< ಅರಣ್ಯಕಾಂಡ 28 >

1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
Још рече Господ Мојсију говорећи:
2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’
Заповеди синовима Израиљевим, и реци им: Приносе моје, хлеб мој, жртве што ми се сажижу за угодни мирис, пазите да ми приносите на време.
3 ನೀನು ಅವರಿಗೆ ಹೇಳಬೇಕಾದದ್ದು: ‘ನೀವು ಯೆಹೋವ ದೇವರಿಗೆ ಅರ್ಪಿಸಬೇಕಾದ ಅರ್ಪಣೆ ಏನೆಂದರೆ, ನಿಯಮಿತವಾಗಿ ಪ್ರತಿದಿನ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನು ದಹನಬಲಿಯಾಗಿ ಅರ್ಪಿಸಬೇಕು.
Реци им дакле: Ово је жртва огњена што ћете приносити Господу: два јагњета од године здрава, сваки дан на жртву паљеницу без престанка.
4 ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.
Једно јагње принеси ујутру, а друго јагње принеси увече.
5 ಧಾನ್ಯ ಅರ್ಪಣೆಗಾಗಿ ಸುಮಾರು ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ ಸಮರ್ಪಿಸಬೇಕು.
И десетину ефе белог брашна за дар смешаног с четвртином ина чистог уља.
6 ಇದು ಸೀನಾಯಿ ಪರ್ವತದಲ್ಲಿ ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
То је жртва паљеница свагдашња, која би принесена на гори Синајској за мирис угодни, жртва огњена Господу.
7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.
И налив њен да буде четврт ина на свако јагње; у светињи приноси налив доброг пића Господу.
8 ಎರಡನೆಯ ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಬೆಳಿಗ್ಗೆ ಮಾಡಿದಂತೆಯೇ, ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
А друго јагње принеси увече; дар као ујутру и налив његов принеси за жртву огњену, за угодни мирис Господу.
9 “‘ಆದರೆ ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನೂ, ಓಲಿವ್ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಗೋಧಿಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.
А у суботу два јагњета од године здрава, и две десетине белог брашна смешаног с уљем за дар с наливом његовим.
10 ನಿತ್ಯ ದಹನಬಲಿಯ ಹೊರತು, ಪ್ರತಿ ಸಬ್ಬತ್ ದಿನಕ್ಕೆ ತಕ್ಕ ದಹನಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
То је суботна жртва паљеница сваке суботе, осим свагдашње жртве паљенице и налива њеног.
11 “‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
И у почетак месеца својих приносите Господу жртву паљеницу, по два телета и једног овна и седам јагањаца од године здравих;
12 ಒಂದೊಂದು ಹೋರಿಗೆ ಧಾನ್ಯ ಅರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಹಿಟ್ಟನ್ನೂ,
И три десетине белог брашна помешаног с уљем за дар на свако теле, и две десетине белог брашна помешаног с уљем за дар на овна;
13 ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.
И по једну десетину белог брашна помешаног с уљем за дар на свако јагње; то је жртва паљеница на угодни мирис, жртва огњена Господу.
14 ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.
А налив њихов да буде вина по ина на теле, трећина ина на овна, и четврт ина на јагње. То је жртва паљеница у почетак месеца, сваког месеца у години.
15 ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
И јарца једног за грех, осим свагдашње жртве паљенице, приносите Господу с наливом његовим.
16 “‘ಆದರೆ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನವು ಯೆಹೋವ ದೇವರ ಪಸ್ಕಹಬ್ಬವಾಗಿರಬೇಕು.
А првог месеца четрнаести дан да је пасха Господу;
17 ಆ ತಿಂಗಳ ಹದಿನೈದನೆಯ ದಿನವು ಹಬ್ಬವಾಗಿದೆ. ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
А петнаести дан тог месеца празник: седам дана једите пресне хлебове.
18 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
Први дан нека је сабор свети; никакав посао ропски не радите.
19 ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.
Него принесите Господу жртву паљеницу, два телета и једног овна и седам јагањаца од године, све да вам је здраво;
20 ಅವುಗಳ ಧಾನ್ಯ ಸಮರ್ಪಣೆಯನ್ನೂ, ಎಣ್ಣೆ ಕಲಸಿದ ಐದು ಕಿಲೋಗ್ರಾಂ ಹಿಟ್ಟನ್ನು ಒಂದೊಂದು ಹೋರಿಗೆ, ಹತ್ತನೇ ಎರಡು ಭಾಗ ಟಗರಿಗೂ ಅರ್ಪಿಸಬೇಕು.
А дар уз њих белог брашна помешаног с уљем три десетине уза свако теле и две десетине уз овна принесите.
21 ಮತ್ತು ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಸುಮಾರು ಒಂದುವರೆ ಕಿಲೋಗ್ರಾಂ ಅರ್ಪಿಸಬೇಕು.
По једну десетину принесите уза свако јагње од оних седам јагањаца;
22 ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
И једног јарца за грех, ради очишћења вашег.
23 ನಿತ್ಯ ದಹನಬಲಿಯಾಗಿರುವ ಮುಂಜಾನೆಯ ದಹನಬಲಿಯ ಹೊರತಾಗಿ ಇವುಗಳನ್ನು ನೀವು ಅರ್ಪಿಸಬೇಕು.
То принесите осим јутарње жртве паљенице, која је жртва свагдашња.
24 ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೆ ಪ್ರತಿದಿನವೂ ಯೆಹೋವ ದೇವರಿಗೆ ಸುವಾಸನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು. ಅದನ್ನೂ ಅದಕ್ಕೆ ತಕ್ಕ ಪಾನಾರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
Тако приносите сваки дан за оних седам дана, да буде јело, жртва огњена на угодни мирис Господу, осим свагдашње жртве паљенице и њен налив приносите.
25 ಏಳನೆಯ ದಿವಸದಲ್ಲಿ ಪರಿಶುದ್ಧವಾದ ಸಭೆ ಕೂಡಬೇಕು. ಆ ದಿನದಲ್ಲಿ ನೀವು ದೈನಂದಿನ ಉದ್ಯೋಗವನ್ನೂ ಮಾಡಬೇಡಿರಿ.
И седми дан да имате свети сабор; посао ропски ниједан не радите.
26 “‘ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಯೆಹೋವ ದೇವರಿಗೆ ನಿಮ್ಮ ವಾರಗಳಲ್ಲಿ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸುವಾಗ, ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡದೆ ಪವಿತ್ರ ಸಭೆ ಕೂಡಬೇಕು.
И на дан првина, кад приносите нов дар Господу после својих недеља, да имате сабор свети, ниједан посао ропски не радите;
27 ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
Него принесите жртву паљеницу за угодни мирис Господу, два телета, једног овна седам јагањаца од године;
28 ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಸುಮಾರು ಐದು ಕಿಲೋಗ್ರಾಂ ಹಿಟ್ಟನ್ನು ಪ್ರತಿಯೊಂದು ಹೋರಿಗೆ, ಸುಮಾರು ಮೂರುವರೆ ಕಿಲೋಗ್ರಾಂ ಟಗರಿಗೂ
И дар уз њих: белог брашна помешаног с уљем по три десетине уз теле, две десетине уз овна,
29 ಏಳು ಕುರಿಮರಿಗಳಲ್ಲಿ ಸುಮಾರು ಒಂದುವರೆ ಕಿಲೋಗ್ರಾಂ,
По једну десетину уза свако јагње од оних седам јагањаца;
30 ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಒಂದು ಹೋತವನ್ನು ಸಮರ್ಪಿಸಬೇಕು.
Једног јарца, ради очишћења вашег.
31 ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
Принесите то, осим свагдашње жртве паљенице и дара њеног; а све нека вам је здраво с наливом својим.

< ಅರಣ್ಯಕಾಂಡ 28 >