< ಅರಣ್ಯಕಾಂಡ 16 >

1 ಆಗ ಲೇವಿಯ ಮಗನಾದ ಕೊಹಾತನ ಮೊಮ್ಮಗ ಇಚ್ಹಾರನ ಮಗ ಕೋರಹನೂ ರೂಬೇನ್ ಗೋತ್ರದವರಾದ ಎಲೀಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಜನರನ್ನು ತೆಗೆದುಕೊಂಡು
লেবির ছেলে কহাৎ, তার ছেলে যিষ্‌হর, তার ছেলে কোরহ এবং কয়েকজন রূবেণ গোষ্ঠীর ব্যক্তি—ইলীয়াবের ছেলে দাথন ও অবীরাম এবং পেলতের ছেলে ওন—উদ্ধত হল
2 ಇಸ್ರಾಯೇಲರೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯ ಪ್ರಸಿದ್ಧರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಗೆ ಎದುರಾಗಿ ತಿರುಗಿಬಿದ್ದರು.
এবং মোশির বিপক্ষতা করল। তাদের সঙ্গে 250 জন ইস্রায়েলী পুরুষ ছিল, যারা প্রত্যেকে সমাজের সুপরিচিত নেতা ছিল, যাদের মন্ত্রণা-সভার সদস্য নিযুক্ত করা হয়েছিল।
3 ಅವರು ಮೋಶೆಗೂ, ಆರೋನನಿಗೂ ವಿರೋಧವಾಗಿ ಕೂಡಿಕೊಂಡು, “ನೀವು ಹೆಚ್ಚು ಅಧಿಕಾರ ತೆಗೆದುಕೊಳ್ಳುತ್ತೀರಿ, ಏಕೆಂದರೆ ಈ ಸಮೂಹದಲ್ಲಿರುವ ಎಲ್ಲರೂ ಪರಿಶುದ್ಧರು. ಯೆಹೋವ ದೇವರು ಅವರ ಮಧ್ಯದಲ್ಲಿದ್ದಾರೆ. ಹೀಗಿರಲಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಅವರಿಗೆ ಕೇಳಿದರು.
তারা দলবদ্ধ হয়ে মোশি ও হারোণের বিরোধিতা করতে এল এবং তাঁদের বলল, “তোমাদের স্পর্ধা বহুদূর বিস্তৃত হয়েছে! সমস্ত সমাজ পবিত্র, প্রত্যেক ব্যক্তিই পবিত্র এবং সদাপ্রভু তাদের সহবর্তী আছেন। তাহলে কেন তোমরা নিজেদের অবস্থান সদাপ্রভুর সমাজের ঊর্ধ্বে উন্নীত করেছ?”
4 ಮೋಶೆಯು ಇದನ್ನು ಕೇಳಿದಾಗ, ಬೋರಲು ಬಿದ್ದು,
মোশি এই কথা শুনে ভূমিতে উপুড় হয়ে পড়লেন।
5 ಕೋರಹನಿಗೂ, ಅವನ ಸಮಸ್ತ ಸಮೂಹಕ್ಕೂ, “ಯೆಹೋವ ದೇವರು ತಮ್ಮ ಹತ್ತಿರ ಬರಮಾಡಿಕೊಳ್ಳುವ ಹಾಗೆ ತನ್ನವರು ಯಾರಾರೆಂಬುದನ್ನು ಮತ್ತು ಪರಿಶುದ್ಧ ಯಾರು ಎಂಬುದನ್ನು ನಾಳೆ ತೋರಿಸುವರು. ಅವರು ಯಾರನ್ನು ಆಯ್ದುಕೊಳ್ಳುವರೋ, ಅವರನ್ನು ಹತ್ತಿರ ಬರಮಾಡಿಕೊಳ್ಳುವರು. ನೀವು ಇದನ್ನು ಮಾಡಿರಿ:
তিনি কোরহ ও তার অনুগামীদের বললেন, “সকালবেলায় সদাপ্রভু প্রকাশ করবেন, কে তাঁর অধিকারভুক্ত এবং কে পবিত্র। তিনি সেই ব্যক্তিকে তাঁর নিকটবর্তী করবেন। যে ব্যক্তিকে তিনি মনোনীত করেন, সেই তাঁর নিকটবর্তী হবে।
6 ಕೋರಹನೂ, ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು,
কোরহ, তুমি ও তোমার অনুগামী সবাই এই কাজ করো, অঙ্গারধানী নাও
7 ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ, ಅವುಗಳ ಮೇಲೆ ಧೂಪವನ್ನು ಯೆಹೋವ ದೇವರ ಮುಂದೆ ಹಾಕಿರಿ. ಆಗ ಯೆಹೋವ ದೇವರು ಯಾವನನ್ನು ಆಯ್ದುಕೊಳ್ಳುವರೋ ಅವನೇ ಪರಿಶುದ್ಧನಾಗಿರುವನು. ಲೇವಿಯರೇ, ನೀವು ಬಹಳ ಮಿತಿಮೀರಿ ಹೋಗುತ್ತಿರುವಿರಿ,” ಎಂದನು.
এবং আগামীকাল তার মধ্যে আগুন ও ধূপ দিয়ে, সদাপ্রভুর সামনে নিবেদন করো। যে ব্যক্তিকে সদাপ্রভু মনোনীত করেন, সেই ব্যক্তি পবিত্র গণ্য হবে। লেবীয়রা, তোমাদের স্পর্ধা সীমা ছাড়িয়ে গেছে!”
8 ಮೋಶೆಯು ಕೋರಹನಿಗೆ, “ಲೇವಿಯ ಪುತ್ರರೇ, ಈಗ ಕೇಳಿರಿ.
মোশি কোরহকে এই কথাও বললেন, “লেবীয়েরা তোমরা এই কথা শোনো!
9 ಯೆಹೋವ ದೇವರ ಗುಡಾರದ ಸೇವೆಯನ್ನು ಮಾಡುವುದಕ್ಕೂ, ಸಮೂಹದ ಮುಂದೆ ಇರುವ ಅವರ ಸೇವೆಯಲ್ಲಿ ನಿಲ್ಲುವುದಕ್ಕೂ ಇಸ್ರಾಯೇಲರ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲರೊಳಗಿಂದಲೇ ನಿಮ್ಮನ್ನು ಪ್ರತ್ಯೇಕಿಸಿದ್ದು, ನಿಮಗೆ ಅಲ್ಪವಾಗಿ ತೋರಿತೋ?
ইস্রায়েলের ঈশ্বর, অবশিষ্ট সমাজ থেকে তোমাদের পৃথক করে, তাঁর সান্নিধ্যে নিয়ে এসেছেন, যেন তোমরা সদাপ্রভুর আবাস তাঁবুর কাজকর্ম করো এবং সমাজের সামনে দাঁড়িয়ে থেকে তাদের পরিচর্যা করো, এই কি তোমাদের জন্য যথেষ্ট ছিল না?
10 ದೇವರು ನಿನ್ನನ್ನೂ, ನಿನ್ನ ಸಂಗಡ ಲೇವಿಯ ಪುತ್ರರಾದ ನಿನ್ನ ಸಹೋದರರೆಲ್ಲರನ್ನೂ ತಮ್ಮ ಹತ್ತಿರ ಬರಮಾಡಿಕೊಂಡಿದ್ದಾರೆ. ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ?
তিনি তোমাদের ও তোমাদের সহচর লেবীয়দের তাঁর নিকটস্থ করেছেন, কিন্তু এখন তোমরা যাজকত্ব পদের জন্যও চেষ্টা করছ।
11 ಈ ಕಾರಣದಿಂದ ನೀನೂ, ನಿನ್ನ ಸಮಸ್ತ ಗುಂಪು ಯೆಹೋವ ದೇವರಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ. ನೀವು ಆರೋನನಿಗೆ ವಿರೋಧವಾಗಿ ಗೊಣಗುಟ್ಟುವುದು ಯಾಕೆ?” ಎಂದು ಹೇಳಿದನು.
তোমরা ও তোমাদের অনুগামী সবাই, সদাপ্রভুর বিপক্ষেই জোটবদ্ধ হয়েছ। হারোণ কে যে তোমরা তার বিপক্ষে বচসা করো?”
12 ಆಗ ಮೋಶೆ ಎಲೀಯಾಬನ ಪುತ್ರರಾದ ದಾತಾನನನ್ನೂ, ಅಬೀರಾಮನನ್ನೂ ಕರೆಯಕಳುಹಿಸಿದನು. ಆದರೆ ಅವರು, “ನಾವು ಬರುವುದಿಲ್ಲ.
মোশি ইলীয়াবের ছেলে দাথন ও অবীরামকে ডেকে পাঠালেন, কিন্তু তারা বলল, “আমরা যাব না।
13 ನೀನು ಮರುಭೂಮಿಯಲ್ಲಿ ನಮ್ಮನ್ನು ಸಾಯಿಸುವುದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಹೊರಕ್ಕೆ ಕರೆದುಕೊಂಡು ಬಂದದ್ದು ನಿನಗೆ ಸಾಕಾಗಲಿಲ್ಲವೋ? ನೀನು ಅರಸನಾಗಿ ನಮ್ಮನ್ನು ಆಳಬೇಕೋ?
তুমি এক দুধ ও মধু প্রবাহী দেশ থেকে, এই প্রান্তরে আমাদের মেরে ফেলতে এনেছ, এই কি যথেষ্ট নয়? এখন আমাদের উপর প্রভুত্ব করতে চাইছ?
14 ಅಷ್ಟುಮಾತ್ರವಲ್ಲದೆ, ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತೆಗೆದುಕೊಂಡು ಬರಲಿಲ್ಲ. ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ನಮಗೆ ಸ್ವಾಧೀನಕ್ಕೆ ಕೊಡಲಿಲ್ಲ. ಈ ಮನುಷ್ಯರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ!” ಎಂದರು.
এছাড়াও, এখনও তুমি আমাদের কোনো দুধ ও মধু প্রবাহী দেশে নিয়ে যাওনি অথবা শস্যক্ষেত্র ও দ্রাক্ষাকুঞ্জের কোনো অধিকার দান করোনি। তুমি কি এই সমস্ত ব্যক্তির সঙ্গে ক্রীতদাসের মতো ব্যবহার করবে? না, আমরা যাব না!”
15 ಆಗ ಮೋಶೆಯು ಬಹಳವಾಗಿ ಕೋಪಿಸಿಕೊಂಡು ಯೆಹೋವ ದೇವರಿಗೆ, “ಅವರ ಬಲಿಯನ್ನು ನೀವು ಗೌರವಿಸಬೇಡಿ, ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ,” ಎಂದು ಹೇಳಿದನು.
মোশি তখন অত্যন্ত ক্রুদ্ধ হয়ে সদাপ্রভুকে বললেন, “ওই ব্যক্তিদের নৈবেদ্য গ্রহণ কোরো না। আমি তাদের কাছ থেকে, সর্বাধিক একটি গাধাও গ্রহণ করিনি অথবা তাদের কারও প্রতি কোনো অন্যায় আচরণ করিনি।”
16 ಮೋಶೆಯು ಕೋರಹನಿಗೆ, “ನೀನೂ, ನಿನ್ನ ಸಮೂಹವೆಲ್ಲವೂ ಯೆಹೋವ ದೇವರ ಎದುರಿನಲ್ಲಿ ಇರಬೇಕು. ನೀನೂ, ಅವರೂ, ಆರೋನನೂ ನಾಳೆ ಬಂದು,
মোশি কোরহকে বললেন, “তুমি ও তোমার সমস্ত অনুগামী, আগামীকাল সদাপ্রভুর সামনে উপস্থিত হবে—তুমি, তারা সবাই এবং হারোণ।
17 ಒಬ್ಬೊಬ್ಬನು ತನ್ನ ತನ್ನ ಧೂಪ ಪಾತ್ರೆಯನ್ನು ತೆಗೆದುಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ, ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ಧೂಪ ಪಾತ್ರೆಗಳಾದ ನಿಮ್ಮ ಧೂಪ ಪಾತ್ರೆಗಳನ್ನು ಯೆಹೋವ ದೇವರ ಎದುರಿಗೆ ತನ್ನಿರಿ. ನೀನೂ, ಆರೋನನೂ, ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತೆಗೆದುಕೊಂಡು ಬನ್ನಿರಿ,” ಎಂದನು.
প্রত্যেক ব্যক্তি অঙ্গারধানী নেবে—সর্বমোট 250-টি অঙ্গারধানী—এবং সদাপ্রভুর সামনে নিবেদন করতে হবে।” তুমি ও হারোণ তোমাদের অঙ্গারধানীও সদাপ্রভুর সামনে নিবেদন করবে।
18 ಆಗ ಅವರು ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ, ಧೂಪವನ್ನು ಅದರ ಮೇಲೆ ಹಾಕಿ, ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು.
অতএব তারা প্রত্যেকে তাদের অঙ্গারধানী নিল ও তার মধ্যে আগুন ও ধূপ রাখল। তারপর তারা মোশি ও হারোণের সঙ্গে সমাগম তাঁবুর প্রবেশপথে দাঁড়াল।
19 ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಕೂಡಿಸಿದನು. ಆಗ ಯೆಹೋವ ದೇವರ ಮಹಿಮೆಯು ಸಮಸ್ತ ಸಮೂಹಕ್ಕೆ ತೋರಿಬಂತು.
যখন কোরহ তার অনুগামীদের, তাঁদের বিপক্ষে সমাগম তাঁবুর প্রবেশপথে একত্র করল, তখন সদাপ্রভুর মহিমা সমস্ত সমাজের কাছে প্রত্যক্ষ হল।
20 ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,
সদাপ্রভু মোশি ও হারোণকে বললেন,
21 “ಈ ಜನರ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು.
“তোমরা নিজেদের এই সমাজ থেকে পৃথক করো, যেন এক মুহূর্তে আমি তাদের বিলুপ্ত করি।”
22 ಆಗ ಅವರು ಬೋರಲು ಬಿದ್ದು, “ದೇವರೇ, ಎಲ್ಲಾ ಮಾನವರ ಆತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀವು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳುತ್ತೀರೋ?” ಎಂದರು.
কিন্তু মোশি ও হারোণ ভূমিতে উপুড় হয়ে উচ্চস্বরে বললেন, “হে ঈশ্বর, সমস্ত জীবিত বস্তুর আত্মাদের ঈশ্বর, যখন কোনো একজন ব্যক্তি পাপ করে, তখন তাঁর জন্য কি তুমি সমস্ত সমাজের প্রতি রুষ্ট হবে?”
23 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
সদাপ্রভু মোশিকে বললেন,
24 “ನೀನು ಜನರ ಸಮೂಹಕ್ಕೆ, ‘ಕೋರಹ, ದಾತಾನ್, ಅಬೀರಾಮರ ನಿವಾಸದ ಸುತ್ತಲಿಂದ ದೂರವಿರಬೇಕು,’ ಎಂದು ಅವರಿಗೆ ಆಜ್ಞಾಪಿಸು,” ಎಂದರು.
“তুমি সমাজকে বলো, ‘তোমরা কোরহ, দাথন ও অবীরামের তাঁবুর কাছ থেকে সরে যাও।’”
25 ಮೋಶೆಯು ಎದ್ದು ದಾತಾನ್, ಅಬೀರಾಮರ ಬಳಿಗೆ ಹೋದನು. ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು.
মোশি উঠে দাথন ও অবীরামের কাছে গেলেন এবং ইস্রায়েলের প্রবীণেরা তাঁকে অনুসরণ করল।
26 ಅವನು ಸಮೂಹದವರಿಗೆ, “ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿಹೋಗಿರಿ. ನೀವು ಅವರ ಎಲ್ಲಾ ಪಾಪಗಳ ದೆಸೆಯಿಂದ ನಾಶವಾಗದಂತೆ ಅವರಿಗಿರುವ ಯಾವುದನ್ನು ಮುಟ್ಟಬೇಡಿರಿ,” ಎಂದನು.
তিনি সমাজকে সাবধান করে দিয়ে বললেন, “এই দুষ্ট ব্যক্তিদের তাঁবু থেকে সরে যাও! তাদের কোনো জিনিস স্পর্শ করো না, তা না হলে, তাদের পাপের জন্য তোমরাও বিনষ্ট হবে।”
27 ಆಗ ಅವರು ಕೋರಹನ ದಾತಾನ್, ಅಬೀರಾಮರ ಡೇರೆಗಳ ಸುತ್ತಲಿಂದ ದೂರ ಹೋದರು. ದಾತಾನನೂ, ಅಬೀರಾಮನೂ ತಮ್ಮ ಹೆಂಡತಿಯರೂ, ಪುತ್ರರೂ, ಚಿಕ್ಕ ಮಕ್ಕಳೂ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡರು.
অতএব তারা কোরহ, দাথন ও অবীরামের তাঁবুর কাছ থেকে সরে গেল। দাথন ও অবীরাম, তাদের স্ত্রী, সন্তান ও শিশুসহ তাঁবু থেকে বের হয়ে প্রবেশপথে দাঁড়িয়ে রইল।
28 ಆಗ ಮೋಶೆಯು, “ಈ ಕಾರ್ಯಗಳನ್ನೆಲ್ಲಾ ಮಾಡುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ, ಅವುಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲ ಎಂದು ನೀವು ಇದರಿಂದ ತಿಳಿದುಕೊಳ್ಳುವಿರಿ.
মোশি তখন বললেন, “এবার তোমরা অবগত হবে যে সদাপ্রভু এই সমস্ত কাজ করবার জন্য আমাকেই প্রেরণ করেছেন এবং কোনোটিই আমার কল্পনাপ্রসূত নয়।
29 ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ, ಇಲ್ಲವೆ ಎಲ್ಲಾ ಮನುಷ್ಯರ ಶಿಕ್ಷೆ ಇವರಿಗೂ ಪ್ರಾಪ್ತವಾದರೆ ಯೆಹೋವ ದೇವರು ನನ್ನನ್ನು ಕಳುಹಿಸಲಿಲ್ಲ.
যদি এই ব্যক্তিরা স্বাভাবিক মৃত্যুবরণ করে ও মানুষমাত্রের প্রতি যা ঘটে থাকে, তাই ভোগ করে, তাহলে সদাপ্রভু আমাকে পাঠাননি।
30 ಆದರೆ ಯೆಹೋವ ದೇವರು ಹೊಸದನ್ನು ಮಾಡಿ, ಭೂಮಿಯು ತನ್ನ ಬಾಯಿತೆರೆದು, ಇವರನ್ನೂ, ಇವರಿಗಿರುವ ಎಲ್ಲದನ್ನೂ ನುಂಗಿ, ಇವರು ತೀವ್ರವಾಗಿ ಪಾತಾಳಕ್ಕೆ ಇಳಿಯುವಂತೆ ಮಾಡಿ, ಈ ಮನುಷ್ಯರು ಯೆಹೋವ ದೇವರನ್ನು ರೇಗಿಸಿದ್ದಾರೆಂದು ನೀವು ತಿಳಿದುಕೊಳ್ಳುವಿರಿ,” ಎಂದನು. (Sheol h7585)
কিন্তু সদাপ্রভু যদি সম্পূর্ণ নতুন কিছু করেন, ভূমি মুখ বিদীর্ণ করে সমস্ত দ্রব্য সমেত তাদের গ্রাস করে এবং যদি তারা জীবিত অবস্থায় সমাধিপ্রাপ্ত হয়, তাহলে তোমরা অবগত হবে যে এই ব্যক্তিরা সদাপ্রভুর অবমাননা করেছে।” (Sheol h7585)
31 ಅವನು ಹೇಳ ಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ, ಅವರ ಕೆಳಗಿರುವ ನೆಲವು ಸೀಳಿ
যে মুহূর্তে তিনি এই সমস্ত কথা সমাপ্ত করলেন, তাদের নিম্নস্থ ভূমি বিদীর্ণ হল,
32 ಭೂಮಿಯು ತನ್ನ ಬಾಯಿತೆರೆದು, ಅವರನ್ನೂ, ಅವರ ಮನೆಗಳನ್ನೂ, ಕೋರಹನಿಗೆ ಸಂಬಂಧಪಟ್ಟ ಸಕಲ ಜನರನ್ನೂ, ಅವರಿಗಿದ್ದದ್ದನ್ನೆಲ್ಲಾ ನುಂಗಿಬಿಟ್ಟಿತು.
ভূমি তার মুখ বিদীর্ণ করে কোরহ, তার সব অনুগামী ও তার আত্মীয়স্বজনদের, সমস্ত বিষয়সম্পত্তি গ্রাস করল।
33 ಅವರು ತಮಗೆ ಸಂಬಂಧಪಟ್ಟವುಗಳೆಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು. ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. (Sheol h7585)
তাদের অধিকারভুক্ত সমস্ত দ্রব্যসহ তারা জীবিত অবস্থায় সমাধিপ্রাপ্ত হল। ভূমি তাদের অবরুদ্ধ করল। তারা বিনাশপ্রাপ্ত হয়ে সমাজ থেকে অবলুপ্ত হল। (Sheol h7585)
34 ಆಗ ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಓಡಿಹೋದರು, ಏಕೆಂದರೆ ಅವರು, “ಭೂಮಿಯು ನಮ್ಮನ್ನು ಸಹ ನುಂಗಿಬಿಟ್ಟೀತು,” ಎಂದು ಹೆದರಿದರು.
তাদের আর্তস্বর শুনে, চতুর্দিকের ইস্রায়েলীরা পলায়ন করল। তারা চিৎকার করে বলে উঠল, “ভূমি আমাদেরও গ্রাস করবে!”
35 ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟು, ಧೂಪವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
সদাপ্রভুর কাছ থেকে আগুন নির্গত হয়ে, যারা ধূপ নিবেদন করেছিল, সেই 250 জন ব্যক্তিকেও পুড়িয়ে দিল।
36 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
সদাপ্রভু মোশিকে বললেন,
37 “ಯಾಜಕನಾದ ಆರೋನನ ಮಗ ಎಲಿಯಾಜರನಿಗೆ, ಧೂಪದ ಪಾತ್ರೆಗಳು ಪರಿಶುದ್ಧವಾಗಿರುವುದರಿಂದ ಸುಟ್ಟುಹೋದವರ ಮಧ್ಯದಿಂದ ಅವನು ಅವುಗಳನ್ನು ಎತ್ತಬೇಕು. ಆ ಬೆಂಕಿಯನ್ನು ದೂರ ಚೆಲ್ಲು.
“যাজক হারোণের ছেলে ইলীয়াসরকে বলো, সব অঙ্গারধানী নিয়ে, তাদের অবশিষ্ট অঙ্গার, দূরে কোথাও ফেলে দিতে, কারণ ওইসব অঙ্গারধানী পবিত্র।
38 ತಮ್ಮ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ ಮನುಷ್ಯರ ಧೂಪದ ಪಾತ್ರೆಗಳನ್ನು ಬಲಿಪೀಠವನ್ನು ಮುಚ್ಚತಕ್ಕ ಅಗಲವಾದ ತಗಡುಗಳನ್ನಾಗಿ ಮಾಡಬೇಕು. ಏಕೆಂದರೆ ಅವುಗಳನ್ನು ಯೆಹೋವ ದೇವರ ಸಮ್ಮುಖದಲ್ಲಿ ಅರ್ಪಿಸಿದ ಕಾರಣ ಅವು ಪರಿಶುದ್ಧವಾದವುಗಳು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು,” ಎಂದರು.
সেই লোকদের অঙ্গারধানী যারা নিজেদের জীবনের প্রতিকূলে পাপ করেছিল। অঙ্গারধানীগুলি হাতুড়ি দিয়ে পিটিয়ে বেদির আচ্ছাদনের জন্য পাত প্রস্তুত করো, কারণ সেসব সদাপ্রভুর উদ্দেশে নিবেদিত হয়েছিল, তাই পবিত্র। সেগুলি ইস্রায়েলীদের জন্য নিদর্শনস্বরূপ হোক।”
39 ಆಗ ಯಾಜಕನಾದ ಎಲಿಯಾಜರನು ಯೆಹೋವ ದೇವರು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ಸುಟ್ಟು ಹೋದವರು ಅರ್ಪಿಸಿದ ಕಂಚಿನ ಧೂಪದ ಪಾತ್ರೆಗಳನ್ನು ತೆಗೆದುಕೊಂಡು, ಬಲಿಪೀಠವನ್ನು ಮುಚ್ಚುವುದಕ್ಕಾಗಿ ಅವುಗಳನ್ನು ಅಗಲವಾದ ತಗಡುಗಳನ್ನಾಗಿ ಮಾಡಿದನು.
অতএব যাজক ইলীয়াসর, যারা পুড়ে মরেছিল, তাদের আনা পিতলের সেইসব অঙ্গারধানী নিলেন এবং সেগুলি পিটিয়ে বেদির আচ্ছাদনের জন্য পাত প্রস্তুত করলেন,
40 ಆರೋನನ ಸಂತಾನವಲ್ಲದ ಪರಕೀಯನು ಯೆಹೋವ ದೇವರ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸಬಾರದು, ಅರ್ಪಿಸಿದರೆ ಕೋರಹ ಮತ್ತು ಅವನ ಸಮೂಹಕ್ಕೆ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವದಕ್ಕಾಗಿ ಅದು ಗುರುತಾಯಿತು.
যে রকম সদাপ্রভু, মোশির মাধ্যমে, তাঁকে নির্দেশ দিয়েছিলেন। এই নিদর্শন ছিল ইস্রায়েলীদের স্মরণার্থক, যেন হারোণের উত্তরসূরি ব্যতীত অন্য কেউ সদাপ্রভুর উদ্দেশে ধূপদাহ না করে; তা না হলে, তার পরিণতি কোরহ ও তার অনুগামীদের মতোই হবে।
41 ಆದರೆ ಮರುದಿನದಲ್ಲಿ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಗೆ ವಿರೋಧವಾಗಿಯೂ ಆರೋನನಿಗೆ ವಿರೋಧವಾಗಿಯೂ ಗೊಣಗುಟ್ಟುತ್ತಾ, “ನೀವು ಯೆಹೋವ ದೇವರ ಜನರನ್ನು ಕೊಂದುಹಾಕಿದ್ದೀರಿ,” ಎಂದರು.
পরদিন, সমস্ত ইস্রায়েলী সমাজ, মোশি ও হারোণের বিপক্ষে বচসা করল। তারা বলল, “আপনারাই সদাপ্রভুর প্রজাদের হত্যা করলেন।”
42 ಜನರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡಾಗ, ಅವರು ದೇವದರ್ಶನ ಗುಡಾರದ ಕಡೆಗೆ ನೋಡಲಾಗಿ, ಮೇಘವು ಅದನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ಕಾಣಬಂತು.
যখন সেই সমাজ মোশি ও হারোণের বিপক্ষে একত্র হল এবং সমাগম তাঁবুর অভিমুখে ফিরল, হঠাৎ মেঘ তা আবৃত করল এবং সদাপ্রভুর মহিমা প্রত্যক্ষ হল।
43 ಮೋಶೆಯೂ ಆರೋನನೂ ದೇವದರ್ಶನ ಗುಡಾರದ ಮುಂದೆ ಬಂದರು.
তখন মোশি ও হারোণ, সমাগম তাঁবুর সামনে গেলেন
44 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
এবং সদাপ্রভু মোশিকে বললেন,
45 “ನೀನು ಈ ಜನರ ಮಧ್ಯದಿಂದ ಎದ್ದು ಬಾ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು. ಆಗ ಅವರಿಬ್ಬರು ಬೋರಲು ಬಿದ್ದರು.
“এই সমাজ থেকে পৃথক হও যেন আমি এক নিমেষেই এদের বিলুপ্ত করি।” তাঁরা ভূমিতে উপুড় হয়ে পড়লেন।
46 ಮೋಶೆಯು ಆರೋನನಿಗೆ, “ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು, ಧೂಪ ಹಾಕಿ, ಶೀಘ್ರವಾಗಿ ಜನರೊಳಗೆ ಹೋಗಿ, ಅವರಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡು. ಏಕೆಂದರೆ ಯೆಹೋವ ದೇವರ ಸಮ್ಮುಖದಿಂದ ಕೋಪವು ಹೊರಟು, ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು,” ಎಂದನು.
মোশি তারপর হারোণকে বললেন, “তোমার অঙ্গারধানী নাও, বেদি থেকে অঙ্গার নিয়ে তার মধ্যে আগুন ও ধূপ দাও এবং তাড়াতাড়ি সমাজের মধ্যে গিয়ে তাদের জন্য প্রায়শ্চিত্ত করো। সদাপ্রভুর রোষ নির্গত হয়েছে; মহামারি শুরু হয়ে গিয়েছে।”
47 ಆರೋನನು, ಮೋಶೆಯು ಹೇಳಿದ ಹಾಗೆ ಅದನ್ನು ತೆಗೆದುಕೊಂಡು, ಜನಸಮೂಹದ ಮಧ್ಯಕ್ಕೆ ಓಡಿಬಂದನು. ಆಗ ವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಅವನು ಧೂಪವನ್ನು ಇಟ್ಟು, ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
মোশি যে রকম বললেন, হারোণ ঠিক তাই করলেন, তিনি সমাজের মধ্যে দৌড়ে গেলেন। ততক্ষণে জনতার মধ্যে মহামারি ছড়িয়ে পড়েছিল, কিন্তু হারোণ ধূপ দিয়ে তাদের জন্য প্রায়শ্চিত্ত করলেন।
48 ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡದ್ದರಿಂದ ವ್ಯಾಧಿಯು ಶಮನವಾಯಿತು.
তিনি জীবিত ও মৃত, এই উভয় দলের মধ্যে দণ্ডায়মান হলেন এবং মহামারি নিবৃত্ত হল।
49 ಕೋರಹನ ನಿಮಿತ್ತ ಸತ್ತು ಹೋದವರ ಹೊರತಾಗಿ ವ್ಯಾಧಿಯಲ್ಲಿ ಸತ್ತವರು ಹದಿನಾಲ್ಕು ಸಾವಿರ ಏಳು ನೂರು ಮಂದಿಯಾಗಿದ್ದರು.
কোরহের জন্য যারা নিহত হয়েছিল, তাদের অতিরিক্ত, ওই মহামারিতে নিহতের সংখ্যা 14,700।
50 ಆ ವ್ಯಾಧಿಯು ನಿಂತು ಹೋದಾಗ ಆರೋನನು ದೇವದರ್ಶನ ಗುಡಾರದ ಬಾಗಿಲಿನ ಬಳಿಯಲ್ಲಿದ್ದ ಮೋಶೆಯ ಬಳಿಗೆ ಹಿಂದಿರುಗಿ ಬಂದನು.
পরে হারোণ সমাগম তাঁবুর প্রবেশপথে, মোশির কাছে ফিরে গেলেন, কারণ মহামারি নিবৃত্ত হয়েছিল।

< ಅರಣ್ಯಕಾಂಡ 16 >