಪುತ್ರರಲ್ಲಿ ಅವರ ಕುಲಗಳ ಪ್ರಕಾರವಾಗಿಯೂ, ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಕೆಯಾದವರು.
৪২মরারি গোষ্ঠীর সন্তানদের মধ্যে যাদের গোষ্ঠী ও পিতৃকুল অনুসারে গণনা করা হল,
43 ಮೂವತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷಗಳವರೆಗೆ ದೇವದರ್ಶನ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು
৪৩ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজের জন্য শ্রেণীভুক্ত হল,
44 ಎಂದರೆ, ಅವರ ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಕೆಯಾದವರು 3,200 ಮಂದಿಯಾಗಿದ್ದರು.
৪৪তাদের গোষ্ঠী ও পিতৃকুল অনুসারে গণনা করলে তিন হাজার দুশো জন হল।
45 ಮೋಶೆಗೆ ಯೆಹೋವ ದೇವರು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸಿದ ಮೆರಾರೀಯ ಪುತ್ರರ ಕುಲಗಳಲ್ಲಿ ಎಣಿಕೆಯಾದವರು ಇವರೇ.
৪৫মোশিকে দেওয়া সদাপ্রভুর আদেশ অনুসারে মোশি ও হারোণ মরারি গোষ্ঠীর সন্তানদের গণনা করলেন।
46 ಮೋಶೆಯೂ, ಆರೋನನೂ, ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದ ಸಮಸ್ತ ಲೇವಿಯರು ಅವರ ಕುಲಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸಿದರು.
৪৬এই ভাবে মোশি, হারোণ ও ইস্রায়েলের শাসনকর্ত্তাদের নেতৃত্বে যে লেবীয়দের নিজেদের গোষ্ঠী ও পিতৃকুল অনুসারে গণনা করা হল,
47 ದೇವದರ್ಶನ ಗುಡಾರದಲ್ಲಿ ಕೆಲಸ ಮಾಡುವುದಕ್ಕಾಗಿಯೂ, ಹೊರುವುದಕ್ಕಾಗಿಯೂ ಬರುವವರೆಲ್ಲರೂ ಎಂದರೆ, ಅವರಲ್ಲಿ ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಎಂದರೆ, ಐವತ್ತು ವರ್ಷಗಳವರೆಗೆ
৪৭ত্রিশ বছর বয়সী থেকে পঞ্চাশ বছর বয়সী পর্যন্ত যারা সমাগম তাঁবুতে সেবা কাজের ও ভার বয়ে নিয়ে যাবার কাজ করতে প্রবেশ করত,
48 ಎಣಿಕೆಯಾದವರು 8,580 ಮಂದಿ.
৪৮তারা আট হাজার পাঁচশো আশী জন হল।
49 ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ, ಹೊರುವುದಕ್ಕಾಗಿಯೂ ಜವಾಬ್ದಾರಿಕೆ ಕೊಡಲಾಯಿತು. ಹೀಗೆ ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಎಣಿಸಲಾಯಿತು.
৪৯সদাপ্রভুর আদেশ অনুসারেই তাদের সবাইকে মোশির মাধ্যমে নিজেদের সেবা কাজ ও ভার বয়ে নিয়ে যাবার জন্য গণনা করা হল; এই ভাবে মোশিকে দেওয়া সদাপ্রভুর আদেশ অনুসারে তাদের তাঁর মাধ্যমে গণনা হল।

< ಅರಣ್ಯಕಾಂಡ 4 >